ಈ ಒಂದು ಪ್ರಾಣಿಯ ಮಾಂಸವನ್ನು ತಿನ್ನುವುದರಿಂದ ಮನುಷ್ಯ ಹಲವಾರು ಸಮಸ್ಯೆಗಳಿಂದ ದೂರ ಆಗ್ತಾನೆ…

593

ಉಡದ ಹೆಸರನ್ನ ಕೇಳಿರುತ್ತೀರಾ ಹೌದು ಉಡ ಅಂದಕೂಡಲೇ ನಮಗೆ ಹಳ್ಳಿ ನೆನಪಾಗುತ್ತದೆ ಹಾಗೆ ಎಷ್ಟೋ ಮಂದಿಗೆ ಛತ್ರಪತಿ ಶಿವಾಜಿ ನೆನಪಾಗುತ್ತಾರೆ. ಅವರು ತಮ್ಮ ರಾಜ್ಯದಲ್ಲಿ ಸಾಕಷ್ಟು ಉಡಗಳನ್ನು ಕೂಡ ಸಾಕಿಕೊಂಡಿದ್ದರು ಯಾಕೆ ಅಂದರೆ ಈ ಉಡಗಳು ಒಮ್ಮೆಲೆ ಯಾವುದಕ್ಕಾದರೂ ಹಿಡಿದುಕೊಂಡರೆ ಅದನ್ನು ಬಿಡಿಸುವುದು ತುಂಬ ಕಷ್ಟಸಾಧ್ಯ. ಆದಕಾರಣ ಯಾವುದೇ ಕೋಟೆಗಳನ್ನು ಹತ್ತುವುದಕ್ಕಾಗಿ ಮತ್ತು ಕೆಲವೊಂದು ಕೋಟೆಗಳಾದ ಆಕ್ರಮಿಸುವಾಗ ಈ ಉಡಗಳ ಸಹಾಯವನ್ನು ಛತ್ರಪತಿ ಶಿವಾಜಿ ತೆಗೆದುಕೊಳ್ಳುತ್ತಾ ಇದ್ದರೂ. ಅದಕ್ಕಾಗಿಯೆ ಈ ಉಡಗಳು ಛತ್ರಪತಿ ಶಿವಾಜಿಗೆ ಒಳ್ಳೆಯ ಗೆಳೆಯ ಅಂತ ಕೂಡ ಹೇಳ್ತಾರೆ.

ಹಾಗಾದರೆ ಉಡದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಇದೊಂದು ಮಾಹಿತಿಯಲ್ಲಿ ನಿಮಗೂ ಕೂಡ ಉಡದ ಬಗೆಗಿನ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಇದೀಗ ಅಳಿವಿನ ಅಂಚಿನಲ್ಲಿ ಇದೆ. ಕಾಡುಗಳಲ್ಲಿ ಎಲ್ಲೋ ಒಂದೆಡೆ ಕಾಣಿಸಿಕೊಳ್ಳುವ ಈ ಉಡ ಹಳ್ಳಿ ಕಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಇತ್ತು.

ಹಾಗೆ ಈ ಉಡವನ್ನು ಬೇಟೆಯಾಡಿ ಮಾಂಸವನ್ನು ಕೂಡ ತಿನ್ನುತ್ತಾ ಇದ್ದರು. ಆದರೆ ಇದೀಗ ಉಡವನ್ನು ಬೇಟೆ ಆಡುವಂತಿಲ್ಲ. ನೋಡಲು ಹಲ್ಲಿಯನ್ನು ಹೋಲುವ ಈ ಉಡವು ಸ್ವಲ್ಪ ದೊಡ್ಡ ಆಕಾರದಲ್ಲಿ ಇರುತ್ತದೆ. ಉದ್ದನೆಯ ನಾಲಿಗೆಯನ್ನು ಉಡಾ ಹೊಂದಿರುತ್ತದೆ ಮತ್ತು ತನ್ನ ಉದ್ದನೆಯ ನಾಲಗೆಯ ಸಹಾಯದಿಂದ ತನ್ನನ್ನು ಆಕ್ರಮಣ ಮಾಡಲು ಬರುವ ಕೆಲವೊಂದು ಕೀಟಗಳನ್ನು ಬೇಟೆಯಾಡಿ ಬಿಡುತ್ತವೆ ಆದರೆ ಸಸ್ಯಹಾರಿ ಈ ಒಂದು ಪ್ರಾಣಿ.

