Ad
Home ಎಲ್ಲ ನ್ಯೂಸ್ ಅದು ಏನೇ ಆಗ್ಲಿ ನಾನು ಕೇವಲ ಒಂದು ರೂಪಾಯಿಯಿಗೆ ಇಡ್ಲಿಯನ್ನ ಮಾರುತ್ತೇನೆ ಅಂತ ಹೇಳ್ತಿರೋ ಮಹಾತಾಯಿ...

ಅದು ಏನೇ ಆಗ್ಲಿ ನಾನು ಕೇವಲ ಒಂದು ರೂಪಾಯಿಯಿಗೆ ಇಡ್ಲಿಯನ್ನ ಮಾರುತ್ತೇನೆ ಅಂತ ಹೇಳ್ತಿರೋ ಮಹಾತಾಯಿ …ಈ ಅಜ್ಜಿಯ ಪೂರ್ತಿ ಕಥೆ ಕೇಳಿದ್ರೆ ಎಂಥವರಿಗಾದ್ರು ಹೆಮ್ಮೆ ಅನ್ನಿಸುತ್ತದೆ…

ದೇಶ ಕಳೆದ ವರುಷದಿಂದ ಬಹಳ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಹೌದು ಇವತ್ತಿನ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಕೂಡ ತಿಳಿದೇ ಇದೆ. ಜನರು ಅದೆಷ್ಟು ಕಷ್ಟ ಪಡಬೇಕಾಯಿತು ಲಾಕ್ ಡೌನ್ ಇದ್ದ ಸಮಯದಲ್ಲಿ ಅಡುಗೆ ಸಾಮಾನುಗಳನ್ನು ಕೊಂಡು ಕೊಳ್ಳಲು ಸಾಧ್ಯವಾಗದೆ ಜನರು ಒಪ್ಪತ್ತು ಊಟ ಮಾಡಲು ಕೂಡ ಕಷ್ಟಪಡಬೇಕಾಗಿತ್ತು.

ಅಷ್ಟೇ ಅಲ್ಲ ಈ ಸಮಯದಲ್ಲಿ ಅಡುಗೆ ಸಾಮಗ್ರಿಗಳ ಬೆಲೆ ಕೂಡ ಹೆಚ್ಚಾಗಿತ್ತು ಜೊತೆಗೆ ಅಡಿಗೆ ಅನಿಲದ ಬೆಲೆ ಕೂಡ ಹೆಚ್ಚಾಗಿದ್ದು ಈ ಸಮಯದಲ್ಲಿ ಜನರು ಕೆಲಸ ಇಲ್ಲದೆ ಪರದಾಡಬೇಕಾಗಿತ್ತೋ ಹಾಗೆ ಊಟ ಕೂಡ ಪರದಾಡಬೇಕಾಯಿತು ಇಂತಹ ಸಮಯದಲ್ಲಿ ಈ ಅಜ್ಜಿ ಮಾಡುತ್ತ ಇದ್ದ ಕೆಲಸದ ಬಗ್ಗೆ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಅಚ್ಚರಿ ಪಡುತ್ತೀರಾ.

