ಈ ಎಲೆಯ ರಸವನ್ನ ಮಕ್ಕಳಿಗೆ ಕೊಟ್ಟರೆ ಸಾಕು ಅವರ ಬುದ್ದಿ ಶಕ್ತಿ ಚನ್ನಾಗಿ ಆಗುತ್ತದೆ , ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗು ಯಾವುದೇ ಹೊಟ್ಟೆ ನೋವು ಉಬ್ಬರದ ಸಮಸ್ಸೆ ಬರೋದೇ ಇಲ್ಲ…

206

ಈ ಎಲೆಯ ಒಂದು ಟೇಬಲ್ ಚಮಚ ರಸ ಸಾಕು, ಜೀರ್ಣ ಶಕ್ತಿ ವೃದ್ಧಿಗೆ. ಅಷ್ಟೆ ಅಲ್ಲಾ ಸರಿಯಾದ ಸಮಯಕ್ಕೆ ಹಸಿವಾಗುತ್ತೆ ಮಕ್ಕಳಿಗೂ ಈ ಎಲೆಯ ರಸವನ್ನ ಕೊಡಬಹುದು.ನಮಸ್ಕಾರಗಳು ಓದುಗರೆ, ನಮ್ಮ ಜೀರ್ಣ ಶಕ್ತಿ ಉತ್ತಮವಾಗಿ ಆಗಿಲ್ಲ ಅಂದರೆ ಏನೆಲ್ಲ ಅಡ್ಡಪರಿಣಾಮಗಳು ಶರೀರದಲ್ಲಿ ಉಂಟಾಗಬಹುದು ಗೊತ್ತಾ? ಹೌದು ಜೀರ್ಣಶಕ್ತಿ ಉತ್ತಮವಾಗಿ ನಡೆದಿಲ್ಲ ಅಂದರೆ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗೋದಿಲ್ಲ ಶಕ್ತಿ ಸಿಗಲಿಲ್ಲ ಅಂದರೆ ನಾವು ನಿಶ್ಯಕ್ತರಾಗುತ್ತೇವೆ.

ಇನ್ನೊಂದೆಡೆ ಆದರೆ ಮತ್ತೊಂದು ವಿಚಾರವೇನು ಗೊತ್ತೇ ನಾವು ತಿಂದ ಆಹಾರ ಸರಿಯಾದ ಸಮಯಕ್ಕೆ ಜೀರ್ಣ ಆಗದೆ ಹೋದಾಗ ಅದು ಕೊಬ್ಬಾಗಿ ಕರಗುತ್ತೆ ಹಾಗೆ ಲಿವರ್ ಮೇಲೆಯೂ ಕೂಡ ಅಡ್ಡ ಪರಿಣಾಮ ಬೀರುತ್ತೆ. ಈ ಲಿವರ್ ನಮ್ಮ ಶರೀರದಲ್ಲಿ ಸುಮಾರು ನೂರಕ್ಕೂ ಅಧಿಕ ಕೆಲಸಗಳಲ್ಲಿ ಪಾಲ್ಗೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಆದರೆ ಯಾವಾಗ ನಮ್ಮ ಶರೀರದ ಜೀರ್ಣಶಕ್ತಿಯೂ ಉತ್ತಮವಾಗಿ ಆಗಿಲ್ಲ ಅಂದರೆ ಇದು ಲಿವರ್ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ, ಹಾಗಾಗಿ ಜೀರ್ಣಶಕ್ತಿ ಉತ್ತಮವಾಗಿದ್ದರೆ ಲಿವರ್ ನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ನಿಮಗೇನಾದರೂ ಅಜೀರ್ಣ ಆದಾಗ ಅದು ಗ್ಯಾಸ್ಟ್ರಿಕ್ ಸಮಸ್ಯೆ ಆಗಿ ಕೂಡ ಪರಿಣಾಮ ಬೀರುತ್ತೆ. ಹೇಗೆಲ್ಲಾ ಆಗಬಾರದು ಅಂದರೆ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗಬೇಕು ಆದರೆ ಯಾವಾಗ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತಿಲ್ಲಾ, ಆಗ ಈ ಚಿಕ್ಕ ಪರಿಹಾರವೊಂದನ್ನು ಪಾಲಿಸಿ. ಅದಕ್ಕಾಗಿಯೇ ಪ್ರಭಾವಕಾರಿಯಾಗಿ ಮಾಡಬಹುದಾದ ಮನೆಮದ್ದು ಒಂದರ ಬಗ್ಗೆ ತಿಳಿಸಿಕೊಡಲಿದ್ದೇವೆ ಅದೇನೆಂದರೆ ಪಂಚಪತ್ರೆಯ ಎಲೆಯಿಂದ ಮಾಡುವ ಈ ಪರಿಹಾರ ಇದಕ್ಕೆ ಮಾಡಬೇಕಿರುವುದು ತುಂಬಾ ಸುಲಭ ಈ ಎಲೆಯನ್ನು ತಂದು ಕಷಾಯ ಮಾಡಿ ಕುಡಿಯಬೇಕು. ಇದರ ಪ್ರಭಾವದಿಂದ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ ಮತ್ತು ಜೀರ್ಣಕ್ರಿಯೆ ಉತ್ತಮವಾಗಿ ಆರೋಗ್ಯ ವೃದ್ಧಿಯಾಗುತ್ತೆ.

ಕಷಾಯ ಮಾಡುವ ವಿಧಾನ :ಬೇಕಾಗುವ ಪದಾರ್ಥಗಳು ; ಓವಿನ ಕಾಳು ಜೀರಿಗೆ ಬೆಲ್ಲ ಮತ್ತು ಪಂಚಪಾತ್ರೆಯ ಎಲೆಗಳು.ಮಾಡುವ ವಿಧಾನ ; ಪಾತ್ರೆಯೊಂದಕ್ಕೆ ನೀರನ್ನು ತೆಗೆದುಕೊಂಡು ನೀರು ಕುದಿಯುವಾಗ ಜೀರಿಗೆ ಮತ್ತು ಓಮಿನ ಕಾಳಿನ ಪುಡಿ ಯನ್ನು ಇದಕ್ಕೆ ಹಾಕಿ ಪಂಚಪಾತ್ರೆಯ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಕೊಂಡ ಬಳಿಕ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲದ ಪುಡಿಯನ್ನು ಮಿಶ್ರ ಮಾಡಿ ಬೇಕಾದರೆ ನಿಂಬೆಹಣ್ಣಿನ ರಸ ಕೂಡ ಮಿಶ್ರ ಮಾಡಬಹುದು ಯಾಕೆಂದರೆ ನಿಂಬೆಹಣ್ಣಿನ ರಸದಲ್ಲಿ ವಿಟಮಿನ್ ಸಿ ಜೀವಸತ್ವ ಇರುತ್ತದೆ ಇದು ಜೀರ್ಣಕ್ರಿಯೆಗೂ ಉತ್ತಮ ರೋಗ ನಿರೋಧಕ ಶಕ್ತಿ ವೃದ್ಧಿಗೂ ಸಹಕಾರಿ.

ಈ ಪಂಚ ಪತ್ರೆಯ ಕಷಾಯವನ್ನು ಹದಿನೈದು ವರ್ಷ ಮೇಲ್ಪಟ್ಟ ಮಂದೆ ಕುಡಿಯಬಹುದು ಆದರೆ ಚಿಕ್ಕಮಕ್ಕಳಿಗಾದರೆ ಕಷಾಯದ ಬದಲು ಈ ಎಲೆಯ ರಸವನ್ನು ಬೇರ್ಪಡಿಸಿ ಅದರ ರಸವನ್ನು ಕೇವಲ ದಿನಕ್ಕೆ ಅರ್ಧ ಚಮಚದಷ್ಟು ನೀಡುತ್ತಾ ಬಂದರೆ ಮಕ್ಕಳಿಗೆ ಹಸಿವಾಗದೇ ಇರುವುದು ಮತ್ತು ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಅನ್ನೋದು ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತೆ.

ಇದ್ಯಾವುದೂ ಮಾಡಲು ಸಾಧ್ಯವಿಲ್ಲ ಅಂದರೆ ಈ ಪಂಚ ಪತ್ರೆ ಎಲೆಯನ್ನು ತೆಗೆದುಕೊಂಡು ಶುದ್ದಿ ಮಾಡಿ ಇದಕ್ಕೆ ಮೆಣಸನ್ನು ಇಟ್ಟುಕೊಂಡು ಆ ಎಲೆಯನ್ನು ತೆಗೆದುಕೊಂಡು ಜಗಿದು ತಿನ್ನಿ ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ ಯಾವುದೇ ಪರಿಹಾರ ಇಲ್ಲದ ಈ ವಿಧಾನಗಳು ನಿಮಗೆ ಜೀರ್ಣಶಕ್ತಿಯನ್ನ ವೃದ್ಧಿಸುವಂತೆ ಮಾಡುತ್ತದೆ ಹಾಗೂ ಯಾವುದೇ ಅಡ್ಡಪರಿಣಾಮಗಳನ್ನು ಶರೀರದ ಮೇಲೆ ಉಂಟುಮಾಡುವುದಿಲ್ಲ.