ಅಚಾನಕ್ಕಾಗಿ ಕಾಗೆ ನಿಮ್ಮ ಮನೆ ಮೇಲೆ ಬಂದು ಕೂತು ಸ್ವಲ್ಪ ಸಮಯ ಕಾ ಕಾ ಅಂತ ಕೂಗಿದರೆ ಏನರ್ಥ ಗೊತ್ತ … ಅಷ್ಟಕ್ಕೂ ಕಾಗೆಗಳು ಯಾವ ಸೂಚನೆಯನ್ನ ನೀಡುತ್ತವೆ ಗೊತ್ತ …

451

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮಲ್ಲಿ ಎಷ್ಟೋ ಜನರಿಗೆ ನಮ್ಮ ಹಿಂದೂ ಸಂಪ್ರದಾಯದ ಹಲವು ಪದ್ದತಿಗಳ ಕುರಿತು ಅರಿವು ಇಲ್ಲ ಹಾಗೆ ಕೆಲವೊಂದು ಬಾರಿ ಕೆಲವೆಡೆ ಯಾರಾದರೂ ಮಾತನಾಡುವಾಗ ಬಾಯ್ಮಾತಿನಲ್ಲಿ ಕೆಲವೊಂದು ಪದ್ಧತಿಗಳ ಬಗ್ಗೆ ನಾವು ಕೇಳಿರುತ್ತೇವೆ ಹಾಗೆ ಮನೆಯ ಮುಂದೆ ಕಾಗೆ ಕೂಗಿದಾಗ ಅದನ್ನು ಜನರು ಏನೆಂದು ಭಾವಿಸುತ್ತಾರೆ ಅಂದರೆ ಇವತ್ತು ಮನೆಗೆ ನೆಂಟರು ಬರುತ್ತಾರೆ ಎಂಬುದಾಗಿ ಅದನ್ನು ಪರಿಗಣಿಸುತ್ತಾರೆ ಹಾಗೆ ಮನೆಯ ಬಳಿ ಕಾಗೆ ಏನಾದರೂ ಕೂಗುತ್ತಿದ್ದರೆ ಎಷ್ಟು ಕೂಗುತ್ತಿರು ಯಾವ ನೆಂಟರನ್ನು ಕರೆಯುತ್ತಿದ್ದೀಯ ಅಂತ ಕೂಡ ಹೇಳುವುದನ್ನ ನೋಡಿರುತ್ತೀರ ಅಲ್ವಾ ಈ ಎಲ್ಲ ಮಾತುಗಳು ಹಳ್ಳಿಮಂದಿಗೆ ಚೆನ್ನಾಗಿಯೇ ಪರಿಚಯವಿರುತ್ತದೆ ಆದರೆ ಪೇಟೆ ಮಂದಿಗೆ ಇದರ ಕುರಿತು ಅಷ್ಟಾಗಿ ಪರಿಚಯವೇ ಇರುವುದಿಲ್ಲ ಹಾಗಾದರೆ ಈ ಕುರಿತು ನಿಮಗೆ ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಅಂದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ಯಾಕೆ ಮನೆ ಮುಂದೆ ಕಾಗಿ ಕೂಗಿದಾಗ ಹಿರಿಯರು ಈ ರೀತಿ ಹೇಳುತ್ತಿದ್ದರು ಅಂತ.