ಹೌದು ಎಂಭತ್ತೈದು ವರ್ಷದ ಅಜ್ಜಿ ಮಾಡುತ್ತಿರುವ ಕೆಲಸ ನೋಡಿ, ಬಂದ ಬಡವರಿಗೆ ಹಸಿದು ಬಂದವರಿಗೆ ಇಡ್ಲಿ ಅನ್ನೂ ಮಾರುತ್ತಾ ತನ್ನ ಹೋಟೆಲ್ ಗೆ ಯಾರೇ ಬಂದರೂ ಕೂಡ ಕೇವಲ ಒಂದು ರೂಪಾಯಿಗೆ ಇಡ್ಲಿ ವಡ ಮಾರುತ್ತಾ ಈ ಅಜ್ಜಿ ಬೆಲೆ ಏರಿಕೆಯಾದರೂ ತಾನು 1ರೂಪಾಯಿಗೆ ಇಡ್ಲಿಯನ್ನು ಮಾರುವುದು ಎಂದು ಇವತ್ತಿಗೂ ಇಡ್ಲಿ ಮಾರುತ್ತಾ ತನ್ನ ಜೀವನವನ್ನು ನಡೆಸುತ್ತಾ ಇದ್ದಾರೆ. ಹೌದು ಈ ಅಜ್ಜಿ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಹಾಗೆ ನೀವು ಕೂಡ ಈ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಮಾನವೀಯತೆ ಎಂಬುದು ಸಮಾಜದಲ್ಲಿ ಇವತ್ತಿಗೂ ಸತ್ತಿಲ್ಲ ಎಂಬುದಕ್ಕೆ ಕೆಲವರು ನಿದರ್ಶನರಾಗಿದ್ದಾರೆ ಅಂಥವರಲ್ಲಿ ಈ ಅಜ್ಜಿ ಕೂಡ ಒಬ್ಬರು ಈ ಅಜ್ಜಿಯ ಹೆಸರು ಕಮಲಮ್ಮ ಎಂದು ಇವರು ತಮಿಳುನಾಡಿಗೆ ಸೇರಿದವರು. ತಮಿಳುನಾಡಿನ ವಡಿವೇಲುಪಾಳ್ಯಂ ಎಂಬ ಗ್ರಾಮದಲ್ಲಿ ಇರುವ ಈ ಅಜ್ಜಿ ಬೆಲೆ ಎಷ್ಟು ಏರಿಕೆ ಆದರೂ ಪರವಾಗಿಲ್ಲ ತಾನು ರೂಪಾಯಿಗೆ ಇಡ್ಲಿ ಅನ್ನೂ ಮಾರುತ್ತೇನೆ ಎಂದು ಲ್ಯಾಕ್ಟೋನ್ ಸಮಯದಲ್ಲಿ ಕೂಡ ಯಾವುದಕ್ಕೂ ಹೆದರದೆ ಅಜ್ಜಿ ಹಸಿದು ಬಂದವರಿಗೆ ಇಡ್ಲಿ ಅನ್ನ ನೀಡುತ್ತಿದ್ದಾರೆ ಅಷ್ಟೇ ಅಲ್ಲ ಇಡ್ಲಿಯ ಜೊತೆಗೆ ಸಾರು ಕೊಡುತ್ತಾರೆ ಕಮಲಥಾಲ್ ಅಜ್ಜಿ ಅವರು.

ತಾನು ಮಾಡುವ ಕೆಲಸಕ್ಕೆ ಕೆಲವರು ಬಹಳ ಸಹಾಯ ಮಾಡುತ್ತಾರೆ ಮತ್ತು ಅವರು ತಂದುಕೊಟ್ಟ ತರಕಾರಿ ಸಾರು ಮಾಡುವುದಕ್ಕೆ ಸಹಾಯವಾಗುತ್ತದೆ, ಅವರಿವರು ಸ್ವಲ್ಪ ಸಹಾಯ ಮಾಡ್ತಾರೆ, ಜೊತೆಗೆ ಇವತ್ತಿನ ದಿವಸದಲ್ಲಿ ಉದ್ದಿನಬೇಳೆ ಹಾಗೂ ಇಡ್ಲಿಗೆ ಬೇಕಾಗಿರುವ ಸಾಮಗ್ರಿಗಳು ಬೆಲೆ ಏರಿಕೆ ಆಗಿದ್ದರೂ ಕೂಡ ನಾನು ಬಡವರಿಗೆ 1ರೂಪಾಯಿಗೆ ಇಡ್ಲಿ ಅನ್ನೂ ಮಾರುತ್ತೇನೆ ಎಂದು ಅಜ್ಜಿ,

ತಮ್ಮ ಈ ವಯಸ್ಸಿನಲ್ಲಿಯೂ ಕೂಡಾ ಸಮಾಜಸೇವೆ ಮಾಡುತ್ತಿದ್ದಾರೆ, ಹಾಗೂ ತಮ್ಮ ಸ್ವಾರ್ಥ ನೋಡಿಕೊಳ್ಳದೇ ಯಾವುದೇ ಲಾಭ ಪಡೆಯದೆ ಅಜ್ಜಿ ಹೋಟೆಲ್ ನಡೆಸುತ್ತಾ ಇದ್ದಾರೆ ಇಂಥವರ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಬೇಕು ಇಂಥವರನ್ನ ನಿದರ್ಶನವಾಗಿ ಇಟ್ಟುಕೊಂಡು ಜೀವನದಲ್ಲಿ ಬೆಳೆಯಬೇಕು ಏನಂತಿರ ಫ್ರೆಂಡ್ಸ್ ಧನ್ಯವಾದ.

Exit mobile version