Ad
Home ಅರೋಗ್ಯ ಇದನ್ನ ಸೇವನೆ ಮಾಡಿದ್ರೆ ಸಾಕು ನಿಮ್ಮ ಶ್ವಾಸ ಕೋಶ ಕ್ಲೀನ್ ಆಗುತ್ತೆ..ಇಷ್ಟೊಂದು ಶಕ್ತಿಯುಳ್ಳ ಈ ವಸ್ತು...

ಇದನ್ನ ಸೇವನೆ ಮಾಡಿದ್ರೆ ಸಾಕು ನಿಮ್ಮ ಶ್ವಾಸ ಕೋಶ ಕ್ಲೀನ್ ಆಗುತ್ತೆ..ಇಷ್ಟೊಂದು ಶಕ್ತಿಯುಳ್ಳ ಈ ವಸ್ತು ಯಾವುದು ನೋಡಿ ಹಾಗು ಹೇಗೆ ಬಳಸೋದು…

ಜೇಷ್ಠ ಮಧುವಿನ ಪ್ರಯೋಜನ ಇತ್ತೀಚಿನ ದಿನಗಳದ್ದಲ್ಲ ಇದನ್ನು ಸಾವಿರಾರು ವರುಷಗಳ ಹಿಂದಿನಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗಿದೆ ಇದರ ಮಹತ್ವ ಅಪಾರ ಈ ಕುರಿತು ತಿಳಿಯೋಣ ಬನ್ನಿ ಈ ಪುಟದಲ್ಲಿ…ನಮಸ್ಕಾರಗಳು ಸ್ನೇಹಿತರೆ, ಜೇಷ್ಠಮಧು ಸಾಮಾನ್ಯ ಈ ಹೆಸರನ್ನ ನೀವು ಎಲ್ಲಿಯಾದರೂ ಕೇಳಿಯೇ ಇರ್ತೀರಾ ಇದನ್ನು ಹೆಚ್ಚಾಗಿ ಆಯುರ್ವೇದಿಕ್ ಔಷಧಿಗಳ ಅಥವಾ ಟೀ ಪುಡಿಗಳ ತಯಾರಿಕೆಯಲ್ಲಿ ಬಳಸಿರುತ್ತಾರೆ. ಜೇಷ್ಠ ಮಧುವನ್ನು ಮುಲೈಟಿ ಅಂತ ಕೂಡ ಕರೆಯುತ್ತಾರೆ.

ಅಂದಿನ ಕಾಲದಲ್ಲಿ ಜೇಷ್ಠಮಧುವನ್ನು ಪ್ರತಿಯೊಬ್ಬ ಭಾರತೀಯರೂ ತಮ್ಮ ಅಡುಗೆ ಮನೆಯಲ್ಲಿ ಬಳಕೆ ಮಾಡುತ್ತಿದ್ದರು ಇದರ ಚಿಕ್ಕ ತುಂಡು ಟೀ ಕಷಾಯ ಕ್ಕೆ ಹೆಚ್ಚಿನ ರುಚಿ ಮತ್ತು ಸ್ವಾದವನ್ನು ನೀಡುತ್ತದೆ. ಅಷ್ಟೇ ಅಲ್ಲ ಟಿ ತಯಾರಿಕೆಯಲ್ಲಿ ಇದನ್ನು ಬಳಕೆ ಮಾಡಿರ್ತಾರೆ ಅಥವಾ ಕಷಾಯದ ರೂಪದಲ್ಲಿ ಬೇಕಾದರೂ ಇದನ್ನು ಸೇವನೆ ಮಾಡಬಹುದು, ಶೀತ ಕೆಮ್ಮು ಕಫದ ಬಾಧೆಯಿಂದ ಬಹಳ ಬೇಗ ಶಮನವನ್ನು ಪಡೆದುಕೊಳ್ಳಬಹುದು.

ಆಯುರ್ವೇದದಲ್ಲಿ ಜೇಷ್ಠಮಧುವಿನ ಮಹತ್ವ ;ಅಂದಿನ ಕಾಲದಲ್ಲಿ ಇವತ್ತಿನ ಹಾಗೆ ದವಾಖಾನೆಗಳು ಇರುತ್ತಿರಲಿಲ್ಲ ಆದರೆ ಕೆಲವೊಂದು ಸಾಂಪ್ರದಾಯಿಕ ಗಿಡಮೂಲಿಕೆಗಳ ಬಳಕೆ ಮಾಡುವ ಮೂಲಕ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿತ್ತು.

ಈ ಜೇಷ್ಠಮಧುವಿನ ಪ್ರಯೋಜನಗಳ ಕುರಿತು ಹೇಳುವುದಾದರೆ ಮುಖ್ಯವಾಗಿ ಈ ಜೇಷ್ಠಮಧು ಯಾವುದರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಅಂದರೆ ಶ್ವಾಸಕೋಶದ ಸ್ವಚ್ಛತೆಗಾಗಿ ಇದನ್ನು ಬಳಕೆ ಮಾಡ್ತಾರೆ. ಹೌದು ಅಸ್ತಮಾದಂಥ ಸಮಸ್ಯೆ ಅಥವಾ ಈ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಇನ್ನೂ ಕೆಲವರಿಗೆ ಧೂಮಪಾನ ಮಾಡುವುದರಿಂದ ಶ್ವಾಸಕೋಶವು ಬಹಳ ಬಳಲಿರುತ್ತದೆ, ಅದರ ಶುದ್ಧಿಗಾಗಿ, ಈ ಜೇಷ್ಠಮಧುವಿನ ಕಷಾಯವನ್ನು ಮಾಡಿ ಕೊಡಲಾಗುತ್ತಿತ್ತು, ಇದರ ಸೇವನೆ ಮಾಡುವುದರಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ದೂರವಾಗುತ್ತದೆ.

ಸಹಜವಾಗಿ ಅಸ್ತಮಾ ಇರುವವರಿಗೆ ಉಸಿರಾಟದ ತೊಂದರೆ ಇರುತ್ತದೆ ಅಂಥವರ ಶ್ವಾಸಕೋಶದಲ್ಲಿ ಸಮಸ್ಯೆ ಇರುತ್ತದೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರಿಗೆ ಈ ಶ್ವಾಸಕೋಶದಲ್ಲಿ ಕಫ ಸೇರಿಕೊಂಡಿರುವ ಸಾಧ್ಯತೆಗಳು ಇರುತ್ತದೆ.ಆಗ ಈ ಜೇಷ್ಠಮಧುವಿನ ಪ್ರಯೋಜನವನ್ನು ಪಡೆದುಕೊಂಡು ಬರುವುದರಿಂದ ಶ್ವಾಸಕೋಶದ ಸಮಸ್ಯೆ ಬಹಳ ಬೇಗ ಕಡಿಮೆಯಾಗುತ್ತದೆ ಮತ್ತು ಶ್ವಾಸಕೋಶವು ಚೇತರಿಸಿಕೊಳ್ಳುತ್ತದೆ ಇದರ ಸೇವನೆಯಿಂದ.

ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲ ಯಾರೂ ಯಕೃತ್ತಿನ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅಂಥವರ ಆರೋಗ್ಯ ವೃದ್ಧಿಗೂ ಈ ಜೇಷ್ಠಮಧು ಉತ್ತಮ. ಯಾರು ಜಾಂಡೀಸ್ ಅಥವಾ ಲಿವರ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ, ಅಂಥವರು ಕೂಡ ಪ್ರತಿದಿನ ಇದರ ಕಷಾಯ ಮಾಡಿ ಕುಡಿಯುವುದರಿಂದ ಅಪಾರ ಲಾಭ ಪಡೆದುಕೊಳ್ಳಬಹುದು.

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗು ಕೂಡ ಈ ಜೇಷ್ಠಮಧು ಒಳ್ಳೆಯ ಪರಿಹಾರವನ್ನು ನೀಡುತ್ತದೆ, ಹುಳಿತೇಗು ಎದೆಯುರಿ ಅಥವಾ ಹೊಟ್ಟೆ ಉರಿ ಹೀಗೆ ಇಂತಹ ಬಾಧೆಗಳು ಇದ್ದರೆ ಅಂಥವರು ಜೇಷ್ಠಮಧುವಿನ ಪ್ರಯೋಜನ ಪಡೆದುಕೊಳ್ಳಿ. ಇದನ್ನು ಟೀ ಅಲ್ಲಿ ಬೆರೆಸಿ ಕುಡಿಯಬಹುದು ಅಥವಾ ಕಷಾಯ ಮಾಡಿ ಕುಡಿಯಬಹುದು. ಇದನ್ನು ಕಲ್ಲಿನ ಮೇಲೆ ತೇಯ್ದು ಅದರಿಂದ ಬಂದ ಗಂಧವನ್ನ ಸಂಗ್ರಹ ಮಾಡಿ, ಆ ಗಂಧವನ್ನು ನೀರಿಗೆ ಮಿಶ್ರ ಮಾಡಿ ಅಥವಾ ನೇರವಾಗಿ ಆ ಜೇಷ್ಠ ಮಧುವಿನ ಗಂಧವನ್ನು ಸೇವನೆ ಮಾಡುವುದರಿಂದ ನಿಮ್ಮ ಶರೀರ ಶುದ್ಧಿಯಾಗುವುದಲ್ಲದೆ ಆರೋಗ್ಯ ವೃದ್ಧಿಯಾಗುತ್ತದೆ ಕೆಮ್ಮು ಕಫದಂತಹ ಬಾಧೆಗಳಿಂದ ಬಹಳ ಬೇಗ ಶಮನ ಪಡೆದುಕೊಳ್ಳಬಹುದು.

ಜೇಷ್ಠ ಮಧುವನ್ನು ಅಂದಿನ ಕಾಲದಲ್ಲೇ ಮುಖ್ಯವಾಗಿ ಉಸಿರಾಟದ ಸಮಸ್ಯೆಗಳು ಅಸ್ತಮಾದಂತಹ ಸಮಸ್ಯೆಗೆ ಅಥವಾ ಶ್ವಾಶಕೋಶ ಶುದ್ಧಿಗಾಗಿ ಬಳಕೆ ಮಾಡುತ್ತಿದ್ದರೂ ಈ ಉತ್ತಮ ಗಿಡಮೂಲಿಕೆಯ ಬಗ್ಗೆ ನಿಮಗೂ ಕೂಡ ಸ್ವಲ್ಪ ಮಾಹಿತಿ ತಿಳಿದಿರಲಿ, ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಆರೋಗ್ಯ ವೃದ್ಧಿ ಆಗುವುದಕ್ಕು ಬಳಸಬಹುದು.

Exit mobile version