Categories
ಭಕ್ತಿ ಮಾಹಿತಿ ಸಂಗ್ರಹ

ಶಿವನ ಎದುರುಗಡೆ ನಂದಿ ಯಾಕೆ ಇರುತ್ತೆ ಗೊತ್ತಾ. ಇಲ್ಲಿದೆ ಒಂದು ರೋಚಕ ಪುರಾಣದ ಕಥೆ.

ನೀವು ನೋಡಿರಬಹುದು , ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ಶಿವನ ದೇವಸ್ಥಾನ ಅವನ  ಎದುರುಗಡೆ ಯಾವಾಗಲೂ ನಂದಿ ವಿಗ್ರಹ ಇರುತ್ತದೆ. ಈ ನಂದಿ ವಿಗ್ರಹವು ಶಿವನ ಎದುರುಗಡೆ ಇರುವುದಕ್ಕೆ ಒಂದು ಪುರಾಣ ಕಥೆಯಿದೆ. ಆ ಕಥೆಯನ್ನು ನಾವು ನಿಮಗೆ ಇವತ್ತು ವಿವರವಾಗಿ ಹೇಳಿದ್ದೇವೆ.

ಪುರಾಣದ ಕಥೆಗಳ ಪ್ರಕಾರ ಶೀಲವು ಎನ್ನುವ ಒಬ್ಬ ಋಷಿ ಇರುತ್ತಾರೆ. ಅವನಿಗೆ ಮಕ್ಕಳು ಆಗದೆ ಇರುವ ಕಾರಣ ಮನಸು  ಕುಂಗಿ ಹೋಗುತ್ತದೆ.

ಅದರಿಂದ ಒಂದು ದಿನ ಏನು ಮಾಡುವುದು ಎಂದು ಗೊತ್ತಾಗದೆ ಮಗು ಬೇಕು ಎಂದು ಶಿವನಿಗಾಗಿ ತಪಸ್ಸು ಮಾಡಲು ಕುತು ಬಿಡುತ್ತಾರೆ. ಅವರ ತಪಸ್ಸು ಎಷ್ಟು ಕಟೋರ ಇತ್ತು ಎಂದರೆ ಅವರು ಮಾಡುತ್ತಿರುವಂತಹ  ತಪಸ್ಸು ಅವರ ಮನೆ ಮೇಲೆ ಕಲ್ಲುಗಳು ಕೂಡ ಹುಟ್ಟಲು ಶುರುವಾಗುತ್ತವೆ ಅದನ್ನು ಕೂಡ ಲೆಕ್ಕಿಸದೆ ಶಿವನ ಕುರಿತಾಗಿ ಘೋರವಾದ ತಪಸ್ಸನ್ನು ಮಾಡುತ್ತಿರುತ್ತಾರೆ.

ಇನ್ನು ಕಂಡಂತಹ ಶಿವನು ಅವನ ಎದುರುಗಡೆ ಪ್ರತ್ಯಕ್ಷವಾಗಿ ಅವನು ಕೇಳಿದ ಅಂತಹ ವರನ್ನು  ಕರುಣಿಸುತ್ತಾನೆ.ಹಾಗೆ ಒಂದು ದಿನ ಆ ಶೀಲಾ ವು  ಋಷಿ ಹೋಮವನ್ನು ಮಾಡುತ್ತಿರುವಾಗ ಹೋಮದ ಕುಂಡ ರಿಂದ ಒಂದು ಮಗು ಪ್ರತ್ಯಕ್ಷವಾಗುತ್ತದೆ. ಆ ಮಗುವೇ ಶಿವನ ಋಷಿ ಗೆ ಕೊಟ್ಟಂತಹ ವರ. ಇವನ ಹೆಸರು ನಂದಿ ಅಂತ.

ಈ ಹುಡುಗ ಹುಟ್ಟಿದ ಕ್ಷಣದಿಂದಲೇ ವೇದಗಳ ಬಗ್ಗೆ ಅತಿ ಹೆಚ್ಚಾದ ಆಸಕ್ತಿ ಹೊಂದಿರುತ್ತಾರೆ. ಈ ಹುಡುಗನಿಗೆ ಶಿವ ಎಂದರೆ ತುಂಬಾ ಅಚ್ಚುಮೆಚ್ಚು.  ಯಾವಾಗಲೂ ಶಿವನ ಧ್ಯಾನದಲ್ಲಿ ಇರುತ್ತಾನೆ. ಒಂದು ದಿನ ಕೆಲವು ಪಾದಾಚಾರಿ ಸ್ವಾಮೀಜಿಗಳು ಇವನು ಇರುವ ಸ್ಥಳಕ್ಕೆ ಬರುತ್ತಾರೆ. ನಂದಿಯು ಅವರಿಗೆ ಅತ್ಯುತ್ತಮವಾಗಿ ಅತಿಥಿ ಸತ್ಕಾರ ಮಾಡುತ್ತಾನೆ.

ಇದನ್ನು ನೋಡಿದಂತಹ ಆ ದಾರಿಹೋಕ ಸ್ವಾಮೀಜಿಗಳು ಇವನಿಗೆ ದೀರ್ಘಾಯುಷ್ಮಾನ್ ಭವ ಎನ್ನುವ ಪದವನ್ನ ಹೇಳಲು ಹೊರಟಂತಹ ಅವರು  ಸ್ವಲ್ಪ ಸಮಯದ ಕಾಲ ಸುಮ್ಮನೆ ನಿಂತು ಬಿಡುತ್ತಾರೆ. ಇದನ್ನು ಗಮನಿಸಿದ ಅಂತಹ ಅವರ ತಂದೆ ಸ್ವಲ್ಪ ಸಮಯದ ಕಾಲ ದಿಗ್ಬ್ರಾಂತಿ ಆಗುತ್ತಾರೆ. ಈ ವಿಷಯವನ್ನು ತಿಳಿದಂತಹ ನಂದಿಗೂ ಕೂಡ ಯಾವುದೇ ತರಹದ ಭಯ ಆಗುವುದಿಲ್ಲ ತಾನು ಸಾಯುತ್ತೇನೆ ಅನ್ನುವ ಕಿಂಚಿತ್ತು ಯೋಚನೆ ಕೂಡ ನಂದಿಗೆ ಬರುವುದಿಲ್ಲ.

ಆದರೆ ನಾನು ಪೂಜೆ ಮಾಡುತ್ತಿರುವಂತಹ ಶಿವನ ಜೊತೆಗೆ ಯಾವಾಗಲೂ ಇರಬೇಕು ಎನ್ನುವ ಹಂಬಲ ನಂದಿಗೆ ಇರುತ್ತದೆ. ಇದಾದ ನಂತರ ನಂದಿಯು ಶಿವನ ಕುರಿತಾಗಿ ತಪಸ್ಸನ್ನು ಮಾಡಲು ಹೋಗುತ್ತಾನೆ. ಹೀಗೆ ತಪಸ್ಸು ಮಾಡಿದಂತಹ ನಂದಿಗೆ ಶಿವನು ಪ್ರತ್ಯಕ್ಷವಾಗಿ ನಿನಗೇನು ಬೇಕು ಕೇಳು ಎಂದು ಕೇಳುತ್ತಾನೆ. ನಂದಿಯು ನನಗೆ ಆಯಸ್ಸು ಹೆಚ್ಚಿಸುವ ಅಥವಾ ಐಶ್ವರ್ಯವನ್ನು ಕೊಡು ಎನ್ನುವ ವರವನ್ನು ಕೇಳದೆ ನನಗೆ ಯಾವಾಗಲೂ ನಿನ್ನ ಜೊತೆಗೆ ಇರುವ ಹಾಗೆ ವರವನ್ನು ಕರುಣಿಸು ಎಂದು ವರವನ್ನು ಕೇಳುತ್ತಾನೆ.

ಇದನ್ನು ಕೇಳಿಸಿಕೊಂಡ ಶಿವನು ಭಾವುಕನಾಗಿ ನೀನು ಯಾವಾಗಲೂ ನನ್ನ ಜೊತೆ ಇರುತ್ತೀಯಾ. ತನ್ನ ವಾಹನವಾಗಿ  ನಂದಿ ರೂಪದಲ್ಲಿ ಅವರನ್ನು ಬದಲಾಯಿಸುತ್ತಾನೆ. ನಿಮಗೆ ಗೊತ್ತಿರಬಹುದು ರಾಕ್ಷಸರು ಹಾಗೂ ದೇವತೆಗಳು ಕ್ಷೇತ್ರ ಸಾಗರದಲ್ಲಿ  ಅಮೃತ ಗೋಸ್ಕರ ಸಮುದ್ರವನ್ನು ಕಡೆಯು ತಾರೆ.

ಹಾಗೆ ಕಡೆಯುವ ಸಂದರ್ಭದಲ್ಲಿ ವಿಷ ದೊರಕುತ್ತದೆ. ಹೀಗೆ ಬಂದಂತಹ ವಿಷವನ್ನು ಶಿವನು ಕುಡಿಯುತ್ತಾನೆ ಹಾಗೆ ಕುಳಿತಿರುವ ಸಂದರ್ಭದಲ್ಲಿ ಸ್ವಲ್ಪ  ವಿಷ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಅಂತಹ ನಂದಿ ಯಾವುದೇ ಯೋಚನೆ ಮಾಡದೆ ಅದನ್ನು ತನ್ನ ನಾಲಿಗೆಯಿಂದ ನೆಕ್ಕಿ ಬಿಡುತ್ತಾನೆ. ಇದನ್ನು ಗೊತ್ತಾಗುತ್ತದೆ ಶಿವನನ್ನು ಎಷ್ಟು ಪ್ರೀತಿ ಮಾಡುತ್ತಾನೆ  ನಂದಿ ಎಂದು. ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೆ ಇದನ್ನು ಶೇರ್ ಮಾಡುವುದು ಮರೆಯಬೇಡಿ.

kannadaa inspiration story anda Kannada Health Tips kannada inspiration story and Kannada Health Tips

why nandi statue will be there in front of shiva temple