ಇಡೀ ಪ್ರಪಂಚದಲ್ಲೇ ಬೆಂಗಳೂರಿಗೆ ವಿಶೇಷ ಸ್ಥಾನ ಯಾಕೆ ಗೊತ್ತಾ…! ಹಾಗಾದ್ರೆ ಇಲ್ಲಿ ಏನೆಲ್ಲಾ ಇದೆ ಗೊತ್ತಾ ನಮ್ಮ ಬೆಂಗಳೂರಿನಲ್ಲಿ!!

74

ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ರಾಜ್ಯದ ರಾಜಧಾನಿ, ಹೌದು ಹೆಮ್ಮೆಯ ಕ್ಯಾಪಿಟಲ್ ಸಿಟಿ ಅಂತ ಹೇಳಬಹುದು ನಮ್ಮ ಬೆಂದಕಾಳೂರನ್ನ. ಹಾಗಾದರೆ ಬೆಂಗಳೂರು ಯಾಕೆ ದೇಶದಲ್ಲಿಯೆ ವಿಭಿನ್ನ ವಿಶೇಷ ಎಂದು ಕರೆಯುತ್ತಾರೆ, ಹಾಗೂ ಬೆಂಗಳೂರನ್ನು ಕುರಿತು ಒಂದಿಷ್ಟು ವಿಚಾರಗಳನ್ನ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ನೀವು ಕೂಡ ಬೆಂಗಳೂರನ್ನ ಇಷ್ಟ ಪಡುವುದಾದರೆ ಬೆಂಗಳೂರು ನಿಮಗೆ ಯಾಕೆ ಇಷ್ಟ ಅನ್ನುವ ಕಾರಣವನ್ನ ತಪ್ಪದೇ,

ಕಾಮೆಂಟ್ ಮಾಡಿ ಫ್ರೆಂಡ್ಸ್ ಹಾಗೂ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಬೆಂಗಳೂರು ಹವಾಮಾನದಿಂದ ಹಿಡಿದು ಆಹಾರದಿಂದ ಹಿಡಿದು ಧಾರ್ಮಿಕ ನೆಲೆಗೆ ಬಹಳ ಹೆಸರುವಾಸಿಯಾಗಿದೆ, ಹಾಗೂ ಇಡೀ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೆ ಬೆಂಗಳೂರು ಎಂಬ ಹೆಸರು ಬಹಳ ಫೇಮಸ್ ಆಗಿದ್ದು, ಈ ಬೆಂಗಳೂರು ನಮ್ಮ ರಾಜ್ಯದ ರಾಜಧಾನಿ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ.

ನಮ್ಮ ಭಾರತ ದೇಶ ಹೇಗೆ ವಿಭಿನ್ನತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಎಂದು ಹೆಸರುವಾಸಿಯಾಗಿದೆ ನಮ್ಮ ದೇಶದೆಲ್ಲೆಡೆ ಕಾಣುವ ವಿಶೇಷವನ್ನು ನಾವು ನಮ್ಮ ಬೆಂಗಳೂರಿನಲ್ಲಿ ಕಾಣಬಹುದು ಎನ್ನುವ ಹನ್ನೆರಡನೇ ಶತಮಾನದಲ್ಲಿ ಹೊಯ್ಸಳರು ಬೆಂಗಳೂರಿಗೆ ಬಂದಿದ್ದರು. ಆ ಸಮಯದಲ್ಲಿ ಹೊಯ್ಸಳರಿಗೆ ಯಾರೊ ಬೇಯಿಸಿದ ಕಾಳು ತಿನ್ನಲು ನೀಡಿದ್ದರಿಂದ, ಈ ಪ್ರದೇಶವನ್ನು ಬೆಂದಕಾಳೂರು ಅಂತ ಕರೆದಿದ್ದರಂತೆ, ಹಾಗೂ ಹದಿನಾರು ಮತ್ತು ಹದಿನೇಳನೇ ಶತಮಾನದಲ್ಲಿ ಇದ್ದ ಕೆಂಪೇಗೌಡರು ಬೆಂಗಳೂರಿಗೆ ಅಧಿಕೃತ ಬುನಾದಿ ಅನ್ನು ನೀಡಿದ್ದರೂ. ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದರೂ ಇಲ್ಲಿ ಎಲ್ಲಾ ಧರ್ಮಗಳಿಗೂ ನೆಲೆ ಇದೆ.

