ಕನ್ನಡ ಚಿತ್ರರಂಗದ ಶ್ರೀಮಂತ ನಟರು ಯಾರೆಲ್ಲಾ ಇದ್ದಾರೆ ಗೊತ್ತ .. ಎಷ್ಟು ಕೋಟಿ ಆಸ್ತಿ ಇದೆ… ಕೇಳಿದ್ರೆ ಅಚ್ಚರಿಯಾಗ್ತೀರಾ

371

ಹಾಯ್ ಫ್ರೆಂಡ್ಸ್ ಚಂದನವನದ ನಿಮ್ಮ ಫೇವರೇಟ್ ನಟ ರ ಆಸ್ತಿ ಎಷ್ಟಿರಬಹುದು ಗೊತ್ತಾ ಹೌದು ನೀವು ಊಹೆ ಕೂಡ ಮಾಡಿರುವುದೆಲ್ಲ ನಮ್ಮ ಚಂದನವನದ ಟಾಪ್ ನಟ ಯಾರು ಅಂತ, ಹೌದು ಯಾರಿರಬಹುದು ಅಂತ ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ಇವತ್ತಿನ ಈ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ, ನಮ್ಮ ಚಂದನವನದ ನಟರು ಆಸ್ತಿ ವಿವರ. ಹಾಗಾದ್ರೆ ಬನ್ನಿ ನಿಮಗೂ ಕೂಡ ಈ ಕುರಿತು ತಿಳಿದುಕೊಳ್ಳುವ ಕುತೂಹಲವಿದೆಯಾ? ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಫೇವರೇಟ್ ನಟ ಯಾರು ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಸಿನಿಮಾರಂಗ ಎಂದರೇ ಅದು ಸುಲಭದ ಮಾತಲ್ಲ ಈ ಮಾಯಾಜಾಲದ ಬದುಕಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಬಹಳ ಕಷ್ಟಸಾಧ್ಯ ಈ ಸಮುದ್ರದಲ್ಲಿ ಈಜುವವರು ಮುಳುಗುವವರು ಮುಳುಗಿ ಏಳುವವರು, ಕೊನೆಗೆ ಮುಳುಗಿ ಹೋಗಿ ಬಿಡುವವರು ಬಹಳಷ್ಟು ಮಂದಿ. ಹಾಗಾಗಿ ಈ ಸಿನಿಮಾ ರಂಗದತ್ತ ಮುಖ ಮಾಡಿ ನಿಂತವರು ಅದೃಷ್ಟವನ್ನು ಹೊಂದಿರಲೇಬೇಕು ಆಗಲೇ ಈ ಮಾಯಾಜಾಲದಿಂದ ಸಮುದ್ರದಲ್ಲಿ ಈಜಲು ಸಾಧ್ಯ ನೋಡಿ. ಹಾಗಾದರೆ ನಮ್ಮ ಈ ಚಂದನವನದಲ್ಲಿ ಇಂದು ಟಾಪ್ ಮೋಸ್ಟ್ ನಟರುಗಳಲ್ಲಿ ಹಾಗೂ ಬಹುಬೇಡಿಕೆಯ ನಟರುಗಳಲ್ಲಿ ಹೆಚ್ಚು ಆಸ್ತಿ ಸಂಪಾದಿಸಿರುವರು ಯಾರದ್ದು ತಿಳಿಯೋಣ ಬನ್ನಿ.

ಕನ್ನಡ ಸಿನಿಮಾರಂಗದಲ್ಲಿ ಇವರನ್ನು ಆ್ಯಕ್ಷನ್ ಪ್ರಿನ್ಸ್ ಅಂತ ಕರೀತಾರ ಚಿತ್ರರಂಗಕ್ಕೆ ಅದ್ದೂರಿ ಯಾಗಿ ಎಂಟ್ರಿಕೊಟ್ಟ ಇವರು ಅದ್ದೂರಿ ಸಿನಿಮಾ ಮೂಲಕ ಎಲ್ಲರ ಮನಗೆದ್ದರು ಹೌದು ನಟ ಧ್ರುವ ಸರ್ಜಾ ಅವರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದೇವೆ ವರುಷಕೊಮ್ಮೆ ಒಂದೇ ಸಿನಿಮಾ ಮಾಡಿದರೂ ನೂರು ದಿನಗಳು ಓಡುತ್ತದೆ ಇವರ ಸಿನಿಮಾ. ಹೌದು ನಟ ಧ್ರುವ ಸರ್ಜಾ ನಮ್ಮ ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟರಾಗಿದ್ದಾರೆ ಹಾಗೂ ಅಪಾರ ಅಭಿಮಾನಿಗಳ ಬಳಗ ತಂದಿರುವ ಧ್ರುವ ಸರ್ಜಾ ಅವರು ಹೊಂದಿರುವ ಆಸ್ತಿ ವಿವರ ಹೀಗಿದೆ ನೋಡಿ 50 ಇಂದ 80 ಕೋಟಿ ರೂಪಾಯಿಗಳವರೆಗೂ ಇವರ ಆಸ್ತಿಯಿದೆ.

ಕನ್ನಡ ಸಿನಿಮಾರಂಗದಲ್ಲಿ ದುನಿಯಾ ವಿಜಯ್ ಅಂತಾನೇ ಖ್ಯಾತಿ ಪಡೆದುಕೊಂಡಿರುವ ಇವರು ಮೊದಮೊದಲು ಪೋಷಕರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆ ಬಳಿಕ ದುನಿಯಾ ಸಿನಿಮಾ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದ ಇವರು, ಬಾಡಿ ಬಿಲ್ಡ್ ಮಾಡಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೂ ಇವರ ಆಸ್ತಿ ಮೊತ್ತ ಸುಮಾರು 30 ರಿಂದ 40 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಇವರು ನಮ್ಮ ಕನ್ನಡ ಸಿನಿಮಾರಂಗದ ನಟ ನಿರ್ದೇಶಕರು ಹಾಗೂ ಬಹಳಷ್ಟು ಸಿನಿಮಾಗಳನ್ನು ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಮ್ಮೆಲ್ಲರ ನೆಚ್ಚಿನ ಸೂಪರ್ ಸ್ಟಾರ್ ನಟ ಉಪೇಂದ್ರ ಅವರು ತಮ್ಮದೇ ಆದ ರೆಸಾರ್ಟ್ ಹೊಂದಿದ್ದಾರೆ ಭವ್ಯ ಬಂಗಲೆ ಹೊಂದಿದ್ದಾರೆ ಇವರ ಒಟ್ಟು ಆಸ್ತಿ ಮೊತ್ತ 150 ರಿಂದ 180ಕೋಟಿ.

ಕನ್ನಡ ಸಿನಿಮಾರಂಗದಲ್ಲಿ ಇವರನ್ನು ಇಷ್ಟಪಡದೇ ಇರುವವರು ಯಾರೂ ಇಲ್ಲ ನೋಡಿ. ಹೌದು ಆನಂದ್ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟ ಈಗಾಗಲೇ ಬಹಳಷ್ಟು ಪ್ರಾಯೋಗಿಕ ಸಿನಿಮಾಗಳಲ್ಲಿ ಅಭಿನಯ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ ಅಭಿಮಾನಿಗಳನ್ನೇ ದೇವರು ಎನ್ನುವ ಕುಟುಂಬದವರು ಇವರು, ಹೌದು ನಟ ಶಿವಣ್ಣ ಅವರು ಕನ್ನಡ ಸಿನಿಮಾರಂಗದ ಬಹು ಬೇಡಿಕೆಯ ನಟ ಇವರ ಒಟ್ಟು ಆಸ್ತಿಯ ವಿವರ ಹೀಗಿದೆ 150 ರಿಂದ 160 ಕೋಟಿ.

