Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಾಲಿಗೆ ಸ್ವಚ್ಛವಾಗಿಡದಿದ್ದರೆ ಏನೆಲ್ಲಾ ಅನಾಹುತ ಆಗಬಹುದು ಅಂತ ಗೊತ್ತ … ಇಲ್ಲಿದೆ ವಿಶೇಷ ಮಾಹಿತಿ …

ನಾವು ಪ್ರತಿದಿನ ನಮ್ಮ ದೇಹವನ್ನು ಶುಚಿಗೊಳಿಸಬೇಕು ಇಲ್ಲವಾದಲ್ಲಿ ನಾನಾ ತರದ ತ್ವಚೆಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಹಾಗೆಯೇ ನಾವು ನಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ಅಂಗಗಳನ್ನು ಕೂಡ ಪ್ರತಿದಿನ ಸ್ವಚ್ಛ ಮಾಡಬೇಕಾಗಿರುತ್ತದೆ ಯಾಕೆ ಅಂತ ತಿಳಿದುಕೊಳ್ಳಬೇಕಾದರೆ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ನಂತರ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ .

ಹಾಗೂ ಸ್ನೇಹಿತರ ನಮ್ಮ ದೇಹದಲ್ಲಿ ಪ್ರಮುಖ ಅಂಗಾಂಗಗಳಲ್ಲಿ ನಾಲೆಗೆ ಕೂಡ ಒಂದು ಈ ನಾಲಿಗೆಯನ್ನು ಕಂಡುಹಿಡಿಯುವ ಒಂದು ಅಂಗವಾಗಿದ್ದು ಈ ನಾಲಿಗೆಯನ್ನು ಕೂಡ ಪ್ರತಿದಿನ ಸ್ವಚ್ಛ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ .ಬೆಳಿಗ್ಗೆ ಎದ್ದ ಕೂಡಲೇ ನಮ್ಮ ನಾಲಿಗೆಯ ಮೇಲೆ ಬಿಳಿ ಬಣ್ಣದ ಪದರವಿರುತ್ತದೆ ಈ ಪತ್ರದಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ಅಡಗಿರುತ್ತವೆ .

ನಮ್ಮ ಬಾಯಿಯೊಳಗೆ ಇರುವಂತಹ ಎಲ್ಲಾ ಬ್ಯಾಕ್ಟೀರಿಯಾಗಳು ಹಾನಿ ಉಂಟು ಮಾಡುವುದಿಲ್ಲ ಆದರೆ ಕೆಲವು ಬ್ಯಾಕ್ಟೀರಿಯಾಗಳು ಮಾತ್ರ ನಮ್ಮ ದೇಹದಲ್ಲಿ ಹಲವು ತರಹದ ಅನಾರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತವೆ .ಈ ಕಾರಣದಿಂದಾಗಿಯೇ ನಾವು ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ನಮ್ಮ ನಾಲಿಗೆಯನ್ನು ಕೂಡ ಸ್ವಚ್ಛ ಮಾಡಿಕೊಳ್ಳಬೇಕಿರುತ್ತದೆ ಇಲ್ಲವಾದಲ್ಲಿ ಹಲವು ತರಹದ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ .

ಹಾಗಾದರೆ ನಾಲಿಗೆಯನ್ನು ಪ್ರತಿದಿನ ಸ್ವಚ್ಛ ಮಾಡದೇ ಇದ್ದಲ್ಲಿ ಯಾವೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿಯೋಣ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಮಿಸ್ ಮಾಡದೇ ಓದಿ .ಪ್ರತಿದಿನ ನಾವು ಊಟ ಮಾಡುವ ವೇಳೆಯಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ನಮ್ಮ ಬಾಯಿಯೊಳಗೆ ಸೇರಿಕೊಳ್ಳುತ್ತವೆ ಈ ರೀತಿ ಹಾಗೆ ನಾವು ರಾತ್ರಿ ಊಟ ಮಾಡಿ ಮಲಗಿದ ಮೇಲೆ ನಮ್ಮ ಬಾಯಿಯೊಳಗೆ ಸಾವಿರಾರು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಬಹುದು .

ಈ ಕಾರಣದಿಂದಾಗಿಯೇ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದರ ಜೊತೆಗೆ ನಾಲಿಗೆಯನ್ನು ಕೂಡ ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು .ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದಾಗ ನಮ್ಮ ಬಾಯಿಯಿಂದ ವಾಸನೆ ಬರುತ್ತಿರುತ್ತದೆ ಆಗ ನಮ್ಮ ಎದುರು ನಿಂತು ಮಾತನಾಡುವವರಿಗೆ ಮುಜುಗರವನ್ನು ಉಂಟು ಮಾಡುತ್ತದೆ ಈ ಸಮಸ್ಯೆಯ ಜೊತೆಗೆ ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದಾಗ ಮೂಗಿನಿಂದಲೂ ಕೂಡ ಕೆಟ್ಟ ವಾಸನೆ ಬರುತ್ತದೆ ಅಂದರೆ ಉಸಿರಾಡುವಾಗ ಕೆಟ್ಟ ಉಸಿರು ಆಚೆ ಬರುತ್ತದೆ .

ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದಾಗ ಹಲ್ಲುಗಳು ಕೂಡ ಹುಳು ಕಾಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಜೊತೆಗೆ ನಾಲಿಗೆ ಸ್ವಚ್ಛ ಮಾಡದೇ ಇದ್ದಾಗ ನಾಲಿಗೆ ಕ್ರಮೇಣವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ .ಪ್ರತಿದಿನ ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದಾಗ ನಾವು ತಿಂದಂತಹ ಆಹಾರವು ಕೂಡ ರುಚಿ ಕೊಡುವುದಿಲ್ಲ ಹಾಗೂ ರಸಗ್ರಹಣ ಸಾಮರ್ಥ್ಯವು ಕಡಿಮೆಯಾಗುತ್ತದೆ .

ಈ ರೀತಿಯ ಆಕೆಯ ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದಾಗ ಸಮಸ್ಯೆಗಳು ಎದುರಾಗುತ್ತವೆ ಹಾಗೆಯೇ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ ಅದೇನು ಅಂದರೆ ನಾಲಿಗೆಯನ್ನು ಪ್ರತಿದಿನ ಸ್ವಚ್ಛ ಮಾಡದೇ ಇದ್ದಾಗ ಹೃದಯ ಸಂಬಂಧಿ ಸಮಸ್ಯೆಗಳು ಬರುತ್ತವೆ ಜೊತೆಗೆ ಪಾರ್ಶ್ವವಾಯು ವಂತ ಸಮಸ್ಯೆಗಳು ಕೂಡ ಬರುವ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತದೆ .

ಈ ಕಾರಣದಿಂದಾಗಿ ಪ್ರತಿ ದಿನ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವ ಸಮಯದಲ್ಲಿ ನಾಲಿಗೆಯನ್ನು ಕೂಡ ಸ್ವಚ್ಛ ಮಾಡಿಕೊಳ್ಳಿ ಹಾಗೂ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ .
ನಿಮಗೆ ಈ ಮಾಹಿತಿ ಉಪಯುಕ್ತವಾದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಶುಭ ದಿನ .

Leave a Reply