ಹೌದು ಸಾವಿರಾರು ಹಿಂದೂ ದೇವಾಲಯಗಳನ್ನು ಸುಮಾರು ಎಂಟು ನೂರು ಮಸೀದಿಗಳು ನೂರಾರು ಚರ್ಚುಗಳು ಹಾಗೂ ಎರಡು ಬುದ್ಧರ ದೇವಾಲಯಗಳು ಮತ್ತು ಸುಮರು ಇನ್ನೂರಕ್ಕೂ ಹೆಚ್ಚು ಗುರುದ್ವಾರಗಳು ಬೆಂಗಳೂರಿನಲ್ಲೇ ಇವೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ 2000ಇಸವಿಯಲ್ಲಿ ಸಾಫ್ಟ್ವೇರ್ ಕಂಪನಿಗಳು ಕೂಡ ಸ್ಥಾಪನೆಗೊಂಡವು ಇದರಿಂದ ಬೆಂಗಳೂರು ಇನ್ನಷ್ಟು ಪ್ರಖ್ಯಾತಿ ಪಡೆದುಕೊಂಡಿತ್ತು.

ಬೆಂಗಳೂರಿನಲ್ಲಿ ಎಚ್ ಎಎಲ್ ವಿಪ್ರೋ ಇನ್ಫೋಸಿಸ್ ಇಸ್ರೋ ಎಂಬಂತಹ ಪ್ರತಿಷ್ಠಿತ ಕಂಪೆನಿಗಳು ಕೇಂದ್ರಗಳು ಕೂಡ ಇವೆ ಅಷ್ಟೇ ಅಲ್ಲ ಬೆಂಗಳೂರಿನಲ್ಲಿ 1.3 ಕೋಟಿ ಜನಸಂಖ್ಯೆ ಇದ್ದು ಬೆಂಗಳೂರು ತನ್ನ ವಿಭಿನ್ನ ವಾತಾವರಣದಿಂದ ಕೂಡ ಪ್ರಖ್ಯಾತಿ ಪಡೆದುಕೊಂಡಿದೆ.ಈ ಕಾರಣದಿಂದಾಗಿ ಬೆಂಗಳೂರನ್ನು ಗ್ರೀನ್ ಸಿಟಿ ಅಂತ ಕೂಡ ಕರೆಯಲಾಗುತ್ತದೆ.

ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಸುಮಾರು 8ನೂರು ಪಬ್ಬುಗಳು ಹಾಗೂ ಬಾ’ರ್ ಗಳು ಕೂಡ ಇದ್ದು ಬೆಂಗಳೂರನ್ನು ಪಬ್ ಕ್ಯಾಪಿಟಲ್ ಅಂತ ಕೂಡ ಕರೆಯುತ್ತಾರೆ. ಇಷ್ಟೆಲ್ಲ ವಿಭಿನ್ನತೆ ಅನ್ನು ಹೊಂದಿರುವ ಬೆಂಗಳೂರು ವಿಭಿನ್ನ ಜನಗಳನ್ನು ಕೂಡಾ ಹೊಂದಿದೆ ಈ ಬೆಂಗಳೂರು ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದು ಇಲ್ಲಿ ಕೋಟ್ಯಂತರ ಮಂದಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾ ಇದ್ದರೆ,

ಬರೀ ಕರ್ನಾಟಕ ರಾಜ್ಯದವರು ಮಾತ್ರವಲ್ಲ ಹೊರ ರಾಜ್ಯಗಳಿಂದ ಹೊರದೇಶಗಳಿಂದ ಬಂದಿರುವವರು ಕೂಡ ಇಲ್ಲಿ ಕೆಲಸ ಮಾಡುತ್ತ ತಮ್ಮ ಜೀವನ ಸಾಗಿಸುತ್ತಾ ಇದ್ದಾರೆ. ತಮಿಳುನಾಡನ್ನು ಕಂಚಿನ ನಗರಿ ಎಂದೂ ಕರೆಯುತ್ತಾರೆ ಯಾಕೆಂದರೆ ಹಲವು ದೇವಾಲಯಗಳು ಇಲ್ಲಿ ನೆಲೆಸಿರುವ ಕಾರಣ ಹಾಗೆ ದೇಶದ ಎರಡನೇ ಅತಿದೊಡ್ಡ ನಗರ ಎಂದೇ ಹೆಸರುವಾಸಿಯಾಗಿರುವ ನಮ್ಮ ಬೆಂಗಳೂರಿನಲ್ಲಿಯೂ ಕೂಡ ನಾವು ಹಲವು ವಿಧದ ವಿಶೇಷ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಈ ಎಲ್ಲ ಕಾರಣಗಳಿಂದಲೇ ಬೆಂಗಳೂರನ್ನು ವಿಶೇಷ ಎಂದು ಕರೆಯಲಾಗುತ್ತದೆ.