ವರ್ಷಕ್ಕೊಮ್ಮೆ ಬರುವ ಈ ಸೊಪ್ಪು ಇದನ್ನು ಕೊಮ್ಮೆ ಗಿಡ ಅಂತ ಕರೀತಾರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವ ಈ ಸೊಪ್ಪಿನ ಕುರಿತು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ಅಷ್ಟೇ ಅಲ್ಲ ಮೂತ್ರಪಿಂಡದ ಸಮಸ್ಯೆಗೆ ಪರಿಹಾರ ನೀಡುವ ಈ ಸೊಪ್ಪು ಇದನ್ನು ತಿನ್ನುವುದರಿಂದ ಆಗುವ ಲಾಭಗಳು ಅಪಾರ…
ನಮಸ್ತೆ ಪ್ರಿಯ ಸ್ನೇಹಿತರೆ ಪುನರ್ನವಾ ಸೊಪ್ಪು ಇದರ ಹೆಸರು ಕೇಳಿದ್ದೀರಾ ಅಲ್ವಾ ಹೌದು ಪುನರ್ನವ ಅಂದರೆ ಹೊಸತನ ಎಂಬುದರ ಅರ್ಥ ಹಾಗೆಯೇ ನಮ್ಮ ಆರೋಗ್ಯಕ್ಕೆ ಕೂಡ ಹೊಸತನವನ್ನ ನೀಡಿ ಒಳ್ಳೆಯ ಆರೋಗ್ಯ ನೀಡುವ ಈ ಪುನರ್ನವ ಸೊಪ್ಪು ವರುಷಕ್ಕೊಮ್ಮೆ ಬಿಡುವುದು ಆದರೆ ಕೆಲವರು ಈ ಸೊಪ್ಪಿನ ಬೀಜವನ್ನು ಶೇಖರಣೆ ಮಾಡಿ ಇಟ್ಟುಕೊಂಡು ಆರೋಗ್ಯ ದೃಷ್ಟಿಯಿಂದ ಇದನ್ನು ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿ ಬಳಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ ಹಾಗಾದರೆ ಈ ಸೊಪ್ಪಿನ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.
ಹೌದು ಪುನರ್ನವವನ್ನು ಹಲವು ಭಾಷೆಗಳಲ್ಲಿ ಹಲವು ರೀತಿಯಲ್ಲಿ ಕರೀತಾರೆ ಹಾಗೆ ಕನ್ನಡದಲ್ಲಿ ಇದನ್ನು ಕೊಮ್ಮೆ ಗಿಡ ಅಂತ ಕೂಡ ಕರೀತಾರೆ. ಸಂಸ್ಕೃತದಲ್ಲಿ ಪೂರ್ಣ ಅಂತ ಕರೆಯುವ ಈ ಸೊಪ್ಪು ಬಿಳಿ ಮತ್ತು ಮಯೂರ ಕೆಂಪಿನ ದಿರುವುದರಿಂದ ಇದನ್ನು ಇನ್ನೂ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.
ಪುನರ್ನವ ಇದು ಮೂತ್ರಪಿಂಡಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಹಾಗೆ ಉತ್ತಮ ಪೋಷಕಾಂಶಗಳನ್ನು ಹೊಂದಿರತಕ್ಕಂತಹ ಈ ಸೊಪ್ಪು ಹಳ್ಳಿಗಳಲ್ಲಿ ಗದ್ದೆ ತೋಟದ ಬಯಲಿನಲ್ಲಿ ಕಾಣಬಹುದು ಮಳೆಗಾಲದಲ್ಲಿ ಈ ಸೊಪ್ಪು ಹೆಚ್ಚಾಗಿ ಕಾಣಸಿಗುತ್ತದೆ ಹಾಗೆ ಚೆನ್ನಾಗಿ ಹಬ್ಬಿಕೊಂಡು ಬೆಳೆಯುವ ಈ ಸೊಪ್ಪು ಹೃದಯದ ಆರೋಗ್ಯ ಕೂಡ ಬಹಳ ಪ್ರಯೋಜನಕಾರಿಯಾಗಿದೆ.
ವರುಷಕ್ಕೊಮ್ಮೆ ಸಿಕ್ಕರೂ ಆರೋಗ್ಯಕ್ಕೆ ಬಹಳ ಪ್ರಯೋಜನವಾಗಿದೆ ಹಾಗೆ ಈ ಸೊಪ್ಪಿನ ಸೇವನೆ ಎಲ್ಲರಿಗೂ ಅತ್ಯವಶ್ಯಕವಾಗಿರುತ್ತದೆ ಹೌದು ಕೆಲವೊಂದು ಅನಾರೋಗ್ಯ ಸಮಸ್ಯೆಗಳು ನಮ್ಮ ಶರೀರ ಕಲಿತರೂ ಅದು ನಮಗೆ ಕಾಣಸಿಗುವುದಿಲ್ಲ ಆದರೆ ಕೆಲವೊಂದು ಆಹಾರ ಪದಾರ್ಥಗಳ ಸೇವನೆಯಿಂದ ನಮಗೆ ತಿಳಿಯದೆ ನಮ್ಮ ಶರೀರದಲ್ಲಿ ಕೆಲವೊಂದು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಕೆಲವೊಂದು ಸೊಪ್ಪುಗಳ ಅಥವಾ ಕೆಲವೊಂದು ಆಹಾರವನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿದ್ದು, ಹಣ್ಣು ತರಕಾರಿ ಸೊಪ್ಪು ಇವುಗಳ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಂದ ನೀವು ಬಳಲುತ್ತಿದ್ದ ಅದನ್ನ ಪರಿಹರ ಮಾಡಿಕೊಳ್ಳುವುದಕ್ಕೆ ಈ ಸೊಪ್ಪಿನ ಸೇವನೆ ಮಾಡಿ ಮತ್ತು ಹೃದಯದ ಆರೋಗ್ಯಕ್ಕೂ ಉತ್ತಮ ಪ್ರಯೋಜನವನ್ನು ನೀಡುವ ಪುನರ್ನವ ಸೊಪ್ಪು ಇದನ್ನು ಪಲ್ಯದ ರೂಪದಲ್ಲಿ ಸೇವನೆ ಮಾಡುವುದು ಬಹಳ ರುಚಿಕರವಾಗಿರುತ್ತದೆ ಹಾಗೆ ಇವತ್ತಿನ ಪುಟದಲ್ಲಿ ಈ ಪುನರ್ನವ ಸೊಪ್ಪಿನಿಂದ ಮಾಡುವ ಸುಲಭ ಪಲ್ಯದ ರೆಸಿಪಿಯನ್ನು ಕೂಡ ತಿಳಿಯೋಣ ಬನ್ನಿ.
ಹೌದು ಬಹಳ ಸುಲಭವಾಗಿ ಪುನರ್ನವ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು ಬಾಣಲಿಗೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಸಾಸಿವೆ ಸ್ವಲ್ಪ ಜೀರಿಗೆಯನ್ನು ಹಾಕಿ ಈರುಳ್ಳಿ ಬೆಳ್ಳುಳ್ಳಿ ಹಸಿರು ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ಬಳಿಕ ಬೇಯಿಸಿಕೊಂಡ ಸೊಪ್ಪು ಮತ್ತು ಬೇಳೆಯನ್ನು ಒಗ್ಗರಣೆಯೊಂದಿಗೆ ಹಾಕಿ ಬಳಿಕ ಕೊತ್ತಂಬರಿ ಹಾಗೂ ಕಾಯಿತುರಿಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ಪುನರ್ನವ ಸೊಪ್ಪಿನ ಪಲ್ಯ ತಯಾರಾಗಿರುತ್ತದೆ ಬಹಳ ರುಚಿ ಹಾಗೆ ಆರೋಗ್ಯಕ್ಕೂ ಉತ್ತಮ ಈ ಸರಳ ಪಲ್ಯದ ರೆಸಿಪಿ ಮಾಡಿ ನೀವು ಹಾಗೆ ನಿಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಆರೋಗ್ಯವಂತರಾಗಿರಿ ಧನ್ಯವಾದ.