ಈ ತರ ಬಟ್ಟೆ ಹಾಕಿಕೊಳ್ಳುವುದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆಯಂತೆ …ಹಾಗಾದ್ರೆ ಯಾವ ರೀತಿಯ ಬಟ್ಟೆ ಗೊತ್ತ

68

ಈ ರೀತಿಯ ಬಟ್ಟೆಯನ್ನು ಧರಿಸುವುದರಿಂದ ಮನೆಗೆ ದಾರಿದ್ರ್ಯ ಬಡತನ ಗ್ಯಾರಂಟಿಯಂತೆ ಹಾಗಾದರೆ ಎಂತಹ ಬಟ್ಟೆಯನ್ನು ಹಾಕಬಾರದು ಆ ರೀತಿಯ ಬಟ್ಟೆಗಳನ್ನು ಹಾಕುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಮನೆಯಲ್ಲಿ ಆಗುತ್ತದೆ ಅನ್ನೋದನ್ನು ನೀವೇನಾದರೂ ತಿಳಿದರೆ ನಿಜಕ್ಕೂ ಆ ರೀತಿಯ ಬಟ್ಟೆಯನ್ನು ಇನ್ನು ಮುಂದೆ ಧರಿಸಲು ಇಷ್ಟಪಡುವುದಿಲ್ಲ.

ಹಾಗಾದರೆ ಬನ್ನಿ ಈ ಮಾಹಿತಿಯಲ್ಲಿ ನಾವು ಎಂತಹ ಬಟ್ಟೆಯನ್ನು ಹಾಕಬಾರದು ಮತ್ತು ಅಂತಹ ಬಟ್ಟೆಯನ್ನು ಹಾಕುವುದರಿಂದ ಎಷ್ಟೆಲ್ಲ ಸಮಸ್ಯೆಯಾಗುತ್ತದೆ ಅನ್ನೋದನ್ನು ತಿಳಿಯೋಣ . ಬಟ್ಟೆ ಎಂಬುದು ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ ಮತ್ತು ಬಟ್ಟೆ ಮಾನ ಮುಚ್ಚುವುದಕ್ಕೆ ಅನ್ನೋ ಒಂದು ವಿಷಯವನ್ನು ಇಂದಿನ ದಿನಗಳಲ್ಲಿ ನಮ್ಮ ಜನರು ಮರೆತುಬಿಟ್ಟಿದ್ದಾರೆ .

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಮತ್ತು ತುಂಡು ಬಟ್ಟೆ ಮಾನ ಮುಚ್ಚೋಕೆ ಅನ್ನೋ ಹಾಡನ್ನು ನೀವು ಕೇಳಿದ್ದೀರಾ ಅಲ್ವಾ ಈ ಒಂದು ಹಾಡಿನಲ್ಲಿ ಅದೆಷ್ಟು ಅರ್ಥಪೂರ್ಣತೆ ಇದೆ ಅಂದರೆ ಮನುಷ್ಯ ಇದನ್ನೊಂದು ಅರಿತುಕೊಂಡರೆ ಸಾಕು ನೆಮ್ಮದಿಯ ಜೀವನವನ್ನು ಸಾಗಿಸಬಹುದು .ಆದರೆ ಇಂದಿನ ದಿನಗಳಲ್ಲಿ ಜನರು ಟ್ರೆಂಡ್ ಎಂದು ಕಾಲ ಕಾಲಕ್ಕೆ ತಕ್ಕ ಹಾಗೆ ಬಟ್ಟೆಗಳನ್ನು ಬದಲಾಯಿಸುತ್ತಿರುತ್ತಾರೆ ಮಾರುಕಟ್ಟೆಗೆ ಹೊಸ ರೀತಿಯ ಬಟ್ಟೆಗಳು ಬಂದರೆ ಅದಕ್ಕೆ ಆಕರ್ಷಕರಾಗಿ ಕೊಂಡುಕೊಳ್ಳಲು ಇಚ್ಚಿಸುತ್ತಾರೆ .

ಬಟ್ಟೆ ಇರುವುದು ಮನುಷ್ಯರ ಮಾನವನ್ನು ಮುಚ್ಚುವುದಕ್ಕೆ ಆದರೆ ಜನರು ಇಂದಿನ ದಿನಗಳಲ್ಲಿ ಟ್ರೆಂಡ್ ಎಂದು ಹರಿದ ಬಟ್ಟೆಗಳನ್ನು ಧರಿಸುತ್ತಿದ್ದಾರೆ ಆದರೆ ನಾವು ಹಾಕುವಂತಹ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದರ ಜೊತೆಗೆ ನಾವು ಏನು ಅನ್ನುವುದನ್ನು ಕೂಡ ತಿಳಿಸಿ ಹೇಳುತ್ತದೆ .ಜನರು ಮೊದಲು ಮನುಷ್ಯನನ್ನು ನೋಡಿದಾಗ ಅವನು ಹಾಕಿದಂತಹ ಬಟ್ಟೆಯ ಮೇಲೆ ಅವನನ್ನು ಜಡ್ಜ್ ಮಾಡುತ್ತಾರೆ ಇದು ಎಲ್ಲರಿಗೂ ಕೂಡ ಅನುಭವಕ್ಕೆ ಬಂದಿರುತ್ತದೆ . ಹಾಗಾದರೆ ಹರಿದ ಬಟ್ಟೆಗಳನ್ನು ಹಾಕುವುದರಿಂದ ಆ ವ್ಯಕ್ತಿಗೆ ಏನೆಲ್ಲ ಸಮಸ್ಯೆಗಳು ಎದುರಾಗುತ್ತದೆ .

ಅಂದರೆ ಹರಿದ ಬಟ್ಟೆಯನ್ನು ಹಾಕಿಕೊಂಡಾಗ ಅವನಿಗೆ ಅವನ ಜೀವನದಲ್ಲಿ ದಾರಿದ್ರ್ಯ ಎದುರಾಗುತ್ತದೆ ಅವನು ಬಡವಾಗುವ ದಿನಗಳು ಬಂದುಬಿಡುತ್ತದೆ ಆದ್ದರಿಂದ ಈ ರೀತಿ ಬಟ್ಟೆ ಹಾಕುವುದು ಮನುಷ್ಯ ಜೀವನಕ್ಕೆ ಒಳಿತಲ್ಲ .ನಮ್ಮ ಹಿರಿಯರು ಹೇಳಿರುವ ಹಾಗೆ ಮನೆಯಲ್ಲಿ ಒಣಗಿದ ಬಟ್ಟೆಯನ್ನು ಆಚೆ ಎಂದಿಗೂ ಬಿಡಬಾರದು ಈ ರೀತಿಯಾಗಿ ಆಚೆಯೇ ಒಣಗಿದ ಬಟ್ಟೆಯನ್ನು ಬಿಡುವುದರಿಂದ ನಕಾರಾತ್ಮಕ ಶಕ್ತಿಗಳು ಈ ಮೂಲಕ ಮನೆಗೆ ಪ್ರವೇಶಿಸುತ್ತದೆ ಅಂತ ಹೇಳಲಾಗುವುದು .

ಚಂದ್ರ ಗ್ರಹದ ಬಗ್ಗೆ ಎಲ್ಲರಿಗೂ ಕೂಡ ಗೊತ್ತಿದೆ ಚಂದ್ರ ಗ್ರಹ ಪ್ರೀತಿ ಪ್ರೇಮ ಪ್ರಣಯ ಮತ್ತು ಐಷಾರಾಮಿಯತೆಯನ್ನು ಸೂಚಿಸುತ್ತದೆ ಈ ರೀತಿ ಹರಿದ ಬಟ್ಟೆಯನ್ನು ಹಾಕುವುದರಿಂದ ಚಂದ್ರ ಗ್ರಹ ದೋಷ ಬರಬಹುದು ಮತ್ತು ನೀವು ನಿಮ್ಮ ಜೀವನದಲ್ಲಿ ಈ ಎಲ್ಲ ಅಂಶಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೀರಿ .

ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಪ್ಯಾಂಟ್ ಶರ್ಟ್ಗಳನ್ನು ಹಾಕಲು ಹೆಚ್ಚಿಸುತ್ತಾರೆ ಈ ರೀತಿ ಪ್ಯಾಂಟು ಕೋಟುಗಳು ಹಾಕುವುದರಿಂದ ಬಡತನ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಅನ್ನೋ ಒಂದು ಮಾತು ಕೂಡ ಹಿರಿಯರು ಹೇಳುತ್ತಾರೆ .
ಈ ರೀತಿಯಾಗಿ ಟ್ರೆಂಡ್ ಫ್ಯಾಷನ್ ಎಂದು ಅದರ ಹಿಂದೆ ಹೋದರೆ ತುಂಡು ಬಟ್ಟೆ ಹರಿದ ಬಟ್ಟೆ ಹಾಕಿಕೊಳ್ಳುವುದರಿಂದ ಈ ರೀತಿಯ ದಾರಿದ್ರ್ಯ ಬಡತನ ಸಮಸ್ಯೆಯನ್ನು ನಾವು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ ಆದ್ದರಿಂದ ಯಾರೂ ಕೂಡ ಈ ರೀತಿಯ ಹರಿದ ಬಟ್ಟೆಯನ್ನು ಹಾಕಬೇಡಿ ಮೈತುಂಬಾ ಬಟ್ಟೆಯನ್ನು ಹಾಕಿಕೊಂಡು ನಿಮ್ಮ ವ್ಯಕ್ತಿತ್ವ ಬಿಂಬಿಸುವ ಹಾಗೆ ನೋಡಿಕೊಳ್ಳಿ .