ಅಕಸ್ಮಾತ್ ಜರಿ ಕಡಿದರೆ ತಕ್ಷಣಕ್ಕೆ ಈ ರೀತಿಯಾದ ಸೂಕ್ತ ಮನೆ ಮದ್ದು ಬಳಸಿ ನೋಡಿ … ಎಲ್ಲ ಕಡಿಮೆ ಆಗುತ್ತದೆ..

1330

ಮನೆಯೊಳಗೆ ಬರದಂತೆ ಮತ್ತು ಅಕಸ್ಮಾತ್ ಜರಿ ಕಡಿದರೆ ಅದಕ್ಕೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಅಥವಾ ಮನೆಮದ್ದು ಆಗಿ ಏನನ್ನು ಮಾಡಬೇಕು ತಿಳಿಯೋಣ ಬನ್ನಿ ಈ ಕೆಳಗಿನ ಪುಟದಲ್ಲಿ …ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಮ್ಮ ಸುತ್ತಾ ಬಹಳಷ್ಟು ವಿಷಜಂತುಗಳಿವೆ ಅಂತಹ ವಿಷಜಂತುಗಳಲ್ಲಿ ಒಂದಾದ ಹೌದು ಹಾವು ಕಚ್ಚಿದಾಗ ಹೇಗೆ ನಮ್ಮ ದೇಹದಲ್ಲಿ ವಿ.ಷ ಏರುತ್ತದೆ ಆದರೆ ವಿಷಜಂತುವೆ ಆಗಿರುವ ಜರಿ ಕಚ್ಚಿದಾಗ ಕೂಡ ವಿ ಷ ಏರುತ್ತದೆ ಆದರೆ ಜೆರಿ ಯ ವಿಷ ಅಷ್ಟೊಂದು ತೀವ್ರವಾಗಿರುವುದಿಲ್ಲ ಇದು ನೋವುಂಟು ಮಾಡುತ್ತದೆ ಹೊರತು ಪ್ರಾಣಕ್ಕೆ ಯಾವುದೇ ತರಹದ ಅಪಾಯ ಇರುವುದಿಲ್ಲ.

ಸ್ನೇಹಿತರೆ ಜರಿ ಅನ್ನೂ ನೋಡಿದ್ದೀರಾ, ಇದು ಮನೆಯೊಳಗೆ ಬಂದರೆ ಲಕ್ಷ್ಮೀದೇವಿ ಬಂದಂಥೆ ಅಂತ ಹಿರಿಯರು ಭಾವಿಸುತ್ತಾರೆ ಮತ್ತು ವಿ..ಷ ಜಂತು ಆಗಿರುವ ಈ ಜರಿ ಮನೆ ಒಳಗೆ ಬಂದಾಗ ಅದನ್ನು ಮನೆಯೊಳಗೆ ಒಡೆದು ಹಾಕಬಾರದು ಅಂತ ಕೂಡ ಹೇಳ್ತಾರೆ. ಆದ್ರೆ ಜರಿ ಕಚ್ಚಿದಾಗ ಮಾತ್ರ ವಿಪರೀತ ನೋವಾಗುತ್ತದೆ ಸುಮಾರು 3 ಗಂಟೆಗಳ ವರೆಗೂ ಆ ನೋವು ಶರೀರದಲ್ಲಿ ಉಳಿಯುತ್ತದೆ ಹಾಗಾಗಿ ಈ ವಿಷ ಜಂತು ಕಡಿತ ಕೆಲವೊಂದು ಪರಿಹಾರಧನ ಮಾಡಲೇ ಬೇಕಿರುತ್ತದೆ ಇಲ್ಲವಾದರೆ ವಿಪರೀತ ಕಾಡುತ್ತದೆ.

ಮೊದಲು ಈ ವಿಷಜಂತು ಕಡಿತದ ಅಂತ ತಿಳಿಯುತ್ತಿದ್ದ ಹಾಗೆ ಬಿಸಿ ನೀರಿನಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು ಈ ರೀತಿ ಮಾಡುವುದರಿಂದ ವಿಷ ಆದಷ್ಟು ಬೇಗ ಇಳಿಯುತ್ತದೆ ಮತ್ತು ಆ ಜಾಗಕ್ಕೆ ಪಟ್ಟಿಯನ್ನು ಕಟ್ಟಬೇಕು. ಹೌದು ಈ ರೀತಿ ಪಟ್ಟಿ ಕಟ್ಟುವುದರಿಂದ ನೋವು ಹೆಚ್ಚು ಸಮಯ ಇರುವುದಿಲ್ಲ ಹಾಗೆ ಆ ವಿಷ ಜಂತು ಕಚ್ಚಿದ ಭಾಗಕ್ಕೆ ಅರಿಶಿಣವನ್ನು ಮೊದಲು ಲೇಪ ಮಾಡಬೇಕು.

ಹೌದು ಯಾವುದೇ ಕೀಟ ಆಗಲಿ ಅಥವಾ ಹುಳ ಆಗಲಿ ಅಥವಾ ವಿಷ ಜಂತು ಆಗಿರಲಿ ಕಡಿದ ಕೂಡಲೇ ಆ ರಕ್ತಸ್ರಾವ ಆಗುತ್ತಿರುವಂತಹ ಭಾಗಕ್ಕೆ ಅರಿಶಿಣವನ್ನು ಹಾಕಿ ಕೂಡಲೇ. ಅರಿಶಿಣ ಸಿಗಲಿಲ್ಲ ಅಂದರೆ ಕೂಡಲೇ ಜೇನುತುಪ್ಪವನ್ನಾದರೂ ಆ ಜಾಗಕ್ಕೆ ಲೇಪ ಮಾಡಬೇಕು. ಈ ರೀತಿ ಮಾಡುವುದರಿಂದ ಆ ಭಾಗ ಭಾವು ಆಗುವುದಿಲ್ಲ ಮತ್ತು ಅರಿಷಿಣ ಅಥವಾ ಜೇನು ತುಪ್ಪವನ್ನು ಹಚ್ಚುವುದರಿಂದ ನೋವು ಆದಷ್ಟು ಬೇಗ ಕಡಿಮೆ ಆಗುತ್ತದೆ.

ಈ ರೀತಿ ವಿಷ ಜಂತು ಕಡಿದ ಕೂಡಲೇ ಅದರಲ್ಲಿಯೂ ಜರಿ ಕಡಿದ ಕೂಡಲೇ ಮನೆಮದ್ದು ಮಾಡಿಕೊಳ್ಳಬೇಕು ಹಾಗೆ ಅರಿಷಿಣ ಅಡುಗೆ ಮನೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಇರುವ ವಸ್ತು ಆಗಿದೆ. ಹಾಗಾಗಿ ಹಿರಿಯರು ರಕ್ತಸ್ರಾವ ಆಗುತ್ತಿದೆ ಅಂದ ಕೂಡಲೇ ಆ ಭಾಗಕ್ಕೆ ಅರಿಶಿಣ ಹಚ್ಚುತ್ತಿದ್ದರು ಮತ್ತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

ಜರಿ ಇದು ವಿಷಜಂತು ಆಗಿದ್ದು ಇದು ಹೆಚ್ಚಾಗಿ ಹೆಚ್ಚು ನೀರಿರುವ ಪ್ರದೇಶದಲ್ಲಿ ಹೆಚ್ಚು ತಂಡಿ ಇರುವ ಪ್ರದೇಶದಲ್ಲಿ ಕಾಣ ಸಿಗುತ್ತದೆ ಹಾಗೆ ಸಣ್ಣಪುಟ್ಟ ಜಂತುಗಳನ್ನು ಹುಳುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಈ ಜರಿ ನೀರಿರುವ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಹಾಗೂ ಕತ್ತಲು ಸಮಯದಲ್ಲಿ ಕೊಳಚೆ ಪ್ರದೇಶಗಳಲ್ಲಿ ಈ ವಿಷಜಂತುವನ್ನು ನಾವು ಕಾಣಬಹುದು ಮತ್ತು ಅಂದಿನ ಕಾಲದಲ್ಲಿ ಯಾವುದೇ ತರಹದ ವಿಷಜಂತು ಮನೆಯೊಳಗೆ ಬರಬಾರದು ಎಂದು ಮನೆಯ ಹೊಸ್ತಿಲಿಗೆ ಅರಿಶಿಣ ಲೇಪನ ಮಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಪದ್ಧತಿಯೆಲ್ಲ ಕಡಿಮೆ ಆಗಿದೆ.

ಹಾಗಾಗಿಯೇ ಮನೆಯೊಳಗೆ ಯಾವ ವಿಷಜಂತು ಬಂದರು ಗೊತ್ತಾಗುವುದಿಲ್ಲ ಹಾಗೆ ಮಳೆಗಾಲದ ಸಮಯದಲ್ಲಿ ಆದಷ್ಟು ಎಚ್ಚರವಾಗಿರಿ ಮನೆಯನ್ನು ವಾರಕೊಮ್ಮೆಯಾದರೂ ಸ್ವಚ್ಛ ಮಾಡುತ್ತಿರಿ ಮತ್ತು ಅತಿ ಹೆಚ್ಚು ನೀರು ಇರುವ ಪ್ರದೇಶದಲ್ಲಿ ಕೂಡ ಆದಷ್ಟು ನೋಡಿ ಕೊಂಡು ಓಡಾಡುವುದು ಒಳ್ಳೆಯದು, ಮನೆಯ ಕಿಟಕಿಯ ಬಳಿ ಆದಷ್ಟು ನಶ್ಯ ಗುಳಿಗೆ ಅನ್ನು ಇಡುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಮನೆಯೊಳಗೆ ಬರುವ ವಿಷಜಂತುಗಳು ಕಡಿಮೆಯಾಗುತ್ತದೆ.