ಅಕಸ್ಮಾತಾಗಿ ಕೈ ಅಥವಾ ಕಾಲು ಉಳುಕಿದರೆ ತಕ್ಷಣಕ್ಕೆ ಈ ತರ ಮಾಡಿ ಹಚ್ಚಿ ಸಾಕು ಎಂತಾ ದೊಡ್ಡ ಊತ ಇದ್ರೂ ಸಹ ಬೇಗ ಕಡಿಮೆ ಆಗುತ್ತೆ…

359

ಕೆಲವೊಮ್ಮೆ ಸಮಯ ಹೇಗಿರುತ್ತೆ ಅಂದರೆ ನಾವು ಬೇಗನೆ ಕೆಲಸ ಮಾಡಿ ಮುಗಿಸಬೇಕಾಗಿರುತ್ತದೆ ಹಾಗೆ ಅಷ್ಟು ಕೆಲಸ ಇರುತ್ತದೆ ಅಂತಹ ಸಮಯದಲ್ಲಿ ನಾವು ನಮ್ಮ ಬಗ್ಗೆಯೂ ಯೋಚನೆ ಮಾಡದೆ ಕೆಲಸ ಮಾಡುತ್ತಾ ಇರುತ್ತೇವೆ.ಆಗ ಸಡನ್ನಾಗಿ ಏನಾಗಿರುತ್ತದೆ ಅಂದರೆ ಕಾಲು ಅಥವಾ ಕೈ ಅಥವಾ ಕುತ್ತಿಗೆ ಭಾಗಗಳಲ್ಲಿ ಉಳುಕು ಆಗಿರುತ್ತೆ. ಈ ಉಳುಕು ಆದಾಗ ನೋವು ಅಂದರೆ ಅದು ಎಷ್ಟು ಬಾಧೆ ಕೊಡುತ್ತದೆ ಅಂದರೆ ನಿಜಕ್ಕೂ ಹೇಳತೀರದು ಅಂಥದ್ದೊಂದು ಸಮಯ ಯಾಕಾದ್ರೂ ಬಂತೊ ಅಂತ ಅನಿಸುತ್ತಲೇ ಇರುತ್ತದೆ.

ಆಗ ಅನ್ನಿಸುತ್ತೆ ನಾವು ಬಹಳ ಎಚ್ಚರದಿಂದ ಇರಬೇಕಾಗುತ್ತದೆ ಈ ನೋವು ತಡೆಯಲು ಆಗುತ್ತಿಲ್ಲ ಅಂತ ಆದರೆ ಸಮಯ ಹಾಕಿರುತ್ತೆ ಏನು ಮಾಡಲು ಆಗುತ್ತೆ ಹೇಳಿ ಆದರೆ ಕೈ ಅಥವಾ ಕಾಲು ಉಳುಕಿದಾಗ ಅದರಿಂದ ಆಚೆ ಬರಲು ಈ ಸಣ್ಣ ಪರಿಹಾರ ಮಾಡಿ ನೋಡಿ ನಿಮ್ಮ ಈ ಸಮಸ್ಯೆಗೆ ಬಹಳ ಬೇಗ ತುಂಬ ಸರಳ ವಿಧಾನವನ್ನು ಹೇಳಿಕೊಡುತ್ತಿದ್ದೇವೆ ಸ್ನೇಹಿತರೆ ಇಂದಿನ ಈ ಮನೆ ಮದ್ದಿನಲ್ಲಿ.

ಈ ಕೈಕಾಲು ಅಥವಾ ಕುತ್ತಿಗೆಯ ಉಳುಕಿದಾಗ ನೀವು ಏನು ಮಾಡಬೇಕಿರುತ್ತದೆ ಅಂದರೆ ಸ್ವಲ್ಪ ಬಿಸಿನೀರಿನಿಂದ ಶಾಖ ಕೊಡುತ್ತಾ ಇರಬೇಕು ಆಗ ಆ ಭಾಗದಲ್ಲಿ ಮೂಳೆಗಳು ನರಗಳು ಸಡಿಲವಾಗಿ ನಿಮಗೆ ಕೈಕಾಲು ಆಡಿಸುವುದಕ್ಕೆ ಸಾಧ್ಯವಾಗುತ್ತದೆ.

ಆಗ ನೋವು ಕೂಡ ಕಡಿಮೆಯಾಗುತ್ತದೆ. ಆದರೆ ಯಾವಾಗ ನೀವು ನಿರ್ಲಕ್ಷ್ಯ ಮಾಡ್ತೀರಾ ಆಗ ಬರುವ ನೋವು ಆ ಬಾಧೆ ತಡೆಯಲು ಆಗುವುದಿಲ್ಲ ಅಂತಹ ನೋವು ನಿಜಕ್ಕೂ ಹೇಳತೀರದು. ನಮಗೆ ಯಾರಾದರೊಬ್ಬರು ಹತ್ತಿರ ಇರಬೇಕು ಅನಿಸುತ್ತ ಇರುತ್ತದೆ ಇವತ್ತಿನ ದಿನಗಳಲ್ಲಿ ಉಳುಕು ಆದಾಗ ತಕ್ಷಣವೇ ಮಾತ್ರೆಯನ್ನು ಏನೊ ತೆಗೆದುಕೊಂಡುಬಿಡುತ್ತೇವೆ.

ಆದರೆ ಮಾತ್ರೆ ತೆಗೆದುಕೊಂಡರೂ ನೋವು ಹೋಗೋದಿಲ್ಲ ಆಗ ಕೆಲವರು ಉಳುಕು ತಗ್ಗಿಸುವುದಕ್ಕೆ ಹೋಗ್ತಾರೆ.ಈ ಪರಿಹಾರ ತಕ್ಷಣಕ್ಕೆ ನೋವು ಕೊಡುತ್ತೆ ಅಂದರು ಉಳುಕು ತಗಿಸಿದ ಬಳಿಕ ನೋವು ಸ್ವಲ್ಪ ಕಡಿಮೆ ಆಗುತ್ತೆ ಆದರೆ ಸಮಯ ಹೇಗಿರುತ್ತೋ ಯಾರಿಗೆ ಗೊತ್ತು ಉಳುಕು ತಗಿಸುವುದಕ್ಕೆ ಹೋಗಿ ಏನಾದರೂ ತೊಂದರೆಯಾಗಬಹುದೇ ಅನ್ನುವ ಭಯ ಮಾತ್ರ ಮನಸ್ಸಿನಲ್ಲಿ ಓಡುತ್ತಾ ಇರುತ್ತದೆ. ಅದಕ್ಕಾಗಿ ನೀವು ಇದ್ಯಾವುದನ್ನೂ ಮಾಡಬೇಡಿ ತುಂಬ ಸರಳವಾಗಿ ಉಳುಕು ನಿವಾರಣೆಯಾಗುವಂತಹ ಮನೆ ಮದ್ದನ್ನೂ ನಾವು ಈ ಪುಟದ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ, ಸ್ನೇಹಿತರೇ ಇದನ್ನು ಮಾಡುವುದು ಹೇಗೆ ಅಂದರೆ ಇದಕ್ಕಾಗಿ ಬೇಕಾಗಿರುವುದು ಮೆಣಸಿನ ಕಾಳುಗಳು.

ಹೌದು ಮೆಣಸಿನ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಶೀತ ಬಂದಾಗ ಹಾಲಿಗೆ ಮೆಣಸಿನ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತಾ ಬನ್ನಿ ನಿಮ್ಮ ಶೀತಾ ಎಷ್ಟು ಬೇಗ ನಿವಾರಣೆಯಾಗುತ್ತೆ ಹಾಗೆ ಉಳುಕು ಬಂದಾಗ ಮೆಣಸಿನ ಕಾಳುಗಳನ್ನು ದಪ್ಪದಾಗಿ ಕುಟ್ಟಿ ಪುಡಿ ಮಾಡಿಕೊಂಡು ಅದಕ್ಕೆ ನೀರನ್ನು ಮಿಶ್ರ ಮಾಡಿಕೊಂಡು ಸ್ವಲ್ಪ ದಪ್ಪಗೆ ಪೇಸ್ಟ್ ಮಾಡಿಕೊಳ್ಳಬೇಕು ಅದನ್ನು ಉಳುಕು ಆದ ಭಾಗಕ್ಕೆ ಲೇಪನ ಮಾಡಬೇಕು.

ಈಗ ಈ ಮೆಣಸಿನ ಪುಡಿಯ ಪ್ಯಾಕ್ ಅನ್ನು ಉಳುಕು ಆದ ಭಾಗಕ್ಕೆ ಹಾಕಿರುತ್ತೀರೋ ಆದರೆ ಅದು ಬೇಗ ಒಣಗುತ್ತದೆ ಅದಕ್ಕಾಗಿ ನೀವು ಮಾಡಬೇಕಾಗಿರುವುದೇನೆಂದರೆ ಒದ್ದೆ ಬಟ್ಟೆಯನ್ನು ಆ ಪ್ಯಾಕ್ ಹಾಕಿದ ಭಾಗದ ಮೇಲೆ ಕಟ್ಟಬೇಕು. ಆಗಾಗ ನೀರಿನಿಂದ ಬಟ್ಟೆಯನ್ನು ತಣ್ಣಗೆ ಮಾಡುತ್ತಿರಿ. ಇದರಿಂದ ಈ ಮೆಣಸಿನ ಕಾಳು ನೋವನ್ನು ಹೀರಿಕೊಂಡು ಹಾಗೂ ಆ ಭಾಗವನ್ನೂ ಬೇಗ ಸಡಿಲವಾಗುವಂತೆ ಮಾಡುತ್ತದೆ.ಈ ಸರಳ ಉಪಾಯ ಮಾಡಿ ಉಳುಲಿನ ನೋವಿನಿಂದ ಶಮನ ಪಡೆದುಕೊಳ್ಳಿ ಧನ್ಯವಾದ.