ಒಂದು ಸಮಯದಲ್ಲಿ ದಿವಾಳಿಯಾದ ಹೋಂಡಾ ಕಂಪೆನಿಯನ್ನ ಮತ್ತೆ ಕಟ್ಟಿದ ರೋಚಕ ಕಥೆಯನ್ನ ಕೇಳಿದ್ರೆ ನಿಜಕ್ಕೂ ಮೈ ಜುಮ್ ಅನ್ನುತ್ತೆ… ಅಷ್ಟಕ್ಕೂ ಇವತ್ತು ವಿಜೃಂಮಣೆಯಿಂದ ಮೆರೆಯುತ್ತಿರುವ ಕಂಪೆನಿಯನ್ನ ಹೇಗೆ ಉಳಿಸಿಕೊಳ್ಳಲಾಯಿತು ಗೊತ್ತ …

281

ಯಂತ್ರೋಪಕರಣ ಮಾರಾಟದಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡರುತಕ್ಕಂತಹ ಹೊಂಡ ಕಂಪೆನಿಯು ಸ್ಥಾಪನೆಗೊಂಡದ್ದು 1906 ನವೆಂಬರ್ 17 ಜಪಾನ್ ನಲ್ಲಿ. ಇವರು ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದರೂ ಸಹ ಇವರ ಆಲೋಚನೆಗಳೇ ಬೇರೆಯಾಗಿತ್ತು ಅವರು ಸಮಾಜದಲ್ಲಿ ಏನಾದರೂ ಬದಲಾವಣೆಯನ್ನು ತರಬೇಕು ಹಾಗೂ ಏನಾದರೂ ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಆಸೆ ಕನಸು ಹೊಂದಿದ್ದ ಇವರು ಯಂತ್ರೋಪಕರಣಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಈ ಕಾರಣಕ್ಕಾಗೇ ಹೋಂಡಾ ಅವರು ಭವಿಷ್ಯದಲ್ಲಿ ಅಭಿಯಂತರರ ಕಾಲೇಜು ಸೇರಿದರು.

ಹೊಂಡ ಅವರಿಗೆ ಎಂಜಿನಿಯರಿಂಗ್ ಓದುವಾಗ ವಾಹನಗಳಿಗೆ ಪಿಸ್ಟನ್ ರಿಂಗ್ ಗಳನ್ನು ತಯಾರಿಸುವಂತಹ ಆಲೋಚನೆ ಬರುತ್ತದೆ ಅಂದು ಅವರು ಶಾಲೆಯ ವರ್ಕ್ ಶಾಪ್ ನಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಅದ್ಭುತವಾದ ವಿನ್ಯಾಸವೊಂದನ್ನು ಮಾಡಿ ಟೊಯೋಟೋ ಕಂಪೆನಿಗೆ ಮಾರುತ್ತೇನೆ ಎಂಬ ಕನಸು ಇತ್ತು ಹೋಂಡಾ ಅವರಿಗೆ. ಆಗ ಅವರಿಗೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಗಿತ್ತು. ಸಂಸಾರದ ಜವಾಬ್ದಾರಿ ಬೇರೆ ಇತ್ತು ಇತ್ತ ಕನಸು ಕೂಡ ಇತ್ತು ಸಿಸ್ಟಂ ತಯಾರಿಕೆಗೆ ಹಣದ ಕೊರತೆ ಯಿಂದ ಹೆಂಡತಿಯ ಒಡವೆಗಳನ್ನು ಅಡ ಬಿಡುವ ಯೋಚನೆ ಮಾಡಿದ ಅವರು ಹೆಂಡತಿಯ ಒಡವೆಯನ್ನು ಅಡವಿಟ್ಟು ಪ್ರೋಟೋ ಟೈಪ್ ತಯಾರಿಸಿದರು ಕೊನೆಗೆ ಟೊಯೊಟಾ ಕಂಪೆನಿ ಗೆ ತೆಗೆದುಕೊಂಡು ಹೋದಾಗ ಅದನ್ನು ಆ ಕಂಪನಿ ನಿರಾಕರಿಸಿತ್ತು ಆ ಸಮಯದಲ್ಲಿ ಕಾಂಡಾ ಅವರನ್ನು ನೋಡಿ ಸಮಾಜ ನಕ್ಕಿತ್ತು.

