ತೂಕ ಬಹಳ ಬೇಗ ಕಡಿಮೆಯಾಗಬೇಕು ಅಂದಲ್ಲಿ ಈ ಪರಿಹಾರ ಮಾಡಿ ನೀವು ಅಂದುಕೊಂಡಿರುವುದಿಲ್ಲ ನಿಮ್ಮ ತೂಕ ಇಷ್ಟು ವೇಗವಾಗಿ ಕಡಿಮೆಯಾಗುತ್ತೆ ಅಂತ. ಹೌದು ಸೊಂಟದ ಸುತ್ತ ಇರುವ ಬೊಜ್ಜು ಕರಗಿಸುವುದಕ್ಕೆ ಈ ಡ್ರಿಂಕ್ ಪ್ರಯೋಜನಕಾರಿ.ಇದನ್ನು ಮಾಡುವ ವಿಧಾನ ಹೇಗೆ ಎಂಬುದನ್ನ ನಾವು ಹೇಳಿಕೊಡುತ್ತೇವೆ ನೀವು ನಾವು ಹೇಳುವಂತಹ ಪರಿಹಾರ ಮಾಡುವುದರ ಜೊತೆಗೆ ನಾವು ಹೇಳುವಂತಹ ಜೀವನಶೈಲಿಯನ್ನು ಕೂಡ ಪಾಲಿಸಬೇಕು ಆಗ ಮಾತ್ರ ನಿಮ್ಮ ತೂಕ ಇಳಿಕೆ ಆಗುತ್ತದೆ.
ಹೌದು ಇಷ್ಟಪಟ್ಟಿದ್ದನ್ನು ತಿಂದು ತೂಕ ಹೆಚ್ಚು ಮಾಡಿಕೊಂಡು ಬಿಡುತ್ತೇವೆ ಆದರೆ ತಿನ್ನುವಾಗ ನಮಗೆ ಅರಿವಿರುವುದಿಲ್ಲ ತೂಕ ಹೆಚ್ಚುತ್ತ ಅಂತ. ತಿನ್ನುವುದೇನೊ ತಿಂದು ಬಿಡುತ್ತೇವೆ ಆದರೆ ನಂತರ ಇದೆಯಲ್ಲ ಈ ತೂಕ ಇಳಿಸಿಕೊಳ್ಳುವ ಪಜೀತಿ ಬೇಡಪ್ಪಾ ಬೇಡ ಸಾಕಾಗಿ ಹೋಗುತ್ತೆ ಆದರೆ ತೂಕ ಹೆಚ್ಚಿಸಿಕೊಂಡರು ಅದನ್ನು ಉಳಿಸಿಕೊಳ್ಳುವ ಪರಿಹಾರವನ್ನು ತಿಳಿದಿರಬೇಕು.
ಇಂದಿನ ಕಾಲದಲ್ಲಿ ಬಾಯಿಗೆ ರುಚಿ ಸಿಗುವ ಆಹಾರ ಸಿಕ್ಕರೆ ಸಾಕು ಬೇರೇನೂ ಅಲೋಚನೆಯೇ ಬರುವುದಿಲ್ಲ. ನಾವು ಇವತ್ತು ತೂಕ ಹೆಚ್ಚಿಸಿಕೊಳ್ಳುತ್ತಿರುವ ಇದರ ಹಿಂದಿನ ಕಾರಣ ಏನು ಅಂದರೆ ಹೆಚ್ಚು ಸಮಯ ಕೂತಲ್ಲಿಯೆ ಕೂತು ಕೆಲಸ ಮಾಡುವುದರಿಂದ.
ಹೌದು ನಾವು ತಿಂದ ಆಹಾರ ಜೀರ್ಣವಾದ ಮೇಲೆ ಅದರಿಂದ ನಮಗೆ ದೊರೆಯುವ ಶಕ್ತಿಯನ್ನು ನಾವು ದೈಹಿಕ ಶ್ರಮವನ್ನು ಹಾಕುವ ಮೂಲಕ ಇಳಿಸಿಕೊಳ್ಳಬೇಕು ಆದರೆ ಯಾವಾಗ ಆ ರೀತಿ ಮಾಡುವುದಿಲ್ಲ ತಾನಾಗಿಯೇ ತೂಕ ಹೆಚ್ಚುತ್ತದೆ.ಆದ್ದರಿಂದ ನೀವು ತಿಂದ ಆಹಾರಕ್ಕೆ ತಕ್ಕಂತೆ ನಿಮ್ಮ ದೈಹಿಕ ಶ್ರಮ ಇರಲಿ ಪ್ರತಿ ದಿನ ಅದೆಷ್ಟು ವ್ಯಾಯಾಮ ಮಾಡಿ ಎಕ್ಸರ್ ಸೈಸ್ ಮಾಡಿ ವಾಕ್ ಮಾಡಿ ಯಾವುದಾದರೂ ರೀತಿಯಲ್ಲಿ ದೇಹವನ್ನ ದಂಡಿಸಿ ಆಗ ತೂಕ ಹೆಚ್ಚುವ ಪ್ರಮೇಯವೂ ಬರುವುದಿಲ್ಲ.ಹೆಚ್ಚಾದ ತೂಕ ಇಳಿಸಿಕೊಳ್ಳುವುದಕ್ಕೆ ಮಾಡಬೇಕಾಗಿರುವುದೇನೆಂದರೆ ಇದಕ್ಕಾಗಿ ಬೇಕಾಗಿರುವುದು ಏನೆಂದರೆ ಶುಂಠಿ ಬೆಳ್ಳುಳ್ಳಿ ಜೀರಿಗೆ ನಿಂಬೆಹಣ್ಣಿನ ರಸ ಮತ್ತು ನೀವು ಮನೆಯಲ್ಲಿ ಬಳಸುವ ಯಾವುದಾದರೂ ಕಾಫಿ ಪೌಡರ್.
