ಪುನೀತ್ ತಮ್ಮ ಹೆಂಡತಿ ಮತ್ತು ಮಕ್ಕಳಿಗಾಗಿ ಮಾಡಿಟ್ಟಿರುವ ಆಸ್ತಿ ಎಷ್ಟು ಅಂದಾಜು ಇರಬಹುದು ಗೊತ್ತ ..

Sanjay Kumar
3 Min Read

ಈಗಾಗಲೇ ಪುನೀತ್ ಅವರ ಅಗಲಿಕೆಯಿಂದ ಕುಟುಂಬದವರು ನಡುಗಿ ಹೋಗಿದ್ದಾರೆ ಇನ್ನೂ ಕರ್ನಾಟಕ ಜನತೆ ಇವತ್ತಿಗೂ ಸಹ ಈ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಒಬ್ಬೊಬ್ಬರಂತು ಪುನೀತ್ ಅವರ ಅಗಲಿಕೆಯಿಂದ ಈ ವಿಚಾರವನ್ನು ಕೇಳಿ ಹೃದಯಾಘಾತದಿಂದ ಸಾವನ್ನಪ್ಪುತ್ತಾನೆ ಇದ್ದಾರೆ ಇನ್ನು ಕೆಲವರು ತಮಗೆ ತಾವೇ ನೋವುಂಟು ಮಾಡಿಕೊಳ್ಳುತ್ತಾ ಜೀವ ಕಳೆದುಕೊಳ್ಳುತ್ತಲೇ ಇದ್ದಾರೆ ಆದರೆ ಪುನೀತ್ ಅವರಿಗೆ ಇದು ಯಾವುದೂ ಕೂಡ ಅಭಿಮಾನಿಗಳು ಮಾಡುವುದು ಇಷ್ಟ ಇಲ್ಲ ಯಾಕೆಂದರೆ ಪುನೀತ್ ಸರ್ ಆಗಲಿ ಅಥವಾ ಅವರ ಕುಟುಂಬದವರು ಅಭಿಮಾನಿಗಳನ್ನು ದೇವರು ಎಂದು ಭಾವಿಸುತ್ತಿದ್ದರು. ಆದಾ ಕಾರಣ ಪುನೀತ್ ಅವರು ನಮ್ಮನ್ನೆಲ್ಲಾ ಅಗಲಿ ಇರಬಹುದು ಆದರೆ ಅವರು ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ಇರುತ್ತಾರೆ ಹಾಗೆಯೇ ಅವರ ಆದರ್ಶಗಳು ನಮ್ಮ ನಡುವೆ ಇರುತ್ತದೆ.

ಅವರು ಮಾಡಿದಂತಹ ಅದೆಷ್ಟೋ ಕೆಲಸಗಳು ಅವರ ಅಗಲಿಕೆಯ ನಂತರ ಬೆಳಕಿಗೆ ಬರುತ್ತಾ ಇದೆ. ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿ ನೀವೂ ಕೂಡ ನೋಡುತ್ತಲೆ ಇದ್ದೀರಾ ಪುನೀತ್ ಅವರ ಬಗ್ಗೆ ಹಲವು ವಿಚಾರಗಳು ಇದೀಗ ಹೊರ ಬಂದಿದೆ ಅದರಂತೆ ಹಲವು ಮಂದಿ ಇದೀಗ ಏನನ್ನು ಹೇಳುತ್ತಾ ಇದ್ದಾರೆ ಅಂದರೆ ಅಪ್ಪು ಸರ್ ಏನನ್ನ ದುಡಿದು ಹೋಗಿದ್ದಾರೆ ಅಥವಾ ಅವರು ಏನನ್ನು ಸಂಪಾದನೆ ಮಾಡಿದ್ದಾರೆ ಎಂಬ ವಿಚಾರವೇ ನಮಗೆ ಬೇಡ, ಅವರು ಸಂಪಾದನೆ ಮಾಡಿರುವ ಇಷ್ಟು ಕೋಟ್ಯಂತರ ಅಭಿಮಾನಿಗಳೇ ಸಾಕು ಅವರ ಆಸ್ತಿ ಏನೆಂದು ನಮಗೆ ತಿಳಿಯುತ್ತದೆ ಅಂತ ಹೇಳುತ್ತಿದ್ದಾರೆ, ಇನ್ನೂ ಕೆಲವರು ಪುನೀತ್ ಅವರ ಆಸ್ತಿ ಕುರಿತು ಲೆಕ್ಕಾಚಾರವನ್ನು ಸಹ ಮಾಡುತ್ತಿದ್ದಾರೆ.

ಹೌದು ಅಪ್ಪು ಸರ್ ಅವರು ಹಲವು ಸಿನಿಮಾಗಳನ್ನ ಮಾಡಿದ್ದಾರೆ ಇನ್ನೂ ನಟನೆ ಮಾತ್ರವಲ್ಲ ನಿರ್ದೇಶನ ನಿರ್ಮಾಪಣೆ ಅನ್ನೂ ಸಹ ಅಪ್ಪು ಅವರು ಮಾಡುತ್ತಿದ್ದರು ಇದೇ ವೇಳೆ ಅಪ್ಪು ಅವರು ಕಿರುತೆರೆ ಅಲ್ಲಿಯೂ ಸಹ ಸಕ್ರಿಯರಾಗಿದ್ದರು ಇನ್ನು ಅಪ್ಪು ಸರ್ ಯಂತಹ ಸರಳ ವ್ಯಕ್ತಿತ್ವವುಳ್ಳ ಮನುಷ್ಯ ಅಂದರೆ ಅವರಂತೆ ಅವರ ಮಕ್ಕಳು ಸಹ. ಹೌದು ತಮ್ಮ ಮಕ್ಕಳು ಎಷ್ಟು ಪ್ರತಿಭಾವಂತರಾಗಿದ್ದರೂ ಸಹ ಎಲ್ಲಿಯೂ ಸಹ ತಮ್ಮ ಮಕ್ಕಳ ಬಗ್ಗೆ ಹೇಳಿಕೊಳ್ಳುತ್ತಾ ಪುನೀತ್ ಸರ್ ಅವರು ತಮ್ಮ ಮಕ್ಕಳನ್ನ ಹೊಗಳುತ್ತಾ ಇರಲಿಲ್ಲ ಹಾಗೆ ಮಕ್ಕಳನ್ನು ಸಹ ಬಹಳ ಪ್ರತಿಭಾವಂತರನ್ನಾಗಿ ಮಾಡಿರುವ ಪುನೀತ್ ಸರ್ ಅವರು ಮಕ್ಕಳನ್ನು ಸಹ ಸಾಮಾನ್ಯರಂತೆ ಬೆಳೆಸಿದ್ದಾರೆ.

ಹೌದು ತಾನೊಬ್ಬ ಸೆಲೆಬ್ರಿಟಿ ತನ್ನ ಮಕ್ಕಳಿಗೆ ಹೆಚ್ಚು ಗೌರವ ಸಲ್ಲಬೇಕು ಅಂತೆಲ್ಲ ಯೋಚನೆ ಮಾಡಿದ ವ್ಯಕ್ತೀನೇ ಅಲ್ಲ ನಮ್ಮ ಅಪ್ಪು ಇವರು ತಮ್ಮ ಮಕ್ಕಳನ್ನ ಸಾಮಾನ್ಯರಂತೆ ಬೆಳೆಸಿದರೋ ಹಾಗೆ ಪುನೀತ್ ಅವರು ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಒಂದೇ ದಿನದಲ್ಲಿ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಯಿತು. ದೆಹಲಿಯಿಂದ ಕರ್ನಾಟಕಕ್ಕೆ ಬರಲು ಮಗಳು ಧೃತಿಗೆ ಪ್ರಧಾನಿ‌ ಕಚೇರಿಯಿಂದ ವಿಶೇಷ ವಿಮಾನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಕರ್ನಾಟಕದ ಇಬ್ಬರು ಅಧಿಕಾರಿಗಳು ಧೃತಿ ಜೊತೆಯೇ ಬೆಂಗಳೂರಿಗೆ ಬಂದರು. ನಿಜವಾಗಿಯೂ ಅಪ್ಪು ತಾನು ಸ್ವಂತ ಪ್ರತಿಭೆಯಿಂದ ಗಳಿಸಿ ತನ್ನ ಮಕ್ಕಳಿಗೆ ಬಿಟ್ಟು ಹೋದ ಆಸ್ತಿ ಅಂದರೆ ಈ ಪ್ರೀತಿನೆ ಅಲ್ವಾ, ನಮ್ಮ ಅಪ್ಪು ಸರ್ ಅವರು ಗಳಿಸಿದ್ದು ಇದಕ್ಕಿಂತ ಆಸ್ತಿ ಬೇಕಾ. ಅಷ್ಟೇ ಅಲ್ಲ ಅಶ್ವಿನಿ ಅವರಿಗೇ ಸಕಲ ಸರ್ಕಾರಿ ಗೌರವಗಳೊಂದಿಗೆ ದೇಶದ ಧ್ವಜವನ್ನು ಹಸ್ತಾಂತರಿಸಿದ್ದಾರೆ.

ನಟ ಪುನೀತ್ ಪಾ..ರ್ಥಿವ ಶರೀರದ ಮೇಲೆ ಹೊದಿಸಿದ ಧ್ವಜವನ್ನು ಅಶ್ವಿನಿಗೆ ಸಕಲ ಗೌರವದೊಂದಿಗೆ ಕೊಟ್ಟಿದ್ದಾರೆ. ಅದು ಅಶ್ವಿನಿ ಅವರಿಗೇ ಪುನೀತ್ ಬಿಟ್ಟು ಹೋದ ಆಸ್ತಿ. ಹೌದು ಅದೆಷ್ಟೋ ಮಂದಿ ಪುನೀತ್ ಅವರು ಗಳಿಸಿದ ಆಸ್ತಿಯನ್ನು ಕುರಿತು ಲೆಕ್ಕಾಚಾರ ಹಾಕುತ್ತಾ ಇತರೆ ನಿಜವಾಗಿಯೂ ಮಾನವೀಯತೆ ಇರುವವರು ಇದನ್ನು ಗಮನಿಸಬೇಕು ಇದಕ್ಕಿಂತ ಬೇರೆ ಪ್ರೀತಿ ಬೇಕಾ ಹೇಳಿ ಒಬ್ಬ ವ್ಯಕ್ತಿಗೆ ಹಣಕ್ಕಿಂತ ಹೆಚ್ಚಿನದಾಗಿ ಜನರ ಬಲ ಜನರ ಪ್ರೀತಿ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ನಮ್ಮ ಅಪ್ಪು ಹಾಗೂ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ನಮ್ಮ ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಪ್ಪು ಸದಾ ಅಮರ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.