ಭೂ ತಾಯಿಗೆ ಬಸಿದ ಬಯಕೆ ತೀರಿಸುವ ದಿನ ಎಂದು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಯನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ. ಹಸಿರು ಹೊದ್ದ ಹೊಲ ಗದ್ದೆಗಳಿಗೆ ಅನ್ನದಾತರು ತೆರಳಿ ವೈವಿಧ್ಯಮಯ ಖಾದ್ಯಗಳನ್ನು ನೈವೇದ್ಯ ಮಾಡುವ ಮೂಲಕ ಭೂ ರಮೆಯ ಸೀಮಂತವನ್ನು ಸಂಭ್ರಮದಿಂದ ದ ಆಚರಿಸುವುದು ರೂಢಿಯಲ್ಲಿದೆ.
ಒಕ್ಕಲಿಗರು, ಮಡಿವಾಳರು, ಬ್ರಾಹ್ಮಣರು ಸೇರಿದಂತೆ ಎಲ್ಲ ರೈತಾಪಿ ವರ್ಗದಲ್ಲಿ ಇಂದು ಭೂಮಿಗೆ ಪೂಜೆ ಸಲ್ಲಿಸುವ ರೂಢಿಯಿದ್ದರೂ ಕೃಷಿ ಕಾಯಕವೇ ಜೀವನ ಮಾರ್ಗವಾಗಿರುವ ದೀವರು ಜನಾಂಗದಲ್ಲಿ ಈ ಹಬ್ಬ ವಿಶಿಷ್ಟ ಆಚರಣೆಯಾಗಿದೆ. ಭೂಮಿ ಹುಣಿಮೆ ಇನ್ನೂ ವಾರವಿರುವಾಗಲೇ ಕೃಷಿಕ ಮಹಿಳೆಯರು ನಾನಾ ಸಿದ್ಧತೆಯಲ್ಲಿ ತೊಡಗುತ್ತಾರೆ. ಬಿರು ಅಥವಾ ಬೆತ್ತದ ಒಂದು ದೊಡ್ಡ ಒಂದು ಸಣ್ಣ ಬುಟ್ಟಿಗೆ ಒಂದು ಪದರ ಗೋವಿನ ಸಗಳೆ ಬಳದು ಒಣಗಿಸಿ, ನಂತರ ಜೇಡಿ ಮತ್ತು ಕೆಮ್ಮು ಬಳಿಯಲಾಗುತ್ತದೆ. ನಂತರ ಅಕ್ಕಿ ರುಬ್ಬಿ ತಯಾರಿಸಿದ ಬಿಳಿ ಬಣ್ಣದಿಂದ ಚಿತ್ತಾರ ಬಿಡಿಸುತ್ತಾರೆ. ‘ಭೂಮಣ್ಣಿ ಬುಟ್ಟಿ’ಯೇ
ಹಬ್ಬದಲ್ಲಿ ಪ್ರಧಾನ. ಇನ್ನು ಹಚ್ಚಂಬಲಿ ಎಂಬ ವಿಶಿಷ್ಟವಾದ, ಹಬ್ಬದ ಹಿಂದಿನ ರಾತ್ರಿ ರೈತರ ಮನೆಯ ಮಹಿಳೆಯರು ಭೂಮಿ ತಾಯಿಯ ಮಡಿಲು ತುಂಬುವ ವಿಧವಿಧದ ಹಡುತ್ತಾರೆ. ಅಮಟೆಕಾಯಿ, ಹಾಗಲಕಾಯಿ, ಹಲವ ಸೊಪ್ಪು, ಕಾಕಪೊಟ್ಟು ಸೊಪ್ಪು, ತೊಂಡೆಸೊಪ್ಪು, ನುಗ್ಗೆಸೊಪ್ಪು, ಬದನೆ ಸೊಪ್ಪು, ಕೆಸವಿನ ಸೊಪ್ಪು ಮೊದಲಾದ ಬಗೆಯ ಸೊಪ್ಪುಗಳನ್ನು ಉಪ್ಪು ಹಾಕದೆ ಮಣ್ಣಿನ ಗಡಿಗೆಯಲ್ಲಿ ಬೇಯಿಸಿ, ಹೆಚ್ಚು ಎಂಬ ವಿಶಿಷ್ಟವಾದ ತಯಾರಿಸಲಾಗುತ್ತದೆ. – ದರಿದ ಭೂಮಿ ತಾಯಿಗೆ ನಂಚಾಗಬಾರದೆಂದು ನೀಡುವ ಔಷಧಿ. ಮಡಿಯಾದ ಮನೆಯ ಯಜಮಾನ ಸೂರ್ಯ ಹುಟ್ಟುವುದಕ್ಕಿಂತ ಮೊದಲೇ ಗದ್ದೆಗೆ ತೆರಳಿ ಹದಂಬ ಬೀರುವ ಇದು ಗರ್ಭ
ಸಂಪ್ರದಾಯ ಬಹಳ ವಿಶೇಷವಾದುದು. ಸೌತೆಕಾಯಿ ಕೊಟ್ಟೆ ಕಡಬು, ಚಿತ್ರಾನ್ನ, ಮೊಸಜನ ಬುತ್ತಿ ಉಂಡೆ, ಅದುಟೆಕಾಯಿ ಸೀಕಲು, ಹೋಳಿಗೆ, ಅನ್ನ,ಪಾಯಸ, ಉಕ್ಕಲಕ, ಭೂಮಿ ಹುಣ್ಣಿಮೆಯ ವಿಶೇಷಸಾಧ್ಯವಾಗಿದೆ. ಮನೆ ಮಂದಿಯೆಲ್ಲ ಹೊಲ, ಗದ್ದೆಗಳಿಗೆ ತೆರಳುತ್ತಾರೆ. ಗದ್ದೆಯಲ್ಲಿ ತಳಿರು ತೋರಣಗಳ ಮಂಟಪ ಕಟ್ಟಲಾಗುತ್ತದೆ. ಅದರಲ್ಲಿ ಹೊಡೆ ತುಂಬಿದ ಭತ್ತದ ಸಸಿ ಬುಡದಲ್ಲಿಗ ಬಳೆ, ಹೊಸ ಬಟ್ಟೆ, ನೂಲು ಇಟ್ಟು, ಆಭರಣ ತ, ಭೂಮಿ ತಾಯಿಯ ಪೂಜೆ ಮಾಡುತ್ತಾರೆ. ಈ ಸಂದರ್ಭ ಗೃಹಿಣಿ ತನ್ನ ಮಾಂಗಲ್ಯ ಸರವನ್ನು ಭೂ ತಾಯಿಗೆ ತೊಡಿಸುತ್ತಾನೆ. ಪೂಜೆ ನಂತರ ಹೀಗೆಂದು ಮೂರು ಕುಡಿ ಬಾಳೆಯಲ್ಲಿ ಪಡೆ ಭೂಮಿಗೆ ಬೀರಲಾಗುತ್ತದೆ. ಎರಡು ಕೊಟ್ಟೆ ಕಡುಬನ್ನು ಎರಡು ಅಡಿ ಆಳದ ಗುಂಡಿ ತೋಡಿ ಹುಗಿಯಲಾಗುತ್ತದೆ. ನಂತರ ಮನೆ ಮಂದಿಯೆಲ್ಲರೂ ಗದ್ದೆಯ ಬದುವಲ್ಲಿ ಕೂತು ಉಣುತ್ತಾರೆ. ಇಂತಹ ಹಬ್ಬ ಇಂದಿಗೂ ಮಲೆನಾಡಿನಲ್ಲಿ ಸಾಂಪ್ರದಾಯಿಕ ಆಚರಣೆಯಾಗಿ ಉಳಿದಿರುವುದು ವಿಶೇಷ.
ಈ ಹಬ್ಬವನ್ನು ಹೆಚ್ಚಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬರು ಆಚರಣೆ ಮಾಡುತ್ತಾರೆ ಹೀಗೆ ಆಚರಣೆ ಮಾಡುವಂತಹ ಸಂದರ್ಭದಲ್ಲಿ ನಗರದಲ್ಲಿ ಯಾರ್ಯಾರು ಇದ್ದಾರೆ ಹಾಕು ಯಾರ ಹತ್ತಿರ ಭೂಮಿ ಇದೆ ಅವರು ಯಾವುದೇ ರೀತಿಯಾಗಿ ನಮ್ಮಲ್ಲಿರುವಂತಹ ಭೂಮಿಯನ್ನು ಪೂಜೆ ಮಾಡದೆ ಇರುವುದಿಲ್ಲ ಅದಕ್ಕೆ ಸಕಾಲ ಆಗಿರುವಂತಹ ಸಮಯ ಎಂದರೇನು ಭೂಮಿಹುಣ್ಣಿಮೆ ಎನ್ನುವಂತಹ ಸಮಯ. ತನಗೆ ಅನ್ನಭಾಗ್ಯ ಕೊಟ್ಟಿರುವಂತಹ ಭೂಮಿಯನ್ನು ಶೃಂಗಾರ ಮಾಡಿ ಭೂಮಿತಾಯಿಯನ್ನು ಪ್ರೀತಿಯಿಂದ ಪೂಜೆ ಮಾಡುವಂತಹ ಒಂದು ಏಕೈಕ ಪೂಜೆಯಂತೆ ನಾವು ಹೇಳಬಹುದು.ಈ ಸಂಭ್ರಮವನ್ನು ಕೇವಲ ಕರ್ನಾಟಕದಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಬಿಟ್ಟರೆ ಪ್ರಪಂಚದ ಯಾವ ಮೂಲೆಯಲ್ಲೂ ಕೂಡ ಈ ರೀತಿಯಾಗಿ ಭೂಮಿಯನ್ನು ಪೂಜೆ ಮಾಡುವಂತಹ ಯಾವುದೇ ಒಂದು ಆಚರಣೆಯನ್ನು ಕೂಡ ಕಂಡು ಬರುವುದಿಲ್ಲ.ನಿಜವಾಗ್ಲೂ ನಾನು ಹುಟ್ಟಿದ ಮೇಲೆ ಅದರಲ್ಲೂ ನಾವು ಹುಟ್ಟಿದಂತಹ ಈ ಭೂಮಿಯನ್ನು ನಾವು ಬಳಸಿಕೊಳ್ಳುವುದಕ್ಕೆ ಇದು ಒಂದು ಸದಾವಕಾಶ ಅಂತ ನಾವು ಹೇಳಬಹುದು.
ನೀವು ಶಿವಮೊಗ್ಗ ಜಿಲ್ಲೆಗೆ ಅದರಲ್ಲೂ ಸಾಗರ ಅಥವಾ ತೀರ್ಥಹಳ್ಳಿಯ ಕಡೆ ಹೋದರೆ ನಿಮಗೆ ಎಲ್ಲೂ ಕೂಡ ಬರಡುಭೂಮಿ ಕಂಡುಬರುವುದಿಲ್ಲ ಎಲ್ಲಿ ನೋಡಿದರೂ ಹಸಿರು ಆಗಿರುವಂತಹ ಪ್ರದೇಶ ಹಾಗೂ ಎಲ್ಲಿ ನೋಡಿದರೂ ಕೂಡ ಅಡಿಕೆ ಮರಗಳು ಹೀಗೆ ಎಲ್ಲೆಲ್ಲೂ ಕಣ್ಣುಹಾಯಿಸಿದರು ಕೂಡ ಹಸಿರ್ ಆಗಿರುವಂತಹ ಹಚ್ಚಹಸಿರು ತೋರಣಗಳು ನಿಮಗೆ ಎಲ್ಲೆಲ್ಲೂ ಕಂಡುಬರುತ್ತವೆ ಹೀಗೆಭೂಮಿಯನ್ನು ಸ್ವರ್ಗ ಮಾಡಿಕೊಂಡಿರುವ ಅಂತಹ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯಾಗಿ ಜನರು ಸಂಭ್ರಮವನ್ನು ಆಚರಣೆ ಮಾಡುತ್ತಾರೆ ಹೀಗೆ ಆ ಸಂದರ್ಭದಲ್ಲಿ ಎಲ್ಲರೂ ಪೂಜೆಯನ್ನು ಮಾಡಿ ಭೂಮಿಗೆ ನಮಸ್ಕರಿಸಿ ತದನಂತರ ಮನೆಗೆ ಬಂದು ಎಲ್ಲರೂ ಒಟ್ಟಾಗಿ ಊಟ ಮಾಡುವಂತಹ ಒಂದು ಸೌಭಾಗ್ಯದ ದಿನ ಅಂತ ನಾವು ಹೇಳಬಹುದು.