ಈ ವಸ್ತುವಿನಿಂದ ಈ ತರ ಲಡ್ಡು ತಯಾರಿಸಿ ತಿನ್ನಿ ಆಯಾಸ,ನಿಶ್ಯಕ್ತಿ,ಕೈ ಕಾಲು ನೋವು ನಿಮ್ಮ ಹತ್ರ ನೀವು ಇರೋ ಕಾಲದವರೆಗೂ ಇರೋದಿಲ್ಲ…

148

ಬಾದಾಮಿಯ ಗೋಂದಿನಿಂದ ಮಾಡುವ ಈ ಸ್ವೀಟ್ ಎಂತಹ ರುಚಿ ಗೊತ್ತಾ! ಅಷ್ಟೆ ಅಲ್ಲಾ ಈ ಸ್ವೀಟ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ತಿನ್ನಬಹುದು ಇದರಿಂದ ಆರೋಗ್ಯಕ್ಕೆ ಏನೂ ತೊಂದರೆಯಿಲ್ಲ ಆದರೆ ವಿಪರೀತವಾದ ಲಾಭಗಳು ಇದೆ ಇದರ ನಿಯಮಿತ ಸೇವನೆಯಿಂದ, ಬನ್ನಿ ತಿಳಿಯೋಣ ಈ ಗೋಧಿಯಿಂದ ಮಾಡಿದ ಸಿಹಿಯ ಆರೋಗ್ಯಕರ ಪ್ರಯೋಜನಗಳ ಕುರಿತು ಕೆಳಗಿನ ಲೇಖನಿಯಲ್ಲಿ.

ಮನುಷ್ಯನಿಗೆ ಊಟದ ನಂತರ ಒಂದೆರಡು ಗಂಟೆ ಕಳೆಯುತ್ತಿದ್ದ ಹಾಗೆ ಮತ್ತೆ ಹಸಿವಾಗುತ್ತಾ ಆದರೆ ಆಗ ಊಟ ಮಾಡಲು ಆಗುವುದಿಲ್ಲ ಆದರೆ ಕುರುಕಲು ತಿನ್ನಬೇಕು ಅಂತ ಮಾತ್ರ ಅನಿಸುತ್ತೆ ಅದರಲ್ಲೂ ಮಳೆಗಾಲ ಚಳಿಗಾಲದಲ್ಲಿ ಬಾಯಿ ಚುರು ಚುರು ಅನ್ನುತ್ತೆ.ಆಗ ಮಾಡಬೇಕಿರುವುದೇನು ಅಂದರೆ ಮನೆಯಲ್ಲಿಯೇ ಮಾಡಿದ ಆರೋಗ್ಯಕರವಾದ ತಿಂಡಿ ತಿನಿಸುಗಳ ಸೇವನೆ, ಇವತ್ತಿನ ಕಾಲದಲ್ಲಿ ಮನೆಯಲ್ಲಿ ಮಾಡಿದ ಸಿಹಿ ತಿನಿಸುಗಳು ಎಲ್ಲಿರುತ್ತೆ ಎಲ್ಲವೂ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಬರುತ್ತದೆ ಹೊರತು ಮನೆಯಲ್ಲಿಯೇ ಮಾಡುವ ಪ್ರಮಯವನ್ನೇ ಯಾರೂ ತೆಗೆದುಕೊಳ್ಳುವುದೇ ಇಲ್ಲ.

ಆದರೆ ಈ ರೀತಿ ಮಾಡಲೇಬೇಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ಮನೆಯಲ್ಲಿಯೇ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನಿ ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ರುಚಿಕರವಾದ ಸ್ವೀಟ್ ಕುರಿತು ಇದರ ಮಾಡುವ ವಿಧಾನ ಹಾಗೂ ಇದನ್ನು ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ದೊರೆಯುವ ಲಾಭಗಳ ಕುರಿತು ಕೂಡ ತಿಳಿಯೋಣ ಇದಕ್ಕಾಗಿ ಬೇಕಾಗಿರುವುದು ಬಾದಾಮಿಯ ಮತ್ತು ಮನೆಯಲ್ಲಿರುವ ಡ್ರೈ ಫ್ರೂಟ್ಸ್ ಗಳು ಹಾಗೆ ಬೆಲ್ಲ ಕೊಬ್ಬರಿ.

ಬಾದಾಮಿ ಗೋಂದು ನಿಮಗೆ ಅಂಗಡಿಗಳಲ್ಲಿ ದೊರೆಯುತ್ತವೆ ಹಾಗೆಯೇ ಒಣ ಹಣ್ಣುಗಳು ಅಂದರೆ ನೀವು ಗೋಡಂಬಿ ದ್ರಾಕ್ಷಿ ಖರ್ಜೂರ ವಾಲ್ನಟ್ ಇವುಗಳನ್ನ ತೆಗೆದುಕೊಳ್ಳಬಹುದು.ಈಗ ಮೊದಲು ಅನ್ನೋ ತುಪ್ಪದಲ್ಲಿ ಸ್ವಲ್ಪ ಸಮಯ ಹುರಿದುಕೊಳ್ಳಬೇಕು, ಈ ಹುರಿದಿಟ್ಟುಕೊಂಡ ಬಾದಾಮಿ ಗೊಂದನ್ನು ತಟ್ಟೆಯೊಂದಕ್ಕೆ ತೆಗೆದುಕೊಂಡು ಇದನ್ನು ಆರಲು ಬಿಡಿ.ಅದೇ ರೀತಿ ನೀವು ತೆಗೆದುಕೊಂಡ ಎಲ್ಲಾ ಡ್ರೈಫ್ರೂಟ್ಸ್ಗಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಸ್ವಲ್ಪ ಸಮಯ ಹುರಿದು ಇದನ್ನು ಸಹ ಆರಲು ಬಿಡಬೇಕು.

