ಕೇವಲ ಲಾಭ ನಷ್ಟದ ಬಗ್ಗೆ ಆಲೋಚನೆ ಮಾಡದೆ ಸೇವೆ ಮಾಡಿದರೆ ಜೀವನದಲ್ಲಿ ಲಾಭ ಸಿಕ್ಕಾಪಟ್ಟೆ ಸಿಗುತ್ತೆ ಅನ್ನೋದಕ್ಕೆ ಈ ಕಥೆ ಒಳ್ಳೆ ಉಧಾಹರಣೆ..

124

ನಮಸ್ತೆ ಪ್ರಿಯ ಸ್ನೇಹಿತರೇ ನಾವು ಜೀವನದಲ್ಲಿ ಪ್ರತಿನಿತ್ಯ ಏನಾದರೂ ಕಲಿಯುತ್ತಲೇ ಇರುತ್ತೇವೆ ಅಲ್ವಾ ಅದೇ ರೀತಿ ನಾವು ಕೆಲವೊಂದು ಬಾರಿ ಬೇರೆಯವರಿಗೆ ಸಹಾಯ ಮಾಡುವಂತಹ ಸಮಯ ಬರುತ್ತದೆ ಅಥವಾ ಬೇರೆಯವರಿಂದ ಸಹಾಯ ತೆಗೆದುಕೊಳ್ಳುವಂತಹ ಸಮಯ ಕೂಡ ಬರಬಹುದು ಆದರೆ ನೀವು ಯಾರಿಗಾದರೂ ಸಹಾಯ ಮಾಡಿದಲ್ಲಿ ಅದನ್ನು ನಿಷ್ಕಲ್ಮಶ ಹೃದಯದಿಂದ ಮಾಡಿ ಹೌದು ನೀವು ಸೇವೆ ಮಾಡುವ ಮನೋಭಾವವನ್ನು ಹೊಂದಿದ್ದರೆ ಅದನ್ನು ಯಾವತ್ತಿಗೂ ನಿಷ್ಕಲ್ಮಶದಿಂದ ಮಾಡಬೇಕು ಅದರಿಂದ ಪ್ರಯೋಜನ ಇದೆಯೋ ಇಲ್ಲವೋ ಎಂಬ ಆಲೋಚನೆ ಬೇಡ. ಏನು ನೀವು ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಅಥವಾ ಸೇವೆ ಮಾಡಿದಾಗ ಮಾತ್ರ, ಸೇವೆಮಾಡಿದ ತೃಪ್ತಿಯಿಂದ ನಿಮ್ಮ ಮನಸ್ಸು ಶಾಂತಿಯನ್ನು ಪಡೆಯುತ್ತದೆ. ನಾವು ಸೇವೆಯ ಬದಲು ಪ್ರತಿಫಲವನ್ನು ಯೋಚಿಸಿದರೆ ಮನಸ್ಸು ಶಾಂತಿಯುತವಾಗಿ ಇರುವುದಿಲ್ಲಾ ಎಂದು ಹಿರಿಯರು ಹೇಳಿದ್ದಾರೆ ಮತ್ತು ಇದನ್ನು ಪುರಾಣಗಳಲ್ಲಿ ಹೇಳಲಾಗಿದೆ ಸಹ. ಇಂದು ಅದೇ ರೀತಿಯ ಒಂದು ಜನಪದ ಕಥೆಯ ಕುರಿತು ನಿಮಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಹೌದು ಒಬ್ಬ ಸಂತ ಬಹಳ ವರುಷಗಳ ಹಿಂದೆ ನದಿಯ ದಡದಲ್ಲಿ ಗುಡಿಸಲು ಹಾಕಿಕೊಂಡು ಊರಿನಿಂದ ದೂರದಲ್ಲಿ ವಾಸ ಮಾಡುತ್ತಾ ಇರುತ್ತಾನೆ.

