ಈ ಒಂದು ಕಾಯಿಯನ್ನ ಚೆನ್ನಾಗಿ ಬೇಯಿಸಿ ತಿನ್ನೋದ್ರಿಂದ ನಿಮ್ಮ ಆರೋಗ್ಯಕ್ಕೆ ವಜ್ರಕಾಯದ ಹೊದಿಕೆ ಹೊದಿಸಿದ ಹಾಗೆ ಆಗುತ್ತೆ..

169

ನಮಸ್ತೆ ನಾವು ಇವತ್ತಿನ ಲೇಖನದಲ್ಲಿ ಒಂದು ರುಚಿಕರವಾದ ರೆಸಿಪಿಯನ್ನು ಮಾಡುವುದನ್ನು ತಿಳಿಯೋಣ. ಅದೇನೆಂದರೆ ಮೊಳಕೆ ಕಟ್ಟಿದ ಹುರುಳಿ ಕಾಳಿನ ಸಾರು. ಈ ಸಾಂಬರ್ ಮಾಡುವುದು ತುಂಬ ಸುಲಭ ಹಾಗೆ ನಿಮಗೇನಾದರೂ ಮನೆಯ ಬಳಿ ಹಲಸಿನ ಹಣ್ಣಿನ ಮರ ಇದ್ದರೆ ಅದರಲ್ಲಿ ಆ ಹಲಸಿನ ಕಾಯಿಯನ್ನು ತಂದು ಕೂಡ ನೀವು ಈ ಮೊಳಕೆ ಕಟ್ಟಿದ ಕಾರಿನ ಸಾರಿಗೆ ಹಾಕಬಹುದು. ತುಂಬಾ ರುಚಿಕರವಾಗಿರುತ್ತದೆ.

ಇದರ ಜೊತೆಗೆ ಆಲೂಗಡ್ಡೆ ಮತ್ತು ಬದನೆಕಾಯಿ ಅನ್ನೋ ಕೂಡ ಸೇರಿಸಿ ಸಾರನ್ನು ಮಾಡಿದರೆ ಇನ್ನೂ ರುಚಿ ಹೆಚ್ಚಾಗುತ್ತದೆ ಹಾಗಾದರೆ ಈ ಮೊಳಕೆ ಕಡಿದ ಕಾಡಿನ ಸಾರನ್ನು ಮಾಡುವುದು ಹೇಗೆಂದು ತಿಳಿಯೋಣ ಮನೆಮಂದಿಯೆಲ್ಲ ತಿನ್ನಲು ತುಂಬಾ ರುಚಿಕರವಾಗಿ ಇರುತ್ತದೆ ಮತ್ತು ಮಕ್ಕಳಿಗೂ ಕೂಡ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಈ ಮೊಳಕೆ ಕಟ್ಟಿದ ಕಾಳಿನ ಸಾಂಬಾರ್.

ಮೊದಲಿಗೆ ಸಾಂಬಾರ್ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳನ್ನ ತಿಳಿಯೋಣ ಇದಕ್ಕೆ ಚಕ್ಕೆ ಲವಂಗ ಮತ್ತು ಮೆಣಸಿನ ಕಾಳು ಹಾಗೆ ಕಡಲೆ ತೆಂಗಿನಕಾಯಿಯ ತುರಿ ಇದ್ದರೆ ಪರವಾಗಿಲ್ಲ ಅಥವಾ ಕೊಬ್ಬರಿ ತುರಿಯನ್ನು ಬೇಕಾದರೂ ತೆಗೆದುಕೊಳ್ಳಬಹುದು. ನಂತರ ಬೇಕಾಗಿರುವುದು ಒಣಮೆಣಸಿನಕಾಯಿ ಧನಿಯಾಬೀಜ ಅರಿಶಿಣ ಶುಂಠಿ ಮತ್ತು ಬೆಳ್ಳುಳ್ಳಿ. ಇದೀಗ ಮೊದಲು ಒಂದು ಕಪ್ ಹುರುಳಿ ಕಾಳುಗಳನ್ನು ಮೊಳಕೆ ಕಟ್ಟಿಸಿದ ಇಡೀ 2ದಿನಗಳ ನಂತರ ಈ ಮೊಳಕೆ ಕಾಳುಗಳನ್ನು ಸಾಂಬಾರಿಗೆ ಬಳಸುವ ಈಗ ಮೊದಲು ಮೊಳಕೆ ಕಟ್ಟಿದ ಕಾಳುಗಳನ್ನು ಒಮ್ಮೆಲೆ ಒಂದು ವಿಶಲ್ ಹಾಕಿಸಿಕೊಳ್ಳಿ.

ಇದೀಗ ಮಸಾಲ ರುಬ್ಬಿಕೊಳ್ಳಬೇಕು ಅದಕ್ಕಾಗಿ ಮೊದಲು ಈರುಳ್ಳಿ ಒಣಮೆಣಸಿನಕಾಯಿ ಧನಿಯ ಬೀಜದ ಕಾಳುಗಳು ಮತ್ತು ಬೆಳ್ಳುಳ್ಳಿ ಯನ್ನು ಒಮ್ಮೆಲೆ ಹುರಿದುಕೊಳ್ಳಬೇಕು. ಒಮ್ಮೆಲೆ ಹುರಿದು ಕೊಂಡ ನಂತರ ಈ ಪ್ಯಾನ್ ಬಿಸಿ ಇದ್ದಾಗಲೇ ಇದಕ್ಕೆ ಕೊಬ್ಬರಿ ತುರಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ ನಂತರ ಇದಕ್ಕೆ ಚಕ್ಕೆ ಲವಂಗ ಶುಂಠಿ ಕೊತ್ತಂಬರಿ ಸೊಪ್ಪು ಮೆಣಸಿನ ಕಾಳು ಕಡಲೆ ಅನ್ನು ಹಾಕಿ ಇದೀಗ ಈ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು ಇದೀಗ ಮಸಾಲೆ ತಯಾರಾಗಿದೆ.

ನಂತರ ಈ ಮಸಾಲೆಯನ್ನು ವಿಶಾಲ್ ಹಾಕಿಸಿದಂತ ಮೊಳಕೆ ಕಟ್ಟಿದ ಕಾಳುಗಳು ನೊಂದಿಗೆ ಮಿಶ್ರ ಮಾಡಬೇಕು ನಂತರ ಇದಕ್ಕೆ ಬದನೆಕಾಯಿ ಆಲೂಗಡ್ಡೆ ಸಣ್ಣಗೆ ಕತ್ತರಿಸಿ ಇದರೊಂದಿಗೆ ಹಲಸಿನಕಾಯಿಯನ್ನು ಕೂಡ ಸಣ್ಣಗೆ ಕತ್ತರಿಸಿ ಹಾಕಬೇಕು ಎಲ್ಲವನ್ನು ಸೇರಿಸಿ ಒಮ್ಮೆಲೆ ಮತ್ತೆ ವಿಷಲ್ ಹಾಕಿಸಬೇಕು. ಇದೀಗ ಸಾಂಬರ್ ತಯಾರಾಗಿದೆ ಇದನ್ನು ಒಗ್ಗರಣೆ ಮಾಡಬೇಕು.

ಒಗ್ಗರಣೆಗೆ ಎಣ್ಣೆ ಸಾಸಿವೆ ಕರಿಬೇವಿನ ಸೊಪ್ಪು ಮತ್ತು ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ ನಂತರ ಸಾರಿಗೆ ಹಾಕಿ ಮಿಶ್ರ ಮಾಡಿ. ಈ ರೀತಿ ಸುಲಭವಾಗಿ ಕೇವಲ ಹದಿನೈದು ನಿಮಿಷಗಳಲ್ಲಿ ರುಚಿಕರವಾದ ಆರೋಗ್ಯಕರವಾದ ಮೊಳಕೆ ಕಟ್ಟಿದ ಸಾಂಬಾರ್ ಅನ್ನು ಮಾಡಬಹುದು. ಈ ರೀತಿಯ ಸಾಂಬರನ್ನು ಒಮ್ಮೆ ಮಾಡಿ ನೋಡಿ ರುಚಿ ಹೇಗಿರುತ್ತದೆ ಅಂತ ನೀವು ಹೇಳ್ತೀರಾ ಧನ್ಯವಾದ.