ಈ ಒಂದು ಗಿಡ ಮೂಲಿಕೆ ಬಳಸಿದ್ದೆ ಆದ್ರೆ ಜಾಂಡೀಸ್ ಬಂದ್ರು ಸಹ ನಿಮ್ಮ ದೇಹಕ್ಕೆ ಸಂಜೀವಿನಿ ರೂಪದಲ್ಲಿ ರಕ್ಷಣೆ ನೀಡುತ್ತದೆ.. ಕಲಿಯುಗದ ಸಂಜೀವಿನಿ ಗಿಡ ಮೂಲಿಕೆ ..

228

ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಈ ಜಾಂಡೀಸ್ ಸಮಸ್ಯೆ ಅಂದರೆ ಕಾಮಾಲೆ ರೋಗ ಕಾಣಸಿಗುತ್ತದೆ ಈ ಸಮಯದಲ್ಲಿ ನಾವು ಆರೋಗ್ಯಕರ ಪದ್ದತಿ ಅನ್ನು ತಪ್ಪದೆ ಪಾಲಿಸಬೇಕಾಗುತ್ತದೆ.ಹಾಗಾಗಿ ಈ ಕಾಮಾಲೆ ರೋಗ ಬಂದಾಗ ಹಲವಾರು ಮನೆಮದ್ದುಗಳನ್ನು ಪರೀಕ್ಷಿಸಬಹುದು ಆದರೆ ತುಂಬ ಎಚ್ಚರದಿಂದ ಮನೆಮದ್ದುಗಳನ್ನು ಮಾಡಿಕೊಳ್ಳಬೇಕಾಗಿರುತ್ತದೆ ಮತ್ತು ಹಲವರು ಈ ಜಾಂಡಿಸ್ ಸಮಸ್ಯೆ ಬಂದಾಗ ನಾಟಿ ಔಷಧಿಯನ್ನೇ ಬಳಸಿಕೊಂಡು ಈ ಸಮಸ್ಯೆಯನ್ನ ಪರಿಹರಿಸಿಕೊಳ್ಳುತ್ತಾರೆ ಜೊತೆಗೆ ಈ ಸಮಸ್ಯೆ ಎದುರಾಗಿದೆ ಅಂದರೆ ನಾವು ತುಂಬ ಎಚ್ಚರವಾಗಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಬೇಕಾಗಿರುತ್ತದೆ.

ಬನ್ನಿ ಈ ದಿನದ ಲೇಖನಿಯಲ್ಲಿ ಈ ಭಯಾನಕ ಜಾಂಡೀಸ್ ಸಮಸ್ಯೆಗೆ ಮಾಡಿಕೊಳ್ಳಬಹುದಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ನಮಗೆ ಏನೆಲ್ಲ ಬೇಕಾಗಿರುತ್ತದೆ ಮತ್ತು ಜಾಂಡೀಸ್ ಬಂದಾಗ ನಾವು ನಮ್ಮ ಆರೋಗ್ಯವನ್ನು ಹೇಗೆ ಕಾಳಜಿ ಮಾಡಬೇಕಾಗಿರುತ್ತದೆ ಇದೆಲ್ಲವನ್ನ ಇಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ.

ಹಲವಾರು ಕಾರಣಗಳಿಂದ ಉಂಟಾಗುತ್ತದೆ ಮುಖ್ಯವಾಗಿ ಶುದ್ಧವಾದ ನೀರು ಕುಡಿಯದೆ ಹೋದಾಗ ಜಾಂಡಿಸ್ ಬರುತ್ತದೆ. ಹಾಗಾಗಿಯೇ ಮಳೆಗಾಲದಲ್ಲಿ ಹೆಚ್ಚಾಗಿ ಈ ಜಾಂಡಿಸ್ ಸಮಸ್ಯೆ ಕಾಣಸಿಗುತ್ತದೆ ಲಿವರ್ ತೊಂದರೆಗೆ ಒಳಗಾದಾಗ ಜಾಂಡಿಸ್ ಸಮಸ್ಯೆ ಉಂಟಾಗುತ್ತದೆ

ಜಾಂಡಿಸ್ ಸಮಸ್ಯೆ ಬಂದಾಗ ಇದು ಬೇರೆ ಅಂಗಾಂಗಗಳಿಗೂ ಕೂಡ ಪ್ರಭಾವ ಬೀರುತ್ತದೆ ಈ ಜಾಂಡಿಸ್ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ಬೇರೆ ಅಂಗಗಳು ಕೂಡ ತನ್ನ ಕಾರ್ಯ ನಿಲ್ಲುಸುತ್ತದೆ ಮುಖ್ಯವಾಗಿ ಕಿಡ್ನಿ ಹೌದು ಮೊದಲು ಲಿವರ್ ಗೆ ತೊಂದರೆ ಉಂಟಾದಾಗ ಅದರ ಸೂಚನೆ ಆಗಿ ಈ ಜಾಂಡಿಸ್ ಉಂಟಾಗುತ್ತದೆ ಅದನ್ನು ನಿರ್ಲಕ್ಷ್ಯ ಮಾಡಿದಾಗ ಇದು ಕಿಡ್ನಿಗೂ ಕೂಡ ಎಫೆಕ್ಟ್ ಮಾಡುತ್ತದೆ.

ಈ ದಿನದ ಲೇಖನದಲ್ಲಿ ನಾವು ಜಾಂಡೀಸ್ ಗಾಗಿ ಮಾಡುವ ಪರಿಹಾರದ ಕುರಿತು ಮಾತನಾಡುವಾಗ ಜಾಂಡೀಸ್ ಬಂದವರು ಶುದ್ಧವಾದ ಈ ಕಬ್ಬಿನ ಹಾಲನ್ನು ಕುಡಿಯಬೇಕು ಹೌದು ಕಬ್ಬಿನ ಹಾಲಿಗೆ ಏನನ್ನು ಮಿಶ್ರ ಮಾಡಿರಬಾರದು ಅಂದರೆ ಐಸ್ ಕ್ಯೂಬ್ಸ್ ಆಗಲಿ ಅಥವಾ ನಿಂಬೆಹಣ್ಣು ಶುಂಠಿ ಇದ್ಯಾವುದನ್ನು ಮಿಕ್ಸ್ ಮಾಡದೆ ಕಬ್ಬಿನ ಹಾಲನ್ನು ಕುಡಿಯಬೇಕು.

ಜಾಂಡಿಸ್ ಬಂದವರು ಪಥ್ಯೆ ಇರಬೇಕಾಗುತ್ತದೆ ಬೇಳೆಕಟ್ಟು ಒಗ್ಗರಣೆ ಹಾಕದಿರುವ ಆಹಾರ ಪದಾರ್ಥಗಳು ಮತ್ತು ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳನ್ನು ಅಂದರೆ ಹಣ್ಣು ತರಕಾರಿಗಳನ್ನು ತಿನ್ನಬೇಕಾಗುತ್ತದೆ ಅರಿಶಿಣವನ್ನು ಕಡಿಮೆ ಬಳಸಬೇಕು.

ಹೀಟ್ ಉಂಟುಮಾಡುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು ಹೆಚ್ಚು ನೀರು ಕುಡಿಯಬೇಕು ಅದರಲ್ಲಿಯೂ ಕಾಯಿಸಿದ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು ಮತ್ತು ಕಾಫಿ ಟೀ ಕುಡಿಯಬಾರದು ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸೇವಿಸಬಾರದು.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಹಲಸಿನ ಮೊಗ್ಗು ಈರುಳ್ಳಿ ಮತ್ತು ಮೆಂತ್ಯೆ ಈ ಪದಾರ್ಥಗಳನ್ನು ಹೇಗೆ ಬಳಸಬೇಕೆಂದರೆ ಮೊದಲಿಗೆ ಹಲಸಿನ ಮೊಗ್ಗು ಈರುಳ್ಳಿ ಮತ್ತು ಮೆಂತೆಯನ್ನು ಜಜ್ಜಿ ಪೇಸ್ಟ್ ಮಾಡಿಕೊಂಡು, ಇದನ್ನು ಸೇವಿಸುತ್ತಾ ಬರಬೇಕು ನಿಯಮಿತವಾಗಿ ಈ ಪರಿಹಾರ ಪಾಲಿಸುತ್ತ ಬರುವುದರಿಂದ ಸ್ವಲ್ಪ ದಿನಗಳಲ್ಲಿಯೇ ಸಮಸ್ಯೆ ಪರಿಹಾರ ಆಗುತ್ತದೆ.

ಈ ಪರಿಹಾರವನ್ನು ಮಾಡಿ, ಹೆಚ್ಚು ನೀರು ಕುಡಿಯಬೇಕು. ಕನಿಷ್ಠ ಪಕ್ಷ ವ್ಯಕ್ತಿ 3 ತಿಂಗಳುಗಳವರೆಗೂ ಪಥ್ಯೆ ಇರಬೇಕಾಗುತ್ತದೆ ಹಾಗೂ ಕಾಯಿಸಿದ ನೀರನ್ನೇ ಕುಡಿಯಬೇಕಾಗುತ್ತದೆ. ಧೂಮಪಾನ ಮದ್ಯಪಾನ ಮಾಡುವ ಅಭ್ಯಾಸ ಇದ್ದರೆ ಅದನ್ನು ಪೂರ್ಣವಾಗಿ ನಿಲ್ಲಿಸಿ ಇಲ್ಲವಾದರೆ ಲಿವರ್ ಸಂಬಂಧಿ ಸಮಸ್ಯೆಗಳು ಆಗಾಗ ಎದುರಾಗಿ ಕೊನೆಗೆ ಸಮಸ್ಯೆ ದೊಡ್ಡದಾಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ.