ಎಂಥ ಕಠಿಣ ಸಮಸ್ಸೆ ಇದ್ದರು ಸಹ ರಾಘವೇಂದ್ರ ಸ್ವಾಮಿಯ ಈ ವ್ರತ ಮಾಡಿದರೆ ಸಾಕು ಎಲ್ಲ ನಿವಾರಣೆ ಆಗುತ್ತದೆ… ಅಷ್ಟಕ್ಕೂ ಆ ವ್ರತ ಯಾವುದು ಹಾಗು ಅದನ್ನ ಮಾಡುವ ವಿಧಿ ವಿಧಾನಗಳು ಏನೇನು ಗೊತ್ತ …

480

ನಮಸ್ಕಾರಗಳು ಪ್ರಿಯ ಓದುಗರೆ ಜೀವನದಲ್ಲಿ ಕಷ್ಟಗಳು ಬಂದಾಗ ನಾವು ದೇವರ ಮೊರೆ ಹೋಗುವುದು ಸತ್ಯ ಅಲ್ವಾ ಈ ನಿಜವನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಯಾಕೆ ಅಂದರೆ ನಮಗೆ ನೋವಾದಾಗಲೂ ನಮಗೆ ಕಷ್ಟ ಬಂದಾಗಲೂ ನಾವು ಮೊದಲು ದೇವರ ನೆನಪಿಸಿಕೊಳ್ಳುತ್ತೇವೆ. ಆದರೆ ಹೆಚ್ಚಿನ ಜನರು ಸುಖ ಬಂದಾಗ ದೇವರನ್ನು ನೆನಪಿಸಿಕೊಳ್ಳುವುದೇ ಇಲ್ಲ ಸಿಹಿ ಸುದ್ದಿ ಕೇಳಿದಾಗ ಒಮ್ಮೆ ದೇವರ ದರ್ಶನ ಪಡೆದರು ಬಳಿಕ ದೇವರನ್ನ ಮರತೇ ಹೋಗ್ತಾರೆ. ಆದರೆ ಕಷ್ಟ ಇರುವಾಗ ಮಾತ್ರ ಕಷ್ಟ ದೇವರ ಪಾದ ಬಿಡುವುದೇ ಇಲ್ಲ ಆ ಹರಕೆ ಈ ಹರಿಕೆ ಈ ಪರಿಹಾರ ಮಾಡುತ್ತಾ ತಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಾರೆ ಅಲ್ವಾ.

ಹೌದು ನಮಗೆ ಕಷ್ಟ ಬಂದಾಗಲೇ ಕಷ್ಟದ ಬೆಲೆ ಗೊತ್ತಾಗೋದು ಅಲ್ಲಿಯವರೆಗೂ ಸುಖದಲ್ಲಿಯೇ ಇರುವವರಿಗೆ ಕಷ್ಟ ಎಂದರೆ ಏನು ಅಂತ ಗೊತ್ತಿರೋದಿಲ್ಲ ಕಷ್ಟ ಬಂದಾಗ ನಾವು ಹಲವು ಪರಿಹಾರಗಳ ಬಗ್ಗೆ ಯೋಚನೆ ಮಾಡಲು ಕೂಡ ಮುಂದಾಗುತ್ತೇವೆ. ಇವತ್ತಿನ ಮಾಹಿತಿಯಲ್ಲಿ ಶ್ರೀಗುರುರಾಘವೇಂದ್ರರ ವ್ರತವನ್ನು ಯಾರು ಮಾಡುತ್ತಾರೋ ಅಂಥವರಿಗೆ ಯಾವ ಫಲ ಸಿಗುತ್ತೆ ಅನ್ನೋದನ್ನ ತಿಳಿಸುತ್ತಿದ್ದೇವೆ ಹೌದು ನಾವು ಈಗಾಗಲೇ ಮನುಷ್ಯ ಕಷ್ಟ ಬಂದಾಗ ಪಾಲಿಸಬಹುದಾದ ಹಲವು ಪರಿಹಾರಗಳನ್ನು ತಿಳಿಸಿಕೊಟ್ಟಿದ್ದೇವೆ ಹಾಗೆ ಈ ದಿನದ ಲೇಖನದಲ್ಲಿ ಕೂಡ ನಾವು ತಿಳಿಸಲಿರುವ ಈ ಮಾಹಿತಿ ಪ್ರತಿಯೊಬ್ಬರೂ ಕೂಡ ಮಾಡಬಹುದಾದದ್ದು. ಕಲಿಯುಗದ ಪರಮಾತ್ಮನ ಶ್ರೀ ಗುರು ರಾಘವೇಂದ್ರರನ್ನು ನೆನೆಯುತ್ತಾ ನಾವು ಯಾವುದೇ ಕೆಲಸವನ್ನ ಶುರು ಮಾಡಿದರೆ ನಮಗೆ ನಿಜವಾಗಿಯೂ ಉತ್ತಮ ಫಲ ಸಿಗುತ್ತದೆ ಹಾಗೆ ಶ್ರೀಗುರುರಾಘವೇಂದ್ರರ ನಂಬಿದವರನ್ನು ಕಲಿಯುಗದ ಪರಮಾತ್ಮ ಎಂದಿಗೂ ಕೈಬಿಟ್ಟಿಲ್ಲ ಹಾಗಾದರೆ ಶ್ರೀಗುರುರಾಯರ ವ್ರತವನ್ನ ಹೇಗೆ ಕೈಗೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ.

