ಕಾಜಲ್ ಅಗರ್ವಾಲ್ ನಿಜವಾಗಿಯೂ ಕನ್ನಡಲ್ಲಿ ಸಿನಿಮಾ ಮಾಡ್ತಿದ್ದಾರಾ ಅದರ ಸಂಪೂರ್ಣ ಮಾಹಿತಿ ನಮ್ಮಲ್ಲಿ ….!!!

75

ನಟಿ ಕಾಜಲ್ ಅಗರ್ವಾಲ್ ಹೌದು ಯಾರಿಗೆ ಗೊತ್ತಿಲ್ಲ ಹೇಳಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹೆಚ್ಚು ಪ್ರಸಿದ್ಧ ತೇವವುಳ್ಳ ನಟರೊಂದಿಗೆ ಅಭಿನಯ ಮಾಡಿರುವ ನಟಿ ಕಾಜಲ್ ಅಗರ್ ವಾಲ್ ಅವರು ಮಾಡಿದ ಕೆಲವೇ ಸಿನಿಮಾಗಳಲ್ಲಿ ಭಾರೀ ಪ್ರಸಿದ್ಧತೆ ಅನ್ನೋ ಪಡೆದುಕೊಂಡರು ಹಾಗೂ ಇವರು ಐತಿಹಾಸಿಕ ಸಿನಿಮಾದಲ್ಲಿ ಸಹ ಅಭಿನಯ ಮಾಡಿ ಸೈ ಎನಿಸಿಕೊಂಡಿರುವ ನಟಿ ಕಾಜಲ್ ಅಗರ್ವಾಲ್. ಹಾಗಾದರೆ ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಈ ವಿಚಾರ ನಿಜಾನಾ ಹೌದು ಅದು ಯಾವ ವಿಚಾರ ಹೇಳ್ತೇವೆ ಕೇಳಿ ಮತ್ತು ಅದೆಷ್ಟು ನಿಜ ಅಂತಾ ನಾವು ಹೇಳ್ತೇವೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ.

ಹೌದು ಇವತ್ತಿನ ದಿವಸದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರವೇನೆಂದರೆ ನಟಿ ಕಾಜಲ್ ಅವರು ಕನ್ನಡ ಚಿತ್ರರಂಗದಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ಮಾಹಿತಿ ಇದೀಗ ಹರಿದಾಡುತ್ತಿದ್ದು ಇದು ಎಷ್ಟು ನಿಜ ಅಥವಾ ಸುಳ್ಳು ಎಂಬುದನ್ನು ಹೇಳ್ತೇವೆ ಕೇಳಿ ಈ ಲೇಖನದಲ್ಲಿ. ನಟಿ ಕಾಜಲ್ ಅವರು ಹೆಚ್ಚಾಗಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ ಆದರೆ ಇವರು ಕನ್ನಡಕ್ಕೆ ಬರ್ತಾರೆ ಅಂದರೆ ಯಾರಿಗಾದರೂ ಅಚ್ಚರಿ ಆಗುತ್ತದೆ.ನಟಿ ಕಾಜಲ್ ಅವರು ಕನ್ನಡ ಚಿತ್ರರಂಗಕ್ಕೆ ಬರುತ್ತಾ ಇರುವುದು ಸತ್ಯ ಆದರೆ ನಟಿ ಕಾಜಲ್ ಅಗರ್ವಾಲ್ ಅಲ್ಲ ಇವರು ಮಲಯಾಳಂ ಖ್ಯಾತಿಯ ನಟಿ ಕಾಜಲ್ ಮಾಯ. ಹೌದು ನಟಿ ಕಾಜಲ್ ಮಾಯಾ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಇವರು ವಿನಯ್ ಕುಮಾರ್ ಅವರ ಜೊತೆ ಅಭಿನಯ ಮಾಡಲಿದ್ದಾರೆ. ಹೌದು ನಟ ವಿನಯ್ ಅವರು ಇದೀಗ ಹೊಸ ಲುಕ್ ನಲ್ಲಿ ಕನ್ನಡ ಸಿನಿಮಾದಲ್ಲಿ ಸಿನಿಮಾವೊಂದನ್ನು ಮಾಡುತ್ತಾ ಇದ್ದು ಇವರಿಗೆ ನಟಿಯಾಗಿ ಮಲಯಾಳಂ ಖ್ಯಾತಿಯ ನಟಿ ಕಾಜಲ್ ಮಾಯಾ ಅವರು ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಇದೀಗ ಹರಿದಾಡುತ್ತಾ ಇದೆ.

ಸದ್ಯಕ್ಕೆ ನಟ ವಿನಯ್ ರಾಜ್ ಕುಮಾರ್ ಅವರು ಪೆಪೆ ಮತ್ತು ಕೆಟಿಎಂ ಎಂಬ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಈ ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಅವರು ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೌಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ನಟ ವಿನಯ್ ಅವರ ಈ ಹೊಸ ಲುಕ್ ಕನ್ನಡ ಅಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದು ಈಗಾಗಲೇ ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಾ ಇದು ನಟ ವಿನಯ್ ರಾಜ್ ಕುಮಾರ್ ಅವರು ಅಭಿನಯ ಮಾಡುತ್ತಿರುವ ಪೆಪೆ ಸಿನಿಮಾಕ್ಕೆ ಮಲಯಾಳಂ ಖ್ಯಾತಿಯ ನಟಿ ಕಾಜಲ್ ಮಾಯಾ ಅವರು ಅಭಿನಯಿಸಲಿದ್ದಾರೆ ಹಾಗೂ ಈ ಸಿನಿಮಾ ಇದೀಗ ಚಿತ್ರೀಕರಣ ನಡೆಯುತ್ತಲೇ ಇದ್ದು ನಟ ವಿನಯ್ ರಾಜ್ ಕುಮಾರ್ ಅವರ ಅಭಿಮಾನಿಗಳು ಇವರ ಕೆಟಿಎಂ ಹಾಗೂ ಪೆಪೆ ಸಿನೆಮಾವನ್ನು ಕಾದು ನೋಡಬೇಕಾಗಿದೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ತೋರಿ ಅಭಿಮಾನಿಗಳ ಮನಗೆದ್ದಿದ್ದಾರೆ ಹಾಗೂ ದೊಡ್ಮನೆ ಮಕ್ಕಳಾದ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಸರ್ ಇವರೆಲ್ಲರೂ ಸಹ ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರನ್ನು ಮಾಡಿದ್ದು ಇದೀಗ ಇವರದ್ದೇ ಪೀಳಿಗೆ ಅವರು ಮತ್ತೆ ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಅಭಿನಯ ಮಾಡಲು ಮುಂದಾಗಿದ್ದಾರೆ ಇವರುಗಳಿಗೂ ಒಳ್ಳೆಯ ಯಶಸ್ಸು ಸಿಗಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.