ಕಿಚ್ಚ ಸುದೀಪ್ ಅವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟರುಗಳಲ್ಲಿ ಒಬ್ಬರಾಗಿರುವ ಕೆಟ್ಟ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ ಈಗಾಗಲೇ ರಿಲೀಸ್ ಗೂ ಮುನ್ನವೇ ವಿಕ್ರಾಂತ್ ರೋಣ ಹೆಚ್ಚು ಸದ್ದು ಮಾಡುತ್ತಿದ್ದು ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಒಟ್ಟು ಆಸ್ತಿ 180 ರಿಂದ 200 ಕೋಟಿ.

ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಅವರು ಚೆಲ್ಲಾಟ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಟನಾಗಿ ಎಂಟ್ರಿ ಕೊಡುತ್ತಾರಾ ಅದಕ್ಕಿಂತ ಮೊದಲು ಕಿರುತೆರೆಯಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದ ಇವರು ಸಿನಿಮಾ ರಂಗದಲ್ಲಿ ಬಹಳಷ್ಟು ಪೋಷಕ ಪಾತ್ರಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ ನಟ ಗಣೇಶ್ ಅವರ ಒಟ್ಟು ಆಸ್ತಿಯ ವಿವರ ಹೀಗಿದೆ 80 ರಿಂದ 90 ಕೋಟಿ ರೂಪಾಯಿ.

ಇನ್ನು ಇವರನ್ನು ಕರುನಾಡ ಕರ್ಣ ಡಿ ಬಾಸ್ ಅಂತಲೂ ಕರಿತಾರೆ. ಹೌದು ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಹಲವು ಹೆಸರುಗಳಿಂದ ಕರೆಯುತ್ತಾರೆ. ನಟ ದರ್ಶನ್ ಕನ್ನಡ ಸಿನಿಮಾ ರಂಗದಲ್ಲಿ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಪಾರ ಅಭಿಮಾನಿಗಳ ಪ್ರೀತಿ ಗಳಿಸಿರುವ ದರ್ಶನ್ ಅವರ ಒಟ್ಟು ಆಸ್ತಿಯ ವಿವರ 150 ರಿಂದ 200 ಕೋಟಿ ಎಂದು ಹೇಳಲಾಗಿದೆ.

ಇನ್ನೂ ನಮ್ಮ ಅಪ್ಪು ಕರುನಾಡ ರಾಜಕುಮಾರ ಬಾಲನಟರಾಗಿ ಪೂರ್ಣ ನಟರಾಗಿ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವಂತಹ ನಮ್ಮ ಅಪ್ಪು ನಮ್ಮೆಲ್ಲರ ಪ್ರೀತಿಯ ನಟ ಪುನೀತರಾಜಕುಮಾರ್ ಅವರ ಒಟ್ಟು ಆಸ್ತಿಯ ವಿವರ ಹೀಗಿದೆ 200 ರಿಂದ 250 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.

ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಅಂತಾರೆ ನೋಡಿ ಹಾಗೆ ಕೆಜಿಎಫ್ ಸಿನಿಮಾದ ಮೂಲಕ ಈಗಾಗಲೇ ಭಾರಿ ಜನಪ್ರಿಯತೆ ಯಶಸ್ಸು ಪಡೆದುಕೊಂಡಿರುವ ನಟ ಯಶ್ ಅವರು ಈಗ ಕನ್ನಡ ಸಿನಿಮಾರಂಗದಲ್ಲಿ ಟಾಪ್ ನಟರು ಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ನಟ ಯಶ್ ಅವರ ಒಟ್ಟು ಆಸ್ತಿಯ ಮೊತ್ತ ಹೇಳುವುದಾದರೆ 180 ರಿಂದ 200 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.

WhatsApp Channel Join Now
Telegram Channel Join Now