ಈ ಒಂದು ಸಸ್ಯವನ್ನ ತಂದು ನಿಮ್ಮ ಮನೆಯಲ್ಲಿ ನೆಟ್ಟು ನೋಡಿ .. ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲ ಬ್ಯಾಡ ಲಕ್ ಹೋಗಿ ನಿಮ್ಮ ಜೀವನದಲ್ಲಿ ಅದೃಷ್ಟದ ದಿನಗಳು ಶುರು ಆಗುತ್ತವೆ… ಹಾಗಾದ್ರೆ ಅಷ್ಟೊಂದು ದೈವಸಂಬೂತ ಹೊಂದಿರೋ ಆ ಸಸ್ಯ ಯಾವುದು ಗೊತ್ತ ..

402

ಸ್ನೇಹಿತರೇ ಸಾಮಾನ್ಯವಾಗಿ ಶಾಸ್ತ್ರ ಸಂಪ್ರದಾಯ ಎಂಬುದು ನಾವುಗಳು ಮಾಡಿಕೊಂಡಿರುವುದು ಆದರೆ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೆ ಕೂಡ ಅದರದೇ ಆದಂತಹ ಕೆಲವೊಂದು ರೀತಿ ನೀತಿಗಳಿರುತ್ತದೆ ಅದರ ಜೊತೆಯಲ್ಲಿ ಯಾವುದೇ ಶಾಸ್ತ್ರ ಸಂಪ್ರದಾಯಗಳನ್ನು ನಾವು ಪಾಲಿಸಬೇಕಾದರೆ ಕೂಡ ಮನಸ್ಸಿನಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡು ಪಾಲಿಸಬೇಕು.

ಆದರೆ ಕೆಲವೊಂದು ಬಾರಿ ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಕೆಟ್ಟ ದೃಷ್ಟಿ ದುರಾದೃಷ್ಟ ಇವುಗಳಿಂದ ದೂರ ಆಗಲು ಸಾಧ್ಯ ಆಗುವುದಿಲ್ಲ ಸ್ನೇಹಿತರೆ ಆದರೆ ಈ ದಿನ ನಾನು ನಿಮಗಿರುವ ದುರದೃಷ್ಟದಿಂದ ಹೇಗೆ ಹೊರಬರುವುದು ಹೇಗೆ ನಿಮ್ಮ ಮನೆಯಲ್ಲಿ ನೀವು ಅದೃಷ್ಟವನ್ನು ತಂದುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯಿಂದ ನೀಡುತ್ತೇನೆ.

ಇದೊಂದು ಚಿಕ್ಕ ಹಾಗೂ ಸುಲಭದ ಕೆಲಸ ಈ ಕೆಲಸವನ್ನು ಮಾಡಿದರೆ ನಿಮಗೆ ಎಂತಹ ರೀತಿಯಾದಂತ ದುರಾದೃಷ್ಟ ಇದ್ದರೂ ಕೂಡ ಅದರಿಂದ ನೀವು ಮುಕ್ತಿಯನ್ನು ಪಡೆಯಬಹುದು ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ ಮತ್ತು ಹೆಚ್ಚಿನ ಸಮಯದ ಅವಶ್ಯಕತೆ ಕೂಡ ಇಲ್ಲ .ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರಲೆಂದು ತುಳಸಿ ಗಿಡ ಬ್ಯಾಂಬೂ ಗಿಡ ಮನಿ ಪ್ಲಾಂಟ್ ಈ ರೀತಿ ಎಷ್ಟೊಂದು ಗಿಡಗಳನ್ನು ನಾವು ನೆಟ್ಟಿರುತ್ತೆವೆ ಅವೆಲ್ಲವೂ ಕೂಡ ನಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುವ ಹಾಗೆ ನೋಡಿಕೊಂಡು ಯಾವುದೇ ರೀತಿಯಾದಂತಹ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಅದನ್ನು ಮನೆಯಿಂದ ಹೊರ ಹಾಕುತ್ತವೆ ಆದರೆ ಈ ಗಿಡವನ್ನು ಹೇಗೆ ಬೆಳೆಸಬೇಕು .

