Sanjay Kumar
By Sanjay Kumar Uncategorized 32 Views 1 Min Read
1 Min Read

ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮದುರದ ಅದ್ದೂರಿಯಾಗಿ ಜರುಗಿತ್ತು ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದು ಮಾಲೆಯನ್ನು ವಿಸರ್ಜನೆ ಮಾಡಿದ್ದರು ಬೆಳಗಾವಿ ಹುಬ್ಬಳ್ಳಿ ಗದಗ ಹಾವೇರಿ ಬಾಗಲಕೋಟೆ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಹನುಮ ಭಕ್ತರು ಸಾಗರೋಪಾದಿ ಹರಿದು ಬಂದರು.

ಮಧ್ಯರಾತ್ರಿ ಒಂದು ಗಂಟೆಯಿಂದಲೇ ಮಾಲಾಧಾರಿಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದರೂ ಸಾವಿರಾರು ಮಾಲಾಧಾರಿಗಳು ಪಾದಯಾತ್ರೆ ಮಾಡುವ ಮೂಲಕ ಅಂಜನಾದ್ರಿಗೆ ಬಂದು ಪುನೀತರಾದರು ಇದೆಲ್ಲದರ ಮಧ್ಯೆ ಒಂದು ವಿಶೇಷ ಘಟನೆ ನಡೆಯಿತು. ಪುನೀತ್ ರಾಜಕುಮಾರ್ photo ಹಿಡಿದ ಮಾಲಾಧಾರಿಗಳು ಹನುಮನ ಜೊತೆ ಪುನೀತ್ ಜಪ ಕೂಡ ಮಾಡಿದರು.

ಕೊಪ್ಪಳ ತಾಲೂಕಿನ ವಜ್ನಾಳ ಗ್ರಾಮದ ಯುವಕರು ಪುನೀತ್ ಪೋಟೋವನ್ನು ಹಿಡಿದು ಬೆಟ್ಟ ಹತ್ತಿದರು. ಸುಮಾರು ಐವತ್ತು ಕಿಲೋಮೀಟರ್ ಪುನೀತ್ ಪೋಟೋ ಹಿಡಿದು ಪಾದಯಾತ್ರೆ ಕೈಗೊಂಡರು. ಪುನೀತ್ ಆಗಲಿ ಒಂದು ವರ್ಷವಾದರೂ ಕೂಡ ಪುನೀತ್ ರಾಜಕುಮಾರ್ ನೆನಪು ಮಾತ್ರ ಇಂದಿಗೂ ಅಜರಾಮರ. ಭೌತಿಕವಾಗಿ ಅವರು ಇಲ್ಲ ಅನ್ನುವುದು ಬಿಟ್ಟರೆ ಮಾನಸಿಕವಾಗಿ ಎಂದಿಗೂ ಅವರು ಜೀವಂತವೇ ಸರಿ ದೇವರಿಗೆ ಎಷ್ಟು ಸ್ಥಾನ ಕೊಟ್ಟಿದ್ದಾರೆ ಪರಮಾತ್ಮನಿಗೂ ಅಂದದ್ದೇ ಸ್ಥಾನ ಕೊಟ್ಟಿದ್ದಾರೆ ಅಭಿಮಾನಿಗಳು

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.