ಈ ಸ್ವಾರ್ಥ ಬದುಕಿನಲ್ಲಿ ನಮ್ಮ ದೇಶಕ್ಕಾಗಿ ದುಡಿಯುತ್ತಿರುವ ಇಬ್ಬರೇ ಇಬ್ಬರು ವ್ಯಕ್ತಿ ಎಂದರೆ ಅವರು ಒಬ್ಬರು ರೈತರಾದರೆ ಮತ್ತೊಬ್ಬರು ನಮ್ಮ ದೇಶ ಕಾಯುವ ಸೈನಿಕ ಹೌದು ಇವರಿಬ್ಬರ ಶ್ರಮದಿಂದಲೇ ನಾವು ಈ ದಿನ ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗಿದೆ.ಇವರಲ್ಲಿ ಒಬ್ಬರು ಇಲ್ಲವಾದರೆ ನಾವು ಉಪವಾಸದಿಂದ ಸಾಯಬೇಕಾಗುತ್ತದೆ ಅಥವ ಭಯದಿಂದ ಪ್ರತಿ ನಿಮಿಷ ಜೀವನವನ್ನು ನರಕ ಮಾಡಿಕೊಂಡು ಸಾಯಬೇಕಾಗುತ್ತದೆ ಅಷ್ಟೇ .ರೈತ ವರ್ಷಪೂರ್ತಿ ದುಡಿದರೆ ಮಾತ್ರ ಅವನು ತನ್ನ ಕುಟುಂಬವನ್ನು ನೆಮ್ಮದಿಯಿಂದ ಸಾಕಲು ಸಾಧ್ಯ ಆದರೆ ಕೆಲವರು ಮಾತ್ರ ರೈತನ ಕಷ್ಟವನ್ನು ಶ್ರಮವನ್ನು ನೋಡದೆ ರೈತನಿಗೆ ಮೋಸ ಮಾಡಲು ಮುಂದಾಗುತ್ತಾನೆ .
ಆದರೆ ಈ ದೇಶದ ಬೆನ್ನೆಲುಬು ಆಗಿರುವಂತಹ ರೈತನಿಗೆ ನಾವು ಎಷ್ಟೇ ಸಲ್ಯೂಟ್ ಹೊಡೆದರು ಕೂಡ ಅದು ಸಾಲದು .ಈ ದೇಶದ ರೈತನ ಋಣ ನಾವು ಯಾವ ಜನ್ಮದಲ್ಲಿಯೂ ಕೂಡ ತೀರಿಸೋಕೆ ಸಾಧ್ಯನೇ ಇಲ್ಲ ಹಾಗೆಯೇ ನಾವು ಈ ದಿನದ ಮಾಹಿತಿಯಲ್ಲಿ ಒಬ್ಬ ಬುದ್ಧಿವಂತ ರೈತನ ಚಾಣಾಕ್ಷ ತನವನ್ನು ತಿಳಿಯೋಣ.ಈ ಮಾಹಿತಿ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ ಜೊತೆಗೆ ನೀವು ಕೂಡ ರೈತರ ಅಭಿಮಾನಿಗಳಿದ್ದರೆ ತಪ್ಪದೇ ನಮ್ಮ ಈ ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಮಾಹಿತಿಯನ್ನು ಶೇರ್ ಮಾಡಿ .ಉತ್ತರಾಖಂಡ್ನ ದೇಹದ್ದು ನಲ್ಲಿ ಒಮ್ಮೆ ಮಾರ್ಕೆಟ್ನ ನಗರದ ಲೀಫ್ ಟ್ರಾಫಿಕ್ ಜಾಮ್ ಆಗಿತ್ತು , ಆ ಟ್ರಾಫಿಕ್ ಜಾಮ್ ಆಗಿದ್ದು ಯಾಕೆ ಅಂದರೆ ಒಂದು ಎತ್ತಿನ ಗಾಡಿಯನ್ನು ರೋಡಿನ ಬದಿಯಲ್ಲಿಯೇ ನಿಲ್ಲಿಸಿ ಹೋದ ಕಾರಣದಿಂದಾಗಿ ಆ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಅಲ್ಲಿಗೆ ಬಂದಂತಹ ಪೊಲೀಸ್ ಅಧಿಕಾರಿ ಆ ಟ್ರಾಫಿಕ್ ಜಾಮ್ ಆಗಿರುವುದು ಎತ್ತಿನ ಗಾಡಿಯಿಂದ ಅಂತ ತಿಳಿದು ಫೈನ್ ಅನ್ನು ಕೂಡ ಹಾಕಿ ಆ ಎತ್ತಿನ ಗಾಡಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ . ಆ ಎತ್ತಿನ ಗಾಡಿ ಒಬ್ಬ ರೈತನಿಗೆ ಸೇರಿದ್ದು ಆ ರೈತನ ಹೆಸರು ರಿಯಾಜ್ ಹಾಸನ್ ಎಂದು , ಪೊಲೀಸ್ ಅಧಿಕಾರಿಗಳು ತನ್ನ ಎತ್ತಿನ ಗಾಡಿಯನ್ನು ವಶಕ್ಕೆ ಪಡೆದುಕೊಂಡಿದ್ದನ್ನು ತಿಳಿದು ರಿಯಾಜ್ ಹಾಸನ ಅವರು ಅಧಿಕಾರಿಗಳೊಂದಿಗೆ ಮಾತನಾಡಲೆಂದು ಹೋಗುತ್ತಾರೆ .ಆಗ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ ನೀನು ಎತ್ತಿನ ಗಾಡಿಯನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು ಅದಕ್ಕಾಗಿ ಫೈನ್ ಕೂಡಾ ಹಾಕಿದ್ದೆ ವಾದನ್ನು ನೀನು ಪಾವತಿಸಬೇಕು ಎಂದು ನಂತರ ರಿಯಾಸ್ ಶಾಂತವಾಗಿಯೆ ಹೇಳುತ್ತಾರೆ ಆಯ್ತು ನಾನು ಫೈನ್ ಅನ್ನು ಕಟ್ಟುತ್ತೇನೆ ಎಂದು .
ನಂತರ ರಿಯಾಜ್ ಹಾಸನ್ ಅವರು ಪೊಲೀಸ್ ಅಧಿಕಾರಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೂಡ ಕೇಳುತ್ತಾರೆ ಅದೇನೆಂದರೆ ನೀವು ಯಾವ ಕಾಯ್ದೆಯಡಿ ನನ್ನ ಎತ್ತಿನ ಗಾಡಿ ಮೇಲೆ ಫೈಲ್ ಹಾಕಿದ್ದೀರಿ ಎಂದು , ಇದಕ್ಕೆ ಪೊಲೀಸ್ ಅಧಿಕಾರಿಗಳು ಸೆಕ್ಷನ್ ಎಂಬತ್ತೊಂದರ ವಾಹನ ಕಾಯ್ದೆ ನಿಯಮದ ಆಧಾರದ ಮೇಲೆ ಮೋಟಾರ್ ಸೈಕಲ್ ಕಾಯ್ದೆಯಡಿ ನಿನಗೆ ಫೈಲನ್ನು ಹಾಕಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ .ಅದಕ್ಕೆ ರಿಯಾಜ್ ಉತ್ತರಿಸುತ್ತಾರೆ ಅದೇನೆಂದರೆ ಮೋಟಾರ್ ಸೈಕಲ್ ಅಡಿ ಫೈಲನ್ನು ಹಾಕಿದ್ದರೆ ರೆಸೆಪ್ಟ್ ನಲ್ಲಿ ಗಾಡಿ ನಂಬರ್ ಅನ್ನು ಏನೆಂದು ಹಾಕಿದ್ದೀರಿ ಅಂತ ಅದಕ್ಕೆ ಪೊಲೀಸ್ ಅಧಿಕಾರಿ ಗಾಡಿ ನಂಬರನ್ನು ಹಾಕಿಲ್ಲ ಅಂತ ಹೇಳುತ್ತಾರೆ .
ನಾನು ನಿಲ್ಲಿಸಿದ್ದು ಎತ್ತಿನ ಗಾಡಿ ಅವು ಮೂಕಪ್ರಾಣಿಗಳು ಅವುಗಳಿಗೆ ಏನು ತಿಳಿಯುತ್ತದೆ ಹಾಗೆಯೇ ಇದೇನು ಮೋಟಾರ್ ಸೈಕಲ್ ಅಲ್ಲ ಎಲ್ಲೆಂದರಲ್ಲಿ ಪಾರ್ಕ್ ಮಾಡಿ ಬಿಡುವುದಕ್ಕೆ ಅಂತ ರಿಯಾಸ್ ಸರಿಯಾಗಿ ಪೊಲೀಸ್ ಅಧಿಕಾರಿಗೆ ಪ್ರಶ್ನಿಸುತ್ತಾರೆ .ರೈತನ ಮಾತುಗಳನ್ನು ಕೇಳಿ ಪೊಲೀಸ್ ಅಧಿಕಾರಿಗಳು ಏನನ್ನೂ ಕೂಡ ಮಾತನಾಡದೆ ಫೈಲ್ ಅನ್ನು ಪಡೆಯದೇ ರೈತರ ಎತ್ತಿನ ಗಾಡಿಯನ್ನು ರಿಲೀಸ್ ಮಾಡುತ್ತಾರೆ .ಇಲ್ಲಿ ರಿಯಾಜ್ ಬುದ್ಧಿವಂತ ರೈತನಾದ ಕಾರಣದಿಂದಾಗಿ ಹೀಗೆಲ್ಲ ಪ್ರಶ್ನಿಸಿ ಅಧಿಕಾರಿಗಳನ್ನು ಸುಮ್ಮನಾಗಿಸುತ್ತಾರೆ ಆದರೆ ಇಂದಿನ ದಿನಗಳಲ್ಲಿ ಇಂತಹ ಅದೆಷ್ಟೋ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ರೈತರ ಮೇಲೆ ಮಾತ್ರವಲ್ಲದೆ ತಪ್ಪಿಲ್ಲದ ಅದೆಷ್ಟೋ ಮುಗ್ಧರ ಮೇಲೆಯೂ ಕೂಡ ಅನವಶ್ಯಕವಾಗಿ ಫೈನ್ ಹಾಕುತ್ತಿದ್ದಾರೆ .