ಪಬ್ಲಿಕ್ ಟೀವಿಯ ನಿಜವಾದ ಮಾಲೀಕ ರಂಗಣ್ಣ ಅಂದುಕೊಂಡಿದ್ದೀರಾ ಹಾಗಾದ್ರೆ ಅದು ಸುಳ್ಳು ಅವರು ಅಲ್ವಂತೆ .. ಇನ್ಯಾರು ಮತ್ತೆ..

55

ಕನ್ನಡದ ಅತ್ಯಂತ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವ ಮೂಲಕ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಕನ್ನಡ ಜನತೆಯ ಮನ ಗೆದ್ದಿರುವ ಸುದ್ದಿವಾಹಿನಿ ಅಂದರೆ ಅದು ಪಬ್ಲಿಕ್ ಟಿವಿ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಹೊಸದೊಂದು ಟ್ರೆಂಡ್ ಅನ್ನು ಸೆಟ್ ಮಾಡಿದ್ದು ಪಬ್ಲಿಕ್ ಟಿವಿ ಇದರಲ್ಲಿ ನಿರೂಪಣೆ ಮಾಡುವ ಪ್ರತಿಯೊಬ್ಬರು ಸಹ ಸರಳತೆಯಲ್ಲಿ ವಿಭಿನ್ನ ಶೈಲಿಯಲ್ಲಿ ನಿರೂಪಣೆ ಮಾಡುವ ಮೂಲಕ ಜನರ ಮನ ಗೆದ್ದಿದ್ದಾರೆ. ಪಬ್ಲಿಕ್ ಟಿವಿ ಇದು ಯಾರ ಆಸ್ತಿಯೂ ಅಲ್ಲ ಇದು ಕನ್ನಡಿಗರ ಆಸ್ತಿ ನಮ್ಮ ಆಸ್ತಿ ಎಂಬ ಸ್ಲೋಗನ್ ಮೂಲಕ 2012ರಲ್ಲಿ ಪಬ್ಲಿಕ್ ಟಿವಿ ಕನ್ನಡ ಭಾಷೆಯಲ್ಲಿ ಲಾಂಚ್ ಆಗುತ್ತದೆ. ಪಬ್ಲಿಕ್ ಟಿವಿಯ ಅಂದಕೂಡಲೇ ನಮಗೆ ನೆನಪಿಗೆ ಬರುವುದೇ,

ನಿರೂಪಕರಾಗಿರುವ ರಂಗನಾಥ್ ಅವರು ಹೌದು ಇವರು ಈಗಾಗಲೇ ನಿಮಗೆ ಇವರ ಬಗ್ಗೆ ಈಗಾಗಲೇ ಪರಿಚಯವಿರುತ್ತದೆ. ಎಚ್.ಆರ್.ರಂಗನಾಥ್ ಅವರ ಪೂರ್ಣ ಹೆಸರು ಏನು ಎಂದರೆ ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಎಂದು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಚ್.ಆರ್.ರಂಗನಾಥ್ ಅವರು ರಂಗಣ್ಣ ಕ್ಯಾಪ್ಟನ್ ಎಂದೇ ಜನಪ್ರಿಯಗೊಂಡಿದ್ದಾರೆ. ನಿರೂಪಕರಾಗಿರುವ ಹೆಚ್ ಆರ್ ರಂಗನಾಥ್ ಅವರದ್ದು ಮಾಧ್ಯಮ ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷದ ಸುಧೀರ್ಘ ಅವಿರತ ಪ್ರಯಾಣ. ಎಚ್ ಆರ್ ರಂಗನಾಥ್ ಅವರು ರಾಜಕೀಯ ಅಪರಾಧ ವಿಭಾಗಗಳಲ್ಲಿ ಅಪಾರ ಅನುಭವ ಜ್ಞಾನವನ್ನು ಹೊಂದಿದ್ದಾರೆ.

ನಮ್ಮ ನಾಡಿನ ಪ್ರಸಿದ್ಧ ದಿನಪತ್ರಿಕೆ ಆಗಿರುವಂತಹ ಕನ್ನಡಪ್ರಭ ಹಾಗೂ ದೃಶ್ಯ ಮಾಧ್ಯಮ ಸುವರ್ಣನ್ಯೂಸ್ ಅಲ್ಲಿಯೂ ದಶಕಗಳ ಕಾಲ ತಮ್ಮ ಕೆಲಸ ನಿರ್ವಹಿಸಿರುವ ನಾಡಿನ ಪ್ರಸಿದ್ದ ದಿನ ಎಚ್ ಆರ್ ರಂಗನಾಥ್ ಅವರು ತಮ್ಮದೇ ಆದ ಸ್ವಂತ ಮಾಧ್ಯಮವನ್ನು ಸ್ಥಾಪನೆ ಮಾಡಬೇಕು ಸಮಾಜ ಸೇವೆ ಮಾಡಬೇಕೆಂದು ತಮ್ಮದೇ ಮಾಧ್ಯಮವನ್ನು ಹುಟ್ಟು ಹಾಕಬೇಕು ಎಂಬ ಮಹದಾಸೆ ಅನ್ನೋ ಕಟ್ಟಿಕೊಳ್ಳುತ್ತಾರೆ. ತಮ್ಮ ಕನಸನ್ನು ಹೆಚ್ ಆರ್ ರಂಗನಾಥ್ ಅವರು ಪಬ್ಲಿಕ್ ಟಿವಿ ಆರಂಭಿಸುವ ಮೂಲಕ ನನಸು ಮಾಡಿಕೊಂಡಿದ್ದಾರೆ. ಕೇವಲ ಸುದ್ದಿ ವಾಹಿನಿ ಮಾತ್ರ ಅಲ್ಲದೆ ಪಬ್ಲಿಕ್ ಮ್ಯೂಸಿಕ್ ಪಬ್ಲಿಕ್ ಮೂವೀಸ್ ಎಂಬ ಮನರಂಜನಾ ವಾಹಿನಿಗಳನ್ನು ಕೂಡ ಆರಂಭಿಸಿದ್ದಾರೆ.