ಮೊದಲಿಗೆ ನೀರನ್ನು ಕುದಿಸುವಾಗ ನೀರಿಗೆ ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಜಜ್ಜಿ ಹಾಕಿ ನಂತರ ಶುಂಠಿ ಹಾಕಿ ನೀರನ್ನು ಕುದಿಸಿಕೊಳ್ಳಿ ಈ ಪ್ರಮಾಣ ಹೇಗಿರಲಿ ಅಂದರೆ ಟೀ ಮಾಡುವಾಗ ಇದಕ್ಕೆ ಶುಂಠಿ ಮತ್ತು ಟೀ ಪೌಡರ್ ಇವೆಲ್ಲವುದನ್ನೂ ಹೇಗೆ ಎಷ್ಟು ಪ್ರಮಾಣದಲ್ಲಿ ಹಾಕ್ತೀರಾ ಅದೇ ಪ್ರಮಾಣದಲ್ಲಿ ಈ ಡ್ರಿಂಕ್ ತಯಾರಿಕೆ ಮಾಡುವಲ್ಲಿಯೂ ಕೂಡ ಹಾಕಬೇಕಿರುತ್ತದೆ.ನೀರು ಬಿಸಿ ಆಗುತ್ತಿರುವಾಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಮತ್ತು ಜೀರಿಗೆ ಹಾಕಿ ಕುದಿಸಿಕೊಂಡು ಈ ನೀರು ಕುದ್ದ ಮೇಲೆ ಇದಕ್ಕೆ ಮುಕ್ಕಾಲು ಚಮಚದಷ್ಟು ಕಾಫಿ ಪೌಡರ್ ಹಾಕಿ ಮತ್ತೊಮ್ಮೆ ಕುದಿಸಿಕೊಳ್ಳಬೇಕು.
ಇದಾದ ನಂತರ ಈ ನೀರನ್ನೂ ಶೋಧಿಸಿಕೊಂಡು ಇದಕ್ಕೆ ಅರ್ಧ ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಇದನ್ನು ಕುಡಿಯಬೇಕು ಯಾವಾಗ ಅಂದರೆ ತಿಂಡಿಯ ಬಳಿಕ ತಿಂಡಿಯ 1ಗಂಟೆಯ ಬಳಿಕ ಈ ಡ್ರಿಂಕ್ ಮಾಡಿ ಕುಡಿಯಿರಿ.ಶುಂಠಿ ಮತ್ತು ಬೆಳ್ಳುಳ್ಳಿ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಹಾಗೂ ಜೀರಿಗೆ ಕೂಡ ಜೀರ್ಣಕ್ರಿಯೆ ಉತ್ತಮವಾಗಿ ಮಾಡಿಸುತ್ತೆ ಇನ್ನೂ ನಿಂಬೆಹಣ್ಣಿನ ರಸ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಈ ಸ್ಟ್ರಿಂಗ್ ನಿಮಗೆ ಒಂದೊಳ್ಳೆ ರಿಫ್ರೆಶ್ ಮೆಂಟ್ ಅನ್ನು ಕೊಡುತ್ತದೆ. ಈ ಸರಳ ಪರಿಹಾರ ಪಾಲಿಸಿ ಹಾಗೂ ಜೊತೆಗೆ ವ್ಯಾಯಾಮ ಮಾಡುವುದನ್ನು ಮತ್ತು ಹೆಚ್ಚು ನೀರು ಕುಡಿಯುವುದು ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಎಂದಿಗೂ ಮಿಸ್ ಮಾಡಬೇಡಿ ಧನ್ಯವಾದ.