ಮೊದಲ ಬಾರಿ ಅವಮಾನಕ್ಕೊಳಗಾದ ಹೊಂಡ ಅವರು ತಮ್ಮ ಕೆಲಸವನ್ನ ಮತ್ತೆ ಪ್ರಾರಂಭಿಸಿದ್ದರು ಸುಮಾರು 2ವರುಷದ ಬಳಿಕ ಮತ್ತೊಂದು ವಿನ್ಯಾಸವನ್ನು ತಯಾರಿಸಿ ಟೊಯೊಟೊ ಕಂಪೆನಿಗೆ ತಂದರೂ ಅದನ್ನು ನೋಡಿ ಕಂಪನಿ, ಹೋಂಡಾ ಅವರಿಗೆ ಪಿಸ್ಟನ್ ರಿಂಗ್ ಅನ್ನು ತಯಾರಿಸಲು ಫ್ಯಾಕ್ಟರಿ ತೆರೆಯಲು ಪ್ಯಾಕ್ಟರಿ ತೆರೆಯಲೆಂದು ಹಣವನ್ನು ನೀಡಿ ಸಹಾಯ ಮಾಡಿತ್ತು ಇದರ ಪ್ರೋತ್ಸಾಹದಿಂದ ಖುಷಿಗೊಂಡ ಹೊಂಡ ಅವರೂ ಫ್ಯಾಕ್ಟರಿಯನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಅವರು ಜಪಾನ್ ನ ವಿವಿಧ ನಗರಗಳಲ್ಲಿ ಭೂಕಂಪ ಅಪ್ಪಳಿಸಿತ್ತು ಹೊಂಡ ಕಟ್ಟಿದ ಫ್ಯಾಕ್ಟರಿ ನೆಲಕ್ಕುರುಳಿತ್ತು. ಹೊಂಡಾ ಕಂಪನಿ ಗುಂಪು ಇದನ್ನು ನೋಡಿ ಬೇಸರಗೊಂಡಿದ್ದರು ಕೆಲವರು ಕಣ್ಣೀರು ಸಹ ಇಟ್ಟಿದ್ದರು ಮಂದಹಾಸದಿಂದಲೇ ಎರಡನೆಯ ಬಾರಿ ಕಾರ್ಖಾನೆ ನಿರ್ಮಾಣ ಮಾಡಲು ಕೆಲಸ ಪ್ರಾರಂಭವಾಗಿತ್ತು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ವಿಶ್ವಯುದ್ಧಕ್ಕೆ ಪ್ರವೇಶ ಮಾಡಿತ್ತು. ಅಂದು ದೇಶಾದ್ಯಂತ ಸಿಮೆಂಟ್ ಪೂರೈಕೆ ಸ್ಥಗಿತಗೊಂಡಿತ್ತು. ಆಗ ಹೋಂಡಾ ನಾವೇ ಸಿಮೆಂಟ್ ತಯಾರಿಸೊಣ ಎಂದು ಹೋಂಡಾ ಮತ್ತು ತಂಡ ಸಿಮೆಂಟ್ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿಯಿತು.