ಗುಡಿಸಲನ್ನು ಆಶ್ರಮ ಮಾಡಿಕೊಂಡು ಒಬ್ಬನೇ ಇದ್ದನು ಅವನ ಆಶ್ರಮದ ಆವರಣದಲ್ಲಿ ಉದ್ದನೆಯ ಹುಲ್ಲು ದಟ್ಟವಾಗಿ ಬೆಳೆದಿತ್ತು. ಈ ರೀತಿಯ ಹುಲ್ಲುಗಳನ್ನು ಬಳಸಿಕೊಂಡು ಬುಟ್ಟಿ ಮಾಡುವುದು ತಿಳಿದಿದ್ದು ಆ ಸಂತನಿಗೆ ಆ ದಿನ ತನ್ನ ದಿನನಿತ್ಯದ ಧ್ಯಾನ ಮಾಡಿ ಆಶ್ರಮವನ್ನು ಸ್ವಚ್ಚಗೊಳಿಸಿದ ಮೇಲೆ ಸುಮ್ಮನೆ ಕೂರುವುದು ಯಾಕೆ ಎಂದು ಹುಲ್ಲಿನಿಂದ ಬುಟ್ಟಿಯನ್ನು ಮಾಡಿದನು ಬಹಳ ವರುಷಗಳಾದ ಮೇಲೆ ಮಾಡಿದ ಕೆಲಸ ಸಂತನಿಗೆ ಬಹಳ ಇಷ್ಟವಾಗಿತ್ತು. ಬುಟ್ಟಿ ಮಾಡಿದ ನಂತರ ಇದರಿಂದ ನನಗೆ ಏನು ಪ್ರಯೋಜನವಿಲ್ಲಾ, ನಾನು ಇಟ್ಟುಕೊಂಡು ಏನು ಮಾಡುವುದು ಎಂದು ನದಿಯಲ್ಲಿ ತೇಲಿ ಬಿಟ್ಟನು ಮರುದಿನ ಸಂತ ಮತ್ತೆ ಬುಟ್ಟಿಯನ್ನು ಮಾಡಿ ನದಿಗೆ ಎಸೆದನು ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಲಿಲ್ಲ. ಇದರಿಂದ ಸಂತನಿಗೆ ಮತ್ತಷ್ಟು ಖುಷಿಯಾಯಿತು ಇನ್ನೂ ವೇಗವಾಗಿ ಮಾಡಬಹುದು ಎಂದು ಪ್ರತಿದಿನ ಬುಟ್ಟಿಯನ್ನು ತಯಾರಿಸುವುದು ನದಿಯಲ್ಲಿ ತೇಲಿ ಬಿಡುವುದು ಇದನ್ನೇ ಅಭ್ಯಾಸ ಮಾಡಿಕೊಂಡು ಇದರಿಂದ ಸಂತನ ಮನಸ್ಸಿಗೆ ಖುಷಿಯಾಗುತ್ತಿತ್ತು.

ಒಂದು ದಿನ ಸಂತ ನಾನು ಈ ಕೆಲಸವನ್ನು ವ್ಯರ್ಥವಾಗಿ ಮಾಡುತ್ತಿದ್ದೇನೆ ಎಂದು ಭಾವಿಸಿದನು ಮುಳ್ಳುಗಳಿಂದ ಬುಟ್ಟಿಗಳನ್ನು ತಯಾರಿಸುತ್ತೇನೆ ಮತ್ತು ಅದನ್ನು ನದಿಗೆ ಹರಿಸುತ್ತೇನೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ ಅದರ ಬದಲು ನಾನೇ ಬುಟ್ಟಿಯನ್ನು ಯಾರಿಗಾದರೂ ನೀಡಿದರೆ ಉಪಯೋಗವಾಗಬಹುದು ಎಂದುಕೊಂಡನು. ಇದರಿಂದ ಸಂತ ಮರುದಿನದಿಂದ ಹುಲ್ಲಿನ ಬುಟ್ಟಿಗಳನ್ನು ತಯಾರಿಸುವುದು ನಿಲ್ಲಿಸಿದನು ಅದ್ಯಾಕೋ ಸಂತೆಗೆ ಮನಸಿಗೆ ಬುಟ್ಟಿಗಳನ್ನು ಮಾಡುವುದು ಬೇಡ ಅನಿಸಿತು. ತದನಂತರ ಮನಸ್ಸಿಗೆ ಶಾಂತಿ ಸಿಗದೇ ಏನೋ ಕಳವಳ ಉಂಟಾದ ಕಾರಣಕ್ಕೆ ಸಂತನ ನದಿಯ ದಡದಲ್ಲಿ ನಡೆದುಕೊಂಡು ಮುಂದೆ ಹೋದಾಗ ನದಿಯ ದಂಡೆಯಲ್ಲಿ ವಯಸ್ಸಾದ ಮಹಿಳೆ ಕುಳಿತಿದ್ದನ್ನು ಅವನು ನೋಡಿದನು ಅವಳು ದುಃಖದಿಂದ ಚಂದ ನನ್ನ ನೋಡಿದಳು.