ಹೌದು ಸ್ನೇಹಿತರ ಇದಕ್ಕೂ ಕೂಡ ಕಾರಣವಿದೆ ಆ ಕಾರಣವನ್ನು ನಾವು ತಿಳಿಯಬೇಕಿದೆ ಆದರೆ ಇವತ್ತಿನ ದಿವಸಗಳಲ್ಲಿಯೇ ಮನೆಯಲ್ಲಿ ಹಿರಿಯರು ಇಲ್ಲ ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಯವರಿಗೆ ಇದರ ಪರಿಚಯವೇ ಇಲ್ಲದಂತೆ ಆಗುತ್ತಾ ಇದೆ. ಹೌದು ಮನೆಯ ಮುಂದೆ ಕಾಗೆ ಕೂಗುವಾಗ ಅದನ್ನು ಕುರಿತು ಮನೆಯಲ್ಲಿರುವ ಗುರು ಹಿರಿಯರು ಇವತ್ತು ಯಾರೋ ನೆಂಟರು ಬರುತ್ತಾರೆ ಅಂತ ಹೇಳುತ್ತಿದ್ದರು ಇದಕ್ಕೆ ಕಾರಣವೇನು ಅಂದರೆ ಅಂದಿನ ಕಾಲದಲ್ಲಿ ಇವತ್ತಿನ ದಿವಸ ಗಳ ರೀತಿ ತಂತ್ರಜ್ಞಾನ ಇರಲಿಲ್ಲ ಫೋನು ಮೊಬೈಲು ಪೋಸ್ಟ್ ಇಂತಹ ವ್ಯವಸ್ಥೆಗಳು ಇರುತ್ತಿರಲಿಲ್ಲ.

ಆದರೆ ಕೆಲವೊಂದು ವಿಚಾರಗಳನ್ನು ಮುಟ್ಟಿಸುವುದಕ್ಕಾಗಿ ಕೆಲವೊಂದು ಸಂದೇಶಗಳನ್ನು ರವಾನೆ ಮಾಡಿಕೊಳ್ಳುವುದಕ್ಕಾಗಿ ಮುಖ್ಯ ವಿಚಾರವನ್ನು ತಿಳಿಸುವುದಕ್ಕಾಗಿ ಪೂರ್ವಜರು ಪ್ರಾಣಿಗಳ ಮೂಲಕ ಪಕ್ಷಿಗಳ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದರು ಹಾಗೆ ಒಂದೂರಿನಿಂದ ಮತ್ತೊಂದೂರಿಗೆ ಪಕ್ಷಿಗಳು ಹೋದಾಗ ಅಲ್ಲಿ ಹೊಸ ಪಕ್ಷಿಯ ಆಗಮನವಾದಾಗ ಕಾಗೆಗಳು ಅಪರಿಚಿತ ಪಕ್ಷಿ ಬಂದಿದೆ ಅಥವಾ ಬೇರೆ ಊರಿನಿಂದ ಪಕ್ಷಿ ಬಂದಿದೆಯೆಂದು ತಿಳಿದು ಜೋರಾಗಿ ಕೂಗುತ್ತಿರುತ್ತದೆ ಇದನ್ನ ಗಮನಿಸಿದ ಹಿರಿಯರು ಆ ಯಾವುದೋ ಸಂದೇಶ ಬಂದಿದೆ ಯಾವುದೋ ಪಕ್ಷಿ ಬೇರೆ ಊರಿನಿಂದ ಬಂದಿದೆ ಆದ್ದರಿಂದ ಕಾಗೆಗಳು ಈ ರೀತಿ ಕಿರುಚಾಡುತ್ತಾ ಇದೆ ಇವತ್ತೇನೊ ಸಂದೇಶ ಸಿಗುವುದಂತೂ ಖಂಡಿತ ಅಂತ ಹಿರಿಯರು ಹೇಳುತ್ತಿದ್ದರು ಅದೇ ವಿಚಾರ ಪದ್ದತಿಯಾಗಿ ಬದಲಾವಣೆಯಾಗಿ ಮನೆ ಮುಂದೆ ಕಾಗೆ ಕೂಗಿದಾಗ ಮನೆಗೆ ನೆಂಟರು ಬರುತ್ತಾರೆ ಏನೋ ಸಮಾಚಾರ ಇದೆ ಎಂದು ಹೇಳಿಕೊಂಡು ಬರಲಾಗಿತ್ತು ಅದೇ ಪದ್ಧತಿಯನ್ನು ಇವತ್ತಿಗೂ ಜನರು ನಂಬುತ್ತಾರೆ ಅಷ್ಟೇ.

