ಈ ಆಸ್ಪತ್ರೆಗೆ ಗರುಡ ಪಕ್ಷಿ ಪ್ರತಿ ದಿನ ಭೇಟಿ ನೀಡುತ್ತಿತ್ತು …ಯಾಕೆ ಬರುತ್ತಿತ್ತು ಅನ್ನುವ ಕಾರಣ ಕೇಳಿದ್ರೆ ನೀವು ಬೆಕ್ಕಸ ಬೆರಗಾಗುತ್ತೀರಾ

96

ಸ್ನೇಹಿತರೆ ನಾವು ನೋಡಿರುವ ಪ್ರೀತಿಯಲ್ಲಿ ನಿಷ್ಕಲ್ಮಶ ಮತ್ತು ನಿಸ್ವಾರ್ಥ ಪ್ರೀತಿಗೆ ಹೆಸರು ವಾಸಿ ಆಗಿರುವುದು ಪ್ರಾಣಿ ಮತ್ತು ಪಕ್ಷಿಗಳ ಪ್ರೀತಿ. ಇಂತಹ ಒಂದು ಪ್ರೀತಿಗೆ ನಿದರ್ಶನವೆಂಬಂತೆ ಕೆನಡಾ ದೇಶದಲ್ಲಿ ಇರುವ ಒಂದು ಪ್ರಾಣಿ ಸಂರಕ್ಷಣಾಲಯದಲ್ಲಿ ನಿಷ್ಕಲ್ಮಶ ಪ್ರೀತಿಗೆ ಒಂದು ನೈಜ ಘಟನೆ ನಡೆದಿದೆ. ಅದೇನೆಂದರೆ ಪ್ರಾಣಿ ಸಂರಕ್ಷಣಾ ಆಲಯದ ಮುಂಭಾಗದಲ್ಲಿ ಒಂದು ಹದ್ದು ಅಸ್ವಸ್ಥತೆಯಿಂದ ಕೆಳಗೆ ಬಿದ್ದಿರುತ್ತದೆ. ಆ ಹದ್ದಿನ ರೆಕ್ಕೆಗಳು ಗಾಯ ಗೊಂಡಿರುತ್ತವೆ, ಅದನ್ನು ನೋಡಿದ ಅಲ್ಲಿನ ಕೆಲಸಗಾರರು ಅದನ್ನು ಪಕ್ಕದಲ್ಲಿ ಇರುವ ವೆಟರ್ನರಿ ಹಾಸ್ಪಿಟಲ್ ಗೆ ಕೊಂಡೊಯ್ಯುತ್ತಾರೆ.

ಅದು ತುಂಬಾ ಗಂಭೀರವಾಗಿ ಗಾಯ ಗೊಂಡಿರುತ್ತದೆ ಮತ್ತು ಅದಕ್ಕೆ ಉಸಿರಾಟದ ಸಮಸ್ಯೆ ತುಂಬಾ ಇರುತ್ತದೆ. ಅದನ್ನು ವೈದ್ಯರು ಚಿಕಿತ್ಸೆಗೆ ಒಳಪಡಿಸುತ್ತಾರೆ ಕೆಲವು ದಿನಗಳ ನಂತರ ಅದು ಸ್ವಲ್ಪ ಚೇತರಿಸಿಕೊಳ್ಳುತ್ತದೆ. ಹಾಗೆ ಪ್ರತಿ ದಿನ ಪ್ರಾಣಿ ಸಂರಕ್ಷಣಾಲಯದ ಆವರಣದಲ್ಲಿ ಹದ್ದು ತಿನ್ನುವ ಆಹಾರ ಬಿದ್ದಿರುತ್ತಿತ್ತು. ಅದನ್ನು ನೋಡಿದ ಆ ಆಲಯದ ಎಲ್ಲಾ ಸಿಬ್ಬಂದಿಗೂ ಆಶ್ಚರ್ಯವಾಗುತ್ತಿತ್ತು.

ಪ್ರತಿ ದಿನ ಆವರಣದಲ್ಲಿ ಆಹಾರ ಎಲ್ಲಿಂದ ಬರುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ , ಒಂದು ದಿನ ಹೀಗೆ ನೋಡಿದಾಗ ಆ ಆಹಾರವನ್ನು ಒಂದು ಗಂಡು ಹದ್ದು ತಂದು ಅಲ್ಲಿ ಹಾಕುತ್ತಿತ್ತು ಮತ್ತು ಆ ಹೆಣ್ಣು ಇರುವ ಕೊಠಡಿಯ ಮುಂಭಾಗದ ಕಿಟಕಿ ಮೇಲೆ ಹದ್ದು ಬಂದು ಕೂರುತ್ತಿತ್ತು. ಹೀಗೆ ಕೆಲವು ದಿನ ಕಳೆದ ನಂತರ ಆ ಹದ್ದಿನ ರೆಕ್ಕೆ ಅಲ್ಲಿರುವ ಗಾಯ ಪೂರ್ತಿ ಗುಣವಾಗಿ ರೆಕ್ಕೆಯಲ್ಲಿರುವ ಪುಕ್ಕಗಳು ಪೂರ್ತಿ ಬೆಳವಣಿಗೆ ಆದವು ಮತ್ತು ಅದು ಸಂಪೂರ್ಣವಾಗಿ ಗುಣಮುಖ ಆಯಿತು.

ನಂತರ ಅದನ್ನು ಆ ಆಲಯದ ವೈದ್ಯರು ಹೊರಗೆ ಹಾರಲು ಬಿಟ್ಟರು ಆ ಹದ್ದು ನೇರವಾಗಿ ಹಾರಿ ಹೋಗಿ ಅದರ ಗೆಳೆಯನ ಬಳಿ ಹೋಯಿತು ಮತ್ತು ಆ ಎರಡು ಹದ್ದುಗಳು ಸೇರಿ ಆ ಸಂರಕ್ಷಣಾ ಆಲಯದ ಸುತ್ತ ಸುತ್ತುತ್ತಿದ್ದವು. ಆ ಎರಡು ಹದ್ದುಗಳು ಸೇರಿ ಹದ್ದು ಗುಣಮುಖವಾಗಲು ಸಹಾಯ ಮಾಡಿದ ವೈದ್ಯರಿಗೆ ಧನ್ಯವಾದವನ್ನು, ಕೂಗುವ ಮೂಲಕ ತಿಳಿಸಿದವು. ಈ ಘಟನೆ ನಂಬಲು ಅಸಾಧ್ಯವಾದರೂ ಕೆನಡಾ ದೇಶದಲ್ಲಿ ನೈಜವಾಗಿ ನಡೆದಿದೆ ಆ ಹದ್ದುಗಳು ಈಗಲೂ ಕೆಲ ಸಂದರ್ಭಗಳಲ್ಲಿ ಆ ಪ್ರಾಣಿ ಸಂರಕ್ಷಣಾಲಯದ ಮೇಲೆ ಹಾರಾಡುತ್ತಿರುತ್ತವೆ. ಪ್ರಾಣಿ ಪಕ್ಷಿಗಳ ನಿಷ್ಕಲ್ಮಶ ಮತ್ತು ನಿಸ್ವಾರ್ಥ ಪ್ರೀತಿಗೆ ಇದು ಒಂದು ನೈಜ ಉದಾಹರಣೆ.

ಈ ಒಂದು ಘಟನೆ ನೈಜ ಘಟನೆ ಆಗಿದ್ದು ಮನುಷ್ಯರು ಇದನ್ನು ನೋಡಿ ಕಲಿಯಬೇಕು ಹೌದು ನಿಸ್ವಾರ್ಥತೆ ನಿಸ್ವಾರ್ಥ ಪ್ರೀತಿ ಪ್ರಾಣಿಗಳಲ್ಲಿ ಹೇಗೆ ಇರುತ್ತದೆ ಅನ್ನೋ ಒಂದು ವಿಚಾರವನ್ನು ತಿಳಿಸಿದ ಈ ಪ್ರಾಣಿಗಳಿಗೆ ನಿಜಕ್ಕೂ ನಾವು ಒಂದು ಲೈಕ್ ನೀಡಲೇಬೇಕು.ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದಲ್ಲಿ ತಪ್ಪದೆ ಮಾಹಿತಿಯ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ. ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗು ಶೇರ್ ಮಾಡಿ ಶುಭವಾಗಲಿ ಧನ್ಯವಾದ ಶುಭ ದಿನ.