Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಹಸಿ ಮೆಣಸಿನಕಾಯಿಯನ್ನು ಯಾಕೆ ದಿನನಿತ್ಯ ತಿನ್ನಬೇಕು ಗೊತ್ತಾ …. ? ಅದ್ಭುತವಾದ ಉಪಯೋಗಳು ತಿಳಿಯ ಬೇಕಾದರೆ ಎರಡು ನಿಮಿಷ ಓದಿ …

ನಮಗೆ ನಿಮಗೆ ಗೊತ್ತಿರುವ ಹಾಗೆ ನಾವು ಸಾಮಾನ್ಯವಾಗಿ ಅಡುಗೆಯನ್ನು ಮಾಡುವ ಅಂತಹ ಸಂದರ್ಭದಲ್ಲಿ ಹೆಚ್ಚಾಗಿ ನಾವು ಹಸಿಮೆಣಸಿನಕಾಯಿಯನ್ನು ಬಳಕೆ ಮಾಡುತ್ತೇವೆ, ಬಹಳಷ್ಟು ಮಂದಿ ಹಸಿಮೆಣಸಿನಕಾಯಿಯನ್ನು ಬಿಟ್ಟು ಕೆಂಪಗೆ ಇರುವಂತಹ ಮೆಣಸಿನಕಾಯಿಯನ್ನು ಅಡಿಗೆ ಮಾಡುವ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ.

ಹೀಗೆ ನೀವೇನಾದರೂ ಹಸಿಮೆಣಸಿನಕಾಯಿಯನ್ನು ಅಡುಗೆ ಮಾಡುವಂತಹ ಸಂದರ್ಭದಲ್ಲಿ ನೀವು ಬಳಕೆ ಮಾಡಿದ್ದಲ್ಲಿ ನಿಮಗೆ ಒಳ್ಳೆಯ ರುಚಿ ನಿಮಗೆ ದೊರೆಯುತ್ತದೆ, ಹಸಿಮೆಣಸಿನಕಾಯಿ ಬಳಕೆ ಮಾಡುವುದರಿಂದ ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ಸಿಕ್ಕಾಪಟ್ಟೆ ಒಳ್ಳೇದು ಅಂತ.

ಹಾಗಾದರೆ ಬನ್ನಿ ಹಸಿಮೆಣಸಿನಕಾಯಿ ಎಂದ ನಮ್ಮ ಆರೋಗ್ಯಕ್ಕೆ ಆಗುವಂತಹ ಲಾಭಗಳು ಆದರೂ ಯಾವುವು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಹಸಿ ಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ವಿಟಮಿನ್ ಎ ವಿಟಮಿನ್ ಬಿ 6 ಇದರಲ್ಲಿ ಐರನ್ ಪೊಟಾಶಿಯಂ ಕ್ಯಾಲ್ಸಿಯಂ ನಿಯಾಸಿನ್ ಫೈಬರ್ ಇನ್ನು ಹಲವಾರು ಪೋಷಕಾಂಶಗಳನ್ನು ಹಸಿಮೆಣಸಿನಕಾಯಿ ಹೊಂದಿರುತ್ತದೆ,

ಹಸಿಮೆಣಸಿನಕಾಯಿ ಇರುವಂತಹ ವಿಟಮಿನ್ ಸಿ ಎನ್ನುವಂತಹ ಅಂಶ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬಾ ಜಾಸ್ತಿ ಮಾಡಲು ನಮ್ಮ ದೇಹಕ್ಕೆ ತುಂಬಾ ಸಹಕಾರಿಯಾಗುತ್ತದೆ.

ಇದರಿಂದಾಗಿ ನೀವು ದಿನನಿತ್ಯ ಹಸಿಮೆಣಸಿನಕಾಯಿಯನ್ನು ನಿಮ್ಮ ದಿನನಿತ್ಯದ ಅಡಿಗೆಯ ಸಂದರ್ಭದಲ್ಲಿ ಬಳಕೆ ಮಾಡಿದ್ದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯು ಕೂಡ ಜಾಸ್ತಿ ಆಗುವುದಕ್ಕೆ ತುಂಬಾ ಒಳ್ಳೆಯದು ಆಗುತ್ತದೆ.

ನೀವೇನಾದ್ರೂ ಹಸಿಮೆಣಸಿನ ಕಾಯಿಯನ್ನು ಜೊತೆಗೆ ಬೆರೆಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ವ್ಯವಸ್ಥೆಯ ತುಂಬಾ ಚೆನ್ನಾಗಿ ಆಗುತ್ತದೆ. ನಿಮಗೆ ಇರುವಂತಹ ಗ್ಯಾಸ್ ಸಮಸ್ಯೆ ಹಾಗೂ ಮಲಬದ್ಧತೆಯನ್ನು ಅಂತಹ ಸಮಸ್ಯೆ ದೂರವಾಗುತ್ತದೆ,

ಇನ್ನು ಹಲವಾರು ಜನರು ಹಸಿಮೆಣಸಿನಕಾಯಿಯನ್ನು ಬಳಸುತ್ತಿರುವ ಸಂದರ್ಭದಲ್ಲಿ ಅದರಲ್ಲಿ ಇರುವಂತಹ ಬೀಜಗಳನ್ನು ತೆಗೆದು ಹೊರಗಡೆ ಹಾಕುತ್ತಾರೆ, ಹೀಗೆ ಹಾಕುವುದರಿಂದ ಅದರಲ್ಲಿ ಇರುವಂತಹ ಅಂಶವು ನಮ್ಮ ದೇಹಕ್ಕೆ ಸೇರುವುದಿಲ್ಲ ಇದರಿಂದಾಗಿ ನಮ್ಮ ದೇಹಕ್ಕೆ ಪೋಷಕಾಂಶಗಳು ಅನ್ನುವುದು ದೊರಕುವುದಿಲ್ಲ.

ನಿಮಗೆ ಗೊತ್ತಿದಿಯೋ ಅಥವಾ ಗೊತ್ತಿಲ್ಲವೋ ಮೆಣಸಿನಕಾಯಿ ಬೀಜಗಳಲ್ಲಿ ಇರುವಂತಹ ಫೈಟೋ ಸ್ಟೆರಾಲ್ ಎನ್ನುವಂತಹ ಅಂಶ ನಿಮ್ಮ ರಕ್ತನಾಳಗಳಲ್ಲಿ ಸಿಕ್ಕಾಪಟ್ಟೆ ಸಂಗ್ರಹ ಆಗಿರುವಂತಹ ಕೊಬ್ಬನ್ನು ಕಡಿಮೆ ಮಾಡುವಂತಹ ಶಕ್ತಿ ಈ ಮೆಣಸಿನಕಾಯಿಯ ಬೀಜಗಳಲ್ಲಿ ಇದೆ,

ನಿಮ್ಮ ದೇಹದಲ್ಲಿ ಆಗುವಂತಹ ಹೆಚ್ಚಿನ ಕೊಬ್ಬನ್ನು ರಕ್ತಕ್ಕೆ ತಿನ್ನದ ಹಾಗೆ ನೋಡಿಕೊಳ್ಳುವುದು ಉತ್ತಮ ಶಕ್ತಿ ಕೂಡ ಈ ಹಸಿಮೆಣಸಿನಕಾಯಿ ಎಲ್ಲಿದೆ. ಅದಲ್ಲದೆ ಈ ಹಸಿಮೆಣಸಿನಕಾಯಿ ಹೆಚ್ಚಾಗಿ ಕ್ಯಾಪ್ಸೆಯಿಸಿನ್ ಅಂಶವನ್ನು ಹೊಂದಿದ್ದು ನಿಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಇರುವಂತಹ ಕ್ಯಾಲರಿಗಳು ತುಂಬಾ ಫಾಸ್ಟ್ ಆಗಿ ಕರಗಿ ಹೋಗುತ್ತವೆ.

ಅದಲ್ಲದೇ ಹಸಿಮೆಣಸಿನಕಾಯಿಯನ್ನು ತಿನ್ನುವುದರಿಂದ ನಿಮ್ಮ ದೇಹದ ಚರ್ಮದಲ್ಲಿ ಆಂಟಿ-ಬ್ಯಾಕ್ಟಿರಿಯಾ ಎನ್ನುವಂತಹ ಅಂಶವು ಕೂಡ ಹೆಚ್ಚಾಗುತ್ತದೆ ಇದರಿಂದಾಗಿ ನಿಮಗೆ ಚರ್ಮದ ಕಾಯಿಲೆಗಳು ಹಾಗೂ ಚರ್ಮ ಗೆ ಸಂಬಂಧಿಸಿದ ಕಾಯಿಲೆಗಳು ಯಾವುದೇ ಕಾರಣಕ್ಕೂ ನಿಮಗೆ ಬರುವುದಿಲ್ಲ.

kannada inspiration story and Kannada Health Tips

what is the health advanatges to eat green chilli