ಇಡೀ ಭಾರತದ ತುಂಬಾ ಹೆಸರುವಾಸಿ ಆಗಿರೋ ಈ ವಿಲನ್ ಪ್ರೀತಿಸಿ ಮದುವೆಯಾಗಿದ್ದು ಯಾರನ್ನು ಗೊತ್ತಾ …ನೋಡಿ ಇವರೇ ..

224

80 ಹಾಗೂ 90 ರ ದಶಕದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಯುಗ ಅನ್ನಬಹುದು ಈ ಸಮಯದಲ್ಲಿ ನಟ ಭಯಂಕರ ವಜ್ರಮುನಿ ಸೇರಿದಂತೆ ಸುಧೀರ್ ಸುಂದರ್ ಕೃಷ್ಣ ಅರಸ್ ತೂಗುದೀಪ ಶ್ರೀನಿವಾಸ್ ಟೈಗರ್ ಪ್ರಭಾಕರ್ ದೀರೇಂದ್ರ ಗೋಪಾಲ್ ಹೀಗೆ ಸಾಕಷ್ಟು ಖಳನಾಯಕರು ನಕಾರಾತ್ಮಕ ಪಾತ್ರಗಳನ್ನು ಬಹಳ ಅದ್ಭುತವಾಗಿ ಮಾಡಿ ಸೈ ಎನಿಸಿಕೊಂಡಿದ್ದರು ಹಾಗೂ ಚಲನಚಿತ್ರಗಳಲ್ಲಿ ಇವರು ನಟರಿಗೆ ಕೊಡುತ್ತಿದ್ದ ಕಿರುಕುಳವನ್ನು ಕಂಡು ಪ್ರೇಕ್ಷಕರು ಕೂಡ ಕೋಪ ಮಾಡಿಕೊಳ್ಳುತ್ತಿದ್ದರೂ ಅವರ ರಕ್ತ ಹೆಪ್ಪು ಕಟ್ಟುತ್ತಿತ್ತು ಅಂತಹ ಅಭಿನಯವನ್ನ ಮಾಡುತ್ತಿದ್ದರೂ ಈ ಕಲಾವಿದರುಗಳು.

ಆದರೆ ಇವತ್ತಿಗೆ ಈ ಕಲಾವಿದರುಗಳು ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಇವರ ನಟನೆ ಮೂಲಕ ಇವರ ಅಭಿನಯದ ಮೂಲಕ ಸದಾ ನೆನಪಿನಲ್ಲಿರುತ್ತಾರೆ. ಸದ್ಯ ಇದೀಗ ನಾವು ಇಂದಿನ ವಿಚಾರದಲ್ಲಿ ದಕ್ಷಿಣ ಭಾರತದ ಖ್ಯಾತ ಖಳನಟರಾಗಿರುವ ಪ್ರದೀಪ್ ರಾವತ್ ಅವರ ಕುರಿತು ಮಾಹಿತಿ ತಿಳಿಸಲಿದ್ದೇವೆ ಖ್ಯಾತ ಖಳ ನಾಯಕ ರಾಗಿರುವ ಪ್ರದೀಪ್ ರಾವತ್ ಅವರು ಜನವರಿ 211952ರಲ್ಲಿ ಜನಿಸಿದರು ಇವರು ಮೂಲತಃ ಜಬಲಪುರ್ ನವರಾಗಿದ್ದಾರೆ ಇವರು ತೆಲುಗು ಹಿಂದಿ ತಮಿಳು ಜೊತೆಗೆ ಕನ್ನಡ ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ ಸಹ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲ ಭೋಜಪುರಿ ಭಾಷೆಯಲ್ಲಿ ನಟಿಸಿರುವ ಇವರು ಭಾರತ ದೇಶದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದಾರೆ.

ಅದರಲ್ಲೂ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರದೀಪ್ ರಾವತ್ ಅವರು, 1985 ರಂದು ಹಿಂದಿಯ ಐತ್ ಬಾರ್ ಎಂಬ ಚಿತ್ರದ ಮೂಲಕ ತಮ್ಮ ಸಿನಿ ಜೀವನ ಪ್ರಾರಂಭಿಸಿದರು. ತೆಲುಗು ಚಿತ್ರರಂಗದಲ್ಲಿ 2004 ರಲ್ಲಿ ನಿತಿನ್ ಅವರ ನಟನೆಯ ಸೈ ಎಂಬ ಚಲನ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟ ಅವರು, ಇದರಲ್ಲಿ ಭಿಕ್ಷು ಯಾದವ್ ಎಂಬ ಪಾತ್ರವನ್ನು ಮಾಡಿ ಅತ್ಯುತ್ತಮ ಖಳನಾಯಕ ಅವಾರ್ಡ್ ಕೂಡ ಮುಡಿಗೇರಿಸಿಕೊಂಡರು. ನಮ್ಮ ಸಣ್ಣದೊಂದು ಪ್ರದೀಪ್ ರಾವತ್ ಅವರು ಅಭಿನಯ ಮಾಡಿರುವ ಸಿನಿಮಾ ಕುರಿತು ಹೇಳುವುದಾದರೆ ಇವರು 2007ರಲ್ಲಿ ಪರೋಡಿ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಬಂದರೂ ನಂತರ ಇವರು ಗಜ ಅಭಯ್ ಬಚ್ಚನ್ ಎಲೆಕ್ಷನ್ ಶಿವಲಿಂಗ ಲಕ್ಷ್ಮಣ ತ್ರಿಶೂಲ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಪ್ರದೀಪ್ ರಾವತ್ ಅವರು ಕನ್ನಡದಲ್ಲಿ 8 ಚಿತ್ರಗಳಲ್ಲಿ ನಟಿಸಿದ್ದು ಮಲಯಾಳಂನಲ್ಲಿ 4 ಇಂಗ್ಲಿಷ್ ಒರಿಯಾ ಬೆಂಗಾಲಿ ಭೋಜ್ ಪುರಿ ಭಾಷೆಗಳಲ್ಲಿ ಒಂದೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರದೀಪ್ ರಾವತ್ ಅವರು ಕೇವಲ ಚಲನಚಿತ್ರರಂಗದಲ್ಲಿ ಮಾತ್ರ ಅಲ್ಲದೆ ಹಿಂದಿ ಭಾಷೆಯಲ್ಲಿ ಸಹ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ ಹೌದು ಕಿರುತೆರೆ ರಲ್ಲಿಯೂ ಸಹ ಅಪಾರ ಯಶಸ್ಸು ಗಳಿಸಿರುವ ಇವರು ತಮಿಳಿನಲ್ಲಿ ಸೂರ್ಯ ಅವರ ನಟನೆಯ ಗಜಿನಿ ಎಂಬ ಚಲನ ಚಿತ್ರದಲ್ಲಿ ಡಬಲ್ ರೋಲ್ ಪಾತ್ರಗಳಲ್ಲಿ ಅಭಿನಯ ಮಾಡಿದ್ದು ಈ ಸಿನೆಮಾದಿಂದ ಪ್ರದೀಪ್ ರಾವತ್ ಅವರಿಗೆ ಅಪಾರ ಯಶಸ್ಸು ಜನಪ್ರಿಯತೆ ತಂದುಕೊಟ್ಟಿತು ಈ ಸಿನೆಮಾ. ಇನ್ನು ಪ್ರದೀಪ್ ರಾವತ್ ಅವರು ಕಲ್ಯಾಣಿ ರಾವತ್ ಎಂಬು ವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರಿಗೆ ವಿಕ್ರಂ ರಾವತ್ ಮತ್ತು ಸಿಂಗ್ ರಾವತ್ ಎಂಬ ಇಬ್ಬರು ಗಂಡುಮಕ್ಕಳು ಸಹ ಇದ್ದಾರೆ ಹಾಗೂ ಇವರ ಕುಟುಂಬದ ಫೋಟೋ ಅನ್ನು ನೀವು ಇಂದಿನ ಈ ಲೇಖನದಲ್ಲಿ ಕಾಣಬಹುದು. ಇನ್ನೂ ಪ್ರದೀಪ್ ರಾವತ್ ಅವರ ಫಿಸಿಕ್ ನೋಡಿದರೆ ತಿಳಿಯುತ್ತದೆ ಇವರು ಖಳನಾಯಕನ ಪಾತ್ರಕ್ಕೆ ಸೂಕ್ತ ಎಂದು. ಹಾಗಾದರೆ ಹಿಂದಿನ ಲೇಖನದಲ್ಲಿ ತಿಳಿಸಿಕೊಟ್ಟ ಈ ಖಳನಾಯಕ ಆಗಿರುವ ಪ್ರದೀಪ್ ರಾವತ್ ಅವರ ಕುರಿತು ಹಾಗೂ ಇವರ ಅಭಿನಯದ ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಶುಭಾ ದಿನ ಧನ್ಯವಾದ.