Categories
ಭಕ್ತಿ ಮಾಹಿತಿ ಸಂಗ್ರಹ

ಈ ಹಾವು ಪ್ರತಿದಿನ ಶಿವಲಿಂಗದ ಪೂಜೆ ಮಾಡುತ್ತಿದೆ ! ಯಾಕೆಂದ್ರೆ ಇಲ್ಲಿದೆ ಫುಲ್ ಸ್ಟೋರಿ

ನಾಗರಹಾವನ್ನು ನಮ್ಮ ಹಿಂದೂ ಧರ್ಮದಲ್ಲಿ ದೇವರು ಎಂದು ಪೂಜಿಸಲಾಗುತ್ತಿದೆ ಇನ್ನೂ ಹೇಳಬೇಕೆಂದರೆ ಸ್ನೇಹಿತರೇ ನಾಗರ ಹಾವಿನ ಬಗ್ಗೆ ಕಂಡು ಕೇಳಿರದ ಸಾಕಷ್ಟು ರಹಸ್ಯಗಳನ್ನು ನಾವು ಕೇಳಬಹುದು , ಅದೇ ಹೇಳುತ್ತಾರಲ್ಲ ನಾಗರ ಹಾವಿನ ದ್ವೇಷ ಹದಿನಾಲ್ಕು ವರ್ಷ ಅಂತ ಈ ಒಂದು ಹಾವಿನ ಬಗ್ಗೆ ನಾವು ತಿಳಿಯುತ್ತಾ ಹೋದರೆ ಸಾಕಷ್ಟು ವಿಷಯಗಳು ಸಿಗುತ್ತಾ ಹೋಗುತ್ತದೆ ಇನ್ನೂ ಹೇಳುತ್ತಾ ಹೋದರೆ ಸ್ನೇಹಿತರೇ ನಾಗರ ಹಾವು ತುಂಬಾ ವರ್ಷ ಬದುಕುತ್ತದೆ .

ಇನ್ನು ಹಳೇ ನಾಗಗಳ ಬಗ್ಗೆ ಸಾಕಷ್ಟು ರಹಸ್ಯಮಯ ವಿಷಯಗಳು ಇರುತ್ತದೆ ಇನ್ನು ದೇವಾಲಯಗಳಲ್ಲಿ ಮತ್ತು ಕೆಲವರ ತೋಟಗಳಲ್ಲಿ ಹಳೆ ದೇವಸ್ಥಾನಗಳಲ್ಲಿ ನಾವು ಈ ನಾಗರಹಾವುಗಳನ್ನು ನೋಡಬಹುದು ಅಂತಹ ನಾಗರ ಹಾವುಗಳನ್ನು ದೇವರಿಗೆ ಹೋಲಿಸುತ್ತಾರೆ ಅಥವಾ ಇನ್ನೂ ಏನು ಹೇಳುತ್ತಾರೆ .

ಅಂದ್ರೆ ನಮ್ಮ ಹಿರಿಯರು ಈ ನಾಗರ ಹಾವುಗಳು ದೇವಸ್ಥಾನಗಳು ಮತ್ತು ಕೆಲವೊಂದು ನಿಗೂಢ ಸ್ಥಳಗಳಲ್ಲಿ ಕಂಡು ಬಂದರೆ ಅಲ್ಲಿ ಏನೋ ಒಂದು ಶಕ್ತಿ ಇದೆ ಅಥವಾ ದೇವರು ನೆಲೆಸಿರುತ್ತಾನೆ ಇನ್ನು ಹಲವಾರು ಮಾತುಗಳನ್ನು ಹೇಳುತ್ತಾರೆ ಇದೆಲ್ಲ ಎಷ್ಟು ನಿಜ ಎಷ್ಟು ಸತ್ಯ ಅದೆಷ್ಟು ಸುಳ್ಳು ಅಂತ ಹೇಳೋಕೆ ಆಗುವುದಿಲ್ಲ .

ಇನ್ನು ಹೇಳಬೇಕಾದರೆ ಮನುಷ್ಯನಿಗೆ ನಾಗ ದೋಷ ಬಂದರೆ ಅವನು ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಬೇಕಾಗುತ್ತದೆ ಈ ಒಂದು ನಾಗ ಪರಿಹಾರ ಮಾಡಿಕೊಳ್ಳದೆ ಇದ್ದಲ್ಲಿ ಅವನು ತನ್ನ ಜೀವನದಲ್ಲಿ ಸಾಕಷ್ಟು ಕೆಳ ಮಟ್ಟಕ್ಕೆ ಇಳಿದು ಬಿಡುತ್ತಾನೆ ಅದು ಅವನ ಆರೋಗ್ಯದಲ್ಲಿ ಆಗಲಿ ಸ್ಟೇಟಸ್ ನಲ್ಲೇ ಆಗಲಿ .

ಹೆಚ್ಚಾಗಿ ನಾಗರ ಹಾವುಗಳನ್ನು ನಾವು ಶಿವನ ದೇವಸ್ಥಾನಗಳಲ್ಲಿ ನೋಡಬಹುದು ಹೌದು ಸ್ನೇಹಿತನ ಈ ಒಂದು ಪೀಠಿಕೆ ಯಾಕೆ ನೀಡುತ್ತಿದ್ದೇನೆ ಅಂದರೆ ನಾವು ಎಂದು ಹೇಳಲು ಹೊರಟಿರುವ ಶಿವಾಲಯ ದೇವಸ್ಥಾನದಲ್ಲಿ ಒಂದು ನಾಗರಹಾವು ಇದೆ ಇದರ ಬಗ್ಗೆ ನೀವು ತಿಳಿದುಕೊಂಡರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತೀರಾ .

ಈ ಒಂದು ನಾಗರಹಾವು ಸುಮಾರು ಹದಿನೈದು ವರ್ಷಗಳ ಹಿಂದಿನಿಂದಲೂ ಕೂಡ ಈ ದೇವಾಲಯಕ್ಕೆ ಬರುತ್ತದೆಯಂತೆ ಆ ನಂತರ ಶಿವಲಿಂಗದ ಬಳಿ ಹೋಗಿ ಸುಮಾರು ಗಂಟೆಗಳ ಕಾಲ ಶಿವಲಿಂಗದ ಬಳಿಯೇ ಇತ್ತು ಆ ನಂತರ ಯಾರಿಗೂ ಏನೂ ಮಾಡದೆ ತನ್ನ ಪಾಡಿಗೆ ಹೊರಟು ಹೋಗಿಬಿಡುತ್ತದೆಯಂತೆ . ಹೀಗೆ ಈ ವಿಷಯ ತಿಳಿದ ನಂತರ ಜನರು ಅಚ್ಚರಿ ಪಟ್ಟು ಆ ದೇವಾಲಯಕ್ಕೆ ಹೋಗಲು ಶುರು ಮಾಡಿದರು.

ಆಗಲೂ ಕೂಡ ಆ ನಾಗರಹಾವು ಯಾರಿಗೂ ಕೂಡ ಏನನ್ನೂ ಮಾಡದೆ ತನ್ನ ಪಾಡಿಗೆ ಆ ದೇವಾಲಯಕ್ಕೆ ಬಂದು ಸ್ವಲ್ಪ ಸಮಯ ಕಳೆದು ಹೋಗುತ್ತದೆಯಂತೆ . ಈ ಶಿವನ ದೇವಾಲಯವನ್ನು ನಾವು ಉತ್ತರ ಪ್ರದೇಶ ರಾಜ್ಯದ ಆಗ್ರ ದ ಹದಿನೈದು ಕಿಲೋಮೀಟರ್ ದೂರದಲ್ಲಿದೆ , ಇಲ್ಲಿ ಆ ಅಚ್ಚರಿಯನ್ನು ನೋಡಬಹುದು ಮತ್ತು ಸ್ನೇಹಿತರೇ ಆ ಪ್ರದೇಶದಲ್ಲಿ ಸಾಕಷ್ಟು ಶಿವಾಲಯಗಳು ಕೂಡ ಇದ್ದರೂ ಈ ಒಂದು ಶಿವಾಲಯ ತುಂಬಾನೇ ವಿಭಿನ್ನವಾಗಿರುತ್ತದೆ .

ಈ ಒಂದು ದೇವಾಲಯಕ್ಕೆ ನಾಗರ ಹಾವು ಸುಮಾರು ಬೆಳಗ್ಗೆ ಹತ್ತು ಗಂಟೆಗೆ ಬಂದರೆ ಮಧ್ಯಾಹ್ನ ಮೂರು ಗಂಟೆಯವರೆಗೂ ಈ ದೇವಾಲಯದಲ್ಲಿ ಇರುತ್ತದೆಯಂತೆ ಆ ನಂತರ ಅಲ್ಲಿಯವರೆಗೂ ಜನರು ದೇವರ ದರ್ಶನಕ್ಕಾಗಿ ಅಲ್ಲಿಯೇ ಕಾದು ಕುಳಿತಿರುತ್ತಾರೆ ನಂತರ ಹಾವು ಹೊರಹೋದ ಮೇಲೆ ದೇವರ ದರ್ಶನವನ್ನು ಪಡೆದುಕೊಳ್ಳುತ್ತಾರೆ ಈ ಜನರು ಹೇಳುವುದು ಏನೆಂದರೆ ಹೀಗೆ ದೇವರ ದರ್ಶನ ಮಾಡುವುದರಿಂದ ನಮ್ಮ ಕಷ್ಟಗಳೆಲ್ಲ ದೂರವಾಗುತ್ತವೆ ಅಂತ . ಹೌದು ಸ್ನೇಹಿತರೇ ನಮ್ಮ ಜನರಿಗೆ ನಂಬಿಕೆ ಜಾಸ್ತಿ ಆ ನಂಬಿಕೆ ಹೆಚ್ಚಾಗಬಾರದು , ನಮ್ಮ ಜನರು ನಂಬುತ್ತಾರೆ ಅಂತ ಅವರಿಗೆ ಮೋಸ ಮಾಡಲು ಕೂಡ ಹೋಗಬಾರದು ಈ ಮಾಹಿತಿ ಓದಿದ್ದ ಕ್ಕಾಗಿ ಧನ್ಯವಾದಗಳು ಶುಭದಿನ .

Leave a Reply