ಎಷ್ಟೇ ಹಳೆಯ ಮೂಳೆಗಳ ನೋವು , ಸಂದಿಗಳ ನೋವು, ಸೊಂಟ ನೋವು ಇದ್ದರು ಸಹ ಈ ವಸ್ತು ಬಳಸಿ ಸಾಕು ರಾಮಭಾಣದಂತೆ ಕೆಲಸ ಮಾಡುತ್ತದೆ…

237

ಮಂಡಿನೋವು ಕೀಲುನೋವು ಸಂದುನೋವು ಬರುತ್ತಿದ್ದರೆ ಮೆಂತೆ ಕಾಳುಗಳಿಂದ ಮಾಡುವ ಪರಿಹಾರ ಅತ್ಯದ್ಭುತವಾಗಿ ಮಂಡಿ ನೋವಿಗೆ ಶಮನ ಕೊಡುತ್ತದೆ. ಹಾಗಾದರೆ ಈ ಮನೆಮದ್ದನ್ನು ಪಾಲಿಸುವುದು ಹೇಗೆ ಹಾಗೂ ಮೆಂತ್ಯೆ ಕಾಳುಗಳನ್ನು ಯಾವ ವಿಧಾನದಲ್ಲಿ ಬಳಸುತ್ತಾ ಬಂದರೆ ಮಂಡಿ ನೋವಿನಂತಹ ಸಮಸ್ಯೆಗೆ ಪರಿಹಾರ ಸಿಗುತ್ತೆ ತಿಳಿಯೋಣ ಬನ್ನಿ ಇಂದಿನ ಈ ಲೇಖನಿಯಲ್ಲಿ.ಇವತ್ತಿನ ದಿನಗಳಲ್ಲಿ ಮನುಷ್ಯ ಕೂತಲ್ಲಿಯೇ ಕೂತು ಕೆಲಸ ಮಾಡಿ ಮಾಡಿ ದೇಹ ಕೂಡ ಜಿಡ್ಡು ಹಿಡಿಯುತ್ತಾ ಇದೆ ನಮ್ಮ ದೇಹಕ್ಕೆ ನಾವು ಶ್ರಮ ಹಾಕದೆ ಇರುವುದರಿಂದ ದೇಹವನು ದಂಡಿಸದೆ ಇರುವುದರಿಂದಲೆ ಏನೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಅಂದರೆ ಅದು ಮನುಷ್ಯನಿಗೆ ಅರಿವಿಗೆ ಬರುತ್ತಿಲ್ಲ.

ಹೌದು ಕೂತು ಕೂತು ಹೊಟ್ಟೆ ಮುಂದುವರಿತಾ ಇದೆ ಬೊಜ್ಜು ಹೆಚ್ಚುತ್ತಿದೆ ದೇಹಕ್ಕೆ ಶ್ರಮವೇ ಇಲ್ಲದೆ ಕೈ ಕಾಲುಗಳ ಮೂಳೆ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದಲೇ ಎಂದು ಮೂವತ್ತು ನಲವತ್ತು ವಯಸ್ಸಿಗೆ ಮಂಡಿನೋವು ಕಾಲುನೋವು ಅಂತಾ ಜನರು ಹಾಸಿಗೆ ಹಿಡಿಯುತ್ತಿದ್ದಾರೆ ಆದರೆ ನಮ್ಮ ದೇಹಕ್ಕೆ ಶ್ರಮವನ್ನು ಹಾಕುವುದರ ಜೊತೆಗೆ ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾ ಬಂದರೆ ಖಂಡಿತವಾಗಿಯೂ ಇಂತಹಾ ಸಮಸ್ಯೆಗಳನ್ನ ನಾವು ವಯಸ್ಸಾದ ಮೇಲೆಯೂ ಕೂಡ ಅನುಭವಿಸ ಬೇಕಾಗಿರುವುದಿಲ್ಲ.

ಹೌದು ನೀವು ಇಂದಿಗೂ ಇರುವ ಹಿರಿಯರನ್ನು ನೋಡಿ ಅವರು ಕೈಕಾಲು ಹಿಡಿಯಿತೋ ಮಂಡಿ ನೋವು ಅಂತ ಹೇಳೋದೇ ಇಲ್ಲ ಯಾಕೆ ಅಂದರೆ ಅದಕ್ಕೆ ಅವರು ಹಾಕುತ್ತಿದ್ದ ದೈಹಿಕ ಶ್ರಮ ಕಾರಣ ಜೊತೆಗೆ ಅವರು ಪಾಲಿಸುತ್ತಿದ್ದ ಜೀವನಶೈಲಿ ಆಹಾರ ಪದ್ಧತಿ ಕಾರಣ.

ಇವತ್ತಿನ ದಿನಗಳಲ್ಲಿ ಹೆಚ್ಚಿನ ಮಂದಿ ಹಣಕ್ಕೆ ದುಡಿಮೆಗೆ ತಮ್ಮ ಸಮಯ ಕೊಡುತ್ತಾರೆ ಹೊರತು ತಮ್ಮ ಕುಟುಂಬಕ್ಕಾಗಲೀ ತಮ್ಮ ದೇಹದ ಆರೋಗ್ಯಕ್ಕಾಗಲೀ ಸ್ವಲ್ಪ ಸಮಯ ಕೊಡು ವುದಿಲ್ಲ.ಆದರೆ ಹಾಗೆ ಮಾಡುವುದರ ಬದಲು ನಾವು ನಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ವಹಿಸಿ ದಿನಕ್ಕೆ 1ಗಂಟೆಗಳಾದರೂ ನಮ್ಮ ಆರೋಗ್ಯಕ್ಕಾಗಿ ನಾವು ಸಮಯ ಕೊಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ಆರೋಗ್ಯ ನಮ್ಮನ್ನು ಕಾಪಾಡುತ್ತದೆ ಹೆಚ್ಚು ಸಮಯ ಆರೋಗ್ಯಕರವಾಗಿರುವಂತೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಈಗ ಬಂದಿರುವ ಮಂಡಿ ನೋವನ್ನು ಶಮನ ಪಡೆದುಕೊಳ್ಳುವುದು ಹೇಗೆ ಎಂಬ ಕುರಿತು ತಿಳಿಯೋಣ ಬನ್ನಿ.ಹೌದು ಇಂದಿನ ದಿನಗಳಲ್ಲಿ ಮಂಡಿನೋವು ಸಂಧಿನೋವು ಕೀಲುನೋವು ಮೂಳೆಗಳ ಭಾಗದಲ್ಲಿ ಸೆಳೆತ ಇದೆಲ್ಲ ಸಾಮಾನ್ಯವಾಗಿಬಿಟ್ಟಿದೆ.ಹಾಗಾಗಿ ಇವತ್ತಿನ ಈ ಮಾಹಿತಿಯಲ್ಲಿ ನಾವು ಪರಿಣಾಮಕಾರಿಯಾದ ಮತ್ತು ನಿಮ್ಮ ಈ ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನೂ ನೀಡಬಲ್ಲ ಮನೆ ಮರವೊಂದರ ಬಗ್ಗೆ ತಿಳಿಸಿಕೊಡುತ್ತದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಈ ಮನೆಮದ್ದನ್ನು ತಪ್ಪದೆ ಪಾಲಿಸುತ್ತಾ ಬನ್ನಿ ಇದಕ್ಕಾಗಿ ಬೇಕಾಗಿರುವುದು ಒಣಶುಂಠಿ ಪುಡಿ ಮೆಂತ್ಯ ಕಾಳಿನ ಪುಡಿ ಹಾಗೂ ಅಜ್ವೈನ್ ಪೌಡರ್ ಇದನ್ನು ಓಮಿನಕಾಳು ಅಂತ ಕೂಡ ಕರಿತಾರ ಇದು ಜೀರ್ಣ ಶಕ್ತಿಗೆ ಅತ್ಯದ್ಭುತ ಪರಿಹಾರವಾಗಿದೆ.

ಈಗ ಮೊದಲು ಮಾಡಬೇಕಿರುವುದು ಏನು ಅಂದರೆ ಮೊದಲಿಗೆ ಒಣಶುಂಠಿ ಪುಡಿಯನ್ನು 1ಚಮಚ ತೆಗೆದುಕೊಂಡರೆ ಅದೆ ಪ್ರಮಾಣದ ಮೆಂತ್ಯಪುಡಿಯನ್ನು ಕೂಡ ತೆಗೆದುಕೊಳ್ಳಬೇಕು ಹಾಗೆ ಈಗ ಈ ಪುಡಿಗಳನ್ನು ತೆಗೆದುಕೊಂಡು ಇದಕ್ಕೆ ಅಜ್ವೈನ ವನ್ನು ಹುರಿದು ಪುಡಿ ಮಾಡಿ ಇದೇ ಪದಾರ್ಥಗಳ ಸಮ ಪ್ರಮಾಣದಲ್ಲಿ ಅಜವಾನದ ಪುಡಿಯನ್ನು ಕೂಡ ತೆಗೆದುಕೊಂಡು ಈ ಮೂರನ್ನು ಮತ್ತೊಮ್ಮೆ ಬ್ಲೆಂಡ್ ಮಾಡಿ ಈ ಪುಡಿಯನ್ನು ಸ್ಟೋರ್ ಮಾಡಿಟ್ಟುಕೊಳ್ಳಿ.ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿಗೆ ತಯಾರಿ ಮಾಡಿಕೊಂಡಂತಹ ಪುಡಿ ಅರ್ಧ ಚಮಚದಷ್ಟು ಸೇರಿಸಿ ಈ ಹಾಲನ್ನು ಕುಡಿಯುತ್ತಾ ಬಂದರೆ ದೇಹಕ್ಕೆ ಕ್ಯಾಲ್ಸಿಯಂನ ದೊರೆತು ನೋವೂ ಕಡಿಮೆಯಾಗುತ್ತೆ.