ಉಡದ ಬಗ್ಗೆ ಹೇಳಬೇಕೆಂದರೆ ಗೋಧಿ ಬಣ್ಣದಲ್ಲಿ ಮತ್ತು ಕಪ್ಪು ಬಣ್ಣದಲ್ಲಿ ಇರುತ್ತದೆ ಈ ಉಡದ ಮಾಂಸ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತದೆ ಇದನ್ನು ತಿಂದರೆ ಹೆಚ್ಚು ಶಕ್ತಿ ಬರುತ್ತದೆ ಅಂತ ಕೂಡ ಹೇಳ್ತಾರೆ ಇನ್ನು ಯಾರು 1ಉಡದ ಪೂರ್ತಿ ಮಾಂಸವನ್ನು ತಿಂತಾರೆ ಅವನು ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಅಂತ ಹಳ್ಳಿ ಕಡೆ ಹೇಳುವುದು ಕೂಡ ಉಂಟು. ಈ ಉಡಗಳು ಕಾಡುಗಳಲ್ಲಿ ಮತ್ತು ಬೆಟ್ಟಗುಡ್ಡಗಳಲ್ಲಿ ಮರದ ಪೊಟರೆಯಲ್ಲಿ ಮರದ ಮೇಲೆ ಹುತ್ತದ ಒಳಗೆ ಕಲ್ಲು ಬಂಡೆಯ ಸಂದಿಯಲ್ಲಿ ವಾಸಿಸುತ್ತವೆ.

ಈ ಉಡಗಳು ಉದ್ದನೆಯ ಬಾಲವನ್ನು ಹೊಂದಿರುತ್ತದೆ ಒಮ್ಮೆ ಯಾವುದಕ್ಕಾದರೂ ಅಂಟಿಕೊಂಡರೆ ಇದನ್ನು ಬಿಡಿಸುವುದು ಅಷ್ಟೊಂದು ಸುಲಭವಲ್ಲ ಅದಕ್ಕಾಗಿಯೇ ಹಳ್ಳಿ ಕಡೆ 1ಮಾತನ್ನು ಕೂಡ ಹೇಳ್ತಾರೆ ಹಿಡಿತ ಉಡದ ತರಹ ಇರಬೇಕು ಅಂತ. ಈ ಮಾತು ಅಷ್ಟೆ ಸತ್ಯ ಹಾಗೆ ಈ ಉಡದ ಮಾಂಸವನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಉಡವನ್ನು ಬೇಟೆ ಆಡುವಂತಿಲ್ಲ.

ಹಳ್ಳಿ ಕಡೆ ಮನೆಯೊಳಗೆ ಉಡ ಬಂದರೆ ಮನೆಗೆ ದಾರಿದ್ರ್ಯ ಅನ್ನೋ ಒಂದು ನಂಬಿಕೆಯನ್ನು ಕೂಡ ನಂಬುವುದುಂಟು. ಈ ರೀತಿಯಾಗಿ ಉಡದ ಬಗ್ಗೆ ಕೆಲವು ಮಾತುಗಳನ್ನು ಕೂಡ ಹೇಳ್ತಾರೆ ಹಾಗೆ ಉಡದ ಮಾಂಸ ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ ಅನ್ನೊ ಮಾತು ಕೂಡ ನಿಜ. ಇದಿಷ್ಟು ಉಡದ ಒಂದಿಷ್ಟು ಚಿಕ್ಕ ಮಾಹಿತಿ ಅದೆಷ್ಟು ಪ್ರಾಣಿಗಳನ್ನು ಉಳಿಸಿ ಪ್ರಾಣಿಗಳನ್ನು ಬೇಟೆ ಆಡುವುದನ್ನು ನಿಲ್ಲಿಸಿ ಎಷ್ಟೋ ಪ್ರಾಣಿಗಳು ಇದೀಗ ಅಳಿವಿನ ಅಂಚಿನಲ್ಲಿ ಇರುವುದನ್ನು ನಾವು ಗಮನಿಸಬಹುದಾಗಿದೆ.