ಸಂತನು ಮಹಿಳೆಯ ದುಃಖದ ಕಾರಣವನ್ನು ಕೇಳಿದಾಗ ಈ ಜಗತ್ತಿನಲ್ಲಿ ನನ್ನವರು ಯಾರು ಇಲ್ಲ ನಾನು ಒಬ್ಬಳೇ. ವಯಸ್ಸಾಗಿದೆ ಕೆಲಸ ಮಾಡಲು ಸಾಧ್ಯವಿಲ್ಲ ಊಟಕ್ಕೆ ಕಷ್ಟ ಪಡುತ್ತ ಇರುವ ಸಂದರ್ಭದಲ್ಲಿ ಹುಲ್ಲಿನಿಂದ ಮಾಡಿದ ಸುಂದರವಾದ ಬುಟ್ಟಿಗಳು ಪ್ರತಿದಿನವು ನದಿಯಲ್ಲಿ ಹರಿಯುತ್ತಿದ್ದವು. ಅದನ್ನು ನಾನು ಮಾರಾಟ ಮಾಡುವ ಮೂಲಕ ಬದುಕು ನಡೆಸುತ್ತಿದ್ದಾರೆ ಆದರೆ ಈಗ ಬುಟ್ಟಿಗಳು ಬರುವುದು ನಿಂತು ಹೋಗಿದೆ ಹಾಗಾಗಿ ತುಂಬಾ ಬೇಸರವಾಗಿದೆ ಎಂದು ಹೇಳಿದರು.

ಇನ್ನು ಸಂತ ಮಾರನೆ ದಿವಸ ಬುಟ್ಟಿಗಳನ್ನು ತಯಾರಿಸಿ ನದಿಯಲ್ಲಿ ತೇಲಿ ಬಿಡುವುದನ್ನು ಆರಂಭಿಸಿದರು. ಇದರಿಂದ ನಾವು ತಿಳಿಯಬಹುದಾದುದು ಏನು ಅಂದರೆ ನಿಸ್ವಾರ್ಥತೆಯಿಂದ ಯಾರಿಗೆ ಏನೇ ಸಹಾಯ ಮಾಡಿದರೂ ಆ ಕೆಲಸದಿಂದ ನಮಗೆ ಲಾಭ ಪ್ರಯೋಜನದ ಬಗ್ಗೆ ಆಲೋಚನೆ ಮಾಡದೇ ಇದ್ದರೆ ಮಾತ್ರ ನಮಗೆ ಪ್ರಸಂಗದ ಪಾಠವೆಂದರೆ ನಿಸ್ವಾರ್ಥತೆಯಿಂದ ಯಾರಿಗಾದರೂ ಸಹಾಯ ಮಾಡಲು ಯಾವುದೇ ಕೆಲಸ ಮಾಡಿದರೆ ಅದರಿಂದ ಲಾಭ, ಪ್ರಯೋಜನದ ಬಗ್ಗೆ ಆಲೋಚನೆ ಮಾಡದೆ ಇದ್ದರೆ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

LEAVE A REPLY

Please enter your comment!
Please enter your name here