ನಿಮ್ಮ ಮನೆಯಲ್ಲೂ ಇರಬಹುದು ಈ ತರದ ತಾಮ್ರದ ಚೊಂಬು .. ಅದಕ್ಕೆ ಈ ತರ ಗುಣಲಕ್ಷಣಗಳು ಇದ್ರೆ ಇವತ್ತೇ ನೀವು ಕೋಟ್ಯಧಿಪತಿಗಳು ಆಗುತೀರಾ … ಏನಿದು ರೈಸ್ ಪುಲ್ಲಿಂಗ್ ಕಥೆ …!

Sanjay Kumar
By Sanjay Kumar Uncategorized 30 Views 2 Min Read
2 Min Read

ಹಣ ಸಂಪಾದನೆ ಮಾಡಲು ಜನರು ಅನೇಕ ಮೋಸದ ಮಾರ್ಗಗಳನ್ನು ಹಿಡಿಯುತ್ತಾರೆ ಇನ್ನು ಇದೀಗ ಒಂದು ದಂಧೆ ಶುರುವಾಗಿದೆ ಅದೇನೆಂದರೆ ಇದೇ ರೈಸ್ಪುಲ್ಲಿಂಗ್ ಸಿಡಿಲು ಬಡಿದ ಪಾತ್ರೆಗೆ ಕೋಟಿ ಕೋಟಿ ಹಣ ಸಿಗುತ್ತದೆ ಎಂದು, ಹಾಗಾದರೆ ಇದು ನಿಜಾನಾ ಸುಳ್ಳಾ ಮೋಸದ ದಾರಿ ನಿಜಕ್ಕೂ ದುಡ್ಡು ಸಿಗುತ್ತದೆ ಈ ಸಿಡಿಲು ಬಡಿದ ತಾಮ್ರದ ಪಾತ್ರೆಗೆ ಅಷ್ಟೊಂದು ಬೆಲೆ ಇದೆಯಾ .

ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯನ್ನು ಮಿಸ್ ಮಾಡದೆ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಲ್ಲಿಯು ಕೂಡ ಈ ಒಂದು ವಿಚಾರವನ್ನು ಕುರಿತು ಜಾಗೃತಿಯನ್ನು ಮೂಡಿಸಿ.ಹೌದು ಸಾಮಾನ್ಯವಾಗಿ ತಾಮ್ರದ ಪಾತ್ರೆಗಳು ಅಂದರೆ ಅವುಗಳಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗುತ್ತದೆ ಯಾಕೆ ಅಂದರೆ ಅಷ್ಟು ವಿಶೇಷವಾದದ್ದು ಈ ತಂತ್ರದ ಲೋಹ ತಂತ್ರದ ಲೋಹದ ಪಾತ್ರೆಗಳು ಬಾಟಲ್ಗಳಲ್ಲಿ ನೀರನ್ನು ಕುಡಿಯುವುದರಿಂದ ಅದು ಆರೋಗ್ಯವನ್ನು ವೃದ್ಧಿಸುತ್ತದೆ ಎಂಬ ಮಾಹಿತಿಯೂ ಕೂಡ ಇದೇ .

ಆದರೆ ಇದೀಗ ಸಡನ್ನಾಗಿ ಈ ಒಂದು ಮಾಹಿತಿ ಯಾಕೆ ಸಮಾಜದಲ್ಲಿ ಇಷ್ಟೊಂದು ಹಬ್ಬುತ್ತಿದೆ ಸಿಡಿಲು ಬಡಿದ ಪಾತ್ರೆಗೆ ಯಾಕೆ ಅಷ್ಟು ಬೆಲೆ ಇದೆ ಅಂತ ನೀವು ಅಂದುಕೊಳ್ಳುವುದಾದರೆ ಈ ಒಂದು ಮಾಹಿತಿ ಕೇವಲ ವದಂತಿಯಷ್ಟೆ ಇದರಲ್ಲಿ ಯಾವುದೇ ಸತ್ಯಾಂಶವೂ ಇಲ್ಲ. ಈ ದಂಧೆಯನ್ನು ಶುರು ಮಾಡಿದಂತಹ ವ್ಯಕ್ತಿಗಳೂ ಸಿಡಿಲು ಬಡಿದ ಪಾತ್ರೆಗೆ ನಾಸಾದಿಂದ ಅಮೆರಿಕದ ಯೂನಿವರ್ಸಿಟಿ ಒಂದು ಕೋಟಿ ಕೋಟಿ ಹಣವನ್ನು ಕೊಡುತ್ತಿದೆ ಇದರ ಪೇಟೆಂಟ್ ಪಡೆದುಕೊಳ್ಳಿ ಎಂದು ಲಕ್ಷ ಹಣವನ್ನು ಪೇಟೆಂಟ್ ಕೊಡಿಸುವುದಕ್ಕಾಗಿಯೇ ಕೇಳುತ್ತಾರೆ.

