Categories
ಅರೋಗ್ಯ ಆರೋಗ್ಯ ಮಾಹಿತಿ

ಅಬ್ಬಾ ಒಂದು ಅರಿಶಿನದಿಂದ ಇಷ್ಟೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ, ಅದರ ಪ್ರಯೋಜನವನ್ನು ಏನಾದರೂ ತಿಳಿದುಕೊಂಡರೆ ನಿಜವಾಗಲೂ ನೀವು ಒಂದು ಸಾರಿ ಆಶ್ಚರ್ಯಪಡುತ್ತೀರ… ಅಷ್ಟೊಂದು ಔಷಧಿಕಾರ ಅರಿಶಿಣ… ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅಂತಹ ಉತ್ತಮವಾದ ಮಾಹಿತಿ…

ನಮ್ಮ ದೇಶದಲ್ಲಿ ಅರಿಶಿಣ ಹಾಗೂ ಕುಂಕುಮಕ್ಕೆ ನಾವು ಉತ್ತಮವಾದಂತಹ ಬೆಲೆಯನ್ನು ಕೊಟ್ಟಿದ್ದೇವೆ ಕೇವಲ ಅರಿಶಿನವನ್ನು ಅಡುಗೆ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಮಾತ್ರವೇ ಬಳಸದೆ ಅದನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಾಗಿಲಲ್ಲಿ ಹೊಸ್ತಿಲು ಮೇಲೆ ಇದನ್ನು ಹಾಕುವುದರ ಪ್ರತಿನಿತ್ಯ ಮಹಿಳೆಯರನ್ನು ನೋಡಬಹುದು.

ಇದಕ್ಕೆ ಕೆಲವೊಂದು ವೈಜ್ಞಾನಿಕ ವಾದಂತಹ ಕಾರಣಗಳು ಕೂಡ ನಾವು ತಿಳಿದುಕೊಳ್ಳಬೇಕು, ಅದು ಏನಪ್ಪ ಅಂದ್ರೆ ನೀವೇನಾದರೂ ಅರಿಶಿನದ ಪುಡಿಯನ್ನು ನಿಮ್ಮ ಬಾಗಿಲ ಮೇಲೆ ಹಾಕಿದರೆ ದಿನನಿತ್ಯ ನಿಮ್ಮ ಮನೆಯ ಒಳಗೆ ಬರುವಂತಹ ಕೆಲವೊಂದು ಬ್ಯಾಕ್ಟೀರಿಯಾಗಳನ್ನು ಹಿಡಿಯುವಂತಹ ಒಂದು ಶಕ್ತಿ ಅರಿಶಿಣ ಕುಂಕುಮದಲ್ಲಿ ಇರುತ್ತದೆ, ಆದುದರಿಂದ ನಮ್ಮ ಹಿರಿಯರು ವೈಜ್ಞಾನಿಕವಾಗಿ ಆಗಿನ ಕಾಲದಲ್ಲಿ ಇದರ ಬಗ್ಗೆ ಆಲೋಚನೆ ಹಾಗೂ ಚಿಂತನೆಯನ್ನು ಮಾಡಿ ಈ ರೀತಿಯಾದಂತಹ ಸಂಪ್ರದಾಯವನ್ನು ಅಳವಡಿಕೆ ಮಾಡಿದ್ದಾರೆ…

ಹಾಗಾದರೆ ಬನ್ನಿ ಇವತ್ತು ನಾವು ಅರಿಶಿಣದ ಬಗ್ಗೆ ಇರುವಂತಹ ಪ್ರಯೋಜನದ ಬಗ್ಗೆ ತಿಳಿದುಕೊಳ್ಳೋಣ, ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೂಗಳು ಇಲ್ಲದಿದ್ದರೂ ಕೂಡ ಪರವಾಗಿಲ್ಲ , ಆದರೆ ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೆ ನಮಗೆ ಅರಿಶಿನ-ಕುಂಕುಮ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ, ಅದರಲ್ಲೂ ಯಾವುದಾದರೂ ಮುತ್ತೈದೆಯರು ಯಾವುದಾದರೂ ಪೂಜೆಯ ಸಂದರ್ಭದಲ್ಲಿ ಹೋದ ಸಂದರ್ಭದಲ್ಲಿ ಅವರ ಗಾಳಿಗೋಪುರ ಅರಿಶಿನ-ಕುಂಕುಮವನ್ನು ಹಚ್ಚಿ ಯಾವಾಗಲೂ ನಿಮ್ಮ ಮುತ್ತೈದೆಯಾಗಿ ಇರಬೇಕು ಎನ್ನುವಂತಹ ಆಶೀರ್ವಾದವನ್ನು ಮಾಡುವಂತಹ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಇನ್ನು ನಾವು ಅರಿಶಿಣವನ್ನು ಆರೋಗ್ಯದ ದೃಷ್ಟಿಯಲ್ಲಿ ನಾವು ನೋಡುವುದಾದರೆ ಹಲವಾರು ಪ್ರಯೋಜನಗಳನ್ನು ಕಂಡುಕೊಳ್ಳಬಹುದು ಅವುಗಳ ಸಂಪೂರ್ಣವಾದ ಮಾಹಿತಿ ಹೀಗಿದೆ, ಅರಿಶಿಣವನ್ನು ನೀವೇನಾದರೂ ಹಾಲಿನಕೆನೆ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖದ ಮೇಲೆ ಲೇಪನ ಮಾಡಿಕೊಳ್ಳುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಮೊಡವೆಗಳು ಹಾಗೂ ಅನೇಕ ತರನಾದ ಮುಖದ ಕಲೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಅರಿಶಿನಕ್ಕೆ ಇದೆ,

ಅರಿಶಿನ ಪುಡಿಯನ್ನು ನೀವೇನಾದ್ರೂ ಕಡಲೆಹಿಟ್ಟಿನ ಜೊತೆಗೆ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಅರಿಶಿನಪುಡಿ ಕೆಮ್ಮಿಗೆ ಒಂದು ರಾಮಬಾಣ ಇದ್ದಹಾಗೆ ಕುಡಿಯುವ ಹಾಲಿನಲ್ಲಿ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿಕೊಂಡು ಅದನ್ನ ಕುಡಿದಿದ್ದೆ ಆದಲ್ಲಿ ಕೆಮ್ಮು ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಇದರಲ್ಲಿ ಆಂಟಿಸೆಪ್ಟಿಕ್ ಗುಣವು ಹೆಚ್ಚಾಗಿ ಇರುವುದರಿಂದ ಅದನ್ನು ಹೆಚ್ಚಾಗಿ ಅಡುಗೆ ವಿಧಾನದಲ್ಲಿ ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಎನ್ನುವುದು ಹೆಚ್ಚಾಗುತ್ತ, ಸಣ್ಣಪುಟ್ಟ ಗಾಯಗಳಾಗಿ ರಕ್ತ ಹೊರಗೆ ಬರುತ್ತಿರುವ ಅಂತಹ ಸಂದರ್ಭದಲ್ಲಿ ಅದನ್ನು ಸ್ವಚ್ಛತೆ ಇರುವಂತಹ ನೀರಿನಿಂದ ಚೆನ್ನಾಗಿ ತೊಳೆದು ತದನಂತರ ಅರಶಿನವನ್ನು ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಕೆಲವೊಂದು ವ್ಯಕ್ತಿಗಳಿಗೆ ಮುಖದಲ್ಲಿ ಗುಳ್ಳೆಗಳು ಆಗುವುದು ಸಹಜ ಅದರಲ್ಲೂ ಬಿಳಿ ಗುಳ್ಳೆಯು ಕೆಲವೊಂದು ಜನರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟುಮಾಡುತ್ತದೆ, ಹೀಗೆ ಆಗಬಾರದು ಎಂದರೆ ಅರಿಶಿನದ ಕೊಂಬನ್ನು ತೆಗೆದುಕೊಂಡು ಚೆನ್ನಾಗಿದೆ ತೇದು ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ರೀತಿಯಾದಂತಹ ಗುಳ್ಳೆಗಳು ಆಗುವುದಿಲ್ಲ.

ಆದರೆ ದಯವಿಟ್ಟು ಒಂದು ವಿಚಾರವನ್ನು ಗಮನಿಸಿಕೊಳ್ಳಿ ಯಾವುದೇ ಕಾರಣಕ್ಕೂ ಅಂಗಡಿಯಿಂದ ತಂದಂತಹ ಅರಿಶಿನದ ಪುಡಿಯನ್ನು ಬಳಕೆ ಮಾಡಬೇಡಿ ಏಕೆಂದರೆ ಕೆಲವೊಂದು ಸಾರಿ ಅರಿಶಿಣದ ಅಡಿಗೆ ಕೆಲವೊಂದು ಬಣ್ಣಗಳನ್ನು ಬೆರಿಕೆ ಮಾಡಿರುತ್ತಾರೆ . ಆದುದರಿಂದ ಯಾವ ಕಾರಣಕ್ಕೂ ಅರಿಶಿನದ ಪುಡಿಯನ್ನು ಬಳಕೆ ಮಾಡುವುದು ತುಂಬಾ ಕೆಟ್ಟದ್ದು ಅದರ ಬದಲು ಅರಿಶಿಣದ ಕೊಂಬನ್ನು ತೆಗೆದುಕೊಂಡು ಬಂದು ಬಳಕೆ ಮಾಡುವುದರಿಂದ ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು. ಈ ಉಪಯುಕ್ತ ಮಾಹಿತಿಯನ್ನು ದಯವಿಟ್ಟು ಪ್ರತಿಯೊಬ್ಬರು ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ಲೈಕ್ ಮಾಡಿ.

Leave a Reply