ಮತ್ತೊಮ್ಮೆ ತಮ್ಮ ಹೃದಯ ವೈಶಾಲ್ಯತೆ ಮೆರೆದ ಡಿ ಬಾಸ್ ನಿಜಕ್ಕೂ ಹೆಮ್ಮೆ ಅನಿಸುತ್ತದೆ …!!!!

23

ಈಗಾಗಲೇ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದೆಯೇ ಇದೆ ಚಾಲೆಂಜಿಂಗ್*ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಕ್ಕಾಗಿ ಅದೇ ರೀತಿ ಇದೀಗ ಮತ್ತೊಂದು ವಿಚಾರದಲ್ಲಿ ದರ್ಶನ್ ಅವರು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ ಹೌದು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರು ಪೋಸ್ಟ್ ಮಾಡಿರುವ ಈ ಫೋಟೋ ಇದೀಗ ಸಖತ್ ವೈರಲ್ ಆಗಿದ್ದು ರೀ ಸಾರಥಿ ಜೊತೆ ರಿಯಲ್ ಸಾರಥಿ ಎಂಬ ಟ್ಯಾಗ್ ಲೈನ್ ಹಾಕುವ ಮೂಲಕ ದರ್ಶನ್ ಅವರು ತಮ್ಮ ಹಿಂದಿನ ನೆನಪುಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಹಾಗಾದರೆ ಈ ಫೋಟೊ ಹಿಂದಿರುವ ಕತೆ ಏನು ಎಂದು ನೀವು ಕೂಡ ತಿಳಿಯಬೇಕೆಂದರೆ ಈ ಕೆಳಗಿನ ಲೇಖನವನ್ನು ಪೂರ್ತಿಯಾಗಿ ತಿಳಿದು ನೀವು ಸಹ ದರ್ಶನ್ ಅಭಿಮಾನಿ ಆಗಿದ್ದರೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಬಾಕ್ಸಾಫೀಸ್ ಸುಲ್ತಾನ ಡಿ ಬಾಸ್ ದರ್ಶನ್ ಅವರ ಬಗ್ಗೆ ಕರ್ನಾಟಕ ರಾಜ್ಯದಲ್ಲಿ ಯಾರಿಗೆ ಕೇಳಿದರೂ ಹೇಳುತ್ತಾರೆ ಇವರು ಪಕ್ಕಾ ಮಾಸ್ ಇವರು ಪಕ್ಕಾ ಲೋಕಲ್ ಅಂತ. ಅಷ್ಟೇ ಅಲ್ಲ ಡಿ ಬಾಸ್ ರವರು ಎಷ್ಟು ದೊಡ್ಡ ನಟನಾಗಿದ್ದರೂ ಸಹ ಅವರಿಗೆ ಚೂರು ಗರ್ವವಿಲ್ಲ ಸ್ಟ್ಯಾಂಡರ್ಡ್ ಮಂದಿ ಜೊತೆ ತಾರೆ ಲೋಕಲ್ ಪೇಪರ್ ಜೊತೆ ಲೋಕಲ್ ಆಗಿ ಇರುವ ಡಿ ಬಾಸ್ ರವರು ತಮ್ಮ ಕಷ್ಟದ ದಿವಸಗಳಲ್ಲಿ ತಾವು ಓಡಾಡುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಡ್ರೈವರ್ ಅನ್ನು ಭೇಟಿ ನೀಡಿ ಅವರ ಜನುಮದ ದಿವಸದಂದು ಅವರೊಟ್ಟಿಗೆ ಸಮಯವನ್ನು ಕಳೆದಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ ನಟ ದರ್ಶನ್ ಅವರು.

ಹೌದು ನಮಗೆ ತಿಳಿದೇ ಇದೆ ದರ್ಶನ್ ಅವರು ಈ ಮಟ್ಟಕ್ಕೆ ಬರಬೇಕೆಂದರೆ ಎಷ್ಟು ಕಷ್ಟಪಟ್ಟಿದ್ದಾರೆಂದು ಅದೇ ರೀತಿ ತಮ್ಮ ಕಷ್ಟದ ದಿವಸಗಳಲ್ಲಿ ತಾವು ಓಡಾಡುತ್ತಿದ್ದ ಬಸ್ ಚಾಲಕರೊಬ್ಬರ ಎಂಬತ್ತು ವರುಷದ ಹುಟ್ಟುಹಬ್ಬಕ್ಕೆ ಶುಭಕೋರಲೆಂದು ಆ ಚಾಲಕರನ್ನು ಭೇಟಿ ನೀಡಿ ಅಲ್ಲಿ ತೆಗೆದುಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ ನಟ ದರ್ಶನ್ ಹಾಗೆ ಈ ರೀತಿ ಟ್ಯಾಗ್ ಲೈನ್ ಅನ್ನು ಕೂಡ ಹಾಕಿದ್ದಾರೆ “ರೀಲ್ ಸಾರಥಿ ಜೊತೆ ರಿಯಲ್ ಸಾರಥಿ” ಅಂತ.

ಎಷ್ಟೋ ಜನ ಹಣ ಬಂದ ಮೇಲೆ ಹೆಸರು ಬಂದ ಮೇಲೆ ತಮ್ಮ ಹಿಂದಿನ ದಿವಸ ಗಳನ್ನ ಮರೆತೇ ಬಿಡುತ್ತಾರೆ ಆದರೆ ದರ್ಶನ್ ಅವರು ಹಾಗಲ್ಲ ತಮ್ಮ ಕಷ್ಟದ ದಿವಸಗಳಲ್ಲಿ ತಮ್ಮ ಜೊತೆಯಾಗಿದ್ದ ಮಂದಿಯ ಜೊತೆಗೆ ಇವತ್ತಿಗೂ ಸಹ ಸಂಪರ್ಕದಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ. ಅದೇ ರೀತಿ ಇದೀಗ ತಾವು ಕೆಎಸ್ಸಾರ್ಟಿಸಿ ಬಸ್ ನಲ್ಲಿ ಓಡಾಡುವಾಗ ಚಾಲಕರಾಗಿದ್ದ ವ್ಯಕ್ತಿಯನ್ನು ಭೇಟಿ ನೀಡಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ ದರ್ಶನ್ ಅವರು. ಈ ಸನ್ನಿವೇಶ ದರ್ಶನ್ ಅವರ ವಿಶಾಲ ಮನಸ್ಸಿನ ಬಗ್ಗೆ ತಿಳಿಸಿಕೊಡುತ್ತದೆ ಏನಂತಿರ ಸ್ನೇಹಿತರೆ.

LEAVE A REPLY

Please enter your comment!
Please enter your name here