ಈ ಒಂದು ಕಷಾಯ ಮನೆಯಲ್ಲೇ ಮಾಡಿ ಬಳಸಿ ನೋಡಿ ಸಾಕು ಎಲ್ಲ ನಿಮ್ಮ ಜೀವನದಲ್ಲಿ ರೋಗಗಳು ಬರೋದೇ ಇಲ್ಲ ..

154

ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಸರಳ ಮನೆಮದ್ದು ಇದು ಹೌದು ಇನ್ನೇನು ಚಳಿಗಾಲ ಬರುತ್ತ ಇದೆ ಚಳಿಗಾಲದಲ್ಲಿ ಬರುವ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದು ಈ ಸರಳ ಡ್ರಿಂಕ್! ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದು ಇದು ಈ ಡ್ರಿಂಕ್ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪುಷ್ಟಿ ದೊರೆಯುತ್ತದೆ ಮತ್ತು ಈ ಮನೆಮದ್ದು ಮಾಡುವುದು ತುಂಬ ಸುಲಭ ಹಾಗೂ ಈ ಡ್ರಿಂಕ್ ನಿಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಲಾಭಗಳನ್ನು ನೀಡುತ್ತದೆ ಹಾಗೂ ಅಷ್ಟೇ ನಿಮ್ಮ ನಾಲಿಗೆಗೆ ರುಚಿ ನೀಡುತ್ತದೆ

ಚಳಿಗಾಲದಲ್ಲಿ ವಾತಾವರಣದಲ್ಲಿ ತಂಪು ಇರುವುದರಿಂದ ನಾಲಿಗೆ ಚುಟುಚುಟು ಅನ್ನುತ್ತಾ ಇರುತ್ತದೆ ಹಾಗಾಗಿ ಕಷಾಯ ಅಥವಾ ಟೀ ಕುಡಿಯುವುದರಿಂದ ನಾಲಿಗೆಗೂ ಉದ್ದವುಳ್ಳ ಮಜಾ ಸಿಗುತ್ತೆ. ಡ್ರಿಂಕ್ ಕುಡಿಯುವುದಕ್ಕಿಂತ ಆರೋಗ್ಯಕ್ಕೂ ಒಳ್ಳೆಯ ಪುಷ್ಟಿ ನೀಡುವಂತಹ ಕೆಲವೊಂದು ಸಿಂಪಲ್ ಕಷಾಯಗಳನ್ನು ಮನೆಯಲ್ಲೇ ಮಾಡಿಕೊಡಿರಿ ದೇಹಕ್ಕೆ ಬೆಚ್ಚಗಿನ ಅನುಭವ ಆಗುತ್ತೆ ಜೊತೆಗೆ ನಾಲಿಗೆಗೂ ರುಚಿ ದೊರೆಯುತ್ತೆ ಆರೋಗ್ಯವು ಕೂಡ ತುಂಬಾ ಚೆನ್ನಾಗಿರುತ್ತದೆ.

ಈಗ ಮಾಡಬಹುದಾದ ಮೊದಲನೆಯ ಡ್ರಿಂಕ್ ಅಥವಾ ಕಷಾಯದ ಕುರಿತು ಹೇಳುವುದಾದರೆ ಇದು ಶುಂಠಿ ಕಷಾಯ ತುಂಬಾನೇ ರುಚಿಕರವಾಗಿರುತ್ತದೆ ಇದನ್ನು ಮಾಡಲು ಬೇಕಾಗಿರುವುದು ಶುಂಠಿ ಮೆಣಸು ಜೀರಿಗೆ ಮತ್ತು ಹಾಲು ಮಾಡುವ ವಿಧಾನ ಹೇಗೆಂದರೆ ಶುಂಠಿ ಮೆಣಸು ಜೀರಿಗೆಯನ್ನು ಬಳಸಿ ಮೊದಲಿಗೆ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ಬಳಿಕ ಮೆಣಸು ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಿ ಈ ನೀರು ಚೆನ್ನಾಗಿ ಕುದಿಯುವಾಗ ಇದಕ್ಕೆ ಹಾಲನ್ನು ಮಿಶ್ರಣ ಮಾಡಿ ಈ ಹಾಲು ಸ್ವಲ್ಪ ಬಿಸಿಯಾದ ಮೇಲೆ ಇದನ್ನ ಶೋಧಿಸಿಕೊಂಡು ಕುಡಿಯಿರಿ ಗಂಟಲಿಗೂ ಒಳ್ಳೆ ಅನುಭವ ನೀಡುತ್ತೆ ಈ ಕಷಾಯ

ಜೊತೆಗೆ ಆರೋಗ್ಯವೃದ್ಧಿ ಆಗಲು ಸಹಕಾರಿ ಮತ್ತು ಈ ಸರಳ ಮನೆಮದ್ದು ಶೀತ ಕೆಮ್ಮಿನಂತಹ ಸಮಸ್ಯೆಗಳ ನಿವಾರಣೆ ನೀಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಸಹ ಹೆಚ್ಚುತ್ತ ಹೆಚ್ಚುತ್ತೆ ಅಷ್ಟೇ ಅಲ್ಲ ದೇಹಕ್ಕೆ ಬೆಚ್ಚಗಿನ ಅನುಭವ ದೊರೆಯುತ್ತದೆ ಈ ಸರಳ ಆರೋಗ್ಯಕರ ಕಷಾಯ ಮಾಡಿ ಕುಡಿಯುವುದರಿಂದ. ಮಾಡಬಹುದಾದ ಎರಡನೆಯ ಮನೆ ಮದ್ದು ಇದಕ್ಕೆ ಬೇಕಾಗಿರುವುದು ಏಲಕ್ಕಿ ತುಳಸಿ ಎಲೆ ಶುಂಠಿ ಮೆಣಸು ಮತ್ತು ಜೇನುತುಪ್ಪ

ಮಾಡುವ ವಿಧಾನ ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿಕೊಳ್ಳಿ ಬಳಿಕ ತುಳಸಿ ಎಲೆಯನ್ನು ಕತ್ತರಿಸಿ ಸಣ್ಣಗೆ ಮಾಡಿಕೊಳ್ಳಿ ಶುಂಠಿಯನ್ನು ಜಜ್ಜಿ ಇಟ್ಟುಕೊಂಡು ಮೆಣಸನ್ನು ಕೂಡ ಕುಟ್ಟಿ ಪುಡಿ ಮಾಡಿಕೊಳ್ಳಿ ಈಗ ಕುದಿಯುವ ನೀರಿಗೆ ಈ ಮಿಶ್ರಣವನ್ನು ಹಾಕಿ ಮತ್ತೊಮ್ಮೆ ನೀರನ್ನೂ ಚೆನ್ನಾಗಿ ಕುದಿಸಿಕೊಳ್ಳಬೇಕು.

ಈಗ ಆ ನೀರನ್ನ ಶೋಧಿಸಿಕೊಂಡು ಈ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಬೆಳಗಿನ ಸಮಯದಲ್ಲಿ ಅಥವಾ ರಾತ್ರಿ ಸಮಯದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಈ ಕಷಾಯವನ್ನು ಸೇವಿಸಿ ಬೆಚ್ಚಗಿನ ಅನುಭವ ದೊರೆಯುವುದರೊಂದಿಗೆ ಚಳಿಗಾಲದ ಚಳಿಗೆ ಅದ್ಭುತವಾದ ಕಷಾಯ ಮತ್ತು ಆರೋಗ್ಯಕ್ಕೆ ಪುಷ್ಟಿನೀಡುವ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಈ ಕಷಾಯ ಹತ್ತು ವರ್ಷ ಮೇಲ್ಪಟ್ಟ ಎಲ್ಲರೂ ಸಹ ಕುಡಿಯಬಹುದು ಮತ್ತು ಅರೋಗ್ಯಕ್ಕೆ ಪುಷ್ಟಿ ನೀಡುವ ಈ ಸರಳ ಮನೆಮದ್ದುಗಳನ್ನೂ ಪಾಲಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಕೆಮ್ಮು ಶೀತ ಜ್ವರ ಗಂಟಲು ನೋವು ಇದೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.