ಈ ಭಿಕ್ಷುಕ Law ಓದುತ್ತಾ ಇದ್ದಾರೆ ಲಾಯರ್ ಆಗುವುದು ಇವರ ಇವರ ಕನಸಂತೆ ಹಾಗಾದ್ರೆ ಈ ನಿಮಗೆ ಎರಡು ನಿಮಿಷ ಟೈಮ್ ಇದ್ರೆ ಓದಿ ….!!!

88

ನೀವು ರೋಡಿನಲ್ಲಿ ಭಿಕ್ಷುಕರನ್ನು ನೋಡಿರಬಹುದು ಭಿಕ್ಷುಕರು ನೀವು ಎಲ್ಲೆಲ್ಲಿ ವಾಹನಗಳಲ್ಲಿ ಬಂದು ನಿಮ್ಮ ವಾಹನದ ಹತ್ತಿರ ಜಮಾಯಿಸುತ್ತಾರೆ ಹಾಗೂ ನಿಮ್ಮ ಹತ್ತಿರ ಹಣವನ್ನು ಕೇಳುತ್ತಾರೆ ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತದೆ ಕೆಲವು ಅಂಗವಿಕರು ಮತ್ತು ಜನರು ವಯೋವ್ರುದ್ದರು ಆಗಿರುತ್ತಾರೆ, ನೀವು ಆ ಸಂದರ್ಭದಲ್ಲಿ ಅವರ ಬಗ್ಗೆ ಆಲೋಚನೆ ಮಾಡಿದ್ದೀರಾ  ಭಿಕ್ಷುಕರು ಅವರು ಸಂಪಾದಿಸಿದ ಸಾಕಷ್ಟು ಹಣವನ್ನು ಏನು ಮಾಡುತ್ತಾರೆ ಎನ್ನುವುದರ ಬಗ್ಗೆ ಅವರು ಹೆಚ್ಚಾಗಿ ತಾವು ಭಿಕ್ಷೆ ಬೇಡುವಂತಹ ಹಣವನ್ನು ಏನು ಮಾಡಬಹುದು, ಅದಕ್ಕೆ ಉತ್ತರ ಹೆಚ್ಚಾಗಿ ಸಾರಾಯಿ ಕುಡಿಯಬಹುದು ಅಥವಾ ಊಟ ಮಾಡಬಹುದು ಅಥವಾ ಹಣವನ್ನು ಹೇಗೆ ಬೇಕಾದರೂ ಕೂಡ ಖರ್ಚು ಮಾಡಬಹುದು. ಆದರೆ ಇಲ್ಲೊಬ್ಬ ಬಿಕ್ಷುಕ ತಾನು ದುಡಿದಂತಹ ಹಣವನ್ನು ತಾನು ಲಾಯರ್ ಆಗಬೇಕು ಎನ್ನುವಂತಹ ಒಂದು ಗುರಿಯನ್ನು ಇಟ್ಟುಕೊಂಡಿದ್ದಾರಂತೆ. ಅದಕ್ಕೋಸ್ಕರ ನಾನು ಭಿಕ್ಷೆ ಬೇಡುವಂತಹ ಹಣವನ್ನು ಲಾಯರ್ ಆಗಬೇಕು ಎನ್ನುವಂತಹ ನನ್ನ ಗುರಿಗೆ ಹೆಚ್ಚಾಗಿ ಬಳಸುತ್ತಾ ಇದ್ದಾನೆ. ಬನ್ನಿ ಹಾಗಾದರೆ ಈ ಭಿಕ್ಷುಕನ ಲಾಯರ್ ಸ್ಟೋರಿಯ ಬಗ್ಗೆ ತಿಳಿದುಕೊಳ್ಳೋಣ…

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಕನಸು ಇರಬೇಕು ಆ ಕನಸಿನಲ್ಲಿ ನಾನು ಏನಾದರೂ ಸಾಧನೆ ಮಾಡಬೇಕು ಇರುವಂತಹ ಗುರಿಯು ಕೂಡ ಇರಲೇಬೇಕು, ಕನಸು ಅಥವಾ ಗುರಿ ಇಲ್ಲದೆ ಇರುವಂತಹ ಮನುಷ್ಯ ನಿಜವಾಗಲೂ ಸತ್ತ ಶವಕ್ಕೆ ಸಮಾನ ಅಂತಾರೆ ನಮ್ಮ ದೊಡ್ಡವರು. ಬಡವರಾಗಿ ಹುಟ್ಟಬಹುದು ಆದರೆ ಬಡವರಾಗಿ ಸಾಯುವುದು ಅವರು ಮಾಡಿದಂತಹ ಒಂದು ದೊಡ್ಡ ಕರ್ಮ ಎನ್ನುತ್ತಾರೆ ನಮ್ಮ ದೊಡ್ಡವರು.  ರಾಜಸ್ಥಾನದಲ್ಲಿ 48 ವರ್ಷ ವಯಸ್ಸಾಗಿರುವ ಅಂತಹ ಈ ಮನುಷ್ಯ ಭಿಕ್ಷೆ ಬೇಡುವುದರ ಜೊತೆಗೆ ತಾನು ಲಾಯರ್ ಆಗಬೇಕು ಎನ್ನುವಂತಹ ಒಂದು ಕನಸನ್ನು ಹಾಗೂ ಗುರಿಯಾಗಿಟ್ಟು ಕೊಂಡಿದ್ದಾನೆ. ರಾಜಸ್ಥಾನ ರಾಜ್ಯದ ಗಂಗಾಪುರ ಎನ್ನುವಂತಹ ಒಂದು ಚಿಕ್ಕ ಪಟ್ಟಣದಲ್ಲಿ ದಿನ ನಿತ್ಯ ಭಿಕ್ಷೆಯನ್ನು ಬೇಡಿಕೊಂಡು ರಾಜಸ್ಥಾನದಲ್ಲಿ ಇರುವಂತಹ ಯೂನಿವರ್ಸಿಟಿಯಲ್ಲಿ ತಾನು ಲಾಯರ್ ಆಗಬೇಕು ಇರುವಂತಹ ಗುರಿಯನ್ನಿಟ್ಟುಕೊಂಡು ಓದುತ್ತಿದ್ದಾರೆ.

ಇವನ ದಿನಚರಿ ನೋಡಿದರೆ ನಿಮಗೆ ನಿಜವಾಗಲೂ ಆಶ್ಚರ್ಯವಾಗುತ್ತದೆ ತನ್ನ ದಿನನಿತ್ಯದ ದಿನಚರಿಯಲ್ಲಿ ರೋಡ್ ನಲ್ಲಿ ಕಸ ಆರಿಸುತ್ತಾ ಹಾಗೂ ರೋಡ್ ಅನ್ನು ಕ್ಲೀನ್  ಮಾಡಿ ಭಿಕ್ಷೆಯನ್ನು ಬಿಡುತ್ತಾನೆ. ಹಾಗೆ ನಂತರದ ಸಮಯದಲ್ಲಿ ಇವನು ಹೆಚ್ಚಾದ ಸಮಯವನ್ನು ಓದುವುದಕ್ಕೆ ಹಾಗೂ ವಿಶ್ವವಿದ್ಯಾಲಯದಲ್ಲಿ ತನ್ನ ಉಳಿದ ಸಮಯವನ್ನು  ಕಳೆಯುತ್ತಾನೆ. ತಾನು ಮಾಡುತ್ತಿರುವಂತಹ ವೃತ್ತಿಯನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾ ತನ್ನ ಕಾಲೇಜಿಗೂ ಕೂಡ ಯಾವಾಗಲೂ ಮಿಸ್ ಮಾಡದೆ ಹೋಗುತ್ತಾ ತನ್ನ ಜೀವನವನ್ನು ಹೇಗಾದರೂ ಮಾಡಿ ಲಾಯರ್ ಆಗಿ ಹೇಗಾದರೂ ಮಾಡಿ ಚೇಂಜ್ ಆಗಬೇಕು ಎನ್ನುವಂತಹ ಒಂದು ಪ್ರತಿಜ್ಞೆಯನ್ನು ಈ ಮನುಷ್ಯ ಹೊಂದಿದ್ದಾನೆ. ಒಂದು ವಿಚಿತ್ರದ ಸಂಗತಿ ಏನಪ್ಪಾ ಅಂದರೆ ಇಲ್ಲಿವರೆಗೂ ಕಾಲೇಜಿಗೆ ಒಂದು ದಿವಸ ಕೂಡ ಇವರು ಬಂಕ್ ಹೊಡೆದಿಲ್ಲ ಎಲ್ಲ ಕ್ಲಾಸ್ ಗೆ ಸರಿಯಾಗಿ ಸರಿಯಾದ ಸಮಯಕ್ಕೆ ಬರುತ್ತಾರೆ. 

ನಿಜವಾಗ್ಲೂ ಇವರನ್ನು ನೋಡಿ ನಮ್ಮ ಯುವಕರು ತಮಗೆ ಇರುವಂತಹ ಗುರಿಯನ್ನು ಸಾಧಿಸುವ ಅಂತಹ ಚಲವನ್ನು ಹೇಗೆ ಪಡೆಯಬೇಕು ಎನ್ನುವಂತಹ ಒಂದು ಪ್ರೋತ್ಸಾಹವನ್ನು ಇವರಿಂದ ನಾವು ಪಡೆದುಕೊಳ್ಳಬಹುದು. ಗುರಿ ಅಂತ ಇದ್ದರೆ ಏನು ಬೇಕಾದರೂ ಸಾಧ್ಯ ಆಗುತ್ತದೆ ಆದರೆ ನಮ್ಮ ಲೈಫ್ ನಲ್ಲಿ ಯಾವುದಾದರೂ ಒಂದು ಗುರಿ ಎನ್ನುವಂತಹ ಮನಸ್ಸು ನಮ್ಮ ಮನಸ್ಸಿನಲ್ಲಿ ಇರಬೇಕು ಹಾಗಾದರೆ ಮಾತ್ರವೇ ಏನಾದರೂ ಸಾಧಿಸಲು ಸಾಧ್ಯ. ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