Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ತರದ ಆಹಾರಗಳನ್ನ ಬಳಕೆ ಮಾಡಿದ್ರೆ ತುಂಬಾ ಒಳ್ಳೇದು ..

ಮಾನವನ ದೇಹದಲ್ಲಿ ಪ್ರತಿಯೊಂದು ಅಂಗವೂ ಕೂಡ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಯಾವ ಅಂಗವಾದರೂ ಕೂಡ ಅದರ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸುವುದು ಅದರ ಕರ್ತವ್ಯ ಅದು ಕಾರ್ಯವನ್ನು ನಿಲ್ಲಿಸಿದರೆ ಮನುಷ್ಯನ ಉಸಿರು ಕೂಡ ನಿಲ್ಲುತ್ತದೆ.

ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಕೂಡ ಮನುಷ್ಯನಿಗೆ ಅತಿ ಮುಖ್ಯ ಯಾವ ಅಂಗವೂ ಕೆಲಸ ಮಾಡದಿದ್ದರೂ ಕೂಡ ಮನುಷ್ಯನಿಗೆ ತುಂಬಾ ಕಷ್ಟವಾಗುತ್ತದೆ ಮನುಷ್ಯನ ಆರೋಗ್ಯ ರಕ್ಷಣೆ ಮನುಷ್ಯನ ಹೊಣೆ ಪ್ರತಿಯೊಂದು ಅಂಗಗಳನ್ನು ರಕ್ಷಣೆ ಮಾಡುವುದು ಕೂಡ ಮನುಷ್ಯನ ಹೊಣೆ ಮನುಷ್ಯ ಅಂಗಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ.

ಎಂಬುದರ ಮೇಲೆ ಅವನ ಆರೋಗ್ಯ ಹೇಗಿರುತ್ತದೆ ಎಂಬುದು ಕೂಡ ನಿಂತಿರುತ್ತದೆ ಅವನ ಆರೋಗ್ಯವೂ ಎಲ್ಲ ರೀತಿಯಲ್ಲೂ ಉತ್ತಮವಾಗಿರಬೇಕು ಅಂದರೆ ಅವನು ಉತ್ತಮವಾದಂತಹ ಆಹಾರ ಪದಾರ್ಥವನ್ನು ಸೇವಿಸುತ್ತಿರಬೇಕು ಪ್ರತಿಯೊಂದು ಅಂಗವನ್ನು ಕಾಪಾಡಿಕೊಳ್ಳಲು ಯಾವ ಯಾವ ಅಂಗಕ್ಕೆ ಯಾವ ಯಾವ ಆಹಾರ ಪದಾರ್ಥಗಳು ಮುಖ್ಯವಾಗಿದೆ.

ಎಂಬುದರ ಕಡೆ ಗಮನ ಹರಿಸಿ ಆಯಾ ಅಂಗಗಳಿಗೆ ಅನುಗುಣವಾಗಿ ಆಹಾರವನ್ನು ಸೇವಿಸುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮವಾಗಿದೆ ಮನುಷ್ಯನ ದೇಹದಲ್ಲಿ ಎಲ್ಲ ಅಂಗಗಳು ಕೂಡ ಮುಖ್ಯ ಅದರಲ್ಲಿ ಈ ದಿನ ನಾನು ಅತಿ ಮುಖ್ಯವಾದ ಒಂದು ಅಂಗದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ ಅದೇ ಯಾವುದೆಂದರೆ ಲಿವರ್ ಲಿವರ್ ಅನ್ನು ಯಕೃತ್ ಎಂದು ಕೂಡ ಕರೆಯುತ್ತೇವೆ.

ಅದರ ಬಗ್ಗೆ ಮತ್ತು ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ಅದೇನೆಂದರೆ ಈ ಲಿವರ್ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧೀಕರಣ ಮಾಡುವುದರಲ್ಲಿ ಕೂಡ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜೊತೆಗೆ ನಮ್ಮ ದೇಹದಲ್ಲಿ ಯಾವುದಾದರೂ ವಿಷಕಾರಿ ಪದಾರ್ಥಗಳು ಇದ್ದರೆ ಅದನ್ನು ರಕ್ತದಿಂದ ಬೇರ್ಪಡಿಸಲು ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಈ ರೀತಿ ನಮ್ಮ ದೇಹದಲ್ಲಿ ಪ್ರಮುಖ ಕಾರ್ಯವನ್ನು ನಿರ್ವಹಿಸುವ ಯಕೃತ್ತನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಇದನ್ನು ಕಾಪಾಡಿಕೊಳ್ಳಲು ನಾವು ಯಾವ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ನಾನು ನಿಮಗೀಗ ಮಾಹಿತಿಯನ್ನು ನೀಡುತ್ತೇನೆ.

ನಾವು ಯಕೃತ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ಯಾರೆಟ್ ಮತ್ತು ಅಡುಗೆಯಲ್ಲಿ ಬಳಸುವ ಅರಿಶಿನ ಹೂ ಕೋಸು ಎಲೆ ಕೋಸು ಈ ರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಅದರಲ್ಲಿ ಯಾವ ಅಂಶಗಳಿವೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ಅರಿಶಿಣ ನಾವು ಅಡುಗೆಯಲ್ಲಿ ಪ್ರತಿನಿತ್ಯ ಬಳಸುತ್ತೇವೆ ಇದರಲ್ಲಿ ಕರಿಕ್ಯುಲಂ ಎಂಬ ರಾಸಾಯನಿಕ ಅಂಶವಿದ್ದು ಇದು ನಮ್ಮ ದೇಹಕ್ಕೆ ಅತಿ ಹೆಚ್ಚು ಉಪಯುಕ್ತವಾಗಿದೆ ಮತ್ತು ಯಕೃತ್ತನ್ನು ಸೋಂಕಿನಿಂದ ದೂರ ಇಡಲು ಇದು ಹೆಚ್ಚು ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು ಮತ್ತೊಂದು ಪ್ರಮುಖವಾದ ಪದಾರ್ಥ ವೆಂದರೆ ರಾಗಿ ಮತ್ತು ಜೋಳ ಈ ಎರಡೂ ಪದಾರ್ಥಗಳಲ್ಲಿ ಕೂಡ ನಾರಿನ ಅಂಶ ಹೆಚ್ಚಾಗಿರುವುದರಿಂದ ಇದು ದೇಹದಲ್ಲಿರುವ ವಿಷಕಾರಿ ಪದಾರ್ಥವನ್ನು ರಕ್ತದಿಂದ ಬೇರ್ಪಡಿಸುತ್ತದೆ .

ರಾಗಿ ಮತ್ತು ಜೋಳ ಯಕೃತ್ ಅಲ್ಲದೆ ಎಲ್ಲ ರೀತಿಯಲ್ಲೂ ಕೂಡ ನಮ್ಮ ದೇಹಕ್ಕೆ ಉತ್ತಮ ಇದರ ಜೊತೆಯಲ್ಲಿ ನಿಂಬೆರಸವನ್ನು ಸೇವಿಸುವುದು ಅಥವಾ ಗ್ರೀನ್ ಟೀಯನ್ನು ಸೇವಿಸುವುದು ಉತ್ತಮವಾದಂತಹ ಅಂಶವಾಗಿದೆ ಇದು ಕೂಡ ರಕ್ತವನ್ನು ಶುದ್ಧೀಕರಿಸಿ ಯಕೃತ್ನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಡ್ರೈ ಫ್ರೂಟ್ಸ್ ಗಳ ಬಗ್ಗೆ ಅದರ ಉಪಯೋಗಗಳ ಬಗ್ಗೆ ಹೇಳುವ ಅವಶ್ಯಕತೆ ತೆ ಇಲ್ಲ ಆದರೆ ಇದನ್ನು ಸೇವಿಸುವುದರ ಜೊತೆಗೆ ಡ್ರೈಫ್ರೂಟ್ಸ್ ನಲ್ಲಿ ಮುಖ್ಯವಾಗಿರುವ ಡ್ರೈಫ್ರೂಟ್ ವಾಲ್ನೆಟ್ ಇದು ಯಕೃತ್ನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮವಾದಂತಹ ಕಾರ್ಯವನ್ನು ನಿರ್ವಹಿಸುತ್ತವೆ ಆದ್ದರಿಂದ ಎಲ್ಲರೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಈ ಆಹಾರವನ್ನು ಸೇವಿಸಿ ನಿಮ್ಮ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದಗಳು .

One reply on “ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ತರದ ಆಹಾರಗಳನ್ನ ಬಳಕೆ ಮಾಡಿದ್ರೆ ತುಂಬಾ ಒಳ್ಳೇದು ..”

Leave a Reply