ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತವಾಗಿಯೂ ಇದ್ದೇ ಇರುತ್ತದೆ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡರು ದೇವರ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಆ ವ್ಯಕ್ತಿ ಸಾಯುವುದಕ್ಕಿಂತ ಮೊದಲು ಅಥವಾ ಸತ್ತ ಮೇಲೆಯಾದರೂ ತಾನು ಮಾಡಿದ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇಬೇಕು ಅದೇ ಸೃಷ್ಟಿಯ ನಿಯಮವಾಗಿದೆ ಹಾಗಾದರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಇಂಟರೆಸ್ಟಿಂಗ್ ಆದಂತಹ ವಿಚಾರದ ಬಗ್ಗೆ ತಿಳಿಸಿಕೊಡಲು ಇಚ್ಛಿಸುತ್ತೇನೆ .ಆ ಒಂದು ಮಾಹಿತಿ ಏನು ಅಂದರೆ ಕಾನೂನಿನ ವಶಕ್ಕೆ ತೆಗೆದುಕೊಂಡ ಅಪರಾಧಿಗಳಿಗೆ ಯಾಕೆ ಕಪ್ಪು ಬಟ್ಟೆಯಿಂದ ಮುಖವನ್ನು ಮುಚ್ಚಿರುತ್ತಾರೆ ಈ ಒಂದು ವಿಚಾರದ ಹಿಂದಿರುವ ಕಾರಣಗಳನ್ನು ನಾನು ನಿಮಗೆ ಈ ಒಂದು ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ನಿಮಗೂ ಕೂಡ ಒಂದು ಮಾಹಿತಿ ಉಪಯುಕ್ತವಾಗಿ ಇದ್ದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.
ಹೌದು ನೀವು ನೋಡಿರುತ್ತೀರಾ ಮಾಧ್ಯಮಗಳಲ್ಲಿ ಅಥವಾ ನ್ಯೂಸ್ ಚಾನೆಲ್ ಗಳಲ್ಲಿ ಈ ರೀತಿ ತಪ್ಪು ಮಾಡಿದ ಅಪರಾಧಿಗಳಿಗೆ ಮುಖಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿರುವುದನ್ನು, ತಪ್ಪು ಮಾಡಿದ ವ್ಯಕ್ತಿಗಳನ್ನು ಸಮಾಜಕ್ಕೆ ತೋರಿಸಿ ಅವರಿಗೆ ಅವಮಾನವಾಗುವಂತೆ ಮಾಡಿ ಅವರ ತಪ್ಪಿನ ಅರಿವನ್ನು ಮೂಡಿಸಬೇಕು ಆದರೆ ಪೊಲೀಸರು ಅಥವಾ ಕಾನೂನು ಯಾಕೆ ಈ ರೀತಿ ಅಪರಾಧಿಗಳ ಮುಖವನ್ನು ಮುಚ್ಚಿಡುತ್ತದೆ ಎಂಬುದರ ಹಿಂದೆಯೂ ಕೂಡ ಬಲವಾದ ಕಾರಣಗಳಿವೆ.ಅಂತಹ ಕಾರಣಗಳಲ್ಲಿ ಮೊದಲನೆಯ ಕಾರಣವೇನು ಅಂದರೆ ತಪ್ಪು ಮಾಡಿದಂತಹ ವ್ಯಕ್ತಿಯನ್ನು ಪೊಲೀಸರು ಕರೆದುಕೊಂಡು ಹೋಗುವಾಗ ಆ ವ್ಯಕ್ತಿ ಇನ್ನೂ ಆರೋಪಿಯಾಗಿ ಇರುತ್ತಾನೆ ಅಪರಾಧಿಯಾಗಿ ಇನ್ನೂ ಕೂಡ ಸಾಬೀತು ಆಗಿರುವುದಿಲ್ಲ ಆದ ಕಾರಣ ಪೊಲೀಸರು ಕೂಡಲೇ ಸಮಾಜಕ್ಕಾಗಲೀ ಅಥವಾ ಮಾಧ್ಯಮಗಳಿಗಾಗಲೀ ತಪ್ಪು ಮಾಡಿದ ವ್ಯಕ್ತಿಯ ಮುಖವನ್ನು ನಿಜಾಂಶ ತಿಳಿಯುವವರೆಗೂ ತೋರಿಸುವುದಿಲ್ಲ.