ಇದೊಂದು ಕಡೆಯಾದರೆ ಕಾಗೆಗಳು ಕಪ್ಪು ಯಾಕೆ ಗೊತ್ತಾ ಇದಕ್ಕೂ ಕೂಡ ಕಾರಣವಿದೆ ಹಾಗೆ ಕಪ್ಪು ಕಾಗೆ ಅಶುಭ ಬಿಳಿ ಕಾಗೆ ಶುಭ ಅಂತ ಕೂಡ ಹೇಳುವುದುಂಟು. ಆದರೆ ಬಿಳಿ ಕಾಗೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಅದು ತುಂಬಾ ವಿರಳವಾಗಿರುತ್ತದೆ ಆದರೆ ಕಪ್ಪುಕಾಗೆಯನ್ನೂ ಎಲ್ಲ ಕಡೆ ನೋಡಬಹುದು ಯಾವುದಾದರೂ ಶುಭ ಸಮಾರಂಭಕ್ಕೆ ಹೋಗುವಾಗ ಕಾಗೆ ಕಂಡರೆ ಅದನ್ನು ಆದರೆ ಮುಂಚೆ ಈ ಕಾಗೆಗಳು ನೀಲಿ ಬಣ್ಣದಲ್ಲಿ ಒಮ್ಮೆ ಋಷಿಮುನಿಗಳು ನೀಡಿದ ಶಾಪದಿಂದಾಗಿ ಕಾಗೆಗಳು ಕಪ್ಪಗಾದವು ಅನ್ನುವ ಮಾತಿದೆ.

ಹೌದು ಋಷಿಮುನಿ ಒಮ್ಮೆ ಕಾಗೆಯೊಂದನ್ನು ಕರೆದು ಅದಕ್ಕೆ ಅಮೃತ ಹುಡುಕಿತರುವುದಾಗಿ ತಿಳಿಸಿದ್ದರೂ ಹಾಗೆ ಅಮೃತರಾವ ತರುವಾಗ ಅದನ್ನು ಕುಡಿಯಬಾರದು ಎಂಬ ಷರತ್ತನ್ನು ಕೂಡ ನೀಡಿದ್ದರು ವರ್ಷಾನುಗಟ್ಟಲೆ ಅಮೃತವನ್ನು ಹುಡುಕಿ ಕೊನೆಗೂ ಅಮೃತವನ್ನು ತರುವಾಗ ಕಾಗೆಗೂ ಅತಿ ಆಸೆ ಹುಟ್ಟಿತ್ತು ತಾನು ಸ್ವಲ್ಪ ಅಮೃತವನ್ನು ಕುಡಿದ ಬಿಟ್ಟಿತ್ತು. ಕೊನೆಗೆ ಋಷಿಮುನಿ ಅವರ ಬಳಿ ಬಂದು ಕಾಗೆ ಅಮೃತ ನೀಡಿದಾಗ ಅದರಲ್ಲಿ ಕಾಗೆ ಪಾಲು ತೆಗೆದುಕೊಂಡಿದೆ ಎಂಬ ವಿಚಾರ ತಿಳಿದಾಗ ಋಷಿಮುನಿಗಳು ನಿನಗೂ ದುರಾಸೆ ಹುಟ್ಟಿಬಿಡ್ತ ಎಂದು ಅದಕ್ಕೆ ಶಾಪ ನೀಡುತ್ತಾರೆ ಆ ಕಾಗೆಯನ್ನು ಕಪ್ಪು ಬಣ್ಣದ ನೀರಿಗೆ ಅದ್ದುತ್ತಾರೆ ಅಂದಿನಿಂದ ಕಾಗೆಗಳು ಕಪ್ಪಗಾದವು ಎಂಬ ಮಾತಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಧನ್ಯವಾದ…