ಹೊಂಡ ಆಗ ತಾವೇ ತಯಾರಿಸಿದ ಸಿಮೆಂಟ್ ಬಳಸಿ ತಂಡ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ಒಂದು ದಿನ ಅಮೆರಿಕನ್ ಪಡೆಯು ಜಪಾನ್ ಮೇಲೆ ವಾಯುದಾಳಿ ಮಾಡಿದ್ದು, ಹೋಂಡಾ ಕಾರ್ಖಾನೆ ಬಾ ಂ ಬ್ ದಾಳಿಗೆ ತುತ್ತಾಯಿತು ಆಗ ಜಪಾನ್ ನಲ್ಲಿ ಸ್ಟೀಲ್ ಅಭಾವ ಎದುರಾಯಿತು ಆಗ ಅಮೆರಿಕದ ಯುದ್ಧ ವಿಮಾನಗಳು ಇಂಧನದ ಟ್ಯಾಂಕಗಳನ್ನು ಹೊತ್ತು ಹಾರುತ್ತಿದ್ದವು ಇಂಧನ ಬಳಸಿದ ನಂತರ ಟ್ಯಾಂಕ ಗಳನ್ನು ಕೆಳಗೆ ಬಿಸಾಡುತ್ತಿದ್ದರು, ಹೀಗೆ ಜಪಾನ್ ತುಂಬೆಲ್ಲ ಬಿಸಾಡಿದರು ನಂತರ ಹೋಂಡಾ ಅವುಗಳನ್ನು ಕರಗಿಸಿ ತನ್ನ ಕಾರ್ಖಾನೆ ನಿರ್ಮಾಣಕ್ಕೆ ಬಳಸಿದ ಆ ಸ್ಟಿಲ್ ಟ್ಯಾಂಕಗಳನ್ನು ಹೋಂಡಾ ಅಮೆರಿಕದ ಅಧ್ಯಕ್ಷ ಟ್ರುಮನ್ ರ ಕೊಡುಗೆ ಎಂದು ಕರೆದರು, ಆದರೆ ಸಮಸ್ಯೆ ಇಷ್ಟಕ್ಕೆ ನಿಲ್ಲದೆ ಯುದ್ಧದ ನಂತರ ಜಪಾನ್ ಗೆ ತೀವ್ರ ಇಂಧನದ ಅಭಾವ ಎದುರಾಯಿತು ಇಂಧನವೇ ಇಲ್ಲ ಎಂದ ಮೇಲೆ ಕಾರನ್ನು ಕೊಳ್ಳುವವರು ಯಾರು ಅಂತ, ಟೊಯೊಟಾ ಕಂಪೆನಿಯು ಕಾರು ಉತ್ಪಾದನೆಯನ್ನು ಸಹ ನಿಲ್ಲಿಸಿತ್ತು.

ಇದೇ ಸಮಯದಲ್ಲಿ ಹೋಂಡಾ ತಯಾರಿಸಿದ್ದ ಪಿಸ್ಟನ್ ರಿಂಗುಗಳಿಗೆ ಬೇಡಿಕೆಯೇ ಬರಲಿಲ್ಲ ಅದೇ ಸಮಯದಲ್ಲಿ ಇಂಧನ ಕೊರತೆ ಇದ್ದ ಕಾರಣ ಕಾಲು ನಡಿಗೆಯಲ್ಲಿಯೇ ಜನರು ಸಾಗುತ್ತಿದ್ದರು ಇಲ್ಲವೇ ಸೈಕಲ್ ಬಳಸಬೇಕಿತ್ತು. ಈ ಸಮಯವನ್ನು ಅರಿತ ಹೋಂಡಾ ಇದನ್ನೆಲ್ಲ ಗಮನಿಸಿ ಹೋಂಡಾ ಸೈಕಲ್ ಗೆ ಚಿಕ್ಕ ಎಂಜಿನ್ ಕೊಡಿಸಿದರೆ ಹೇಗೆ ಎಂಬ ಉಪಾಯವನ್ನು ಮಾಡಿದರೂ ಅದನ್ನು ಕಾರ್ಯರೂಪಕ್ಕೆ ತಂದರು ಹೋಂಡಾ ಮತ್ತು ತಂಡ ಬೈಕ್ ಎಂಜಿನ್ ಎಂಜಿನ್ ತಯಾರಿಸಿತ್ತು ಕೆಲವೇ ವರ್ಷಗಳಲ್ಲಿ ಇವು ಪ್ರಖ್ಯಾತವಾದವು. ಅವುಗಳನ್ನು ಯುರೋಪ್ ಮತ್ತು ಅಮೆರಿಕಗು ಸರಬರಾಜು ಮಾಡಲಾಯಿತು. 1970 ರಲ್ಲಿ ಹೋಂಡಾ ಕಂಪನಿ ಚಿಕ್ಕ ಕಾರುಗಳ ಉತ್ಪಾಧನೆಯನ್ನು ಆರಂಭಿಸಿತು ಅವು ಕೂಡ ಪ್ರಸಿದ್ಧಿಗೊಂಡಿತ್ತು ಎಂದಿಗೂ ಹೋಂಡಾ ಕಂಪನಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ ಹಾಗೆ ಇದಕ್ಕೆ ಹೇಳುವುದು ಸತತ ಪ್ರಯತ್ನವೇ ಎಂತಹ ಕಷ್ಟವನ್ನಾದರೂ ಎದುರಿಸಬಹುದು ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಅಂತ.