ಕೊನೆಯದಾಗಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತ ….!!!!

61

ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 8ಹೌದು ಈ ಸೀಸನ್ ಈಗಾಗಲೇ ಕೊನೆ ಆಗಿರುವ ವಿಚಾರ ಹೆಚ್ಚಿನ ಜನರಿಗೆ ತಿಳಿದಿದೆ ಇನ್ನೂ ಕೆಲವರಿಗೆ ಈ ಮಾಹಿತಿ ತಿಳಿದಿಲ್ಲ ಯಾಕೆಂದರೆ ಇಂದಿನ ವರ್ತಮಾನದ ಅನುಗುಣವಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಮನೆ ಒಳಗೆ ಇರುವಂತಹ ಸ್ಪರ್ಧಿಗಳು ಜೋಪಾನವಾಗಿ ಇರಬೇಕೆಂದು ಅವರ ಆರೋಗ್ಯದ ವಿಚಾರದ ಸಲುವಾಗಿ ಬಿಗ್ ಬಾಸ್ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಹಾಗೆ ಇದೀಗ ರಿಯಾಲಿಟಿ ಶೋ ಮುಗಿದ ನಂತರ ಎಲ್ಲರ ಮನಸ್ಸಿನಲ್ಲಿಯೂ ಕಾಡುವ ವಿಚಾರ ಅಂದರೆ ಬಿಗ್ ಬಾಸ್ ಮನೆಗೆ ಬಂದಂತಹ ಸ್ಪರ್ಧಿಗಳು ಎಷ್ಟು ಸಂಭಾವನೆ ಪಡೆದು ಕೊಂಡರು ಒಟ್ಟಾರೆ ಎಷ್ಟು ಹಣವನ್ನು ಪಡೆದುಕೊಂಡು ಹೋಗಬಹುದು ಯಾರು ಹೆಚ್ಚು ಹಣವನ್ನು ಪಡೆದುಕೊಂಡಿದ್ದಾರೆ ಈ ಎಲ್ಲ ವಿಚಾರಗಳು ಬಿಗ್ ಬಾಸ್ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ.

ಈ ದಿನದ ಮಾಹಿತಿಯಲ್ಲಿ ಅಂದರೆ ಈ ಮಾಹಿತಿಯ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ಯಾರ್ಯಾರು ಎಷ್ಟೆಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದರೆ ಇನ್ನೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದಿರುವಂತಹ ಸ್ಪರ್ಧಿಗಳಲ್ಲಿ ಯಾರು ಹೆಚ್ಚು ಹಣವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಹಾಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ನಿಮ್ಮ ಫೇವರಿಟ್ ಕಂಟೆಸ್ಟೆಂಟ್ ಯಾರು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ.

ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಸಂಭಾವನೆ ಗಾಗಿಯೇ ಬರುವುದಕ್ಕಿಂತ ಈ ವೇದಿಕೆ ಅನ್ನೂ ಅವಕಾಶಗಳಿಗಾಗಿ ಬಳಸಿಕೊಳ್ಳುವುದಕ್ಕಾಗಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಅದರಲ್ಲಿ ಶುಭಾ ಪೂಂಜಾ ಅವರು ಒಂದಾನೊಂದು ಕಾಲದಲ್ಲಿ ಉತ್ತಮ ಸಿನಿಮಾಗಳನ್ನು ಮಾಡಿ ಹಿಟ್ ಸಿನಿಮಾಗಳನ್ನು ನೀಡಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ನಟಿಯಾಗಿದ್ದರು. ಇವರು ಬಿಗ್ ಬಾಸ್ ಮನೆಗೆ ಬಂದ ನಂತರ ಪಡೆದುಕೊಂಡ ಸಂಭಾವನೆ ಹತ್ತು ವಾರಗಳಲ್ಲಿ ಸುಮಾರು 5ಲಕ್ಷ ರೂಪಾಯಿಗಳು ಹಾಗೆ ನಿಧಿ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿ ಅವಕಾಶ ಪಡೆದುಕೊಂಡು ಇದೀಗ ಅವಕಾಶಗಳು ಸಿಗದೆ ಇದ್ದ ನಿಧಿ ಅವರು ಕೂಡ 5ಲಕ್ಷ ಒಟ್ಟು ಸಂಭಾವನೆ ಪಡೆದುಕೊಂಡಿದ್ದಾರೆ.

ಅಗ್ನಿಸಾಕ್ಷಿ ಮೂಲಕ ಪ್ರಖ್ಯಾತಿ ಪಡೆದುಕೊಂಡ ಸನ್ನಿಧಿ ಅಲಿಯಾಸ್ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟಾರೆಯಾಗಿ ಹತ್ತು ವಾರಗಳಲ್ಲಿ ಪಡೆದುಕೊಂಡ ಸಂಭಾವನೆ 4ಲಕ್ಷ ಹಾಗೆ ಅರವಿಂದ್ ಕೆಪಿ ಅವರು ಕರ್ನಾಟಕಕ್ಕೆ ಮೋಟಾರ್ ಸೈಕಲ್ ರೇಸ್ ನಲ್ಲಿ ಕರ್ನಾಟಕಕ್ಕೆ ಒಳ್ಳೆಯ ಹೆಸರನ್ನು ತಂದುಕೊಟ್ಟ ಇವರು ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರಲಿಲ್ಲ ಆದರೆ ಬಿಗ್ ಬಾಸ್ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ಇವರು ಪಡೆದುಕೊಂಡ ಒಟ್ಟು ಸಂಭಾವನೆ ಸುಮಾರು ಮೂರೂವರೆ ಲಕ್ಷ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಇದ್ದವರಿಗೆ ತಿಳಿದಿರುತ್ತದೆ ಇವರ ಪರಿಚಯ ಇರುತ್ತದೆ ಬ್ರೋ ಗೌಡ ಹಾಗೂ ಶಮಂತ್ ಗೌಡ ಎಂದು ಕರೆಯುತ್ತಾರೆ, ಇವರು ಬಿಗ್ ಬಾಸ್ ಮನೆಗೆ ಬಂದು ಪಡೆದ ಒಟ್ಟು ಸಂಭಾವನೆ ಸುಮಾರು ಎರಡೂವರೆ ಲಕ್ಷ ಹಾಗೂ ರಘು ವೈನ್ ಸ್ಟೋರ್ ಎಂಬ ಪೇಜ್ ಮೂಲಕ ಪ್ರಖ್ಯಾತಿ ಪಡೆದುಕೊಂಡ ರಘು ಅವರು ಕೂಡ ಪಡೆದುಕೊಂಡ ಒಟ್ಟು ಸಂಭಾವನೆ ಹತ್ತು ವಾರಗಳಲ್ಲಿ ಎರಡೂವರೆ ಲಕ್ಷ.

ಕಡಿಮೆ ಸಮಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ದಾರೆ ಇವರು ಪಡೆದುಕೊಂಡ ಸಂಭಾವನೆ ಸುಮಾರು 3ಲಕ್ಷ ರುಪಾಯಿಗಳು ಹಾಗೂ ಜನರಿಗೆ ಒಳ್ಳೆಯ ಮನರಂಜನೆ ನೀಡಿದ್ದಾರೆ ಎಂಬ ವಿಚಾರದ ಸಲುವಾಗಿ ಇವರಿಗೆ ಹೆಚ್ಚಿನ ಹಣವನ್ನು ಕೂಡ ನೀಡಲಾಗಿದೆ. ಇನ್ನು ಮಾಡೆಲ್ ಆದ ದಿವ್ಯಾ ಸುರೇಶ್ ಅವರು ಕೂಡ ಬಿಗ್ ಬಾಸ್ ಮನೆಗೆ ಬಂದ ನಂತರ ಪ್ರಖ್ಯಾತಿ ಪಡೆದು ಕೊಂಡರು, ಇವರು ಪಡೆದ ಒಟ್ಟು ಸಂಭಾವನೆ ಕೂಡ ಸುಮಾರು 3ಲಕ್ಷ ರೂಪಾಯಿ ಹಾಗೆ ದಿವ್ಯಾ ಉರುಡುಗ ಕೂಡ ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ ಇವರು ಕೂಡ ಬಿಗ್ ಬಾಸ್ ಮನೆಯಲ್ಲಿ ಪಡೆದುಕೊಂಡ ಒಟ್ಟು ಸಂಭಾವನೆ ಸುಮಾರು 3ಲಕ್ಷ .

ಕೆಲವೊಂದು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯ ಮಾಡಿರುವ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದ ಪ್ರಿಯಾಂಕಾ ಅವರಿಗೆ ನೀಡಿದ ಸಂಭಾವನೆ ಸುಮಾರು ಇಪ್ಪತ್ತೈದು ಸಾವಿರ₹ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಮನೆಗೆ ಸ್ಪರ್ಧಿಯಾಗಿ ಬಂದ ಚಕ್ರವರ್ತಿ ಚೂಡಾ ಅವರು ಕೂಡ ಪತ್ರಕರ್ತರಾದ ಕಾರಣ ಇವರಿಗೆ ಕೊಟ್ಟ ಸಂಭಾವನೆ ಸುಮಾರು ಮೂವತ್ತು ಸಾವಿರ ರೂಪಾಯಿಗಳು.