ಮುಗ್ಧ ಸಿರಿವಂತ ಜನರು ತಿಳಿಯದಿರುವ ಮಂದಿ ಕೋಟಿ ಹಣಕ್ಕಾಗಿ ಲಕ್ಷವನ್ನು ಖರ್ಚು ಮಾಡುವುದಕ್ಕೆ ರೆಡಿ ಇರುತ್ತಾರೆ ಅಂಥ ವರಿಂದ ಹಣವನ್ನು ಪಡೆದು ಅವರಿಗೆ ಪಂಗನಾಮ ಹಾಕುವ ಈ ಒಂದು ದಂಧೆ ಇದೀಗ ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಡೆದಿದೆ ಇನ್ನು ಕರ್ನಾಟಕದ ಅನೇಕ ಭಾಗದಲ್ಲಿ ಈ ಒಂದು ದಂಧೆಯ ಮೋಸ ಹೋಗಿರುವ ಜನರು ಇದ್ದಾರೆ. ಈ ಮಾಹಿತಿಯನ್ನು ನಾನು ಈ ದಿನ ನಿಮಗೇ ತಿಳಿಸಿಕೊಡಲು ಬಂದಿರುವಂತಹ ಕಾರಣವು ಏನೆಂದರೆ ಇಂತಹ ಕಾರಣಗಳನ್ನು ಹೇಳಿಕೊಳ್ಳುತ್ತ ನಿಮ್ಮ ಬಳಿ ಯಾವುದಾದರೂ ವ್ಯಕ್ತಿ ಬಂದರೆ ಅವರ ಮಾತುಗಳನ್ನು ನಂಬಿ ನಿಮ್ಮ ಹಣವನ್ನು ಕೊಟ್ಟು ಮೋಸ ಹೋಗಬೇಡಿ.

ಇನ್ನು ರೈಸ್ ಪುಲ್ಲಿಂಗ್ ಸಿಡಿಲು ಬಡಿದ ತಾಮ್ರದ ಪಾತ್ರೆಗಳ ವಿಶೇಷತೆಯನ್ನು ಕುರಿತು ನಿಮಗೆ ಅವರು ಈ ಒಂದು ಕಾರಣವನ್ನು ಹೇಳುತ್ತಾರೆ ಅದೇನೆಂದರೆ ಸಿಡಿಲು ಬಡಿದ ಪಾತ್ರೆಯಲ್ಲಿ ಒಂದು ವಿಶೇಷ ಗುಣವಿರುತ್ತದೆ ಅದೇನೆಂದರೆ ಕತ್ತಲಿನಲ್ಲಿ ಸಿಡಿಲು ಬಡೆದ ತಾಮ್ರದ ಲೋಹದ ನಾಣ್ಯ ಅಥವಾ ಪಾತ್ರೆಯನ್ನು ಇಟ್ಟು ಅದರ ಸುತ್ತ ಅಕ್ಕಿ ಕಾಳು ಅಥವಾ ಭತ್ತದ ಕಾಳನ್ನು ಇಡುವುದರಿಂದ, ತಾಮ್ರದ ಲೋಹವು ಈ ಭತ್ತದ ಕಾಳುಗಳನ್ನು ಆಕರ್ಷಿಸುತ್ತದೆ ಎಂದು ಹೇಳ್ತಾರೆ ಆದರೆ ತಾಮ್ರ ಲೋಹದ ನೈಸರ್ಗಿಕ ಗುಣವೂ ಇದಾಗಿರುತ್ತದೆ ಇದರಲ್ಲಿ ಯಾವುದೇ ವೈಶಿಷ್ಟ್ಯತೆ ಇರುವುದಿಲ್ಲ.ಈ ಕಾರಣಕ್ಕಾಗಿಯೇ ಈ ಸಿಡಿಲು ಬಡಿದ ತಂತ್ರದ ಲೋಹದ ಬಿಸಿನೆಸ್ ಗೆ ರೈಸ್ ಪುಲ್ಲಿಂಗ್ ಸಿಡಿಲು ಬಡಿದ ತಾಮ್ರದ ಪಾತ್ರೆಗಳ ಬಿಸಿನೆಸ್ ಅಂತಾರೆ ಅಷ್ಟೆ. ಇಂತಹ ಸುಳ್ಳು ವದಂತಿಗಳಿಗೆ ತಲೆ ಕೊಡದೆ ಮೋಸ ಹೋಗದಿರಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.