ಕೇಸ್ ಇನ್ವೆಸ್ಟಿಗೇಷನ್ ಆದ ಬಳಿಕ ಆ ವ್ಯಕ್ತಿಯದ್ದೇ ತಪ್ಪು ಎಂದು ತಿಳಿದಾಗಲೇ ಆ ವ್ಯಕ್ತಿಯ ಮುಖವನ್ನು ಮಾಧ್ಯಮಗಳ ಮುಂದೆ ತೋರಿಸಲಾಗುತ್ತದೆ ಅಲ್ಲಿಯವರೆಗೂ ಆ ವ್ಯಕ್ತಿಯ ಮುಖಕ್ಕೆ ಅಂದರೆ ತಪ್ಪು ಮಾಡಿದ ಆರೋಪಿಯ ಮುಖಕ್ಕೆ ಕಪ್ಪು ಬಟ್ಟೆಯಿಂದ ಮುಚ್ಚಲಾಗಿರುತ್ತದೆ.ಆರೋಪಿಗಳ ಮುಖಕ್ಕೆ ಈ ರೀತಿ ಕಪ್ಪು ಬಟ್ಟೆಯನ್ನು ಮುಚ್ಚುವುದರ ಹಿಂದೆ ಇರುವ ಎರಡನೇ ಕಾರಣವೇನು ಎಂದರೆ, ಯಾರು ಕೇಸ್ ಅನ್ನು ದಾಖಲಿಸುತ್ತಾರೋ ಅವರನ್ನು ಇನ್ವೆಸ್ಟಿಗೇಷನ್ ಗಾಗಿ ಕರೆದುಕೊಂಡು ಬರಲಾಗುತ್ತದೆ ಆರೋಪಿಗಳ ಹಾಗೆ ಇರುವಂತಹ ಇನ್ನೂ ಹತ್ತಾರು ಜನರನ್ನು ಕರೆದುಕೊಂಡು ಬಂದು ಕೇಸ್ ಅನ್ನು ಹಾಕಿರುವವರ ಮುಂದೆ ನಿಲ್ಲಿಸಲಾಗುತ್ತದೆ ಮತ್ತು ಆರೋಪಿಗಳ ಮುಖಕ್ಕೆ ಕಪ್ಪು ಬಟ್ಟೆಯನ್ನು ಮುಚ್ಚಲಾಗುತ್ತದೆ ನಂತರ ಕೇಸ್ ಹಾಕಿದವರು ತಪ್ಪು ಮಾಡಿದವನನ್ನು ಕಂಡುಹಿಡಿಯಬೇಕು ನಂತರವೇ ಕೇಸ್ ಮುಂದಕ್ಕೆ ಹೋಗುವುದು.
ಇದನ್ನು ಮಾಡದೇ ಪೊಲೀಸರು ನೇರವಾಗಿ ಆರೋಪಿಗಳ ಮುಖವನ್ನು ಕೇಸ್ ಹಾಕಿದವರಿಗೆ ತೋರಿಸಿ ಇನ್ವೆಸ್ಟಿಕೇಷನ್ ಅನ್ನು ಮಾಡಿದರೆ ಆರೋಪಿಯ ಪರ ವಾದ ಮಾಡುವ ವಕೀಲರು ಈ ಒಂದು ವಿಚಾರವನ್ನು ಕೋರ್ಟ್ ನಲ್ಲಿ ತಿಳಿಸಿ ಆ ಕೇಸನ್ನು ವಜಾ ಮಾಡುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತದೆ ಹಾಗೆ ಇಂತಹ ಕೇಸ್ ವಜಾ ಕೂಡ ಆಗಬಹುದು .ಈ ಕಾರಣಗಳಿಂದಲೇ ಪೊಲೀಸರು ತಪ್ಪು ಮಾಡಿದಂತಹ ವ್ಯಕ್ತಿ ಅಪರಾಧಿ ಎಂದು ತಿಳಿದು ಬರುವವರೆಗೂ ಯಾರಿಗೇ ಆಗಲಿ ಮಾಧ್ಯಮಗಳಿಗೆ ಆಗಲಿ ಆರೋಪಿಯ ಮುಖವನ್ನು ತೋರಿಸುವುದಿಲ್ಲ ಅವರ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗಿರುತ್ತದೆ. ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.