ಇದೀಗ ಕೊಬ್ಬರಿಯನ್ನು ಹುರಿದಿಟ್ಟುಕೊಂಡು ಅದನ್ನು ಕೂಡ ಸ್ವಲ್ಪ ಸಮಯ ಹುರಿದು ಬಳಿಕ ಈ ಎಲ್ಲಾ ಪದಾರ್ಥಗಳನ್ನು ರುಬ್ಬಿ ಪುಡಿಮಾಡಿಕೊಂಡು ಅಂದರೆ ಸಂಪೂರ್ಣ ಪುಡಿಯಾಗುವ ಹಾಗೆ ಒಪ್ಪಿಕೊಳ್ಳಬಾರದು ದಪ್ಪ ದಪ್ಪದಾಗಿ ರುಬ್ಬಿಕೊಂಡು ಅದಕ್ಕೆ ಬೆಲ್ಲದ ಪುಡಿಯನ್ನು ಮಿಶ್ರ ಮಾಡಿ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಜೊತೆಗೆ ಸ್ವಲ್ಪ ತುಪ್ಪವನ್ನು ಕೂಡ ಹಾಕುತ್ತಾ ಇದನ್ನು ಲಾಡು ಅನ್ನು ಹೇಗೆ ಉಂಡೆ ಕಟ್ಟಿಕೊಳ್ಳುತ್ತೇವೆ ಅದೇ ರೀತಿ ಉಂಡೆ ಕಟ್ಟಿಕೊಳ್ಳಬೇಕು.

ರುಚಿಯಾದ ಆರೋಗ್ಯಕ್ಕೆ ಸವಿಯಾದ ಬದಾಮಿ ಗೋಂದು ಸ್ವೀಟ್ ತಯಾರಾಗಿದೆ ಈಗ ಇದರ ಆರೋಗ್ಯಕರ ಲಾಭಗಳ ಕುರಿತು ನೋಡುವುದಾದರೆ;ಕೀಲು ನೋವು ಸೊಂಟ ನೋವು ಇದ್ದರೆ ಅಂಥವರು ನಿಯಮಿತವಾಗಿ ಇದರ ಸೇವನೆ ಮಾಡಿ ಇದರಿಂದ ಸವೆದ ಮೂಳೆಗೆ ಸ್ವಲ್ಪ ಬಲ ದೊರೆತು ಮಂಡಿನೋವು ಪೂರ್ಣವಾಗಿ ದೂರವಾಗುತ್ತೆ ಅಂತ ಅಲ್ಲ ಆದರೆ ದೇಹಕ್ಕೆ ಬಲ ದೊರೆತು ನೋವು ತಡೆಯುವ ಶಕ್ತಿ ಮತ್ತು ಮೂಳೆಗಳ ಆರೋಗ್ಯ ನಿಮ್ಮದಾಗುತ್ತೆ.

ಸುಸ್ತು ನಿಶಕ್ತಿ ಆಗುತ್ತಿದೆ ಅಂದರೆ ಈ ಸ್ವೀಟ್ ಅನ್ನು ಪ್ರತೀ ದಿನ ಸಂಜೆ ಸಮಯದಲ್ಲಿ ತಿನ್ನುತ್ತಾ ಬನ್ನಿ ಸುಸ್ತು ನಿಶ್ಶಕ್ತಿ ದೂರವಾಗುತ್ತದೆ.ಮನೆಯಲ್ಲಿ ಮಾಡಿರುವುದರಿಂದ ಇದು ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ ಹಾಗೆ ಸರಿಯಾದ ಸಮಯಕ್ಕೆ ಹಸಿವಾಗುವುದು ಆಗುತ್ತದೆ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.ಡ್ರೈ ಫ್ರೂಟ್ಸ್ ಗಳಲ್ಲಿ ಉತ್ತಮ ವಿಟಮಿನ್ ಗಳು ಖನಿಜಾಂಶಗಳು ಇರುವುದರಿಂದ ವಿಟಮಿನ್ ಕೊರತೆ ಖನಿಜಾಂಶದ ಕೊರತೆ ಪರಿಹಾರವಾಗುತ್ತೆ ಇದರಿಂದ ಆರೋಗ್ಯ ವೃದ್ಧಿಯಾಗುತ್ತೆ, ಬ್ರೇನ್ ಡೆವಲಪಮೆಂಟ್ ಹೆಚ್ಚುತ್ತೆ, ಮುಖ್ಯವಾಗಿ ಚಿಕ್ಕ ಮಕ್ಕಳಿಗೆ.