ಇವತ್ತು ನಾವು ಭಾನುವಾರ ಮಜಾ ಮಾಡ್ತಾ ಇದೀವಿ ಅಂದ್ರೆ ಅದಕೆಲ್ಲ ಕಾರಣ ಇವ್ರೇ ನೋಡಿ .. ಅಷ್ಟಕ್ಕೂ ಇವರು ಯಾರು ಗೊತ್ತ ..

109

ಇದೀಗ ಪ್ರತಿಯೊಬ್ಬರೂ ಸಹ ವಾರವಿಡೀ ಕೆಲಸ ಮಾಡಿ ವೀಕೆಂಡ್ ಬಂದರೆ ಸಾಕು ಕುಟುಂಬದವರ ಜೊತೆ ಆರಾಮವಾಗಿ ಇರಬಹುದು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ ಹಾಗಾದರೆ ವಾರವಿಡೀ ಕೆಲಸ ಮಾಡಿ ಆ ಭಾನುವಾರ ದಿವಸ ಯಾಕೆ ರಜಾ ಇದೆ ಎಂದು ಯಾರಿಗಾದರೂ ಗೊತ್ತಾ ಹಾಗೆ ಈ ದಿವಸದಂದು ರಜಾ ಬರಲು ಕಾರಣವೇನು ಗೊತ್ತಾ? ಯಾವ ಕಾಲದಿಂದ ಈ ಭಾನುವಾರವನ್ನ ರಜಾ ದಿನ ಎಂದು ಮಾಡಿದ್ದಾರೆ ಎಂಬ ಕೊಂಚ ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ಸಾಮಾನ್ಯವಾಗಿ ಶಾಲಾ-ಕಾಲೇಜುಗಳಿಂದ ಹಿಡಿದು ಕಾರ್ಪೋರೇಟ್ ಕಂಪನಿಗಳವರೆಗೆ ಭಾನುವಾರ ರಜೆ ಇರುವುದನ್ನ ಕಾಣುತ್ತೇವೆ. ನಾವು ಕೂಡ ಈ ದಿನ ವಿಶ್ರಾಂತಿ ಪಡೆಯುತ್ತೇವೆ ಇನ್ನೂ ಕೆಲವರು ಹೊರಗಡೆ ಪ್ರವಾಸ ಹೋಗಲು ಸಹ ಕೈಗೊಳ್ಳುತ್ತಾರೆ.

ಆದರೆ ಈ ವಾರಪೂರ್ತಿ ದುಡಿದು ಈ ಭಾನುವಾರವನ್ನು ರಜಾ ದಿನ ಎಂದು ಮಾಡಿದರು ಎಂದು ತಿಳಿಯುವುದಾದರೆ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನ್ನ ಆಳುತ್ತ ಇದ್ದ ಬ್ರಿಟೀಷರು ಪ್ರತಿ ಭಾನುವಾರದಂದು ಪ್ರಾರ್ಥನೆ ಮಾಡಲು ಚರ್ಚ್ ಗೆ ಭೇಟಿ ನೀಡುತ್ತ ಇದ್ದರು. ಆದರೆ ನಮಗೆ ಮಾತ್ರ ವಿಶ್ರಾಂತಿ ಕೊಡದೆ ನಿರಂತರವಾಗಿ ವಾರ ಪೂರ್ತಿ ಕೆಲಸ ಮಾಡಿಸಿಕೊಳ್ಳುತ್ತಾ ಇದ್ದರು. ಈ ಶೋಷಣೆಯ ವಿರುದ್ದ ನಾರಾಯಣ್ ಮೇಘಾಜಿ ಲೋಖಂಡೆ ಎಂಬುವವರು ಬ್ರಿಟಿಷರ ಬಳಿ ಮನವಿಯೊಂದನ್ನ ಮಾಡುತ್ತಾರೆ. ಸ್ವಾಮಿ ನಾವು ವಾರಪೂರ್ತಿ ದುಡಿದು ನಮಗೆ ದೈಹಿಕ ಮಾನಸಿಕ ಆಯಾಸ ಆಗಿರುತ್ತಿದೆ.

