ಇದರ ಒಂದು ಪೀಸನ್ನ ತಿನ್ನಿ ಸಾಕು ಅಜೀರ್ಣ , ಅಸಿಡಿಟಿ, ಗ್ಯಾಸು ಇನ್ನಿತರ ಎಲ್ಲ ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಗಳು ನಿಮ್ಮ ಹತ್ತಿರ ಕೂಡ ಬರೋದೇ ಇಲ್ಲ…

177

ಇದೊಂದು ಪದಾರ್ಥದ ಚೂರ್ಣ ಸಾಕು ಹೊಟ್ಟೆಗೆ ಸಂಬಂಧಿಸಿದ ಯಾವುದೇ ವ್ಯಾಧಿಗಳಿದ್ದರೂ ಪರಿಹಾರ ಮಾಡುವುದಕ್ಕೆ ಹೌದು ಹೊಟ್ಟೆಗೆ ಸಂಬಂಧಿಸಿದಂತಹ ಸಮಸ್ಯೆಯೆಂದರೆ ಅದು ಗ್ಯಾಸ್ ಟ್ರಬಲ್ ಅಜೀರ್ಣತೆ ಇಂತಹ ತೊಂದರೆಗಳು ಆಗಿರುತ್ತದೆ. ಇಂತಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಇದರ ಸ್ವಲ್ಪ ಪ್ರಮಾಣದ ಚೂರ್ಣ ಸಾಕು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಕರುಳಿಗೆ ಸಂಬಂಧಿಸಿದಂತಹ ತೊಂದರೆಗಳ ನಿವಾರಣೆ ಮಾಡೋದಕ್ಕೆ.

ಹೌದು ನಮ್ಮ ಹೊಟ್ಟೆ ನಮ್ಮ ದೇಹದ ಮ್ಯಾನೇಜ್ ಮೆಂಟ್ ಇದ್ದ ಹಾಗೆ ಹೊಟ್ಟೆಯಲ್ಲಿ ಎಲ್ಲಾ ಕ್ರಿಯೆಗಳು ಸರಿಯಾಗಿ ನಡೆದರೆ ನಮ್ಮ ಆರೋಗ್ಯವು ಕೂಡ ಉತ್ತಮವಾಗಿ ಇರುತ್ತೆ ಹಾಗಾಗಿ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗಲೇಬೇಕು ಇಲ್ಲವಾದರೆ ಬೇರೆ ತರಹದ ತೊಂದರೆಗಳು ಉಂಟಾಗುತ್ತದೆ. ಉದಾಹರಣೆಗೆ ಮಲಬದ್ಧತೆ ವುಂಟಾದರೆ ಮೂಲವ್ಯಾಧಿ ಉಂಟಾಗುತ್ತದೆ ಮೂಲವ್ಯಾಧಿ ಉಂಟಾದರೆ ಯಾವುದೇ ಕೆಲಸ ಮಾಡುವುದಕ್ಕೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತೇವೆ.

ಈ ರೀತಿಯಾಗಿ ಚಿಕ್ಕ ಸಮಸ್ಯೆಗಳು ದೊಡ್ಡ ತೊಂದರೆಯನ್ನು ಉಂಟುಮಾಡುತ್ತದೆ ನಮ್ಮ ಆರೋಗ್ಯದಲ್ಲಿ ಏರುಪೇರಾದರೆ. ಹಾಗಾಗಿ ಇವತ್ತಿನ ಲೇಖನಿಯಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಒಂದೊಳ್ಳೆ ವಿಧಾನವನ್ನು ಈ ಮಾಹಿತಿ ಮೂಲಕ ತಿಳಿಸಿಕೊಡುತ್ತೇವೆ. ಬನ್ನಿ ಮಾಹಿತಿಯನ್ನ ಪೂರ್ಣವಾಗಿ ತಿಳಿದು ನಿಮ್ಮ ಹಲವು ವ್ಯಾಧಿಗಳಿಗೆ ಈ ವಿಧಾನದಲ್ಲಿ ಪರಿಹಾರ ಕಂಡುಕೊಳ್ಳಿ ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳ ಪರಿಹರಿಸಿಕೊಳ್ಳಿ.

ಹೌದು ಜೀರ್ಣಶಕ್ತಿ ವೃದ್ಧಿಸುವುದಕ್ಕೆ ಪ್ರತಿದಿನ ನಾವು ಉತ್ತಮ ಆಹಾರ ಪದಾರ್ಥಗಳನ್ನು ತಿನ್ನಬೇಕು ಜೊತೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಆದರೆ ಅಜೀರ್ಣತೆ ಉಂಟಾದಾಗ ಏನು ಮಾಡಬೇಕು ಮತ್ತು ಜೀರ್ಣಶಕ್ತಿ ಅನ್ನು ವೃದ್ಧಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಇಲ್ಲಿದೆ ನೋಡಿ ಅದಕ್ಕಾಗಿ ಪರಿಹಾರ.

ಹೌದು ಅಂದಿನ ಕಾಲದಲ್ಲಿ ಅಜೀರ್ಣತೆ ದೂರಮಾಡುವುದಕ್ಕೆ ಊಟ ಆದ ಕೂಡಲೇ ಎಲೆ ಅಡಿಕೆ ಹಾಕಿ ಕೊಳ್ಳುತ್ತಿದ್ದರು ಈ ಎಲೆ ಅಡಿಕೆ ಜೊತೆ ಕೆಲವೊಂದು ಪದಾರ್ಥಗಳನ್ನು ಎಲೆ ಅಡಕೆಯೊಂದಿಗೆ ಮಿಶ್ರ ಮಾಡಿಕೊಳ್ಳುತ್ತಿದ್ದರು.

ಈ ರೀತಿ ಎಲೆಅಡಿಕೆ ಹಾಕಿಕೊಳ್ಳುವುದರಿಂದ ಜೀರ್ಣಶಕ್ತಿ ಬಹಳ ಉತ್ತಮವಾಗಿ ನಡೆದು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗುತ್ತಿತ್ತು.ಈ ಲೇಖನದಲ್ಲಿ ನಾವು ಜೀರ್ಣಶಕ್ತಿಯನ್ನ ಉತ್ತಮಗೊಳಿಸುವುದಕ್ಕೆ ಹಾಗೂ ಅಜೀರ್ಣತೆ ದೂರಮಾಡುವುದಕ್ಕೆ ಹೊಟ್ಟೆನೋವು ಹೊಟ್ಟೆ ಬಾಧೆ ಯಾವುದೇ ಇರಲಿ ಈ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಣೆ ಮಾಡೋದಕ್ಕೆ ಒಂದೊಳ್ಳೆ ಮನೆಮದ್ದು ತಿಳಿಸುತ್ತಿದ್ದೇವೆ ಅದು ಯಾವುದರಿಂದ ಮಾಡುವುದು ಅಂದರೆ ಅಳಲೆಕಾಯಿ ಯಿಂದ.

ಹೌದು ಅಳಲೆಕಾಯಿ ಇದನ್ನು ಹೇಗೆ ಬಳಸಬೇಕೆಂದರೆ ಇದನ್ನ ಸ್ವಲ್ಪ ಹುರಿದು ಇದನ್ನು ಕುಟ್ಟಾಣಿ ಗೆಯಲ್ಲಿ ಕುಟ್ಟಿ ಪುಡಿ ಮಾಡಿಕೊಂಡು ಈ ಅಳಲೆಕಾಯಿ ಪುಡಿಯನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು.

ಈಗ ಈ ಶೇಖರಣೆ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ರಾತ್ರಿ ಮಲಗುವ ಮುನ್ನ ನೀರಿಗೆ ಹಾಕಿ ಈ ಪುಡಿಯನ್ನು ನೀರಿನಲ್ಲಿ ನೆನೆಸಿಡಿ ಮಾರನೆಯ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನ ಕುಡಿಯಿರಿ ಇದರಿಂದ ಮಲಬದ್ಧತೆ ಎಂಬುದು ಕೂಡ ಸಂಪೂರ್ಣವಾಗಿ ದೂರಾಗುತ್ತೆ.

ಹೌದು ಬೆಳಿಗ್ಗೆ ಏಳುತ್ತಿದ್ದ ಹಾಗೆ ಯಾವ ವ್ಯಕ್ತಿ ಮಲ ವಿಸರ್ಜನೆ ಮಾಡುತ್ತಾನೆ ಅಂದರೆ ದೇಹದಲ್ಲಿರುವ ತ್ಯಾಜ್ಯವನ್ನು ಹೊರ ಹಾಕುತ್ತಾನೆ, ಅವನ ಆರೋಗ್ಯ ಉತ್ತಮವಾಗಿದೆ ಅಂತ ಅರ್ಥ ಆಯುರ್ವೇದದ ಪ್ರಕಾರ.

ಹಾಗಾಗಿ ಈ ಸರಳ ಪರಿಹಾರವನ್ನು ಪಾಲಿಸಿ ಮತ್ತು ನಿಮ್ಮ ಆರೋಗ್ಯವನ್ನು ಉತ್ತಮ ವಾಗಿ ವೃದ್ಧಿಸಿಕೊಳ್ಳಿ ಈ ಪರಿಹಾರ ಹದಿನೈದು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಪಾಲಿಸಬಹುದು ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲ ಧನ್ಯವಾದ.