ಕನ್ನಡದ ಖ್ಯಾತ ಹಾಸ್ಯ ನಟ ಚಿಕ್ಕಣ್ಣನೇ ನನಗೆ ಪರ್ಪೆಕ್ಟ್ ಜೋಡಿ ಆಗೋದು ಅಂತ ಹೇಳಿದ ನಟಿ ಯಾರು ಗೊತ್ತ ..

183

80ರ ಹಾಗೂ 90ರ ದಶಕವನ್ನು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಂಗಾರದ ಕಾಲ ಅಂತ ಕರೆಯುತ್ತಿದ್ದರು ಯಾಕೆ ಅಂದರೆ ಈ ಸಮಯದಲ್ಲಿ ಮೂಡಿಬಂದ ಬಹಳಷ್ಟು ಸಿನೆಮಾಗಳು ಜನರ ಮೆಚ್ಚುಗೆ ಪಡೆದುಕೊಳ್ಳುವುದರ ಜೊತೆಗೆ ಕನ್ನಡ ಸಿನಿಮಾರಂಗವನ್ನ ಮತ್ತೊಂದೆಡೆಗೆ ಕೊಂಡೊಯ್ದಿತ್ತು ಹೌದೋ ಅಂದಿನ ಕಾಲದಲ್ಲಿ ಮೂಡಿಬಂದ ಹಲವು ಸಿನೆಮಾಗಳು ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿಸಿ ಇವತ್ತಿಗೂ ಕೂಡ ಅಂತಹದ್ದೇ ಟ್ರೆಂಡ್ ಗಳನ್ನು ನಿರ್ದೇಶಕರು ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು ಇದೀಗ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿಯೊಬ್ಬರು ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದ್ದು, ಅದೇನೆಂದರೆ ‘ನನಗೆ ಚಿಕ್ಕಣ್ಣನೆ ಪರ್ಫೆಕ್ಟ್ ಜೋಡಿ ಆಗುವುದು ನನಗೆ ಚಿಕ್ಕಣ್ಣನೆ ಫಿಕ್ಸ್” ಎಂದು ಹೇಳಿಕೆ ನೀಡಿ ಭಾರಿ ವೈರಲ್ ಆಗಿರುವ ಈ ನಟಿ ಯಾರು ಗೊತ್ತಾ ಹೌದು ಈ ಲೇಖನವನ್ನ ಸಂಪೂರ್ಣವಾಗಿ ಆ ನಟಿ ಯಾರು ಮತ್ತು ಅವರು ಯಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡಿದರೂ ತಿಳಿಸುತ್ತೇವೆ.

ಅಂದಿನ ಕಾಲದಿಂದಲೂ ಸಿನಿಮಾರಂಗದಲ್ಲಿ ಕೇವಲ ನಟರಿಗೆ ಮಾತ್ರ ಅಲ್ಲ ಕೆಲವೊಂದು ಪೋಷಕ ಪಾತ್ರಗಳಿಗೆ ಮಾತ್ರವಲ್ಲ ಹಾಸ್ಯಮಾಡಿ ವವರೆಗೂ ಸಹ ಜೋಡಿಗಳನ್ನ ನೀಡಿ ಜನರಿಗೆ ಕಚಗುಳಿ ನೀಡಿ ಸಾಗಿಸುವಷ್ಟು ಹಾಸ್ಯವನ್ನು ಈ ಹಾಸ್ಯ ಜೋಡಿಗಳಿಂದ ಮಾಡಿಸುತ್ತಾ ಇದ್ದರು. ಹಾಸ್ಯ ಕಲಾವಿದರ ಜೋಡಿಗಳಲ್ಲಿ ಸಹ ಒಂದಷ್ಟು ಕಲಾವಿದರ ದಂಡೇ ಇದೆ. ಉದಾಹರಣೆಗೆ ಎನ್.ಎಸ್.ರಾವ್ ಮತ್ತು ಉಮಾಶ್ರೀ,ದೊಡ್ಡಣ್ಣ ಮತ್ತು ಗಿರಿಜಾ ಲೋಕೇಶ್, ಟೆನ್ನಿಸ್ ಕೃಷ್ಣ ಮತ್ತು ರೇಖಾದಾಸ್,ಸಾಧು ಕೋಕೀಲ ಮತ್ತು ರೇಖಾದಾಸ್,ಕರಿಬಸವಯ್ಯ ಮತ್ತು ಉಮಾಶ್ರೀ ಹೀಗೆ ಸಾಲು ಸಾಲು ಹಾಸ್ಯ ಕಲಾವಿದರ ಜೋಡಿ ಸಿನಿಮಾಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಿದ್ದರು. ಆದರೆ ದಶಕಗಳ ನಂತರ ಬಂದ ಸಿನಿಮಾಗಳಲ್ಲಿ ಹೀರೋಗಳೇ ಹಾಸ್ಯ ಮಾಡಲು ಶುರು ಮಾಡಿದರು, ಹೌದು ಕೆಲವೊಂದು ಸಿನಿಮಾಗಳನ್ನ ನೀವು ನೋಡಿದರೆ ಅಲ್ಲಿ ನೀವು ಗಮನಿಸಬಹುದು ಸಿನಿಮಾದ ನಟರು ಹಾಸ್ಯ ಮಾಡುವ ಮೂಲಕ ಜನರಿಗೆ ನಕ್ಕು ನಲಿಸುತ್ತಾ ಇದ್ದರು ಇದು ಸಹ ಟ್ರೆಂಡ್ ಆಗಿ ಬಿಟ್ಟಿತ್ತು. ಇಂತಹ ಸಂಪ್ರದಾಯ ಆಗಮನವಾದಾಗ ಹಾಸ್ಯ ಕಲಾವಿದರ ಜಾಗಕ್ಕೆ ಹೀರೋಗಳೇ ಆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸುವಂತಾಯಿತು.

ಏನೋ ಈ ಬಗೆಯ ಹಾಸ್ಯ ಕಲಾವಿದರ ಜೋಡಿ ಅನ್ನೋ ಈಗಿನ ತಲೆಮಾರಿನ ಸಿನೆಮಗಳಲ್ಲಿ ಕಾಣುವುದು ಬಹಳ ಅಪರೂಪ ಆಗಿದೆ ಅಂತಾನೇ ಹೇಳಬಹುದು ಹಾಗೆ ಇದಕ್ಕೆ ತದ್ವಿರುದ್ಧವಾಗಿ ಬಂದ ಸಿನಿಮಾಗಳಲ್ಲಿ ಚಿತ್ರ ಅಭಿನಯದ ಅಧ್ಯಕ್ಷ ಚಿತ್ರ ನಂದಕಿಶೋರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಈ ರೀತಿಯ ಹಾಸ್ಯ ಕಲಾವಿದರ ಕಾಣಿಸಿಕೊಂಡಿದ್ದು ಸಿನಿಮಾ ಸೂಪರ್ ಹಿಟ್ ಆಗಿತ್ತೋ ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಅವರಿಗೆ ಕಾಂಬಿನೇಷನ್ ಆಗಿ ರಕ್ಷಾ ಅವರು ಕಾಣಿಸಿಕೊಂಡಿದ್ದರು ಚಿಕ್ಕಣ್ಣ ಅವರಿಗೆ ನಟಿಯಾಗಿ ಆರೋಹಿತಾ ಅವರು ಕಾಣಿಸಿಕೊಂಡಿದ್ದರು. ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಆರೋಹಿತಾ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಕಾಮಿಡಿ ಜನರಿಗೆ ಬಹಳ ಇಷ್ಟವಾಗಿತ್ತು ಜನರ ಮೆಚ್ಚುಗೆ ಪಡೆದುಕೊಂಡಿತ್ತು ಈ ಜೋಡಿ.

ನಟಿ ಆರೋಹಿತಾ ಅವರ ಬಗ್ಗೆ ಹೇಳುವುದೇ ಬೇಡ ಇವರ ಪರಿಚಯ ನಿಮಗೆ ಇರುತ್ತದೆ ಇವರು ಗೋಲಿಸೋಡ ಎಂಬ ಸಿನಿಮಾ ಮೂಲಕ ಸಿನಿಮಾ ರಂಗದಲ್ಲಿ ಭಾರೀ ಹಿಟ್ ಆದರೂ ಆ ನಂತರ ಇವರಿಗೆ ಹಲವು ಸಿನಿಮಾಗಳು ಮೂಡಿ ಬಂದವು ಅಧ್ಯಕ್ಷ ಸಿನೆಮಾ ಇವರಿಗೆ ಭಾರಿ ಹಿಟ್ ತಂದುಕೊಟ್ಟಿತ್ತು. ಆದರೆ ಆರೋಹಿತಾ ಅವರಿಗೆ ಅಧ್ಯಕ್ಷ ಸಿನಿಮಾದ ನಂತರ ಯಾವ ಚಿತ್ರಗಳು ಕೂಡ ಹೇಳಿಕೊಳ್ಳುವಷ್ಟು ಹೆಸರು ತಂದುಕೊಡಲಿಲ್ಲಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಸಾಧುಕೋಕಿಲ ಅವರ ಜೊತೆ ನಟಿಸಿದ ಆರೋಹಿತಾ ಅವರಿಗೆ ಸಾಧುಕೋಕಿಲ ಅವರೊಟ್ಟಿಗೆ ನಟಿಸಿದ್ದು ವಯಸ್ಸಿನ ಅಂತರದ ವಿಚಾರವಾಗಿ ಕೊಂಚ ಸೂಕ್ತ ಅನಿಸಿಲ್ಲವಂತೆ.ನಟಿ ಆರೋಹಿತಾ ಅವರಿಗೆ ದರ್ಶನ್,ಸುದೀಪ್,ಯಶ್,ಗಣೇಶ್ ಹೀಗೆ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಬೇಕು ಎಂಬ ಮಹಾದಾಸೆ ಇದೆಯಂತೆ. ಹಾಸ್ಯನಟರಾದ ರಂಗಾಯಣ ರಘು ಅವರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎಂಬ ಇಚ್ಚೆ ಇದೆ ಎಂದು ಹೇಳಿಕೊಂಡಿದ್ದಾರೆ ಆರೋಹಿತ.

ನೀವು ಯಾವ ನಟರೊಂದಿಗೆ ಜೋಡಿಯಾಗಿ ನಟಿಸಲು ಇಷ್ಟ ಪಡುತ್ತೀರಾ ಎಂಬ ಮೀಡಿಯಾದವರ ಪ್ರಶ್ನೆಗೆ ಆರೋಹಿತಾ ಅವರು ಹೇಳಿದ್ದು ನನ್ನ ಪರ್ಸ್ ನಳ್ಳಿಗೆ ಚಿಕ್ಕಣ್ಣ ಅವರೇ ಸೂಟ್ ಆಗುವುದು ಎಂದು ಹೇಳಿಕೊಂಡಿದ್ದಾರೆ. ನೀನು ನನಗೆ ರಾಜ್ ಕುಮಾರ್ ಅವರು ಅಂದರೆ ಫೇವರಿಟ್ ಹೀರೋ ಎಂದು ಹೇಳಿಕೊಂಡಿರುವ ಆರೋಹಿತಾ ಈ ಹೇಳಿಕೆ ನೀಡಿದ ನಂತರ ಭಾರೀ ವೈರಲ್ ಆಗಿದ್ದಾರೆ.

 

 

WhatsApp Channel Join Now
Telegram Channel Join Now