ಆದರೆ ಸಾಮಾನ್ಯ ಪತ್ರಕರ್ತರೊಬ್ಬರು ತಮ್ಮ ಕನಸನ್ನ ನನಸು ಮಾಡಿಕೊಳ್ಳಬೇಕೆಂದು ಜನರ ಸೇವೆ ಮಾಡಬೇಕೆಂದು ಸ್ವಂತ ಉದ್ಯಮವನ್ನು ಕಟ್ಟಿ ಬೆಳಿಸಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿಕೊಡುವುದು ಎಂದರೆ ಸಾಮಾನ್ಯವಾದ ವಿಚಾರವಲ್ಲಾ. ಈ ಸಾಧನೆಗೆ ಅವರ ದಶಕಗಳ ಶ್ರಮ ಅಡಗಿದೆ. ಆದರೆ ತಮ್ಮ ಪರಿಶ್ರಮದ ಜೊತೆಗೆ ಇವರಿಗೆ ಮಾಧ್ಯಮ ಸಂಸ್ಥೆ 1ಕಟ್ಟಲು ಆರ್ಥಿಕವಾಗಿ ಬೆಂಬಲ ನೀಡಿದವರು ಯಾರು ಎಂಬ ವಿಚಾರ ಕೂಡ ಅಚ್ಚರಿ ಉಂಟು ಮಾಡುತ್ತದೆ ಹೌದು ಹೆಚ್ ಆರ್ ರಂಗನಾಥ್ ಅವರು ಪಬ್ಲಿಕ್ ಟಿವಿಯ ಮುಖ್ಯಸ್ಥರು ಏನೊ ಹೌದು.

ಪಬ್ಲಿಕ್ ಟಿವಿ ಸಂಸ್ಥೆಯಲ್ಲಿ ಅವರ ಬಂಡವಾಳ ಹೂಡಿಕೆ ಎಷ್ಟು ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲಾ
ಇನ್ನೂ ಬಲ್ಲ ಮೂಲಗಳ ಮಾಹಿತಿಗಳು ಏನನ್ನು ತಿಳಿಸುತ್ತದೆ ಅಂದರೆ ರಂಗನಾಥ ಅವರು ಪಬ್ಲಿಕ್ ಟಿವಿ ಸಂಸ್ಥೆಯಲ್ಲಿ ಶೇಕಡಾ 50ಕ್ಕೂ ಹೆಚ್ಚು ಷೇರು ಹೊಂದಿದ್ದು ಉಳಿದಂಥ ಭಾಗವಾಗಿರುವುದು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮತ್ತು ಲಹರಿ ಆಡಿಯೋ ಸಂಸ್ಥೆಯ ವೇಲು ಅವರು ಕೂಡ ಪಾಲುದಾರರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎಚ್.ಆರ್.ರಂಗನಾಥ್ ಅವರ ವೈಯಕ್ತಿಕ ಜೀವನ ಕುರಿತು ಹೇಳುವುದಾದರೆ,

ಎಚ್.ಕೆ.ರಾಮಕೃಷ್ಣಯ್ಯ ಮತ್ತು ಲೀಲಾ ದಂಪತಿಗಳ ಪುತ್ರರಾದ ರಂಗನಾಥ್ ಅವರಿಗೆ ಕಾತ್ಯಾಯಿನಿ, ಮಣಿಕರ್ಣಿಕ, ಸರ್ವಮಂಗಳ ವೈದೇಹಿ ಎಂಬ ನಾಲ್ವರು ಸಹೋದರಿಯರು ಇದ್ದಾರೆ. ವೆಂಕಟೇಶ್ ಹಾಗೂ ಕೇಶವ್ ಎಂಬ ಸೋದರರು ಕೂಡ ಇದ್ದಾರೆ ಎಚ್ ಆರ್ ರಂಗನಾಥ್ ಅವರಿಗೆ. ಇನ್ನು ಎಚ್ ಆರ್.ರಂಗನಾಥ್ ಅವರ ವೈವಾಹಿಕ ಜೀವನ ಕುರಿತು ಹೇಳುವುದಾದರೆ ಇವರ ಧರ್ಮ ಪತ್ನಿ ಶಾರದ ಮತ್ತು ಮಗಳು ವೈಸ್ವಿನಿ ಅವರೊಟ್ಟಿಗೆ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿರೂಪಕರಾಗಿರುವ ರಘುನಾಥ್ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here