ಅಂಜೂರದ ಹಣ್ಣಿನ ಮಹತ್ವ ಅಪಾರವಾದದ್ದು ಇದನ್ನು ಯಾವ ಸಮಸ್ಯೆಗಳಿಗೆ ಬಳಸ್ತಾರೆ ಗೊತ್ತಾ ಇದನ್ನ ಹೇಗೆ ತಿನ್ನಬೇಕು ಇದರಿಂದ ಆರೋಗ್ಯಕರ ಲಾಭ ಪಡೆದುಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ…ಅಂಜೂರದ ಹಣ್ಣು ಮೂಲತಃ ಭಾರತ ದೇಶದಲ್ಲಿ ಇದನ್ನು ಬೆಳೆಯದಿದ್ದರೂ ಇತ್ತೀಚಿನ ದಿನಗಳಲ್ಲಿ ಅಂಜೂರದ ಹಣ್ಣನ್ನು ಭಾರತ ದೇಶ ದ ಹಲವು ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಕಪ್ಪು ಮಣ್ಣಿನ ತಂಪು ಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ ಫೈಕಸ್ ಕ್ಯಾರಿಕ ಜಾತಿಗೆ ಸೇರಿರುವ ಈ ಅಂಜೂರ ಈ ಮರವು ಸುಮಾರು 3 ರಿಂದ 5 ಮೀಟರ್ ಬೆಳೆಯುತ್ತದೆ.
ಅಧಿಕ ಪೋಷಕಾಂಶಗಳನ್ನು ಹೊಂದಿರುವ ಅಂಜೂರದ ಹಣ್ಣಿನಲ್ಲಿ ಹೆಚ್ಚಾಗಿ ವಿಟಮಿನ್ ಗಳು ಮಿನರಲ್ ಗಳು ಇವೆ. ಈ ಅಂಜೂರದ ಹಣ್ಣಿನ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.ಹೌದು ಅಂಜೂರದ ಹಣ್ಣು ಇದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ ಅಂದರೆ, ವಿಟಮಿನ್ ಎ ಬಿ ಸಿ ಮತ್ತು ಡಿ ಜೀವಸತ್ವ ಇದೆ ಇದರ ಜೊತೆಗೆ ಕಬ್ಬಿಣದ ಅಂಶ ಕೊಲೀನ್ ಫೋಲೇಟ್ ಮೆಗ್ನೀಷಿಯಂ ಕಾಪರ್ ಇನ್ನು ಇನ್ನಿತರೆ ಖನಿಜಾಂಶಗಳಿವೆ.
ಈ ಅಂಜೂರದ ಹಣ್ಣಿನಲ್ಲಿ ಫೈಬರ್ ಅಂಶ ಕೂಡ ಇರುವುದರಿಂದ ಇದನ್ನು ಮಲಬದ್ದತೆಯಿರುವವರು ಸೇವಿಸಬೇಕು ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.ಅಂಜೂರದ ಹಣ್ಣನ್ನು ಹೇಗೆ ಸೇವಿಸಬೇಕು ಮತ್ತು ಯಾವ ಸಮಯದಲ್ಲಿ ತಿನ್ನಬೇಕು, ಹೌದು ಅಂಜೂರದ ಹಣ್ಣಿನ ಔಷಧೀಯ ಗುಣಗಳ ಪಡೆದುಕೊಳ್ಳಬೇಕು ಅಂದರೆ ಇದನ್ನು ನೆನೆಸಿಟ್ಟು ಸೇವಿಸಬೇಕು ಇದು ಅಧಿಕವಾದರೂ ಆರೋಗ್ಯಕ್ಕೆ ಹಾನಿಕಾರಕ ಹಾಗಾಗಿ ನಿಯಮಿತವಾಗಿ ಅಂದರೆ 1 ರಿಂದ 3 ಹಣ್ಣನ್ನು ಮಾತ್ರ ಪ್ರತಿದಿನ ನೆನೆಸಿಟ್ಟು ತಿನ್ನುತ್ತ ಬರಬೇಕು.
ಅಂಜೂರದ ಹಣ್ಣನ್ನು ತಿನ್ನುತ್ತ ಬರುವುದರಿಂದ ಆಗುವ ಲಾಭಗಳೇನು ಅಂದರೆ ಇದರಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತಹೀನತೆ ಸಮಸ್ಯೆ ಇರುವವರು ಇದನ್ನು ನೆನೆಸಿಟ್ಟು ಖಾಲಿ ಹೊಟ್ಟೆಗೆ ತಿನ್ನುವುದರಿಂದ ರಕ್ತಹೀನತೆ ಪರಿಹಾರವಾಗುತ್ತದೆ.ಮೂತ್ರನಾಳಕ್ಕೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದಲ್ಲಿ ಆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಅಂಜೂರದ ಹಣ್ಣನ್ನು ತಿನ್ನುವುದರಿಂದ.ಅಧಿಕವಾದ ವಿಟಮಿನ್ ಎ ಮತ್ತು ಸಿ ಜೀವಸತ್ವವನ್ನು ಹೊಂದಿರುವ ಅಂಜೂರ ನಿಯಮಿತವಾದ ವಿಟಮಿನ್ ಬಿ ಮತ್ತು ಡಿ ಜೀವಸತ್ವವನ್ನು ಹೊಂದಿದೆ.
ಅಂಜೂರದ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಮತ್ತು ಅಸಿಟಿಕ್ ಆಮ್ಲ ಇರುವುದರಿಂದ ಈ ಹಣ್ಣು ಜೀರ್ಣಕ್ರಿಯೆ ವೃದ್ಧಿ ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಈ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಾ ಬಂದರೆ ಚರ್ಮದ ನಿವಾರಿಸುತ್ತದೆ.ಚರ್ಮ ನೈಸರ್ಗಿಕವಾಗಿ ಹೊಳಪು ಆಗಬೇಕೆಂದರೆ ಹಾಗೂ ರಕ್ತ ಶುದ್ಧಿ ಆಗಬೇಕು ಅಂದರೆ ಈ ಹಣ್ಣನ್ನು ನೆಲೆಸಿತ್ತೋ ತಿನ್ನುತ್ತ ಬನ್ನಿ ಇದರಲ್ಲಿರುವ ವಿಟಮಿನ್ ಸಿ ಜೀವಸತ್ವ ಮತ್ತು ಸಿಟ್ರಿಕ್ ಆಮ್ಲ ತ್ವಚೆಯ ಅಂದವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
ವಿಟಮಿನ್ ಬಿ 6 ಪೋಷಕಾಂಶವನ್ನು ಹೊಂದಿರುವ ಈ ಅಂಜೂರದ ಹಣ್ಣು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ.ಸತುವಿನ ಅಂಶ ವನ್ನು ಹೊಂದಿರುವ ಈ ಅಂಜೂರದ ಹಣ್ಣಿನಲ್ಲಿ ಕಾಪರ್ ಕಬ್ಬಿಣದ ಅಂಶ ಇರುವುದರಿಂದ ಜೊತೆಗೆ ಇದರಲ್ಲಿ ಸಕ್ಕರೆಯ ಅಂಶವು ಕೂಡ ನೈಸರ್ಗಿಕವಾಗಿರುವದರಿಂದ ಇದು ದೇಹಕ್ಕೆ ಪುಷ್ಟಿ ನೀಡಿ ಸುಸ್ತಿ ನಂತಹ ಸಮಸ್ಯೆ ಅನ್ನೋ ಪರಿಹಾರ ಮಾಡುವಲ್ಲಿ ಸಹಕಾರಿಯಾಗಿದೆ.
ಇಂತಹ ಅಧಿಕ ಪೋಷಕಾಂಶಗಳನ್ನು ಹೊಂದಿರತಕ್ಕಂತಹ ಅಂಜೂರದ ಹಣ್ಣನ್ನು ಬೆಳೆಯಲು ಫಲವತ್ತಾದ ಮಣ್ಣು ಬೇಕಿಲ್ಲ ಆದರೆ ಇದನ್ನ ಬೆಳೆಯುವುದಕ್ಕೆ ಮರಳು ಮಿಶ್ರಿತ ಎರೆ ಮಣ್ಣು ಇದ್ದರೆ ಸಾಕು. ಕಡಿಮೆ ನೀರು ಇದ್ದರೂ ಈ ಅಂಜೂರದ ವ್ಯವಸಾಯ ಮಾಡಬಹುದಾಗಿದ್ದು ಅಂಜೂರದ ಕಾಯಿಗಳನ್ನು ಮಾಂಸ ಬೇಯಿಸುವುದಕ್ಕಾಗಿ ಅದರೊಟ್ಟಿಗೆ ಹಾಕುತ್ತಾರೆ.ಒಟ್ಟಾರೆಯಾಗಿ ಅಧಿಕ ಖನಿಜಾಂಶಗಳು ವಿಟಮಿನ್ ಗಳು ಜೊತೆಗೆ ಸ್ವಲ್ಪ ಪ್ರಮಾಣದ ಫೈಬರ್ ಅನ್ನು ಸಹ ಹೊಂದಿರುವ ಈ ಪೋಷಕಾಂಶ ಭರಿತ ಹಣ್ಣನ್ನು ನೆನೆಸಿಟ್ಟು ಬೆಳಗಿನ ಸಮಯದಲ್ಲಿ ತಿನ್ನುತ್ತಾ ಬಂದರೆ ಆರೋಗ್ಯಕ್ಕೆ ಉತ್ತಮ.