Categories
ನ್ಯೂಸ್ ಭಕ್ತಿ

ಬೆಳಿಗ್ಗೆ ಸ್ನಾನ ಆದ ತಕ್ಷಣ ಈ ಮಂತ್ರ ಹೇಳಿದರೆ ಸಾಕು ಆ ದಿನವೆಲ್ಲಾ ಅಖಂಡ ಜಯ ದುಡ್ಡೆ ದುಡ್ಡು ಅಂತೇ ..!

ನೀವು ಹೋಗುವಂತಹ ಕೆಲಸದಲ್ಲಿ ಜಯ ಸಿಗಬೇಕೆಂದರೆ ನೀವು ಕೈ ಹಾಕಿದ ಕೆಲಸವೂ ಯಾವುದೇ ವಿಘ್ನಗಳಿಲ್ಲದೆ ಸಾಗಬೇಕೆಂದರೆ, ಶ್ರೀಲಕ್ಷ್ಮೀದೇವಿಯ ಆಶೀರ್ವಾದದೊಂದಿಗೆ ಕುಬೇರ ದೇವನ ಸಾನ್ನಿಧ್ಯವನ್ನು ಪಡೆದುಕೊಂಡು ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ನೀವು ಜಯವನ್ನು ಪಡೆದುಕೊಳ್ಳಬಹುದು, ಹಾಗೆ ವ್ಯಾಪಾರ ವಹಿವಾಟುಗಳಲ್ಲಿ ಸಮಸ್ಯೆಗಳು ತೊಂದರೆಗಳು.

ಆಗಾಗ ಎದುರಾಗುತ್ತಿದ್ದರೆ ಅಂತಹ ಸಮಸ್ಯೆಗಳನ್ನು ಕೂಡಾ ಪರಿಹಾರ ಮಾಡುವ ಈ ಒಂದು ಮಂತ್ರವು ಕುಬೇರ ಗಾಯತ್ರಿ ಮಂತ್ರ ಎಂದು ಕರೆಯಲಾಗುತ್ತದೆ. ಈ ದಿನದ ಮಾಹಿತಿಯಲ್ಲಿ ನಾನು ನಿಮಗೆ ಈ ಒಂದು ಮಂತ್ರದ ವೈಶಿಷ್ಟ್ಯತೆಯನ್ನು ತಿಳಿಸಿಕೊಡುತ್ತೇನೆ ತಪ್ಪದೆ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ಈ ಒಂದು ಕುಬೇರ ಗಾಯತ್ರಿ ಮಂತ್ರವನ್ನು ನೀವು ಪ್ರತಿ ದಿನ ಪಠಿಸಲು ಸಾಧ್ಯವಾಗದೇ ಇದ್ದಲ್ಲಿ, ಶುಕ್ರವಾರದ ದಿವಸದಂದು ಪಠಿಸಬಹುದಾಗಿದೆ, ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರವನ್ನು ನೀವು ಪಠಿಸಬೇಕಾಗುತ್ತದೆ, ಈ ಮಂತ್ರವು ಕುಬೇರ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಪಠಿಸ ಬೇಕಾಗಿರುವ ಮಂತ್ರವಾಗಿದ್ದು ಯಾವುದೇ ಕೆಲಸಗಳಿಗೆ ವಿಘ್ನ ಆಗುತ್ತಿದ್ದರೆ, ಆಗ ನೀವು ಈ ಮಂತ್ರವನ್ನು ಪಠಿಸಬೇಕು ಇದರಿಂದ ನಿಮ್ಮ ಕೆಲಸಗಳಿಗೆ ಆಗುವ ಅಡೆತಡೆಗಳು ನಿವಾರಣೆಯಾಗುತ್ತದೆ.

ಈ ಕುಬೇರ ಗಾಯತ್ರಿ ಮಂತ್ರವು ಹೀಗಿದೆ ” ಓಂ ಯಕ್ಷರಾಜಾಯ ವಿದ್ಮಹೀ ವೈಷ್ಣವನಾಯ ಧೀಮಹಿ ತನ್ನೋ ಕುಬೇರ ಪ್ರಚೋದಯಾತ್ ” ಈ ಒಂದು ಮಂತ್ರವನ್ನು ಕುಬೇರ ಗಾಯತ್ರಿ ಮಂತ್ರ ಎಂದು ಕರೆಯಲಾಗುತ್ತದೆ. ಇದನ್ನು ಹೇಗೆ ಪಠಿಸಬೇಕು ಅಂದರೆ ಒಂದು ಕಾಗದದ ಮೇಲೆ ಅಥವಾ ಒಂದು ಪುಸ್ತಕದಲ್ಲಿ ಈ ಮಂತ್ರವನ್ನು ಬರೆದಿಟ್ಟುಕೊಂಡು, ನಂತರ ಈ ಪುಸ್ತಕವನ್ನು ದೇವರ ಮುಂದೆ ಇಟ್ಟು ಈ ಮಂತ್ರವನ್ನು ಪಠಿಸುತ್ತಿರಬೇಕು, ದಿನಕ್ಕೆ ಇಪ್ಪತ್ತ್ ಒಂದು ಬಾರಿ ಪಠಿಸುವುದರಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ ಎಂದು ಹೇಳಲಾಗಿದೆ.

ವ್ಯಾಪಾರ ವಹಿವಾಟು ಮಾಡುವಂಥವರು ಪುಸ್ತಕದಲ್ಲಿ ಈ ಮಂತ್ರವನ್ನು ಬರೆದಿಟ್ಟು ನೀವು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಇಟ್ಟುಕೊಳ್ಳಬೇಕು, ನಂತರ ವ್ಯಾಪಾರವನ್ನು ಶುರು ಮಾಡುವ ಮುನ್ನ ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸಿ ಆನಂತರ ನಿಮ್ಮ ಕೆಲಸಗಳನ್ನು ಶುರು ಮಾಡಿ, ಅದರಲ್ಲಿಯೂ ನೀವು ಅಂದುಕೊಂಡ ಕಾರ್ಯಗಳು ನೆರವೇರಬೇಕೆಂದರೆ, ಆ ದಿನದಲ್ಲಿ ನೀವು ಏನನ್ನು ಮಾಡಬೇಕೋ ಅಥವಾ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು ಅಂತ ಅಂದುಕೊಂಡಿರುತ್ತೀರೊ, ಅದು ಕೂಡ ನಿರ್ವಿಘ್ನವಾಗಿ ನೆರವೇರುತ್ತದೆ, ಯಾವುದೇ ತೊಂದರೆಗಳಿಲ್ಲದೇ ನಿಮ್ಮ ಕೆಲಸ ಕಾರ್ಯಗಳು ಜರುಗುತ್ತದೆ.

ಈ ಮಂತ್ರವನ್ನು ಪಠಿಸುವಾಗ ನೀವು ಮಾಂಸಾಹಾರ ಪದಾರ್ಥಗಳನ್ನು ಸೇವಿಸಬಾರದು ಸ್ನಾನ ಮಾಡಿ ಮಡಿಯಿಂದ ಈ ಮಂತ್ರವನ್ನು ಜಪಿಸಬೇಕು, ಹಾಗೆ ಶುಕ್ರವಾರದ ದಿವಸದಂದು ಈ ಮಂತ್ರವನ್ನು ಪಠಿಸುವುದನ್ನು ತಪ್ಪಿಸಬಾರದು. ಈ ರೀತಿ ನೀವು ನಿಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಆಗುತ್ತಿದ್ದರೆ ಕುಬೇರ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ತೊಂದರೆಗಳು ನಿವಾರಣೆಗೊಳ್ಳುತ್ತದೆ.

ವೀಕ್ಷಕರೇ ನಿಮಗೆ ಈ ಒಂದು ಮಾಹಿತಿ ಉಪಯುಕ್ತವಾಗಿದೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ. ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆಯೇ ನಿಮ್ಮ ಫ್ರೆಂಡ್ಸ್ ಗಳಿಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *