ಯಶ್ ರಾಧಿಕಾ ಅವರ ಮದುವೆಗೆ ಮಾಡಿಸಿದ್ದ ಲಗ್ನಪತ್ರಿಕೆಯಲ್ಲಿ ಅಂತದ್ದು ಏನು ಬರೆಯಲಾಗಿತ್ತು ಗೊತ್ತಾ… ಕುತೂಹಲ ನೋಡಿ

Sanjay Kumar
3 Min Read

ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಜೋಡಿ ಅಂದ್ರೆ ಇವರೆ ಹಾಗೆ ಸದ್ಯ ಇವರ ಮದುವೆ ಆಮಂತ್ರಣ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇವರ ಲಗ್ನ ಪತ್ರಿಕೆಯನ್ನು ನೋಡಿದವರು ಅಚ್ಚರಿ ಪಡುತ್ತಿದ್ದಾರೆ. ಅಷ್ಟಕ್ಕೂ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದಾದರೂ ಏನು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.

ನಟ ಯಶ್ ಸದ್ಯ ಪ್ರಪಂಚದೆಲ್ಲೆಡೆ ಇವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಮಂದಿ ಯಾಕೆ ಅಂದರೆ ಕೆಜಿಎಫ್ ಚಲನಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟ ಯಶ್ ತಮ್ಮ ಈ ಚಿತ್ರದಲ್ಲಿ ತಮ್ಮ ಆಟಿಟ್ಯೂಡ್ ಎಂದ ತಮ್ಮ ಡೈಲಾಗ್ ಡೆಲಿವರಿ ಯಿಂದಾಗಿ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ ಈಗಾಗಲೇ ನ್ಯಾಷನಲ್ ಲೆವೆಲ್ ನಲ್ಲಿ ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಟ ಯಶ್ ಅವರು ಪ್ರಸಿದ್ಧಿ ಪಡೆದುಕೊಂಡಿತು ಮುಂದೆ ಯಶ್ ಅವರು ಯಾವ ಸಿನಿಮಾ ಮಾಡಲಿದ್ದಾರೆ ಯಾವ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರೆ ಎಂಬುದೇ ಹಲವರಿಗೆ ಕಾಡುತ್ತಿರುವ ಕುತೂಹಲಕಾರಿಯಾದ ಪ್ರಶ್ನೆಯಾಗಿದೆ.

ಇನ್ನೂ ಕೂಡ ಯಶ್ ಅವರು ತಮ್ಮ ಮುಂದಿನ ಸಿನಿಮಾ ಕುರಿತು ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಹಾಗೆ ಸದ್ಯ ಈ ಮಾಹಿತಿಯಲ್ಲಿ ನಾವು ನಟ ಯಶ್ ಅವರ ಸರಳತೆಯ ಕುರಿತು ಮತ್ತೊಂದು ವಿಚಾರವನ್ನು ತಿಳಿಸಿಕೊಡಲು ಹೊರಟಿತು ಯಶ್ ಅವರ ಬಗ್ಗೆ ಹೇಳುವುದೇ ಬೇಡ ಈಗಾಗಲೇ ಕೆಜಿಎಫ್ ಜನರ ಚಿತ್ರ ಹಿಟ್ ಆಗುತ್ತಿದ್ದ ಹಾಗೆ ಅವರ ಬಗ್ಗೆ ಸರ್ಚ್ ಎಂಜಿನ್ ನಲ್ಲಿ ಅವರ ಕುರಿತು ಸರ್ಚ್ ಮಾಡದೆ ಇರುವವರೇ ಇಲ್ಲ ಅನಿಸತ್ತೆ ಹಾಗೆ ನಟ ಯಶ್ ಅವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂದರೆ ಅವರ ಜೀವನದಲ್ಲಿ ಭಾಗವಾಗಿ ನಟಿ ರಾಧಿಕಾ ಪಂಡಿತ್ ಅವರು ಕೂಡ ಅವರ ಹೆಸರು ಕೂಡ ನಮಗೆ ಕೇಳಿಬರುತ್ತದೆ.

ಹೌದು ನಟ ಯಶ್ ಅವರು ಕಿರುತೆರೆಯಲ್ಲಿ ಅಭಿನಯಿಸುವಾಗ ಯಶ್ ಅವರ ಜೊತೆ ನಟಿ ರಾಧಿಕಾ ಪಂಡಿತ್ ಅವರು ಕೂಡ ಇದ್ದರು ಖಾತೆ ಇವರಿಬ್ಬರೂ ಕೂಡ ಒಟ್ಟಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಮೊಗ್ಗಿನ ಮನಸ್ಸು ಎಂಬ ಚಲನಚಿತ್ರದ ಮೂಲಕ ನಟ ಯಶ್ ಮತ್ತು ರಾಧಿಕ ಪಂಡಿತ್ ಎಂಟ್ರಿಕೊಡ್ತಾರೆ ಆ ಬಳಿಕ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಇವರಿಗೆ ನ್ಯಾಷನಲ್ ಅವಾರ್ಡ್ ಕೂಡ ಸಿಗುತ್ತದೆ ಸಿನೆಮಾ ರಂಗದಲ್ಲಿ ಹೆಚ್ಚಿನ ಅವಕಾಶಗಳು ಕೂಡ ಇವರತ್ತ ಹುಡುಕಿ ಬರುತ್ತದೆ. ಅಷ್ಟೆಲ್ಲಾ ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿರುವ ಈ ಜೋಡಿಯು ಮದುವೆಗಿಂತ ಮುಂಚೆ ಇವರು ಪ್ರೀತಿಸುತ್ತಿದ್ದರೆ ಎಂಬುದೇ ಹಲವರಿಗೆ ಗೊತ್ತಿಲ್ಲದ ವಿಚಾರವಾಗಿತ್ತು ಸೈಲೆಂಟಾಗಿ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಗಳು ಕೊನೆಗೆ ಮನೆಯವರ ಒಪ್ಪಿಗೆ ಪಡೆದು ಮದುವೆ ಗೂ ಕೂಡ ರೆಡಿಯಾದರು.

ಮದುವೆ ಆಮಂತ್ರಣ ಪತ್ರದಲ್ಲಿ ಯಶ್ ಅವರು ಏನೆಂದು ಬರೆಸಿದ್ದರು ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ನಮಸ್ತೆ, ”ಇಲ್ಲಿ ಎಲ್ಲರೂ ಸಂಬಂಧಿಕರೆ, ಎಲ್ಲವೂ ಅನುಬಂಧವೆ ಸಹನೆ ಮರವನ್ನೂ ತಬ್ಬಿದ ಜೀವಲತೆಯಲ್ಲಿ ನಲುಮೆ ಹೂ ಅರಳಿದೆ ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ. ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೆ, ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೆ, ಸಂಬಂಧಕ್ಕಿಂತ ಕುಟುಂಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರ್ಯಾವ ಹೆಮ್ಮೆ ಬೇಕಿಲ್ಲ.

ನಿಮ್ಮ ಪ್ರೀತಿ ಆದಾರಗಳಿಗಿಂತ ಮಿಗಿಲಾದದ್ದು ಬೇರ್ಯಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೆ ಹೆಚ್ಚು ನಿಮ್ಮ ಆಗಮನವೆ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ ದಯಮಾಡಿ ಎಲ್ಲರೂ ಸಹ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹಾರೈಸಿ ಅಂತ ಯಶ್ ಹಾಗೂ ರಾಧಿಕಾ ತಮ್ಮ ಕಲ್ಯಾಣ ಸಮಾರಂಭಕ್ಕೆ ಸರ್ವರಿಗೂ ಪ್ರೀತಿಯಿಂದ ಆಹ್ವಾನ ನೀಡಿದ್ದರು. ಆಹ್ವಾನ ಪತ್ರಿಕೆ ಕೊನೆಯಲ್ಲಿ ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದರು. ಒಟ್ಟಿನಲ್ಲಿ ಕ್ಯೂಟ್ ಜೋಡಿಗಳಲ್ಲಿ ಒಂದಾದ ಯಶ್ ದಂಪತಿಗಳ ಲಗ್ನ ಪತ್ರಿಕೆ ವಿಭಿನ್ನ ಹಾಗೂ ಹೊಸತನದಿಂದ ಕೂಡಿತ್ತು

ಇತ್ತ ಈ ರೀತಿಯಾಗಿತ್ತು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಆಮಂತ್ರಣ ಪತ್ರಿಕೆ ಮತ್ತು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಕುಟುಂಬ ಈಗ ಪೂರ್ಣ ಕುಟುಂಬವಾಗಿದ್ದು ಈ ದಂಪತಿಗಳ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.