ಹೌದು ವಾರವಿಡೀ ಕೆಲಸ ಮಾಡಿದರೂ 1ದಿವಸವಾದರೂ ವಿಶ್ರಾಂತಿ ಬೇಕು ಎಂಬ ಕಾರಣಕ್ಕಾಗಿ ನೀವು ಭಾನುವಾರದ ಪ್ರಾರ್ಥನೆಗಾಗಿ ಚರ್ಚ್ ಹೋಗುವ ದಿನವನ್ನು ನಮಗೆ ರಜದ ದಿವಸ ವನ್ನಾಗಿ ಘೋಷಣೆ ಮಾಡಿ ಎಂದು ತಿಳಿಸುತ್ತಾರೆ. ನಾರಾಯಣ್ ಮೇಘಾಜಿ ಲೋಖಂಡೆ ಅವರ ಈ ಮನವಿ ಅನ್ನು ಬ್ರಿಟಿಷರು ತಿರಸ್ಕಾರ ಮಾಡುತ್ತಾರೆ. ಇದರಿಂದ ನಾರಾಯಣ ಮೇಘಜಿ ಲೋಖಂಡೆ ಅವರು ಎದೆ ಗುಂದದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾರೆ.1881 ರಿಂದ 1889 ರವರೆಗೆ ಮಾಡಿದ ನಿರಂತರ ಹೋರಾಟದ ಅಂತಿಮವಾಗಿ ನಾರಾಯಣ ಮೇಘಜಿ ಲೋಖಂಡೆ ಅವರ ಮನವಿಗೆ ಬಿಟಿಷರು ಶರಣಾಗ ಬೇಕಾಗುತ್ತದೆ. ಇದರ ಫಲವಾಗಿ ಬ್ರಿಟೀಷರು 1889 ರಲ್ಲಿ ಭಾನುವಾರದ ದಿನವನ್ನು ರಜಾದಿನ ಎಂದು ಘೋಷಣೆ ಮಾಡುತ್ತಾರೆ.ಈ ಭಾನುವಾರದ ದಿನವನ್ನೇ ಏಕೆ ರಜಾ ದಿನವನ್ನಾಗಿ ಮಾಡಬೇಕು, ಆಲೋಚನೆ ಮಾಡಿದ್ದರು ಅಂದರೆ ಭಾನುವಾರ ತಿಂಗಳ ಮೊದಲ ದಿನ ಅಂದರೆ ತಿಂಗಳು ಆರಂಭವಾಗುವುದಕ್ಕೆ ಮೊದಲ ದಿನವನ್ನು ಶುಭದಿನ ಎಂದು ಪೂಜಿಸುವುದು ಉಂಟು.

ನಮ್ಮ ಪದ್ಧತಿ ಪ್ರಕಾರ ಯಾವ ಒಳ್ಳೆ ಕೆಲಸ ಮಾಡಲು ಹೊರಟಾಗ ವಿಘ್ನವಿನಾಶಕನ ಆಗಿರುವ ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡುತ್ತಾರೆ. ಅದೇ ರೀತಿ ಭಾನುವಾರ ದೇವರಿಗೆ ಪ್ರಾರ್ಥನೆ ಮಾಡಿ ಇಡೀ ತಿಂಗಳ ದಿನವೆಲ್ಲಾ ಉತ್ತಮವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿ, ಆ ಒಂದು ದಿನವನ್ನ ವಿಶ್ರಾಂತಿ ಪಡೆಯುವ ಉದ್ಧೇಶವನ್ನು ಭಾನುವಾರದ ರಜಾ ದಿನ ಒಳಗೊಂಡಿತ್ತು. ಇಂದು ಶಾಲಾ ಮಕ್ಕಳಿಗೆ ದುಡಿಯುವ ಶ್ರಮಿಕರಿಗೆ ವಾರ ಪೂರ್ತಿ ದುಡಿದು ಒಂದು ದಿನ ವಿಶ್ರಾಂತಿ ಪಡೆಯುವ ಪದ್ದತಿ ಆಚರಣೆಯಲ್ಲಿ ಇದೆ ಜನರು ತಮ್ಮ ಶ್ರಮಕ್ಕೆ ವಾರದಲ್ಲಿ ಒಮ್ಮೆಯಾದರೂ ರಜಾ ಪಡೆದುಕೊಳ್ಳುತ್ತಾ ಇದ್ದಾರೆ ಅಂದರೆ ಅದಕ್ಕೆ ಅಂದು ಸ್ವಾತಂತ್ರ್ಯ ಹೋರಾಟಗಾರರು ಆಗಿರುವ ನಾರಾಯಣ್ ಮೇಘಾಜಿ ಲೋಖಂಡೆ ಅವರ ಹೋರಾಟದ ಕೊಡುಗೆ ಎಂದು ನಾವು ನೆನಪಿಸಿಕೊಳ್ಳಬೇಕಾಗಿದೆ .

ಹೌದು ಈ ದಿವಸ ನಾವೆಲ್ಲರೂ ಭಾನುವಾರಕ್ಕಾಗಿ ಎಷ್ಟೆಲ್ಲ ಕಾಯುತ್ತೇವೆ ಹಾಗೂ ಭಾನುವಾರದ ದಿವಸವನ್ನು ಹೇಗೆಲ್ಲಾ ಎಂಜಾಯ್ ಮಾಡಬೇಕು ಅಂತ ಸಹ ಕಾಯುತ್ತೇವೆ ಆದರೆ ಯಾರೂ ಸಹ ಈ ಭಾನುವಾರ ದಿವಸದಂದು ಯಾಕೆ ರಜೆ ಘೋಷಣೆ ಮಾಡಿದರೋ ಹಾಗೂ ಈ ರೀತಿ ರಜೆ ಘೋಷಣೆ ಮಾಡಲು ಕಾರಣವೇನು ಇದರ ಬಗ್ಗೆ ಯಾರೂ ಸಹ ಯೋಚನೆಯೇ ಮಾಡಿರಲಿಲ್ಲ ಆದರೆ ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ ಯಾಕೆ ಭಾನುವಾರದ ದಿವಸದಂದು ರಜೆ ಘೋಷಣೆ ಮಾಡಿದರು ಮತ್ತು ಈ ಪದ್ಧತಿ ಎಂದಿನಿಂದ ಪಾಲಿಸಲಾಗುತ್ತಿದೆ ಎಂದು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now