ಪುನೀತ್ ರಾಜಕುಮಾರ್ ಫೋಟೋಗೆ ಮನಸಾರೆ ಪೂಜೆ ಮಾಡಿ ತನ್ನ ಜೀ’ವ ಕಳೆದುಕೊಂಡ ಈತ ನಿಜಕ್ಕೂ ಯಾರು ಗೊತ್ತಾ..

83

ನಮ್ಮ ರಾಜಣ್ಣ ಅವರನ್ನು ಕಳೆದುಕೊಂಡಾಗಲೇ ಚಿತ್ರರಂಗ ಆ ವಿಚಾರವನ್ನು ನಂಬಲು ಅಸಾಧ್ಯವಾದ ಹಾಗೇ ನಲುಗಿ ಹೋಗಿತ್ತು ಆ ದೇವರು ಹೀಗೆ ಮಾಡ್ತಾನೆ ಎಂದು ಯಾರೂ ಅಂದುಕೊಂಡಿರಲಿಲ್ಲ ಹೌದು ಇದೀಗ ಅಪ್ಪು ಅವರು ನಮ್ಮ ಜೊತೆ ಇಲ್ಲಾ. ಅಪ್ಪು ಇಲ್ಲವಾದ ಸುದ್ದಿ ನಿಜಕ್ಕೂ ಕನ್ನಡ ನಾಡಿನ ಜನತೆಗೆ ಅದೆಷ್ಟು ಆಘಾತವನ್ನು ಉಂಟುಮಾಡಿದೆ ಅಂದರೆ ನಿಜವಾಗಿಯೂ ಈ ವಿಚಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ದಯವಿಟ್ಟು ಯಾರೂ ಕೂಡ ಈ ರೀತಿ ಮಾಡಿಕೊಳ್ಳಬೇಡಿ ಹೌದು ರಾಜ್ ಕುಟುಂಬದವರೆಲ್ಲರೂ ಸಹ ಅಭಿಮಾನಿಗಳನ್ನು ದೇವರು ಎಂದು ಭಾವಿಸಿರುತ್ತಾರೆ ಆದರೆ ಈ ರೀತಿ ಮಾಡಬೇಡಿ ಇದರಿಂದ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಮಾತ್ರವಲ್ಲ ತಮ್ಮ ಅಪ್ಪ ಅಮ್ಮನ ಬಳಿ ಹೋಗಿ ರುವ ಪುನೀತ್ ಅವರು ಸಹ ನಮ್ಮ ನೆಲ ಅಲ್ಲೆಲ್ಲೋ ನಿಂತು ನೋಡುತ್ತಿರುತ್ತಾನೆ.

ಅವರು ಕೂಡ ಈ ಘಟನೆ ನೋಡಿದಾಗ ಮನಸ್ಸು ನೋವು ಮಾಡಿಕೊಳ್ಳುತ್ತಾರೆ. ಹೌದು ಪುನೀತ್ ಅವರ ಅಗಲಿಕೆಯ ವಿಚಾರವನ್ನು ಕೇಳಿ ಅಭಿಮಾನಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯ ನೋವು ತಾಳಲಾರದೆ ಅಭಿಮಾನಿ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಒಬ್ಬರಲ್ಲ ಇಲ್ಲಿಯವರೆಗೂ ಸುಮಾರು 9ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಹೌದು ಕೆಲ ಬರುವ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡರೆ ಕೆಲವರು ತಮಗೆ ತಾವೇ ನೋವು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಹೌದು ಪ್ರೀತಿ ಅಭಿಮಾನ ಇರಬೇಕು ಆದರೆ ಖಂಡಿತವಾಗಿಯೂ ಹೀಗೆ ಮಾಡಬೇಡಿ ಮೊದಲೇ ನೋವಿನಲ್ಲಿ ಇರುವ ಆ ಕುಟುಂಬ ಇನ್ನಷ್ಟು ನೋವು ಪಡುವ ಹಾಗೆ ಮಾಡಬೇಡಿ ಏನೋ ಆ ಅಭಿಮಾನಿ ಯಾರು ಗೊತ್ತಾ. ನಿನ್ನೆಯಷ್ಟೇ ಚಾಮರಾಜನಗರದ ಹನೂರಿನ ವ್ಯಕ್ತಿಯೊಬ್ಬ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು ಇವರು ಜಮೀನಿನಿಂದ ಮನೆಗೆ ಬಂದ ನಂತರ ಟಿವಿಯಲ್ಲಿ ಪುನೀತ್ ಇನ್ನಿಲ್ಲವೆಂಬ ಸುದ್ದಿ ನೋಡುತ್ತ ಇದ್ದಂತೆ ಅವರಿಗೂ ಸಹ ಹೃದಯಾಘಾತವಾಗಿ ಅಲ್ಲಿಯೇ ಜೀವ ಕಳೆದುಕೊಂಡಿದ್ದರು. ಇನ್ನು ನಿನ್ನೆ ರಾತ್ರಿ ಒಬ್ಬ ಅಭಿಮಾನಿ ಅಪ್ಪು ಇಲ್ಲದ ನೋವಿನಲ್ಲಿ ಜೀವ ಕಳೆದುಕೊಂಡಿದ್ದಾನೆ.

ಇದೀಗ ಇಂದೂ ಸಹ ಒಬ್ಬ ಅಭಿಮಾನಿ ಅಪ್ಪುವಿನ ಜೊತೆಯೇ ನಾನು ಸಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾನೆ. ಹೌದು ಸ್ನೇಹಿತರ ಈ ವ್ಯಕ್ತಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣಕ್ಕೆ ಸೇರಿರುವ ರಾಹುಲ್ ಎಂಬ ವ್ಯಕ್ತಿ ಗಾಡಿವಡ್ಡರ ಎಂಬ ಯುವಕ ಇಂತಹ ಕೆಲಸ ಮಾಡಿಕೊಂಡಿದ್ದಾನೆ ತಾನು ಹೋಗುವ ಕೊನೆ ಕ್ಷಣದಲ್ಲಿ ಅಪ್ಪುವಿನ ಫೋಟೋಗೆ ಪೂಜೆ ಅನ್ನೋ ಸಲ್ಲಿಸಿ ಜೀವ ಕಳೆದುಕೊಂಡು ಬಿಟ್ಟಿದ್ದಾರೆ.

ಇನ್ನು ಕೇವಲ ಇಪ್ಪತ್ತೈದು ವರ್ಷದ ಯುವಕ ರಾಹುಲ್ ಪುನೀತ್ ಮೇಲಿನ ಅಭಿಮಾನದಿಂದಾಗಿ ಪ್ರೀತಿಯಿಂದಾಗಿ ಇಂತಹ ಕೆಲಸವನ್ನು ಮಾಡಿ ಕುಣಿದು ಮನಕುಲುಕುವಂತೆ ಇದೆ ಈ ಸಾ.. ವು. ಆದರೆ ದಯವಿಟ್ಟು ಯಾರೂ ಸಹ ಯಾರೂ ಸಹ ಇಂತಹ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ನಟ ಪುನೀತ್ ಅವರಿಗೆ ಯಾವುದೇ ಕಾರಣಕ್ಕೂ ಇಂತಹ ಕೆಲಸಗಳು ಇಷ್ಟ ಆಗುವುದಿಲ್ಲ ಆದ್ದರಿಂದ ಅವರಿಗೆ ಇಷ್ಟವಾಗದೇ ಇರುವ ಕೆಲಸವನ್ನು ನಾವ್ಯಾಕೆ ಮಾಡಬೇಕು ಅಲ್ವಾ. ಅವರ ಮನಸ್ಸು ನಿಜಕ್ಕೂ ಇಂತಹ ಘಟನೆಗಳಿಂದ ಮತ್ತಷ್ಟು ನೋವನ್ನು ಅನುಭವಿಸುತ್ತದೆ.‌

ಅವರು ಇದ್ದಷ್ಟು ದಿನ ನಿಮ್ಮ ಕುಟುಂಬಗಳನ್ನು ಮೊದಲು ಚೆನ್ನಾಗಿ ನೋಡಿಕೊಳ್ಳಿ ನಂತರ ಮಿಕ್ಕಿದ್ದು ಎನ್ನುತ್ತ ಇದ್ದರು ನಮ್ಮ ಅಪ್ಪು ಸರ್ ಅಂತ ಆ ಪುಣ್ಯಾತ್ಮ ಎಲ್ಲಿಯೂ ಹೋಗಿಲ್ಲ ಅವರು ಸದಾ ನಮ್ಮ ಮನಸ್ಸಿನಲ್ಲಿಯೇ ಇರುತ್ತಾರೆ ಅವರ ಅಭಿಮಾನಿಗಳಾದ ನಾವು ಅವರಂತೆ ಒಳ್ಳೆಯ ಕೆಲಸಗಳನ್ನ ಮಾಡಬೇಕು ಆದರೆ ಇಂತಹ ನೋವು ಕೊಡುವಂತಹ ಕೆಲಸ ವನ್ನೂ ಮಾಡಬೇಡಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳೋಣ.

ಅವರು ಬದುಕಿದ ರೀತಿ ಅವರ ಆದರ್ಶಗಳು ಅವರ ಸರಳತೆ ಅವರ ಒಳ್ಳೆಯತನ ನಮ್ಮ ಜೀವನಗಳಲ್ಲಿ ರೂಡಿಸಿಕೊಂಡು ಸದಾಕಾಲ ಪುನೀತ್ ಅವರನ್ನು ಜೀವಂತವಾಗಿ ಇಸೋಣ ಅದರೆ ಇನ್ಯಾವತ್ತೂ ದೋಷಿಯೆಂದು ಇಂತಹ ಕೆಲಸಗಳನ್ನು ಮಾಡಬೇಡಿ ಈಗಾಗಲೆ ಅವರ ಕುಟುಂಬ ಎದುರಿಸುತ್ತಿರುವ ನೋವು ಸಾಕು. ಅಭಿಮಾನಿಗಳನ್ನೇ ದೇವರು ಅನ್ನುತ್ತಿದ್ದ ಈ ಕುಟುಂಬದ ಜೊತೆ ಸದಾ ಕರ್ನಾಟಕ ಜನತೆ ನಾವಿರೋಣ.