ಮತ್ತು ಈ ಗಿಡವನ್ನು ಹೇಗೆ ಪಾಲನೆ ಮಾಡಬೇಕು ಎಂಬ ಮಾಹಿತಿ ನಮಗಿರುವುದಿಲ್ಲ ಆದರೆ ಈ ದಿನ ನಾನು ನಿಮಗೆ ಬ್ಯಾಂಬೂ ಗಿಡವನ್ನು ಮನೆಯಲ್ಲಿ ಇಡುವುದರಿಂದ ಏನೆಲ್ಲ ಉಪಯೋಗ ಆಗುತ್ತದೆ ಅದರ ಜೊತೆಯಲ್ಲಿ ಬ್ಯಾಂಬೂ ಗಿಡವನ್ನು ಹೇಗೆ ನಾವು ಮನೆಯಲ್ಲಿ ರಕ್ಷಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಮತ್ತು ಮನೆಯಲ್ಲಿ ದುರದೃಷ್ಟವೇ ಪಾಸಿಟಿವ್ ಎನರ್ಜಿ ಇಲ್ಲ ಎಂಬುವವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ಬ್ಯಾಂಬೂ ಗಿಡವನ್ನು ಎಲ್ಲರೂ ನೋಡಿರುತ್ತಾರೆ ಮತ್ತು ಕೆಲವೊಬ್ಬರು ಮನೆಯಲ್ಲಿ ಈಗಾಗಲೇ ತಂದು ಇಟ್ಟುಕೊಂಡಿರುತ್ತಾರೆ ಆದರೆ ಅದರಿಂದ ಏನು ಉಪಯೋಗ ಮತ್ತು ಅದನ್ನು ಹೇಗೆ ಇಡುವುದು ಎಂಬ ಮಾಹಿತಿ ಇರುವುದಿಲ್ಲ.ಈ ಬ್ಯಾಂಬೂ ಗಿಡವನ್ನು ಇಡುವಾಗ ನೀರು ಅಗ್ನಿ ಲೋಹ ಭೂಮಿ ಈ ನಾಲ್ಕು ಪ್ರತಿಬಿಂಬಿಸುವ ರೀತಿಯಲ್ಲಿ ಈ ಬ್ಯಾಂಬು ಗಿಡವನ್ನು ನಾವು ಮನೆಯಲ್ಲಿ ಇಡಬೇಕು ಅದು ಹೇಗೆ ಗೊತ್ತೇ .ಬ್ಯಾಂಬೂ ಗಿಡವನ್ನು ಒಂದು ಚಿಕ್ಕ ಕಂಟೈನರ್ನಲ್ಲಿ ಹಾಕಿ ಎರಡರಿಂದ ಮೂರು ಇಂಚಿನಷ್ಟು ನೀರನ್ನು ಹಾಕಬೇಕು ಆ ಸಂದರ್ಭದಲ್ಲಿ ಅದರಲ್ಲಿ ನೀರಿನ ಪ್ರತಿಬಿಂಬ ಇರುತ್ತದೆ.

ಆ ಕಂಟೈನರ್ ರೊಳಗೆ ಎರಡು ಮೂರು ಕಲ್ಲುಗಳನ್ನು ಹಾಕಿದರೆ ಅದಕ್ಕೆ ಭೂಮಿಯ ಪ್ರತಿಬಿಂಬ ಸಿಕ್ಕಿದಂತಾಗುತ್ತದೆ ಮತ್ತೊಂದು ವಿಶೇಷವಾದ ವಿಷಯವೆಂದರೆ ಸಾಮಾನ್ಯವಾಗಿ ಬ್ಯಾಂಬೂ ಗಿಡವನ್ನು ಗಾಜಿನ ಬೌಲ್ನಲ್ಲಿ ಇಡಬೇಕು ಇಟ್ಟರೆ ಅದರ ಬೆಳವಣಿಗೆ ನಮಗೆ ತಿಳಿಯುತ್ತದೆ ಆದರೆ ಅದಕ್ಕೆ ಲೋಹದ ಪ್ರತಿಬಿಂಬವನ್ನು ನೀಡಲು ಅದಕ್ಕೆ ಯಾವುದಾದರೂ ಒಂದು ನಾಣ್ಯವನ್ನು ಹಾಕಿದರೆ ಸಾಕು .

ಅದಕ್ಕೆ ಅಗ್ನಿಯನ್ನು ಪ್ರತಿಬಿಂಬಿಸಿ ಬೇಕಾಗಿರುವುದರಿಂದ ಅದರ ಸುತ್ತ ಒಂದು ಕೆಂಪು ದಾರವನ್ನು ಕಟ್ಟಬೇಕು ಈ ರೀತಿ ಮಾಡುವುದರ ಜೊತೆಗೆ ಅದರ ಕೊಂಬೆಗಳು ಬೆಸ ಸಂಖ್ಯೆಯಲ್ಲಿ ಇರದ ರೀತಿಯಲ್ಲಿ ನೋಡಿಕೊಳ್ಳಬೇಕು ಮತ್ತು ಸೂರ್ಯನ ರಶ್ಮಿ ತಾಕದಂತೆ ಮತ್ತು ಅದರ ನೀರನ್ನು ಸಾಧ್ಯವಾದಷ್ಟು ತಿಂಗಳಿಗೆ ಒಮ್ಮೆಯಾದರೂ ಬದಲಾಯಿಸಿ ಅದು ಒಣಗಿದ ರೀತಿಯಲ್ಲಿ ನೋಡಿಕೊಳ್ಳಬೇಕು ಈ ರೀತಿ ಮಾಡುವುದರಿಂದಾಗಿ ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಸದಾ ಇರುತ್ತದೆ ಧನ್ಯವಾದಗಳು.