ಒಂದು ಪೈಸೆ ಖರ್ಚು ಮಾಡದೇ ನಿಮ್ಮ ಮನೆಯ ವಾಸ್ತುವನ್ನ ಸರಿಪಡಿಸಿಕೊಳ್ಳೋ ಸರಳ ಉಪಾಯ ಇಲ್ಲಿದೆ … ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಕಷ್ಟ ನಷ್ಟಗಳು ಉಂಟಾಗುದಿಲ್ಲ…

328

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ವಾಸ್ತುದೋಷ ಕಾಡುತ್ತಿದ್ದಲ್ಲಿ ಖಂಡಿತ ಈ ಪರಿಹಾರಗಳನ್ನ ಮಾಡಿಕೊಳ್ಳಿ ಹೌದು ಮನೆಯಲ್ಲಿ ವಾಸ್ತು ದೋಷ ಇದ್ದರೆ ನೀವು ಆಚೆ ನಿಮ್ಮ ಕೆಲಸದಲ್ಲಿ ಎಷ್ಟೇ ಶ್ರಮ ಹಾಕಿದರೂ ಆ ಶ್ರಮ ನಿಮಗೆ ಕೈ ಹತ್ತುವುದಿಲ್ಲ ನಿಮಗೆ ಲಾಭವನ್ನು ಸಹ ತಂದುಕೊಡುವುದಿಲ್ಲ. ಹಾಗಾಗಿ ಇರುವ ವಾಸ್ತುದೋಷವನ್ನು ಕೆಲವೊಂದು ಪರಿಹಾರಗಳನ್ನು ಭರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವ ಹಾಗೆ ನೋಡಿಕೊಂಡು ಆ ವಾಸ್ತು ದೋಷದಿಂದ ಪರಿಹಾರವನ್ನು ಪಡೆದುಕೊಳ್ಳಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ದರೂ ವಾಸ್ತು ದೋಷ ಇಲ್ಲದಿದ್ದರೂ ಈ ಕೆಲವೊಂದು ಪರಿಹಾರಗಳನ್ನು ತಪ್ಪದೆ ಪಾಲಿಸಿ ಇದರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯು ನೆಲೆಸಿರುತ್ತದೆ ಆಗ ತಾನಾಗಿಯೇ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ.

ಹೌದು ಲಕ್ಷ್ಮೀದೇವಿ ಅಂದರೆ ಆಕೆ ಹಣದ ಸಂಕೇತ ಆಕೆ ಸಂಪತ್ತಿನ ಸಂಕೇತ ಬರೀ ಸಂಪತ್ತು ಮಾತ್ರವಲ್ಲ ಆಕೆ ಸಂತಸದ ಸಂಕೇತ ಕೂಡ ಆಗಿರುತ್ತಾಳೆ. ಹಾಗಾಗಿ ಲಕ್ಷ್ಮೀದೇವಿಯನ್ನು ಪ್ರಾರ್ಥನೆ ಮಾಡಿ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಿ ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಟ್ಟ ಅವಾಚ್ಯ ಪದಗಳನ್ನು ಬಳಸಬೇಡಿ ಸಂಜೆಯ ಸಮಯದಲ್ಲಿ ಅದೆಷ್ಟು ದೇವರನಾಮವನ್ನು ಸ್ಮರಣೆ ಮಾಡಿ. ಕೆಲವೊಂದು ಒಳ್ಳೆಯ ಶಬ್ದಗಳು ಕೆಲವೊಂದು ಮಂತ್ರಗಳು ಕೆಲವೊಂದು ಪದಗಳ ಉಚ್ಚಾರಣೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಹಾಗೂ ಅಂತಹ ಸಕಾರಾತ್ಮಕ ಶಕ್ತಿಯು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಹೊರಹಾಕುತ್ತದೆ ಆದ್ದರಿಂದ ಸಂಜೆಯ ಸಮಯದಲ್ಲಿ ಸದನವು ಒಳ್ಳೆಯದನ್ನೇ ಮಾತಾಡುವುದರಿಂದ ಅಂತಹ ಒಳ್ಳೆಯ ಮಾತುಗಳು ಮನೆಯಲ್ಲಿ ಒಳ್ಳೆಯ ಶಕ್ತಿಯನ್ನು ಉಂಟುಮಾಡುತ್ತದೆ. ವಾಸ್ತುದೋಷ ಇದೆ ಅನ್ನುವವರು ಪ್ರತಿದಿನ ಮನೆ ಒರೆಸುವಾಗ ಗೋ ಮೂತ್ರವನ್ನು ನೀರಿಗೆ ಹಾಕಿ ಸ್ವಲ್ಪ ಕಲ್ಲುಪ್ಪು ಬೆರೆಸಿ ಮನೆಯನ್ನು ಒರೆಸಿ ಇದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿಯು ಆಚೆ ಹೋಗುತ್ತದೆ.

ಹೌದು ಉಪ್ಪು ಮತ್ತು ಗೋಮೂತ್ರದಲ್ಲಿ ಕೆಟ್ಟ ಶಕ್ತಿಯನ್ನ ಹೊರಹಾಕುವ ಸಾಮರ್ಥ್ಯವಿದೆ ಹಾಗೆ ಮನೆ ಅಂದಮೇಲೆ ಅಲ್ಲಿ ಪ್ರಮುಖವಾದದ್ದು ದೇವರ ಕೋಣೆ ಆಗಿರುತ್ತದೆ ಸದಾ ದೇವರ ಕೋಣೆಯನ್ನು ಶುಚಿ ಆಗಿ ಇಡೀ. ಮನೆಗೆ ನಕಾರಾತ್ಮಕ ಶಕ್ತಿಯು ಬಾತ್ ರೂಮ್ ನಿಂದ ಪಸರಿಸುವ ಕಾರಣ ಸದಾ ಬಾತ್ ರೂಮ್ ಡೋರ್ ಅನ್ನು ಹಾಕಿಕೊಂಡು ಓಡಾಡಿ. ಅದಷ್ಟು ಬಾತ್ರೂಮ್ನಲ್ಲಿ ಗಾಜಿನ ಡಬ್ಬವೊಂದರಲ್ಲಿ ಉಪ್ಪನ್ನು ಹಾಕಿ ಬಾತ್ರೂಮ್ ಮೂಲೆಯಲ್ಲಿ ಇರಿಸಿ ಇದರಿಂದ ನಕಾರಾತ್ಮಕ ಶಕ್ತಿಯು ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ.

ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆಣ್ಣು ಮಕ್ಕಳು ಸಂಜೆ 6ಗಂಟೆಯ ಬಳಿಕ ನಿದ್ರೆ ಮಾಡಬೇಡಿ ಸಂಜೆ ಗೋಧೂಳಿ ಸಮಯದಲ್ಲಿ ಊಟ ಮಾಡುವುದು ಇಂತಹ ಕೆಲಸಗಳನ್ನು ಮಾಡಬೇಡಿ. ತಪ್ಪದೆ ಮನೆಯ ಅಂಗಳವನ್ನ ಪ್ರತಿದಿನ ಸ್ವಚ್ಛಮಾಡಿ ಹಾಗೂ ಬೆಳಿಗ್ಗೆ ಸಂಜೆ ರಂಗೋಲಿಯನ್ನು ಹಾಕುವುದು ಒಳ್ಳೆಯದು ಹೌದು ವಾಸ್ತು ದೋಷ ಇದ್ದಲ್ಲಿ ಖಂಡಿತ ಈ ಪರಿಹಾರವನ್ನು ಪ್ರತಿದಿನ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಬಿಡಿಸಿ ಇದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ ಮನೆಯ ಅಂಗಳ ಶುಚಿಯಾಗಿದ್ದರೆ ಮನೆಯ ಅಂಗಳವನ್ನು ರಂಗೋಲಿಯಿಂದ ಅಲಂಕಾರ ಮಾಡಿದರೆ ಅಂಥ ಮನೆಗೆ ಲಕ್ಷ್ಮೀ ಸಂತಸದಿಂದ ಬರುತ್ತಾಳೆ.

ಮನೆಯನ್ನ ಪ್ರತಿದಿನ ಗುಡಿಸಿ ಮನೆಯಲ್ಲಿ ಗಲೀಜು ಇರಬಾರದು ಪ್ರತಿ ವಾರ ಮನೆಯನ್ನು ಸ್ವಚ್ಛ ಮಾಡಿ ಧೂಳು ಇರದಂತೆ ನೋಡಿಕೊಳ್ಳಿ. ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಹಾಗೆ ದೇವರ ಕೋಣೆಯನ್ನು ಸದಾ ಶುಚಿಯಾಗಿ ಇಡಿ ವಾಸ್ತುದೋಷ ನಿವಾರಣೆ ಮಾಡಿಕೊಳ್ಳಲು ಆದಷ್ಟು ಮನೆಯೊಳಗೆ ಹಸಿರು ಗಿಡವನ್ನು ಇಡಬೇಕಾದ ಸ್ಥಳದಲ್ಲಿ ಇರಿಸಿ ಈಶಾನ್ಯ ಮೂಲೆಯಲ್ಲಿ ನೀರನ್ನು ಇರಿಸಿ ಹಾಗೆ ಅಡುಗೆ ಕೋಣೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುಡಿವ ನೀರನ್ನು ಇರಿಸಿ ಯಾವುದೇ ಕಾರಣಕ್ಕೂ ಖಾಲಿ ಕೊಡವನ್ನು ಮನೆಯಲ್ಲಿ ಇರಿಸಬೇಡಿ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ವಾಸ್ತುದೋಷವನ್ನು ಪರಿಹಾರ ಮಾಡಿಕೊಳ್ಳಬಹುದು.