ಶ್ರೀಗುರುರಾಘವೇಂದ್ರರ ಗಾಯತ್ರಿ ಮಂತ್ರ ಕೇಳಿರುತ್ತೀರಾ ಈ ಗಾಯತ್ರಿ ಮಂತ್ರವನ್ನು ಪಠಿಸುತ್ತಾ ನೀವು ಶ್ರೀಗುರುರಾಘವೇಂದ್ರರ ವ್ರತವನ್ನ ಕೈಗೊಳ್ಳಬೇಕು ಈ ವ್ರತವನ್ನು ಯಾವ ದಿನ ಕೈಗೊಳ್ಳಬೇಕು ಅಂದರೆ ವಿಶೇಷ ಗುರುವಾರ ದಂದು ಅಥವಾ ಶುಕ್ಲಪಕ್ಷ ಸಮಯ ಯಾವಾಗ ಬರುತ್ತದೆ ಯಾವ ದಿನ ಬರುತ್ತದೆ ಅಂದು ಈ ವ್ರತವನ್ನು ಶುರು ಮಾಡಬಹುದು ಈ ವ್ರತದಲ್ಲಿ ನೀವು ಏನು ಮಾಡಬೇಕು ಅಂತಾನೂ ಹೇಳ್ತೇವೆ. ಯಾವುದೇ ಪೂಜೆಯನ್ನು ಆಗಲಿ ಯಾವುದೇ ವ್ರತವನ್ನು ಆಗಲೇ ಮನಸಾರೆ ನಂಬಿಕೆಯಿಟ್ಟು ಶ್ರದ್ಧೆ ಇಂದ ಪಾಲಿಸಬೇಕು ಆಗ ನೀವು ಖಂಡಿತ ನೀವು ಮಾಡುತ್ತಿರುವ ವ್ರತದಲ್ಲಿ ಫಲ ಕಾಣುತ್ತೀರಾ ಹಾಗೆ ಕಲಿಯುಗ ಪರಮಾತ್ಮನ ಶ್ರೀಗುರುರಾಘವೇಂದ್ರ ರಥವನ್ನು ನೀವು ಗುರುವಾರದಂದು ಶುರುಮಾಡಿದಾಗ ಬೆಳಗಿನ ಸಮಯದಲ್ಲಿ ಶುಚಿಯಾಗಿ ಮನೆಯನ್ನು ಶುಚಿ ಮಾಡಿ ಬಳಿಕ ದೇವರಿಗೆ ಶುದ್ಧವಾಗಿ ನೈವೇದ್ಯವನ್ನು ಅರ್ಪಿಸಬೇಕು ಪೂಜೆಯನ್ನು ಮಾಡಬೇಕು ಹಾಗೆ ಪೂಜೆಯ ಕೊನೆಯಲ್ಲಿ ರಾಘವೇಂದ್ರ ಸ್ವಾಮಿಯವರ ಗಾಯತ್ರಿ ಮಂತ್ರವನ್ನು ಪಠಿಸಬೇಕು ನೀವು ವ್ರತ ಮಾಡುವವರು ದಿನಕ್ಕೆ 108 ಬಾರಿ ಮಂತ್ರವನ್ನು ಪಠಣೆ ಮಾಡಬೇಕು.

ಹೌದು ಯಾರು ಈ ಮಂತ್ರವನ್ನು ಪುರಶ್ಚರಣೆ ಮಾಡುತ್ತಾ ಗುರುರಾಯರ ರಥವನ್ನು ಭಕ್ತಿಯಿಂದ ಮಾಡುತ್ತಾರೋ ಅಂಥವರಿಗೆ ಕನಸಿನಲ್ಲಿ ಶ್ರೀಗುರುರಾಯರು ಬಂದು ಮುನ್ಸೂಚನೆ ನೀಡುತ್ತಾರೆ ಬಳಿಕ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗಿ ನಿಮಗೆ ಶ್ರೀಗುರುರಾಘವೇಂದ್ರರ ಸಾನಿಧ್ಯ ವಾಗುತ್ತದೆ. ಅಷ್ಟೇ ಅಲ್ಲ ನೀವು ಇಷ್ಟು ದಿನಗಳ ಕಾಲ ಈ ವ್ರತವನ್ನು ಪಡಿಸಬೇಕು ಅಂದರೆ 48 ದಿವಸಗಳ ಕಾಲ ಈ ವ್ರತವನ್ನು ಪಾಲಿಸಬೇಕು ಹಾಗೂ ವ್ರತ ಕೈಗೊಂಡಾಗ ಯಾವುದೇ ತರದ ಮೈಲಿಗೆ ಮಾಡಿಕೊಳ್ಳಬಾರದು ಮಾಂಸಾಹಾರ ಪದಾರ್ಥಗಳನ್ನು ಸೇವಿಸಬಾರದು.

ಈ ವ್ರತವನ್ನು ಯಾರು ಕೈಗೊಳ್ಳುತ್ತಾರೆ ಅಂಥವರಿಗೆ ಖಂಡಿತ ಶ್ರೀರಾಘವೇಂದ್ರರು ಕನಸಿನಲ್ಲಿ ಬಂದು ಅವರೀಗ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ ಮನಸಾರೆ ಈ ರಥವನ್ನು ಕೈಗೊಳ್ಳಿ ಮತ್ತು ನೀವು ಪುರಿಯ ಕೊನೆಯಲ್ಲಿ ಪಡಿಸಬೇಕಿರುವ ಮಂತ್ರ ಯಾವುದು ಅಂದರೆ ಅದು ಹೀಗಿದೆ ನೋಡಿ, ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್… ಈ ಮಂತ್ರವನ್ನು ಪಠಿಸಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ.