ಈ ದೇವಸ್ಥಾನದಲ್ಲಿ ನೀವು ನಿಮ್ಮ ಕಷ್ಟಗಳನ್ನ ದೇವರಲ್ಲಿ ತೋಡಿಕೊಂಡರೆ ಸಾಕು , ಅದು ಎಂತ ಕಠಿಣ ಆಗಿದ್ದರು ಸಹ ನಿವಾರಣೆ ಮಾಡುವಂತಹ ಶಕ್ತಿ ಈ ದೇವರಿಗೆ ಇದೆ…ಅಷ್ಟಕ್ಕೂ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ನೋಡಿ…

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಕರ್ನಾಟಕದಲ್ಲಿಯೇ ಇರುವಂತಹ ಈ ವಿಶೇಷ ದೇವಾಲಯ ನರಸಿಂಹ ದೇವನು ಈ ದೇವಾಲಯ ವಿಷ್ಣುವಿನ ಅವತಾರವಾಗಿದೆ. ಈ ದೇವಾಲಯವು ಬೀದರ್ ನಲ್ಲಿ ಎದ್ದು ಈ ದೇವಾಲಯಕ್ಕೆ ಹೋಗಲು ನೀರಿನ ಒಳಗೆ ಇಳಿಯಬೇಕಾಗುತ್ತದೆ. ಇಲ್ಲಿ ವಿಷ್ಣು ಸ್ವಾಮಿಯು ನರಸಿಂಹನ ಅವತಾರದಲ್ಲಿ ನೆಲೆಸಿದ್ದಾರೆ. ನರಸಿಂಹ ದೇವರು ಸಿಂಹ ತಲೆ ಮತ್ತು ಮಾನವನ ದೇಹದ ರೂಪದಲ್ಲಿ ನೆಲೆಸಿದ್ದು, ಭಾರತೀಯ ಹಿಂದೂ ಪುರಾಣದಲ್ಲಿ ಭಗವಾನ್ ನರಸಿಂಹ ಕಂಬದಿಂದ ಹೊರ ಬರುತ್ತಾರೆ ಎಂದು ಹೇಳಲಾಗಿದೆ ಹಾಗೆ ಹಿರಣ್ಯ ಕಶ್ಯಪುವಿನಿಂದ ಪ್ರಹ್ಲಾದನನ್ನು ರಕ್ಷಿಸುತ್ತಾರೆ ನರಸಿಂಹ ದೇವಾಲಯ ತುಂಬಾ ಕಡೆ ಇದೆ. ಅದರಲ್ಲಿ ಬೀದರ್ ನಲ್ಲಿ ಇರುವ ನರಸಿಂಹನ ಜರಾಣಿ ಗುಹೆ ಕೂಡ ಒಂದು. ಆದರೆ ಈ ದೇವಾಲಯವು ತುಂಬಾ ವಿಶೇಷ, ಜೀವನದಲ್ಲಿ ಒಮ್ಮೆ ಆದರೂ ಈ ದೇವಾಲಯಕ್ಕೆ ಭೇಟಿ ಕೊಡಿ ಹೆಸರುವಾಸಿ ಐತಿಹಾಸಿಕ ಸ್ಥಳದಲ್ಲಿ ಬೀದರ್ ಕೂಡ ಒಂದು ಇದನ್ನು ಉತ್ತರ ಕರ್ನಾಟಕ ಸ್ಮಾರಕ ನಗರ ಎಂದು ಕರೆಯುತ್ತಾರೆ.

ಬೀದರ್ ನ ಹೆಸರುವಾಸಿ ಸ್ಥಳಗಳಲ್ಲಿ ಒಂದಾಗಿರುವ ಈ ದೇವಾಲಯವು, ಇಲ್ಲಿ ನರಸಿಂಹ ಜರಾಣಿ ಗುಹೆ ದೇವಾಲಯ ಸಹ ಇದೆ. ಇದರ ವಿಶೇಷತೆ ಏನು ಅಂತಾ ಹೇಳುವುದಾದರೆ ನರಸಿಂಹ ದೇವರ ಪ್ರತಿಮೆ ಒಂದು ಸುರಂಗ ಗುಹೆ ಒಳಗೆ ಇದ್ದು, ಈ ಗುಹೆ ಒಳಗೆ ವರ್ಷದ 365 ದಿನ ನೀರಿನಿಂದ ತುಂಬಿರುತ್ತದೆ ನರಸಿಂಹ ದೇವರ ಪ್ರತಿಮೆ ಗುಹೆಯ ಅಂತ್ಯದಲ್ಲಿದೆ ಮತ್ತು ಪ್ರತಿಮೆಯನ್ನು ತಲುಪಲು ಭಕ್ತರು 5 ರಿಂದ 6 ಅಡಿ ನೀರು ತುಂಬಿದ ಗುಹೆ ಒಳಗೆ ಒಂದು ಕಿ.ಮಿ ಕಾಲುದಾರಿಯಲ್ಲಿ ನಡೆದು ಹೋಗಬೇಕು.

ಪುರಾಣ ಕಥೆ ಹೇಳುತ್ತದೆ ಹಿರಣ್ಯ ಕಶಿಪುವನ್ನು ಕೊಂದ, ನರಸಿಂಹ ದೇವರು ಈ ಗುಹೆಯಲ್ಲಿ ಜರಾಸಿಂಹ ನನ್ನು ಕೊಳ್ಳುತ್ತಾನೆ. ಜರಾಸುರ ಈ ಗುಹೆ ಒಳಗೆ ಅವಿತು ಕುಳಿತಿರುತ್ತಾನೆ, ಇವನು ಮಹಾ ಶಿವ ಭಕ್ತ ಆಗಿರುತ್ತಾನೆ. ಈ ಗುಹೆಯಲ್ಲಿ ಶಿವ ಲಿಂಗವನ್ನು ಇಟ್ಟು ಶಿವನನ್ನು ಧ್ಯಾನ ಮಾಡುತ್ತಿರುತ್ತಾನೆ. ಇಲ್ಲಿ ನರಸಿಂಹ ಸ್ವಾಮಿಯು ಜರಾಸೂರ ನ ಶಿವ ಭಕ್ತಿ ನೋಡಿ ನಿನ್ನ ಕೊನೆ ಆಸೆ ಏನು ಹೇಳೆಂದು ಕೇಳುತ್ತಾರೆ. ಅದಕ್ಕೆ ಆ ಸ್ಥಳಕ್ಕೆ ಜರಣಿ ನರಸಿಂಹ ಎಂದು ಕರೆಯುತ್ತಾರೆ. ಜರಣಿ ಅಥವಾ ಜರ ಎಂದರೆ ಜಲ ಅಂದರೆ ಇಲ್ಲಿ ನೀರು ಯಾವಾಗಲೂ ಹರಿಯುತ್ತಿರುತ್ತದೆ. ಇಲ್ಲಿ ಅಚ್ಚರಿ ಏನು ಅಂದರೆ ನೀರು ಏಲಿಂದ ಹರಿದು ಬರುತ್ತದೆ ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ. ಅಲ್ಲಿಯ ಜನರು ಮುಖ್ಯ ದ್ವಾರದ ಬಳಿ ಲಕ್ಷ್ಮಿ ನರಸಿಂಹ ರೂಪದಲ್ಲಿ ಇರುವ ದೇವರು ಇದೆ. ನೀರಿನ ಒಳಗೆ ಇಳಿದು ಗುಹೆ ಒಳಗೆ ನಡೆದುಕೊಂಡು ಹೋದರೆ ಉಗ್ರ ನರಸಿಂಹ ದೇವರ ಮೂರ್ತಿ ಇದೆ. ಈ ಮೂರ್ತಿ ಜೊತೆಗೆ ಅಲ್ಲಿಯೇ ಜರಾಸುರನನ್ನು ಪೂಜಿಸಿದ ಶಿವ ಲಿಂಗ ಕೂಡ ಇದೆ ಹಾಗೂ ಎರಡಕ್ಕೂ ಪೂಜಿಸಲಾಗುತ್ತದೆ.

ಒಂದೇ ಕಡೆ ನರಸಿಂಹ ಮತ್ತು ಶಿವನ ಮೂರ್ತಿ ಇರುವುದು ಮತ್ತು ಪೂಜಿಸುವುದು ವಿರಳ ಈ ನರಸಿಂಹ ದೇವರಿಗೆ ದರ್ಶನ ಮಾಡಿದರೆ ನಮ್ಮ ಆಸೆ ಕನಸು ಈಡೇರುತ್ತದೆ ಮತ್ತು ಮಕ್ಕಳಿಗೆ ಕೇಶ ಮುಂಡನ ಮಾಡಿಸಿದರೆ, ಮಕ್ಕಳ ಆಯಸ್ಸು ಹೆಚ್ಚುವುದು ನರಸಿಂಹ ಜರ ದೇವಸ್ಥಾನಕ್ಕೆ ಹಲವಾರು ಹೆಸರು ಇದೆ. ಜರಣಿ ನರಸಿಂಹ ಸ್ವಾಮಿ, ನರಸಿಂಹ ಜರಣಿ ಗುಹೆ ದೇವಾಲಯ ಹಾಗೂ ನರಸಿಂಹ ದೇವಾಲಯ ಇತ್ಯಾದಿ. ನರಸಿಂಹ ಜರಣಿ ಗುಹೆ ದೇವಾಲಯ ಖಂಡಿತವಾಗಿ ಭಾರತದ ಅನನ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ಗುಹೆಯು ಸುರಂಗದಲ್ಲಿ ಇದೆ ಆಳವಾದ ನೀರಿನ ಮೂಲಕ ನಡೆದುಕೊಂಡು ಹೋಗುವುದು ರೋಮಾಂಚಕ ವಿಚಾರವಾಗಿದೆ. ನೀವು ಏಂದಾದರು ಬೀದರ್ ಗೆ ಭೇಟಿ ನೀಡಿದಾಗ ನರಸಿಂಹ ದೇವಾಲಯಕ್ಕೆ ಹೋಗಿ ಬನ್ನಿ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.