Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಕಲ್ಲಂಗಡಿ ಹಣ್ಣುಗಳ ಬೀಜಗಳಿಂದ ಆಗುವಂತಹ ಆರೋಗ್ಯದ ಪ್ರಯೋಜನವನ್ನು ನೀವೇನಾದರೂ ತಿಳಿದುಕೊಂಡರೆ ನಿಜವಾಗಲೂ ನೀವು ಆಶ್ಚರ್ಯ ಪಡುತ್ತೀರಾ !!!!

ನಮಗಿರುವಂತಹ ಒಂದು ಕೆಟ್ಟ ಅಭ್ಯಾಸ ಏನಪ್ಪ ಅಂದರೆ ಯಾವುದಾದರೂ ಹಣ್ಣನ್ನು ತಿನ್ನುವತ್ತಿರುವ ಸಂದರ್ಭದಲ್ಲಿ ಅದರಲ್ಲಿರುವಬೀಜಗಳನ್ನು ನಾವು ಬಿಸಾಕುತ್ತೇವೆ ಹಾಗೂ ಉಗುಳುತ್ತವೆ.

ಆದರೆ ಕೆಲವೊಂದು ಹಣ್ಣಿನ ಬೇಡವಾದ ಅಂಶವು ಕೂಡ ನಮ್ಮ ದೇಹಕ್ಕೆ ಅತಿ ಹೆಚ್ಚಾಗಿ ಪೋಷಕಾಂಶವನ್ನು ತಂದುಕೊಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ .

ಆದ್ದರಿಂದ ಕೆಲವು ಹಣ್ಣುಗಳನ್ನು ತಿನ್ನುವ ಸಂದರ್ಭದಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಕೂಡ ನಾವು ತಿಳಿದುಕೊಂಡರೆ ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳನ್ನು ಯಾವುವು ಸರಿಯಾಗಿ ತೆಗೆದುಕೊಳ್ಳಬಹುದು.

ಇಲ್ಲವಾದರೆ ನಾವು ಏನು ತಿಂದರೂ ಕೂಡ ನಮ್ಮ ದೇಹಕ್ಕೆ ಹೋಗುವುದಿಲ್ಲ ಹಾಗೂ ನಮ್ಮ ದೇಹದಲ್ಲಿ ಯಾವುದೇ ತರಹದ ಪರಿಣಾಮಕಾರಿ ಬದಲಾವಣೆ ಬರುವುದಿಲ್ಲ. ಬೇಸಿಗೆ ಕಾಲ ಬಂತು ಅಂದರೆ ನಾವು ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕಾಗಿಯೇ ಚಡಪಡಿಸುತ್ತೇವೆ .

ಆದರೆ ತಿನ್ನುತ್ತಿರುವ ಸಂದರ್ಭದಲ್ಲಿ ನಾವು ಕಲ್ಲಂಗಡಿ ಹಣ್ಣಿನ ಬೀಜವನ್ನು ಹೊರಗಡೆ ಬಿಸಾಕುತ್ತೇವೆ .ಆದರೆ ಇವತ್ತು ನಾವು ಕಲ್ಲಂಗಡಿ ಹಣ್ಣುಗಳ ಬೀಜದಿಂದ ಆಗುವಂತಹ ಆರೋಗ್ಯದ ಪ್ರಯೋಜನಗಳು ಆದರೂ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೇನಾದರೂ ಕಲ್ಲಂಗಡಿ ಹಣ್ಣಿನಲ್ಲಿ ಇರುವಂತಹ ಬೀಜಗಳನ್ನು ಆಸೆಯಾಗಿ ತಿನ್ನುವುದಕ್ಕೆ ಸಾಧ್ಯವಾಗದೇ ಇದ್ದಲ್ಲಿ ಆ ಕಲ್ಲಂಗಡಿ ಹಣ್ಣಿನ ಬೀಜವನ್ನು ಒಣಗಿಸಿ ಅದನ್ನು  ತಿನ್ನಬಹುದು. ಹಲವರು ಸಂಶೋಧಕರ ಪ್ರಕಾರ ಇದರಲ್ಲಿ ಇರುವಂತಹ ಸೆಲಿನಿಯಂ ಹಾಗೂ ಮೋಟೋ ಸಿ ಅಂಶ ಜಾಸ್ತಿ ಇರುವುದರಿಂದ ದೇಹಕ್ಕೆ ತುಂಬಾ ಆರೋಗ್ಯಕರವಾದ ಅ ಪ್ರಯೋಜನಗಳು ಆಗುತ್ತವೆ .

ಎಂದು ಹೇಳಿದ್ದಾರೆ. ಕಲ್ಲಂಗಡಿ ಹಣ್ಣನ್ನು ಹೆಚ್ಚಾಗುತ್ತಿರುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಸಕ್ಕರೆ ಕಾಯಿಲೆಯ ಅಂಶವನ್ನು ನಾವು ಸರಿಯಾಗಿ ಸರಿತೂಗಿಸಲು ತುಂಬಾ ಸಹಕಾರಿಯಾಗುತ್ತದೆ.

ಅದಲ್ಲದೆ ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಗೊಳಿಸಲು ಕಲ್ಲಂಗಡಿ ಹಣ್ಣು ತುಂಬಾ ಸಹಕಾರಿಯಾಗುತ್ತದೆ ಹಾಗು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಅದಲ್ಲದೆ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುವುದು ಹಾಗೂ ಅದರ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಅದಕ್ಕಾಗಿ ಹಲವಾರು ಸಂಶೋಧಕರು ಸಲಹೆ ನೀಡುತ್ತಾರೆ ಯಾವ ರೋಗಿಗಳಿಗೆ ಏನಾದರೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಅಥವಾ ಬಿಳಿ ರಕ್ತ ಕಣಗಳು ಕಡಿಮೆ ಇದ್ದಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣುಗಳ ಬೀಜವನ್ನು ತಿನ್ನಲು ಹೇಳುತ್ತಾರೆ. ಹಾಗಾದರೆ ಸರಿ ಇನ್ಯಾಕೆ ತಡ ಇವತ್ತಿನಿಂದಲೇ ನೀವು ಸಹ ಕಲ್ಲಂಗಡಿ ಜೊತೆಗೆ ಬೀಜವನ್ನು ಸೇರಿಸಿ ತಿನ್ನಿರಿ.

ನೀವು ಕಲ್ಲಂಗಡಿ ಬೀಜವನ್ನು ಬಿಸಾಕಿಬೇಡಿ ಅದರ ಬದಲು ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಈ ಜ್ಯೂಸ್ ಮಾಡಿ ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ಸಂಪೂರ್ಣವಾದ ಪೋಷಕಾಂಶಗಳು ಹಾಗೂ ಪ್ರೋಟಿನಗಳು ತಲುಪುತ್ತವೆ ಇಲ್ಲವಾದಲ್ಲಿ ನಾವು ಏನೇ ಹಣ್ಣನ್ನು ತಿಂದರೂ ಕೂಡ ನಮಗೆ ಹಾಗೂ ನಮ್ಮ ದೇಹಕ್ಕೆ ಬೇಕಾಗುವಂತಹ ಅಂಶಗಳು ಯಾವುದೇ ಕಾರಣಕ್ಕೂ ನಮ್ಮ ದೇಹಕ್ಕೆ ಆಗುವುದಿಲ್ಲ ಹಾಗೂ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಬದಲಾವಣೆಗಳು ಕಂಡು ಬರುವುದಿಲ್ಲ.

ಕೇವಲ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ ಅಥವಾ ನಮಗೆ ಇಷ್ಟ ಬಂದಲ್ಲಿ ಮಾತ್ರವೇ ತಿನ್ನಬಾರದು ಅದನ್ನು ನಮ್ಮ ದಿನನಿತ್ಯದ ಹವ್ಯಾಸವನ್ನು ಮಾಡಿಕೊಂಡರೆ ಹಣ್ಣುಗಳಲ್ಲಿ ಇರುವಂತಹ ಪೋಷಕಾಂಶಗಳು ನಿರಂತರವಾಗಿ ನಮ್ಮ ದೇಹದಲ್ಲಿ ನಿಮಗೆ ಬರುವಂತಹ ರೋಗಗಳನ್ನು ಕಡಿಮೆ ಮಾಡಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಗೊತ್ತಿಲ್ಲ ಸ್ನೇಹಿತರೆ ಕಲ್ಲಂಗಡಿ ಹಣ್ಣಿನಿಂದ ಎಷ್ಟೊಂದು ಆರೋಗ್ಯಕರವಾದ ಪ್ರಯೋಜನಗಳಿವೆಯೆಂದು ಹಾಗಾದರೆ ಇನ್ನೇಕೆ ತಡ ಇವತ್ತು ನೀವು ಕಲ್ಲಂಗಡಿ ಹಣ್ಣನ್ನು ತೆಗೆದುಕೊಂಡು ಬಂದು ಅದರ ಬೀಜವನ್ನು ತಿನ್ನಲು ಶುರು ಮಾಡಿ ಹಾಗೂ ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ನೀವೇ ನೋಡಿಕೊಳ್ಳಿ.

kannada inspiration story and Kannada Health Tips

water melon or kallangadi hannu seads beeja juice health benefits